Homeಕರ್ನಾಟಕಶ್ರದ್ಧಾಂಜಲಿ; ಬಿಡುಗಡೆಯ ಕನಸುಗಾರ ಪ್ರೊ.ಗಂಗಾಧರಮೂರ್ತಿ

ಶ್ರದ್ಧಾಂಜಲಿ; ಬಿಡುಗಡೆಯ ಕನಸುಗಾರ ಪ್ರೊ.ಗಂಗಾಧರಮೂರ್ತಿ

- Advertisement -
- Advertisement -

70ರ ದಶಕದಲ್ಲಿ ಇಡೀ ಕರ್ನಾಟಕ ರಾಜ್ಯದಲ್ಲಿ ಸಂಚಲನವನ್ನುಂಟುಮಾಡಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮತ್ತೊಬ್ಬ ಹಿರಿಯ ಒಡನಾಡಿ ಪ್ರೊ. ಗಂಗಾಧರ ಮೂರ್ತಿ ಅವರು ಸೆಪ್ಟಂಬರ್ 10ರಂದು ನಮ್ಮನ್ನಗಲಿದ್ದಾರೆ. ನಮಗೆಲ್ಲ ಈ ಸಮಯದಲ್ಲಿ ಅವರು ಇನ್ನಷ್ಟು ಕಾಲ ಇರಬೇಕಿತ್ತು ಎಂದು ಅನಿಸುವುದೊಂದು ಸಹಜ ಭಾವನೆ. ಕನ್ನಡದ ಮಹತ್ವದ ಕವಿಗಳಾದ ಮತ್ತು ಹಿರಿಯ ದಲಿತ ಚಳವಳಿಯ ನೇತಾರರಾಗಿದ್ದ ಡಾ. ಸಿದ್ದಲಿಂಗಯ್ಯ, ಪ್ರೊ. ಕೆ.ಬಿ ಸಿದ್ದಯ್ಯ ನಮ್ಮನ್ನು ಅಗಲಿದಾಗಲೂ ಅನೇಕರಲ್ಲಿ ಈ ರೀತಿಯ ಭಾವನೆ ಮೂಡಿತ್ತು.

ದಲಿತ ಸಂಘರ್ಷ ಸಮಿತಿಯು ಸಾಮಾಜಿಕವಾಗಿ ತುಳಿಯಲ್ಪಟ್ಟ ಅಥವಾ ಬಂಧಿಸಲ್ಪಟ್ಟ ಸಮಾಜದ ಬಿಡುಗಡೆಗಾಗಿ ಹಂಬಲಿಸಿ ಈ ನೆಲದಲ್ಲಿ ರೂಪುಗೊಂಡ ಒಂದು ಮಹತ್ವದ, ಐತಿಹಾಸಿಕ ಚಳವಳಿ. ಸಾಮಾನ್ಯವಾಗಿ ದಲಿತ ಚಳವಳಿಯೆಂದರೆ ತಮ್ಮ ಹಕ್ಕುಗಳಿಗಾಗಿ ದಲಿತರೇ ನಡೆಸಿದ ಹೋರಾಟ ಎಂಬ ಭಾವನೆ ನಮ್ಮ ಸಮಾಜದ ಅನೇಕರಲ್ಲಿದೆ. ಕೆಲವೊಮ್ಮೆ ಈ ಭಾವನೆ ಸಹಜವೂ ಇರಬಹುದು. ಆದರೆ ಕರ್ನಾಟಕದ ದಲಿತ ಚಳವಳಿ ಸ್ವರೂಪ ಈ ನಿಟ್ಟಿನಲ್ಲಿ ಬಹಳ ಭಿನ್ನವಾದುದು. ಕನ್ನಡದ ನೆಲದಲ್ಲಿ ಮೊದಲ ತಲೆಮಾರಿನ ದಲಿತರು ತಮ್ಮ ನೋವು ನಲಿವುಗಳನ್ನ, ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ದಬ್ಬಾಳಿಕೆಗಳನ್ನು ಪ್ರಶ್ನೆ ಮಾಡುವಂತಹ, ಅಭಿವ್ಯಕ್ತಿಸುವಂತಹ ಸಾಹಿತ್ಯವನ್ನು ಬರೆದಾಗ ಅದನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿ, ಸ್ವೀಕರಿಸಿ, ಪ್ರೋತ್ಸಾಹಿಸಿದ ಅನೇಕ ಪ್ರಜ್ಞಾವಂತರು ಈ ನಾಡಿನಲ್ಲಿ ಬದುಕಿ ಹೋಗಿದ್ದಾರೆ ಮತ್ತು ಇನ್ನು ಬದುಕುತ್ತಿದ್ದಾರೆ. ಅದೇ ರೀತಿ ದಲಿತರು ಸಂಘಟಿತರಾಗಿ ಚಳವಳಿಯನ್ನು ರೂಪಿಸಿದಾಗ ದಲಿತ ಸಮುದಾಯಕ್ಕೆ ಅದರ ನೇತೃತ್ವವನ್ನು ಕೊಟ್ಟು ಚಳವಳಿಗೆ ಬೆನ್ನೆಲುಬಾಗಿ ನಿಂತ ಅನೇಕ ದಲಿತೇತರ ಸಂಗಾತಿಗಳು ಈ ನಾಡಿನಲ್ಲಿ ಇದ್ದಾರೆ ಅಂತಹ ಮಹತ್ವದ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದವರು ಪ್ರೊ. ಗಂಗಾಧರ ಮೂರ್ತಿಯವರು. ಇಂಗ್ಲಿಷ್ ಸಾಹಿತ್ಯದ ಮೇಷ್ಟ್ರಾಗಿ ಅಧ್ಯಾಪನದ ಜೊತೆಗೆ ಅವಿಭಜಿತ ಕೋಲಾರ ಜಿಲ್ಲೆಯ ಗೌರಿಬಿದನೂರಿನ ಸುತ್ತಮುತ್ತ ದಲಿತ ಚಳವಳಿಯ ಸಂಗಾತಿಗಳ ಜೊತೆಗೂಡಿ ಅದನ್ನು ಕಟ್ಟಿ ಬೆಳೆಸಿದವರು. ಹಾಗೆಯೇ ಈ ಚಳವಳಿಯು ನಡೆಸಿದ ಮಹತ್ವದ ಭೂಮಿ ಹೋರಾಟಗಳಲ್ಲಿ ಒಂದಾದ ನಾಗಸಂದ್ರ ಭೂ ಹೋರಾಟದ ಮುಂಚೂಣಿಯಲ್ಲಿದ್ದವರು.

ಈ ಕುರಿತು ಅವರು ’ನಾಗಸಂದ್ರ ಭೂ ಆಕ್ರಮಣ ಚಳವಳಿ’ ಎಂಬ ಮಹತ್ವದ ಪುಸ್ತಕವನ್ನು ಬರೆದು ದಾಖಲಿಸಿದ್ದಾರೆ.ಇದು ಒಂದು ಭಾಗವಾದರೆ, ಪ್ರೊ ಗಂಗಾಧರಮೂರ್ತಿಯಂತವರ ವ್ಯಕ್ತಿತ್ವ ಈ ದೇಶಕ್ಕೆ, ಈ ಸಮಾಜಕ್ಕೆ ಯಾಕೆ ಬಹಳ ಅವಶ್ಯಕ ಎಂಬುದನ್ನು ಈ ಸಮಯದಲ್ಲಿ ನಾವು ಗಂಭೀರವಾಗಿ ಅವಲೋಕಿಸಬೇಕಾಗಿದೆ. ಅವರು ಬದುಕಿದ್ದಷ್ಟು ಕಾಲ ತಾವು ನಂಬಿದ ವಿಚಾರಗಳಿಗೆ ಬದ್ಧರಾಗಿ ಜನ ಚಳವಳಿಗಳ ಜೊತೆಗೆ ಬದುಕಿ ಮಾದರಿಯಾದರು. ಮೊದಲ ಬಾರಿಗೆ ನಾನು ಅವರನ್ನು ಭೇಟಿಯಾಗಿದ್ದು 2011ರ ಇಸವಿ. ಭಾರತದ ಮೊದಲ ತಲೆಮಾರಿನ ಸ್ತ್ರೀವಾದಿ ಚಿಂತಕಿ ಮತ್ತು ಬರಹಗಾರ್ತಿ ಪ್ರೊ. ಸೂಸಿಥಾರು ಅವರ ಜೊತೆಗೆ ’ದಕ್ಷಿಣ ಭಾರತದ ದಲಿತ ಬರಹಗಳು’ ಎಂಬ ಯೋಜನೆಗೆ ಕಾರ್ಯನಿರ್ವಹಿಸುವಾಗ ಅವರನ್ನು ಸಂದರ್ಶಿಸಲು ಗೌರಿಬಿದನೂರಿನ ಅವರ ಮನೆಗೆ ಭೇಟಿ ನೀಡಿದ್ದೆವು. ಆ ದಿನ ಅವರು ದಲಿತ ಸಂಘರ್ಷ ಸಮಿತಿಯ ಜೊತೆಗಿನ ತಮ್ಮ ಒಡನಾಟ ಹಾಗೂ ಜೀತ ವಿಮುಕ್ತರಿಗೆ ಸರ್ಕಾರದಿಂದ ಪ್ರತ್ಯೇಕ ಜಾಗವನ್ನು ಮಂಜೂರು ಮಾಡಿಸಿ ಶಂಭೂಕ ನಗರ ಎಂಬ ಹೊಸ ಹಳ್ಳಿಯನ್ನೇ ಕಟ್ಟಿದ ಸಂಗತಿಗಳನ್ನು ಹಂಚಿಕೊಂಡಿದ್ದು ಮಾತ್ರವಲ್ಲದೆ ಅಂದು ಶಂಭೂಕ ನಗರ ಎಂಬ ಆ ಕಾಲೋನಿಗೆ ನಮ್ಮನ್ನೆಲ್ಲ ಕರೆದುಕೊಂಡು ಹೋಗಿದ್ದರು.

ಪ್ರೊ.ಗಂಗಾಧರ ಮೂರ್ತಿಯವರು ಅಂದು ಕಾಲೋನಿಗೆ ಭೇಟಿ ನೀಡಿದ ಕೂಡಲೇ ಅಲ್ಲಿದ್ದ ಜನರು ’ಸರ್ ಬಂದಿದ್ದಾರೆ’ ಎಂದು ಒಬ್ಬರಿಗೊಬ್ಬರು ಮಾಹಿತಿಯನ್ನು ನೀಡಿಕೊಂಡು ಅವರ ಜೊತೆಗೆ ಖುಷಿಯಿಂದ ನೆರೆದದ್ದನ್ನು ನಾವು ಕಂಡೆವು. ಕಾಲೋನಿಯ ಜನರ ಕಷ್ಟ ಸುಖಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಅವರ ಕೊನೆಯ ದಿನಗಳವರೆಗೂ ಶಂಭೂಕ ನಗರದ ಜನರ ಸಂಪರ್ಕವನ್ನು ಉಳಿಸಿಕೊಂಡಿದ್ದ ರೀತಿ ಅವರ ಚಳವಳಿಯ ಬದ್ಧತೆಯ ಮಾದರಿ.

1938ರಲ್ಲಿ ಗೌರಿಬಿದನೂರಿನ ವಿದುರಾಶ್ವತ್ಥದಲ್ಲಿ ನಡೆದ ಧ್ವಜ ಸತ್ಯಾಗ್ರಹ ಹತ್ಯಾಕಾಂಡದ (ದಕ್ಷಿಣದ ಜಲಿಯನ ವಾಲಾಬಾಗ್ ಎಂದೇ ಪ್ರಖ್ಯಾತವಾಗಿದೆ) ನೆನಪಿಗಾಗಿ ಸ್ಮಾರಕ ಮತ್ತು ಗ್ರಂಥಾಲಯ ರೂಪಿಸಿ ಅದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು ಪ್ರೊ.ಗಂಗಾಧರ ಮೂರ್ತಿಯವರು. ಜನಪರ ಚಳವಳಿಗಳಲ್ಲಿ ತೊಡಗಿಸಿಕೊಂಡೇ ಜತೆಜತೆಗೆ ಅತ್ಯುತ್ತಮವಾದ ಸಾಹಿತ್ಯ ಕೃತಿಗಳ ಅನುವಾದ ಮತ್ತು ರಚನೆಯಲ್ಲಿ ತೊಡಗಿ ಅಕ್ಷರದ ಮೂಲಕವೂ ಜಾಗೃತಿಯನ್ನು ಬಿತ್ತಿದರು. ಇಂದು ಜಾಗತಿಕ ಹಳ್ಳಿ ಎಂಬ ಹೆಬ್ಬಾವು ಚಳವಳಿಗಳನ್ನು ಸ್ವಲ್ಪಸ್ವಲ್ಪವೇ ನುಂಗಿಕೊಳ್ಳುತ್ತಿರುವ, ಬಂಡವಾಳಶಾಹಿಗಳು ಕೋಮುವಾದಿಗಳೊಂದಿಗೆ ಕೈಜೋಡಿಸಿರುವ ಈ ದುರಿತಕಾಲದಲ್ಲಿ ಪ್ರೊ. ಗಂಗಾಧರ ಮೂರ್ತಿಯವರು ನಮ್ಮೊಟ್ಟಿಗೆ ಇನ್ನಷ್ಟು ಕಾಲ ಇರಬೇಕಿತ್ತು ಎಂಬ ಭಾವನೆ ಮೂಡುವುದು ಈಗ ಸಹಜ. ಆದರೆ ಅವರು ಸದ್ಯ ಸ್ವಲ್ಪ ವಿಶ್ರಾಂತಿಯಲ್ಲಿದ್ದಾರೆಂದು ಭಾವಿಸಿ ನಾವೆಲ್ಲರೂ ಅವರ ಕೆಲಸಗಳನ್ನು ಮುಂದುವರಿಸೋಣ ಎಂಬುದಷ್ಟೇ ಈಗ ನಮಗೆ ನಾವೇ ಮಾಡಿಕೊಳ್ಳುವ ಸಾಂತ್ವನ.


ಇದನ್ನೂ ಓದಿ: ಚಕ್ರತೀರ್ಥನ ರೋಗ ಜೋಷಿಗೂ ಬಡಿಯಿತಂತಲ್ಲಾ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...