Homeಮುಖಪುಟನನ್ನ ನೆನಪ ಹೂದೋಟದಲ್ಲಿ ಕವಿ ಸಿದ್ಧಲಿಂಗಯ್ಯನವರು

ನನ್ನ ನೆನಪ ಹೂದೋಟದಲ್ಲಿ ಕವಿ ಸಿದ್ಧಲಿಂಗಯ್ಯನವರು

- Advertisement -
- Advertisement -

ಕೆಲವೊಮ್ಮೆ ಮುತ್ತುಗಳನ್ನು ಅಕಸ್ಮಾತ್ ಒಡೆದು ಹಾಕುತ್ತೇವೆ, ಅಯ್ಯೋ, ಮತ್ತೆ ಸಿಗುತ್ತದಲ್ಲವಾ ಎಂಬ ಉಢಾಪೆಯಲ್ಲಿ. ಆದರೆ ಕಾಲ ಮಿಂಚಿರುತ್ತದೆ. ಅದು ನಮಗೆ ಮತ್ತೆ ಸಿಗುವುದಿಲ್ಲ ಅಥವಾ ಸಿಗದ ಲೋಕಕ್ಕೆ ಅದು ಹೋಗಿರುತ್ತದೆ. ಕವಿ ಸಿದ್ಧಲಿಂಗಯ್ಯನವರಿಗೆ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ.

ನನ್ನ ಮತ್ತು ಕವಿ ಸಿದ್ದಲಿಂಗಯ್ಯನವರ ಸಂಬಂಧ ಬಹಳ ಹಿಂದಿನದು. ದಲಿತ ಕವಿ ಎಂಬುದಕ್ಕಿಂತಲೂ ಮಹತ್ತರ ಹಿನ್ನೆಲೆಯದು. ಬಹುಶಃ 1987-88ರ ಸಮಯವದು. ಸಿದ್ಧಲಿಂಗಯ್ಯನವರು ವಿಧಾನಪರಿಷತ್ ಸದಸ್ಯರಾಗಿದ್ದರು. ಪ್ರತಿ ದಿನ ರೇಡಿಯೋದಲ್ಲಿ ಸಂಜೆ 7:35ಕ್ಕೆ ವಾರ್ತೆಗಳು ಮುಗಿದನಂತರ 8 ಗಂಟೆಗೆ ವಿಧಾನಮಂಡಲದ ಕಲಾಪಗಳು ಪ್ರಸಾರವಾಗುತ್ತಿತ್ತು. ರಾಜಕೀಯದಲ್ಲಿ ಬಹು ಆಸಕ್ತಿ ಹೊಂದಿದ್ದ ನನ್ನ ಅಪ್ಪ ಬಸವಯ್ಯ ಕಡ್ಡಾಯವಾಗಿ ಆ ಕಲಾಪವನ್ನು ಕೇಳುತ್ತಿದ್ದರು. ಅವರ ಜೊತೆ ನಾನು ಕೂಡ ಅದನ್ನು ಕೇಳುತ್ತಿದ್ದಾಗ ಪ್ರತಿದಿನ ಆ ಕಲಾಪದಲ್ಲಿ ಪ್ರಸ್ತಾಪವಾಗುತ್ತಿದ್ದದ್ದು ಸಿದ್ಧಲಿಂಗಯ್ಯನವರ ಹೆಸರು! ಸಿದ್ಧಲಿಂಗಯ್ಯ ಆ ಪ್ರಶ್ನೆ ಕೇಳಿದರು, ಈ ಪ್ರಶ್ನೆ ಕೇಳಿದರು, ಸಚಿವರು ಉತ್ತರಿಸಿದರು… ಹೀಗೆ.

ಮುಂದೆ ನನ್ನ ಪದವಿ ಮತ್ತು ಬಿಎಡ್‌ನಲ್ಲಿ ಸಾಹಿತ್ಯ ಓದುವ ಸಂದರ್ಭ ಸಿಕ್ಕಿತಾದರೂ, ಆಗ ಬಹುಜನ ಚಳವಳಿಯಲ್ಲಿ ಹೊಮ್ಮಿದ ಒಂದು ಕೆಟ್ಟ ವಿಮರ್ಶೆ ಸಿದ್ಧಲಿಂಗಯ್ಯ, ದೇವನೂರ ಮಹಾದೇವ ಹೀಗೆ ಈ ಎಲ್ಲರ ಬರಹಗಳನ್ನು ನಮ್ಮಿಂದ ಕಿತ್ತುಕೊಂಡಿತು ಅಥವಾ ದೂರ ತಳ್ಳಿತು. ಆ ವಿಮರ್ಶೆ ಯಾವುದೆಂದರೆ “ದಲಿತ ಸಾಹಿತ್ಯ ಅದು, ಹಾರಾಟದ ಸಾಹಿತ್ಯ, ಚೀರಾಟದ ಸಾಹಿತ್ಯ… ಹಾಗೆ ಹೀಗೆ” ಎಂದು. ಈ ಕೆಟ್ಟ ವಿಮರ್ಶೆಯ ಪ್ರಭಾವ ಎಷ್ಟರ ಮಟ್ಟಿಗಿತ್ತೆಂದರೆ, ಸಿದ್ಧಲಿಂಗಯ್ಯ, ದೇವನೂರ ಮಹಾದೇವ ಹೀಗೆ ಅನೇಕ ಹಿರಿಯರ ಬರಹಗಳನ್ನು ನಾನು ಮತ್ತು ನನ್ನ ತಲೆಮಾರಿನ ಅನೇಕ ಸಾಹಿತ್ಯ ಪ್ರೇಮಿಗಳು ಓದುವ ಅವಕಾಶ ಕಳೆದುಕೊಂಡೆವು. ಈ ನಿಟ್ಟಿನಲ್ಲಿ ನಮಗೆ ನಾವೇ ಈ ಬಗ್ಗೆ ಶಪಿಸಿಕೊಳ್ಳಬೇಕಿದೆ. ಆದರೆ ಅದೃಷ್ಟವಶಾತ್ ಒಮ್ಮೆ ಸಿದ್ಧಲಿಂಗಯ್ಯನವರು ಸದನದಲ್ಲಿ ಮಾಡಿದ ಭಾಷಣಗಳ ಸಂಗ್ರಹ ದೊಡ್ಡುಹುಲ್ಲೂರು ರುಕ್ಕೋಜಿಯವರು ಸಂಪಾದಿಸಿದ್ದ ’ಸದನದಲ್ಲಿ ಸಿದ್ಧಲಿಂಗಯ್ಯ’ ಕೃತಿ ಸಿಕ್ಕಿತು. ಅದನ್ನು ಓದಿದ ನನಗೆ ಸಿದ್ಧಲಿಂಗಯ್ಯನವರ ಅಗಾಧ ಜ್ಞಾನ, ತಳ ಸಮುದಾಯಗಳ ಹಕ್ಕುಗಳ ಬಗ್ಗೆ ಅವರಿಗಿದ್ದ ಕೆಚ್ಚು, ಹೋರಾಟದ ಶಕ್ತಿ ಅಕ್ಷರಶಃ ಪರಿಚಯ ಆಯಿತು. ಈ ಬಗ್ಗೆ ನಾನು ಸಾಮಾಜಿಕ ಜಾಲತಾಣದಲ್ಲಿ ಬರಹವೊಂದನ್ನು ಕೂಡ ಹಂಚಿಕೊಂಡಿದ್ದೆ. ಈ ಮೂಲಕ ಸಿದ್ಧಲಿಂಗಯ್ಯನವರ ಬಗ್ಗೆ ನನಗೆ ವಿಚಿತ್ರ ಪ್ರೀತಿ ಮತ್ತು ಕುತೂಹಲ ಮೂಡುತ್ತಾ ಹೋಯಿತು.

ಅಂದಹಾಗೆ ಅದೊಂದು ದಿನ 2014ರಲ್ಲಿ ಇರಬೇಕು. ಬೆಂಗಳೂರಿನ ಒಂದು ಕಾರ್ಯಕ್ರಮದಲ್ಲಿ ನಾನು ನನ್ನ ’ಎದೆಗೆ ಬಿದ್ದ ಗಾಂಧಿ’ ಕೃತಿಯನ್ನು ಸಭೆಯ ಹೊರಗಡೆ ಮಾರಾಟ ಮಾಡುತ್ತಿದ್ದೆ. ಅಲ್ಲಿಗೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಸಿದ್ಧಲಿಂಗಯ್ಯನವರು ಕಾರ್ಯಕ್ರಮ ಮುಗಿದ ನಂತರ ಪುಸ್ತಕ ಕೊಳ್ಳಲು ನನ್ನ ಬಳಿ ಬಂದಾಗ ನಾನೇ ಅವರಿಗೆ ಪುಸ್ತಕ ಕೊಡುಗೆಯಾಗಿ ನೀಡಲು ಮುಂದಾದೆ. ಆಗ ಸಿದ್ಧಲಿಂಗಯ್ಯನವರು, “ರಘೋತ್ತಮ್ ನೀವೇನಾ? ಈ ಪುಸ್ತಕ ನಾನು ಓದಿದ್ದೇನೆ. ಏನ್ ಚೆನ್ನಾಗಿ ಬರೆದಿದ್ದೀಯ. ಹೇ, ಬ್ಯೂಟಿಫುಲ್ ರೈಟಿಂಗ್. ಅದರಲ್ಲೂ ಈ ಕೃತಿಯಲ್ಲಿ ಪೌರಕಾರ್ಮಿಕರ ಕುರಿತು, ದಲಿತರು ಮತ್ತು ಕೀಳು ವೃತ್ತಿಗಳು ಎಂದು ಬರೆದಿದ್ದೀಯಲ್ಲ ಅದಂತು ಗ್ರೇಟ್” ಅಂದರು. ನನಗೆ ಆಶ್ಚರ್ಯ! ನಾನು ಪುಸ್ತಕ ಕೊಡೋಣ ಎಂದು ಹೋದರೆ ಅವರು ಆಗಲೇ ಆ ಪುಸ್ತಕ ಓದಿ ಅದರ ಲೇಖನವನ್ನು ಸಹ ಉಲ್ಲೇಖ ಮಾಡುತ್ತಿದ್ದಾರೆ! ಹಾಗೆ ಹೋಗುವಾಗ ಸಿದ್ಧಲಿಂಗಯ್ಯನವರು “ಬರಿ, ಎಷ್ಟು ಸಾಧ್ಯವೋ ಅಷ್ಟು ಬರಿ” ಎಂದು ಬೆನ್ನುತಟ್ಟಿಹೋದರು.

ಮತ್ತೊಮ್ಮೆ, ಅದು ಈ ವರ್ಷ ಫೆಬ್ರವರಿ ತಿಂಗಳು. ನಾನು ನನ್ನದೆ ’ಜೈಭೀಮ್ ಬಿಸಿನೆಸ್ ಫೋರಂ’ ಎಂಬ ಸಂಸ್ಥೆಯ ಉದ್ಘಾಟನೆಗೆ ಸಾಹಿತಿ ದೇವನೂರ ಮಹಾದೇವರವರ ಸಹೋದರ ಬಸವರಾಜ ದೇವನೂರ ಅವರನ್ನು ಕರೆಯಲು ಹೋದಾಗ ಬಸವರಾಜುರವರು ಸಿದ್ಧಲಿಂಗಯ್ಯನವರ ಜೊತೆ ದೂರವಾಣಿ ಕರೆಯಲ್ಲಿ ಮಾತಾಡುತ್ತಿದ್ದರು. ಆಗ ಅವರು ನನ್ನ ಕೈಲಿ ಫೋನ್ ಇಟ್ಟು ಸಿದ್ಧಲಿಂಗಯ್ಯನವರ ಜೊತೆ ಮಾತಾಡುವಂತೆ ಹೇಳಿದರು. ನಾನು “ಸರ್, ಚೆನ್ನಾಗಿದಿರ. ಆರೋಗ್ಯನಾ ಸರ್. ನಮ್ಮದೊಂದು ಕಾರ್ಯಕ್ರಮ ಇದೆ, ನೀವು ಬರಬೇಕಿತ್ತು” ಎಂದಾಗ ಸಿದ್ಧಲಿಂಗಯ್ಯನವರು “ಇರಲಿ ರಘೋತ್ತಮ್, ಮುಂದೆ ಒಂದು ದಿನ ಬರೋಣ. ಆದರೆ
ನೀನು ತುಂಬಾ ಚೆನ್ನಾಗಿ ಬರೆಯುತ್ತೀಯ ಕಣಪ್ಪ. ಅದರಲ್ಲೂ ಸಂಘ ಪರಿವಾರದವರಿಗೆ, ಅದು ಸಾಮಾಜಿಕ ಮಾಧ್ಯಮ ಇರಬಹುದು, ಪತ್ರಿಕೆ ಇರಬಹುದು ಸರಿಯಾಗಿ ಉತ್ತರ ಕೊಡುತ್ತಿದ್ದೀಯ. ನಮ್ಮಲ್ಲು ಒಬ್ಬ ಈ ಥರ ಬರೆಯುತ್ತಿರುವುದು, ಅದರಲ್ಲೂ ನಮ್ಮೆಲ್ಲರ ಪರವಾಗಿ ಬರೆಯುತ್ತಿದೀಯಲ್ಲ ಇದು ನಿಜಕ್ಕೂ ಒಳ್ಳೆಯದು. ಬರೆ, ಒಂಚೂರು ತಲೆ ಕೆಡಿಸಿಕೊಳ್ಳಬೇಡ, ಬರೆ” ಎಂದರು. ಅಂದಹಾಗೆ ಕೆಲವು ದಿನಗಳ ಹಿಂದೆ ಸಾಮರಸ್ಯ ವೇದಿಕೆಯ ವಾದಿರಾಜ್‌ರವರ ಲೇಖನವೊಂದಕ್ಕೆ ಪ್ರತಿಕ್ರಿಯೆಯಾಗಿ ವಾಚಕರವಾಣಿಯ ನನ್ನ ಒಂದು ಪತ್ರ ಉಲ್ಲೇಖಿಸಿ ಸಿದ್ಧಲಿಂಗಯ್ಯನವರು ಹಾಗೆ ಹೇಳಿದ್ದರು. ಆ ನಿಟ್ಟಿನಲ್ಲಿ ಸಿದ್ಧಲಿಂಗಯ್ಯನವರ ಆ ಮೆಚ್ಚುಗೆಯ ಮಾತುಗಳು, ಅದರಲ್ಲೂ ಸಾಮಾಜಿಕ ಮಾಧ್ಯಮದ ನನ್ನ ಬರಹಗಳನ್ನು ಗಮನಿಸಿ ಅವರು ನೀಡಿದ್ದ ಪ್ರತಿಕ್ರಿಯೆ ಅಕ್ಷರಶಃ ನನಗೆ ಹೊಸ ಚೈತನ್ಯ, ಶಕ್ತಿ ನೀಡಿತ್ತು.

ಆಶ್ಚರ್ಯ ಎಂದರೆ ಇದೇ ಮಾರ್ಚ್‌ನಲ್ಲಿ ಸಿದ್ಧಲಿಂಗಯ್ಯನವರು ಪುಸ್ತಕ ಬಿಡುಗಡೆ ಸಮಾರಂಭವೊಂದಕ್ಕೆ ಮೈಸೂರಿಗೆ ಬಂದರು. ಕಾರ್ಯಕ್ರಮದ ಅವರ ಭಾಷಣವನ್ನು ನನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿದೆ. ಸಿದ್ಧಲಿಂಗಯ್ಯನವರು ಸುಮಾರು ಅರ್ಧ ಗಂಟೆ ಬಿಡುಗಡೆಗೊಂಡ ಆ ಕೃತಿ ಕುರಿತು ಮಾತಾಡಿದರು. ಹಾಗೆ ಕಾರ್ಯಕ್ರಮದ ಕೊನೆಯಲ್ಲಿ ಸಿದ್ಧಲಿಂಗಯ್ಯನವರನ್ನು ಭೇಟಿಮಾಡಿ ಒಂದು ಸೆಲ್ಫಿ ತೆಗೆಸಿಕೊಂಡೆ. ಅವರು ಅಷ್ಟೇ ಪ್ರೀತಿಯಿಂದ “ಬೆಂಗಳೂರಿಗೆ ಬನ್ನಿ ರಘೋತ್ತಮ್ ನನ್ನ ಮನೆಗೆ. ಅನೇಕ ಕೃತಿಗಳನ್ನು ನಿಮಗೆ ಕೊಡಬೇಕು. ಓದಿ, ಬರೆಯಿರಿ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ” ಎಂದರು. ಅಕ್ಷರಶಃ, ನೇರ ಭೇಟಿಯ ಮೂಲಕ ಅವರು ನುಡಿದ ಈ ಸ್ಫೂರ್ತಿಯ ನುಡಿಗಳು ನನ್ನಲ್ಲಿ ಮತ್ತಷ್ಟು ಚೈತನ್ಯ ತಂದಿತ್ತು. ಕೊರೊನಾ ಮುಗಿದನಂತರ ಒಮ್ಮೆ ಅವರ ಮನೆಗೆ ಹೋಗಿ ಅವರ ಸಂಗ್ರಹದ ಎಲ್ಲಾ ಪುಸ್ತಕಗಳನ್ನು ಕಣ್ತುಂಬಿಕೊಂಡು ಒಂದಷ್ಟು ಪಡೆದುಕೊಂಡು ಬರಬೇಕು ಎಂದುಕೊಂಡೆ. ದುರಂತ ಆ ಸಮಯ ಬರಲೇ ಇಲ್ಲ. ಸಿದ್ಧಲಿಂಗಯ್ಯನವರು ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರ ಸ್ಪೂರ್ತಿ ತುಂಬುವ ಮಾತುಗಳು, ಚೈತನ್ಯದಾಯಕ ಆ ನುಡಿಗಳು, ಜೊತೆಗೆ ತೆಗೆಸಿಕೊಂಡ ಒಂದಷ್ಟು ಸೆಲ್ಫಿ ಇಷ್ಟೇ ನನಗೆ ಉಳಿದದ್ದು.

ಕನ್ನಡ ಸಾರಸ್ವತ ಲೋಕ ಒಂದು ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ. ಅದು ಗುಡಿಸಲಲ್ಲಿ ಹುಟ್ಟಿ ಮುಗಿಲೆತ್ತರಕೆ ಬೆಳೆದು ನಿಂತ ರತ್ನ. ಅದನ್ನು ದಲಿತ ಕವಿ ಎಂತಲೊ ಅಥವಾ ಬರೀ ಕವಿ ಎಂತಲೊ ಹೇಗಾದರೂ ಕರೆಯಿರಿ. ಆದರೆ ಅದು ಹುಟ್ಟು ಹಾಕಿದ ಸಾಹಿತ್ಯ ಕ್ರಾಂತಿ “ಇಕ್ರರ್ಲಾ ವದಿರ್‍ಲಾ” ಎಂಬ ಅದರ ಗಟ್ಟಿ ದನಿ ಎಂದೂ ಕೂಡ ಆರುವುದಿಲ್ಲ. ಸ್ಫೂರ್ತಿಯ ಸೆಲೆಯಾಗಿ ಚೈತನ್ಯದ ಹೊಳೆಯಾಗಿ ಸದಾ ನಮ್ಮಲ್ಲಿ ಅದು ನೆಲೆಗೊಂಡಿರುತ್ತದೆ. ಸಿದ್ಧಲಿಂಗಯ್ಯ ಸರ್, ಹೋಗಿ ಬನ್ನಿ. ನಿಮ್ಮ ಪರಂಪರೆಯನ್ನು ನಾವು ಉಳಿಸುತ್ತೇವೆ. ದಲಿತ ಸಾಹಿತ್ಯವನ್ನು ಮುಗಿಲೆತ್ತರಕೆ ಕೊಂಡೊಯ್ಯುತ್ತೇವೆ. ಎಲ್ಲರಿಗೂ ಉತ್ತರ ಕೊಡುತ್ತ ನಮ್ಮ ಜನರಿಗೂ ದನಿಯಾಗುತ್ತ ನಿಮ್ಮ ಆಶಯದಂತೆ ನಡೆಯುತ್ತೇವೆ.

ಜೈಭೀಮ್.

ರಘೋತ್ತಮ ಹೊ.ಬ

ರಘೋತ್ತಮ ಹೊ.ಬ
ಹೊಸ ತಲೆಮಾರಿನ ಪ್ರಖರ ಚಿಂತಕರಲ್ಲಿ ರಘೋತ್ತಮ ಸಹಾ ಒಬ್ಬರು. ಬಹುಜನ ಚಳವಳಿಯ ಭಾಗವಾಗಿ ಗಟ್ಟಿದನಿಯಲ್ಲಿ ವಿಚಾರ ಮಂಡಿಸುತ್ತಾ ಗಮನ ಸೆಳೆದ ಅವರು, ಅಂಬೇಡ್ಕರ್‌ನ್ನು ಆಳವಾಗಿ ಓದಿಕೊಂಡಿದ್ದು ತಮ್ಮ ನಿಷ್ಠುರ ಅನಿಸಿಕೆಗಳನ್ನು ಹೇಳಲು ಹಿಂಜರಿಯದ ವ್ಯಕ್ತಿತ್ವವುಳ್ಳವರು


ಇದನ್ನೂ ಓದಿ: ಬಿಜೆಪಿಯ ಅಧಿಕಾರ ದಾಹದ ವರ್ತನೆ ಜನರನ್ನು ಗೇಲಿ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...