Homeಮುಖಪುಟಟ್ರಂಪ್ ಸೋತರೂ, ಟ್ರಂಪ್‌ಯಿಸಂ ಉಳಿದಿದೆ: ಆದರೂ ಯುವ ಅಮೆರಿಕ ಭರವಸೆ ಮೂಡಿಸಿದೆ

ಟ್ರಂಪ್ ಸೋತರೂ, ಟ್ರಂಪ್‌ಯಿಸಂ ಉಳಿದಿದೆ: ಆದರೂ ಯುವ ಅಮೆರಿಕ ಭರವಸೆ ಮೂಡಿಸಿದೆ

ಬಿಜೆಪಿ, RSS ನಿಲುವುಗಳನ್ನು ಬೈಡನ್ ಮತ್ತು ಕಮಲಹ್ಯಾರಿಸ್ ಯಾವ ಕಾರಣಕ್ಕು ಬೆಂಬಲಿಸಲಾರರು. ಈ ಇಬ್ಬರು ಸಹ ಮೋದಿ ಸರ್ಕಾರದ ಕಾಶ್ಮೀರ ಮತ್ತು CAA, NRC ನಿಲುವುಗಳನ್ನು ವಿರೋಧಿಸಿದ್ದಾರೆ.

- Advertisement -
- Advertisement -

ಇಡೀ ಪ್ರಪಂಚವೇ ಕುತೂಹಲದಿಂದ ನೋಡುತ್ತಿದ್ದ ಅಮೆರಿಕದ ಅಧ್ಯಕ್ಷ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಸ್ಪಷ್ಟ ಗೆಲುವನ್ನು ದಾಖಲಿಸಿದ್ದಾರೆ. ಈ ಗೆಲುವು ಅಮೆರಿಕನ್ನರ ಮಟ್ಟಿಗೆ ನಿರೀಕ್ಷಿತವೇ ಆದರೂ ಟ್ರಂಪ್ ಬಹಳ ಹೀನಾಯವಾಗಿ ಸೋಲಬಹುದು ಎಂಬ ನಿರೀಕ್ಷೆ ಸುಳ್ಳಾಗಿದ್ದು, ಸುಮಾರು 7 ಕೋಟಿಯಷ್ಟು ಜನಪ್ರಿಯ ಮತಗಳನ್ನು ನೀಡಿ ಜನ ಟ್ರಂಪ್‌ನನ್ನು ಬೆಂಬಲಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಯಾವುದೇ ಅಭ್ಯರ್ಥಿಗೆ ಸಿಕ್ಕಿರುವ ಅತಿಹೆಚ್ಚು ಮತಗಳ ದಾಖಲೆ ಅದು. ಅಷ್ಟೇ ಅಲ್ಲ ಅವರು 2014ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾಗ ಸಿಕ್ಕಿದ್ದ ಜನಪ್ರಿಯ ಮತಗಳ ಸಂಖ್ಯೆಗಿಂತ ಸುಮಾರು 70 ಲಕ್ಷ ಮತಗಳು ಹೆಚ್ಚು. ಹಾಗೆಯೇ ಗೆದ್ದ ಅಭ್ಯರ್ಥಿ ಜೋ ಬೈಡೆನ್ ಅವರಿಗೆ ದೊರೆತಿರುವ ಜನಪ್ರಿಯ ಮತಸಂಖ್ಯೆ ಕೂಡ ಐತಿಹಾಸಿಕ ದಾಖಲೆ!

ಈ ಅಂಶ ಆ ದೇಶದ ನಾಗರಿಕರಲ್ಲಿ ಯಾವ ರೀತಿಯಲ್ಲಿ ರಾಜಕೀಯ ಒಡಕು ಮನೆಮಾಡಿತ್ತು ಎಂಬುದನ್ನು ಸೂಚಿಸುತ್ತದೆ. ಯಾವುದೇ ಬಲಪಂಥೀಯ ಸರ್ವಾಧಿಕಾರಿ ಧೋರಣೆಯ ಮುಖಂಡನ ರಾಜಕೀಯ ಯಶಸ್ಸು ಅಡಗಿರುವುದು ಜನರನ್ನು ಪೋಲರೈಸ್ ಮಾಡಿ, ಅಲ್ಪಸಂಖ್ಯಾತ ಸಮುದಾಯಗಳು, ದುರ್ಬಲ ಸಮುದಾಯಗಳನ್ನು ಕಡೆಗಣಿಸಿ, ತನ್ನ ಪಾಪ್ಯುಲಿಸ್ಟ್ ಧೋರಣೆಯನ್ನು ಜನರಿಗೆ ನಂಬಿಸುವಂತೆ ಮಾಡುವುದರಲ್ಲಿ. ಅದಕ್ಕಾಗಿ ಅಂತಹ ಮುಖಂಡರು ಯಾವ ಮಟ್ಟಕ್ಕಾದರೂ ಇಳಿಯಬಲ್ಲರು. ಸಂವಿಧಾನ, ಪ್ರಜಾಪ್ರಭುತ್ವದ ತತ್ವಗಳು, ಸಂಸ್ಥೆಗಳು ಯಾವುದಕ್ಕೂ ಗೌರವ ತೋರದೆ ಮುನ್ನಡೆಯಬಲ್ಲರು. ಇಂತಹ ಮುಖಂಡರ ಶಿಖರ ಪ್ರಾಯದಂತೆ ಮೆರೆದಿದ್ದು ಡೊನಾಲ್ಡ್ ಟ್ರಂಪ್. ದೇಶದ ಆಡಳಿತವನ್ನು ತನ್ನ ಸ್ವಂತ ವ್ಯವಹಾರದಂತೆ ಕಂಡವನು. ದೇಶ-ದೇಶಗಳ ನಡುವಿನ ಸಂಬಂಧಗಳನ್ನು ಸ್ವಂತ ವ್ಯವಹಾರದ ಲಾಭನಷ್ಟದಲ್ಲಿ ಅಳೆದವನು.

ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿರುವವರು ಎರಡನೇ ಅವಧಿಗೂ ಪುನರ್‌ಆಯ್ಕೆ ಆಗುವ ಸಾಧ್ಯತೆಗಳು ಹೆಚ್ಚು. ಆದರೆ ಈ ಬಾರಿ ಅದು ಸುಳ್ಳಾಗಿದೆ.

ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿರುವವರು ಎರಡನೇ ಅವಧಿಗೂ ಪುನರ್‌ಆಯ್ಕೆ ಆಗುವ ಸಾಧ್ಯತೆಗಳು ಹೆಚ್ಚು. ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯು ಬುಶ್, ಬರಾಕ್ ಒಬಾಮಾ ಎಲ್ಲರೂ ಎರಡು ಅವಧಿಗಳಿಗೆ ಆಯ್ಕೆಯಾದವರೇ. ಆದರೆ ಈ ಬಾರಿ ಅದು ಸುಳ್ಳಾಗಿದೆ. ಟ್ರಂಪ್ ಈ ಹಿಂದಿನ ಚುನಾವಣೆಯಲ್ಲಿ ’ಮೇಕ್ ಅಮೆರಿಕ ಗ್ರೇಟ್ ಆಗೈನ್’ ಎಂಬ ಘೋಷವಾಕ್ಯದೊಂದಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಅಮೆರಿಕನ್ನರಲ್ಲಿ ಆದರಲ್ಲಿಯೂ ಬಿಳಿಯರು ಸಹಜವಾಗಿಯೇ ಟ್ರಂಪ್ ಮೇಲೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಅಮೆರಿಕದಲ್ಲಿ ಆಳವಾಗಿ ಬೇರೂರಿದ್ದ ಆರ್ಥಿಕ ಅಸಮಾನತೆಯನ್ನು ಬಳಸಿಕೊಂಡು, ವಲಸೆಯಿಂದ ಮೂಲ ಅಮೆರಿಕನ್ನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂಬ ಗುಮ್ಮ ಜನರಿಗೆ ತೋರಿಸಿ, ಕ್ಸೀನೋಫೋಬಿಯಾವನ್ನು ಉತ್ತೇಜಿಸಿ ಅಧ್ಯಕ್ಷಗಾದಿಗೆ ಏರಲು ಸಫಲವಾಗಿದ್ದ ಟ್ರಂಪ್, ತನ್ನ ಅವಧಿಯಲ್ಲಿ ಆ ಗುಮ್ಮವನ್ನು ನಂಬಿಸಲು ಪ್ರಯತ್ನ ಪಟ್ಟಷ್ಟು ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಯಾವುದೇ ಪ್ರಯತ್ನ ಪಡಲಿಲ್ಲ. ಶಿಕಾಗೋ ನಗರದಲ್ಲಿ ಒಂದೊಂದು ಪಿನ್‌ಕೋಡ್‌ಗೆ ಅನುಗುಣವಾಗಿ ಜನರ ಸರಾಸರಿ ಆಯುಷ್ಯ ಸುಮಾರು 25% ಬದಲಾಗುತ್ತದೆ ಎಂಬ ಅಂಶ ಆರ್ಥಿಕ ಅಸಮಾನತೆಯನ್ನು ಎತ್ತಿತೋರಿಸುತ್ತದೆ.

ಜೊತೆಗೆ ಟ್ರಂಪ್‌ನ ದುರಾಡಳಿತ, ಪಕ್ಷಪಾತ ನಿಲುವುಗಳು, ಕಪ್ಪು ಜನರ ಮೇಲಿನ ದೌರ್ಜನ್ಯ ಜನಾಂಗೀಯ ನಿಂದನೆಯ ಬೇಜವಾಬ್ದಾರಿ ನಿಲುವುಗಳು ಅವರು ಎರಡನೆಯ ಅವಧಿಯಲ್ಲಿ ಸೋಲಲು ಕಾರಣವಾಗಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಕೋವಿಡ್‌ಅನ್ನು ನಿಯಂತ್ರಣಕ್ಕೆ ತರದೆ ದ್ವೇಷದ ಮತ್ತು ಉಡಾಫೆಯ ಮಾತುಗಳಷ್ಟೇ ಆಡಿಕೊಂಡು ಸಮಯ ವ್ಯರ್ಥ ಮಾಡಿದ್ದೂ ಕಾರಣವಾಗಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ಅನೇಕ ಸಾಮ್ಯತೆಗಳಿವೆ. ಅದು ವ್ಯಕ್ತಿತ್ವ ಮತ್ತು ಪ್ರತಿನಿಧಿಸುವ ಪಕ್ಷಗಳ ದೃಷ್ಟಿಯಿಂದಲೇ ಗೊತ್ತಾಗುತ್ತದೆ.

ಆ ಕಾರಣಕ್ಕೆ ಭಾರತದ ಬಲಪಂಥೀಯ ಪಕ್ಷವಾದ ಬಿಜೆಪಿ ಮತ್ತು ಅದರ ಬೆಂಬಲಿತರು ಸಹಜವಾಗಿಯೇ ಟ್ರಂಪ್ ಗೆಲುವಿನ ನಿರೀಕ್ಷೆಯಲ್ಲಿದ್ದರು ಮಾತ್ರವಲ್ಲ ನರೇಂದ್ರ ಮೋದಿಯವರು ಈ ಹಿಂದೆ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ’ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಎಂಬ ಘೋಷಣೆಯನ್ನು ಕೂಗಿ ಭಾರತೀಯ ಅಮೆರಿಕನ್ನರನ್ನು ಟ್ರಂಪ್ ಪರವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸಿದ್ದರು.

ಜವಾಹರ್‌ಲಾಲ್ ನೆಹರೂ ಇನ್ನೂ ಆಗ ತಾನೆ ಸ್ವಾತಂತ್ರ್ಯಗಳಿಸಿದ್ದ ಭಾರತವನ್ನು ಮುನ್ನಡೆಸುವಾಗಲೂ, ಅಲಿಪ್ತ ನೀತಿಯನ್ನು ಅನುಸರಿಸಿ ವಿಶ್ವದ ಯಾವ ಅಧಿಕಾರ ಕೇಂದ್ರಕ್ಕೂ ತಲೆಬಾಗುವುದಿಲ್ಲ ಎಂದು ಭಾರತದ ಸಾರ್ವಭೌಮತ್ವವನ್ನು ಎತ್ತಿಹಿಡಿದಿದ್ದಕ್ಕೆ ಹೋಲಿಸಿಕೊಂಡರೆ, ಅಮೆರಿಕದ ಒಂದು ಪಕ್ಷದ ಪರವಾಗಿ ಭಾರತದ ಪ್ರಧಾನಿ ಮತಯಾಚಿಸಿದ ಸಂಗತಿ ಎಷ್ಟು ಕ್ಷುಲ್ಲಕ ಎಂಬುದು ಅರಿವಿಗೆ ಬಂದೀತು! ಆದರೆ ಆದ್ಯಾವುದು ಟ್ರಂಪ್‌ನನ್ನು ಗೆಲ್ಲಿಸುವಲ್ಲಿ ಸಫಲವಾಗಿಲ್ಲ. ಅಮೆರಿಕದಲ್ಲಿ ಭಾರತೀಯ ಮೂಲದ ಬಲಪಂಥೀಯರೂ ಟ್ರಂಪ್‌ನನ್ನು ಬೆಂಬಲಿಸಿ ಮತಹಾಕಿದ್ದಾರೆ ಅನ್ನುವುದು ನಿಜವೇ ಆದರೂ ಅಮೆರಿಕದ ಹೊಸತಲೆಮಾರಿನ ಪ್ರಜ್ಞಾವಂತ ಯುವ ಜನತೆ ಟ್ರಂಪ್‌ನನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದೆ.

ವಿಶೇಷವೆಂದರೆ ಈ ಬಾರಿಯ ಚುನಾವಣೆಯಲ್ಲಿ ಅಮೆರಿಕ ದೇಶದ ಇತಿಹಾಸದಲ್ಲೇ ಹೆಚ್ಚು ಮತದಾನ ನಡೆದಿದೆ. ಆದರಲ್ಲಿಯೂ ಕಪ್ಪು ಸಮುದಾಯ ಶೇ.87ರಷ್ಟು ಮತ್ತು 18 ರಿಂದ 29ರ ಒಳಗಿನ ಯುವ ಜನತೆ ಶೇ.6.2ರಷ್ಟು ಜೋ ಬೈಡನ್ ಪರವಾಗಿ ಮತಚಲಾಯಿಸಿರುವುದು ಟ್ರಂಪ್ ಸೋಲಿಗೆ ದೊಡ್ಡ ಕಾರಣವಾಗಿದೆ.
ಜೋ ಬೈಡನ್ ಅಧಿಕೃತವಾಗಿ ಗೆಲುವು ಸಾಧಿಸಿರುವುದು ಸರಿಯೇ ಆದರು ಅಮೆರಿಕದಲ್ಲಿ ಟ್ರಂಪ್ ಪರವಾಗಿ ದೊಡ್ಡ ಮಟ್ಟದಲ್ಲಿ ಮತಗಳು ಧ್ರುವೀಕರಣವಾಗಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ.

ಟ್ರಂಪ್ ಮತ್ತು ಮೋದಿ ಇಬ್ಬರೂ ಅಧಿಕಾರಕ್ಕೆ ಬಂದಿದ್ದು ಕಲ್ಪಿತವಾದ ಹುಸಿ ಸಿದ್ಧಾಂತಗಳನ್ನೇ ಮುನ್ನೆಲೆಗೆ ತಂದು. ಭಾರತದಲ್ಲಿ ಹುಸಿ ದೇಶಪ್ರೇಮ, ಹಿಂದುತ್ವ, ಮುಸ್ಲಿಂದ್ವೇಷ ಮುಂತಾದವುಗಳೇ ಮೋದಿ ಗೆಲುವಿನಲ್ಲಿ ಮುಖ್ಯಪಾತ್ರ ವಹಿಸಿದವು. ಅದೇ ರೀತಿಯಲ್ಲೇ ಟ್ರಂಪ್ ಕೂಡ, ಅಮೆರಿಕದಲ್ಲಿ ಬಿಳಿಯರ ಸಂಖ್ಯೆ ಕಡಿಮೆಯಾಗಿದೆ, ವಲಸಿಗರ ಸಂಖ್ಯೆ ಜಾಸ್ತಿಯಾಗಿದೆ ಮಾತ್ರವಲ್ಲ, ನಮ್ಮ ಉದ್ಯೋಗಗಳೆಲ್ಲ ಬೇರೆಯವರ ಪಾಲಾಗಿದೆ, ಕಪ್ಪು ಜನಸಂಖ್ಯೆ ಜಾಸ್ತಿ ಆಗುತ್ತಿದೆ, ಮೆಕ್ಸಿಕನ್ನರು ರೇಪಿಸ್ಟರು ಹೀಗೆ ಪುಂಖಾನುಪುಂಖವಾಗಿ ಭಾಷಣ ಮಾಡಿ, ಇದಕ್ಕೆ ಪರ್ಯಾಯವಾಗಿ ಬಿಳಿಯರ ಬಲಿಷ್ಠವಾದ ಅಮೆರಿಕವನ್ನು ಕಟ್ಟುತ್ತೇವೆ ಎಂಬ ಮಾತುಗಳು ಹಲವು ಅಮೆರಿಕನ್ನರಿಗೆ ಸುಂದರವಾದ ಕನಸಾಗಿ ಕಂಡಿತು- ಆದರೆ ಈ ಭ್ರಮೆಯಿಂದ ಅಮೆರಿಕ ಜನತೆ ಬಹುಬೇಗ ಎಚ್ಚೆತ್ತುಕೊಂಡರು. ಆದರೆ ಭಾರತ ಈ ವಿಷಯದಲ್ಲಿ ಬಹಳ ಹಿಂದಿದೆ ಮತ್ತು ಅಮೆರಿಕ ಜನತೆಯಿಂದ ಕಲಿಯಬೇಕಾಗಿರುವ ಸಂಗತಿಗಳು ಬಹಳಷ್ಟಿವೆ.

ಟ್ರಂಪ್‌ಗೆ ಎದುರಾದ ಬಹಳ ಮುಖ್ಯವಾದ ಬಿಕ್ಕಟ್ಟುಗಳು: ಕೋವಿಡ್ ಮತ್ತು ಜಾರ್ಜ್‌ಫ್ಲಾಯ್ಡ್‌ನ ಕೊಲೆ
ಟ್ರಂಪ್ ಕೊರೊನಾ ವಿಪತ್ತನ್ನು ನಿರ್ವಹಿಸಿದ ರೀತಿ ಬಹಳ ಕಳಪೆಯಾಗಿತ್ತು ಮಾತ್ರವಲ್ಲ ಜನರ ಆರೋಗ್ಯದ ವಿಷಯದಲ್ಲಿ ತುಂಬಾ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ನಡೆದುಕೊಂಡಿದ್ದು ಒಂದೆಡೆಯಾದರೆ, ಕಪ್ಪುಜನರ ಮೇಲಿನ ದೌರ್ಜನ್ಯಗಳು ತುಂಬಾ ತೀವ್ರವಾದವು. ಇದೇ ಸಂದರ್ಭದಲ್ಲಿ ಜಾರ್ಜ್‌ಪ್ಲಾಯ್ಡ್ ಎಂಬ ಕಪ್ಪು ವ್ಯಕ್ತಿಯನ್ನು ಸಾರ್ವಜನಿಕವಾಗಿ ಮತ್ತು ಅತ್ಯಂತ ಕ್ರೂರವಾಗಿ ಕೊಂದ ಅಮೆರಿಕದ ಪೊಲೀಸರು ಮತ್ತು ಇಂತಹ ಘಟನೆಗಳ ನಿಯಂತ್ರಣಕ್ಕೆ ಯಾವುದೇ ಯೋಜನೆಗಳನ್ನು ಹಮ್ಮಿಕೊಳ್ಳದ ಟ್ರಂಪ್ ಆಡಳಿತ ವ್ಯವಸ್ಥೆಯ ವಿರುದ್ಧ ಅಮೆರಿಕದ ಪ್ರಜ್ಞಾವಂತ ನಾಗರಿಕರು ಕೊರೊನಾ ಸಂಕಷ್ಟದಲ್ಲಿಯೂ ಬೀದಿಗಿಳಿದು ಪ್ರತಿಭಟಿಸಿದರು. ಆ ಮೂಲಕ ಇಡೀ ಪ್ರಪಂಚಕ್ಕೆ ಟ್ರಂಪ್ ದುರಾಡಳಿತವನ್ನು ಎತ್ತಿ ತೋರಿಸಿದರು. ಅಮೆರಿಕದಲ್ಲಿ 2020ರ ಚುನಾವಣೆಯಿಂದ ಇಡೀ ದೇಶ ಒಂದು ರೀತಿಯಲ್ಲಿ ಇಬ್ಭಾಗವಾಗಿದೆ ಮತ್ತು ಟ್ರಂಪ್ ಮನಸ್ಥಿತಿಯವರು ಯಾವ ಹಂತದಲ್ಲಿಯೂ ಕಡಿಮೆಯಾಗಿಲ್ಲ ಎಂಬುದು ಗೋಚರಿಸುತ್ತದೆ.

ಆದರೆ ಅಮೆರಿಕ ದೇಶದ ಹೊಸತಲೆಮಾರು ಬಹಳ ಆರೋಗ್ಯಕರವಾಗಿ ಯೋಚಿಸುತ್ತಿರುವುದು ಮತ್ತು ಎಲ್ಲರನ್ನು ಒಳಗೊಳ್ಳುವ ಮನಸ್ಥಿತಿ ಬೆಳೆಸಿಕೊಂಡಿರುವುದು ಒಂದೆಡೆಯಾದರೆ ಅಮೆರಿಕದ ಹಳ್ಳಿಗಳಲ್ಲಿ ವಾಸಿಸುವ ಬಿಳಿಯರು ಬಹಳ ಸಾಂಪ್ರದಾಯಿಕವಾಗಿ ಯೋಚಿಸುವವರಾಗಿದ್ದು, ಇದು ಬಿಳಿಯರ ದೇಶ ಬಿಳಿಯರೆ ಆಳ್ವಿಕೆ ಮಾಡಬೇಕು ಎಂಬುವಂತಹ ಮನಸ್ಥಿತಿಯನ್ನು ಹೊಂದಿದ್ದಾರೆ. ಇವರೇ ಹೆಚ್ಚು ಟ್ರಂಪ್ ಅನುಯಾಯಿಗಳು. ಆದರೆ ನಗರಗಳಲ್ಲಿರುವ ವಿದ್ಯಾವಂತ ತಿಳಿವಳಿಕೆ ಇರುವ ಜನ ಬೈಡನ್‌ರನ್ನು ಬೆಂಬಲಿಸಿದ್ದಾರೆ. ಇದು ನಗರ ಕೇಂದ್ರೀಕೃತ ರಾಜ್ಯಗಳ ಎಲೆಕ್ಟೋರಲ್ ಕಾಲೇಜುಗಳನ್ನು ಜೋ ಬೈಡೆನ್ ಪ್ರತಿನಿಧಿಸುವ ಡೆಮಾಕ್ರಟಿಕ್ ಪಕ್ಷ ಗೆದ್ದುಕೊಂಡಿರುವುದು ಸ್ಪಷ್ಟವಾಗಿ ಸೂಚಿಸುತ್ತದೆ.

Photo Courtesy: KSAT.com

ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಗೆಲುವಿನಿಂದ ಭಾರತಕ್ಕೆ ಆಗುವ ಲಾಭಗಳೇನು ಎಂಬುದು ಬಹಳ ಮುಖ್ಯವಾಗಿ ಎಲ್ಲರನ್ನು ಕಾಡುವ ಪ್ರಶ್ನೆ. ವಾಸ್ತವದ ಸಂಗತಿ ಏನೆಂದರೆ, ಈ ಮೊದಲು ಸಹ ಅಮೆರಿಕದಂತಹ ಬಂಡವಾಳಶಾಹಿ ದೇಶದಿಂದ ಭಾರತಕ್ಕೆ ಆಗಿರುವ ಉಪಯೋಗಗಳು ಅಷ್ಟಕ್ಕಷ್ಟೇ ಎಂದು ಹೇಳಬಹುದು. ಆದರೆ ಒಂದು ಮಾತ್ರ ಸ್ಪಷ್ಟವಾಗಿ ಹೇಳಬಹುದು. ಬೈಡನ್ ಮತ್ತು ಕಮಲಹ್ಯಾರಿಸ್ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಲುವುಗಳನ್ನು ಯಾವ ಕಾರಣಕ್ಕು ಬೆಂಬಲಿಸಲಾರರು. ಯಾಕೆಂದರೆ ಈ ಇಬ್ಬರು ಸಹ ಮೋದಿ ಸರ್ಕಾರ ಕಾಶ್ಮೀರ ವಿಷಯದಲ್ಲಿ ತೆಗೆದುಕೊಂಡ ನಿಲುವು, ಎನ್‌ಆರ್‌ಸಿ-ಸಿಎಎ ಕಾಯ್ದೆಗಳ ಬಗ್ಗೆ ಈ ಮೊದಲೆ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ.

ಆ ದೃಷ್ಟಿಯಿಂದ ನೋಡಿದಾಗ ಮೋದಿ ಸರ್ಕಾರಕ್ಕೆ ಆವರ ಬೆಂಬಲ ಹೆಚ್ಚು ಸಿಗಲಾರದು. ಆದರೆ ಭಾರತ ಸಾರ್ವಭೌಮ ರಾಷ್ಟ್ರವಾಗಿ ಯಾವುದೇ ದೇಶದ ಮೇಲೆ ಅವಲಂಬಿತವಾಗುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಅಮೆರಿಕದ ಸಖ್ಯ ಬಯಸಿ ನೆರೆಹೊರೆಯ ರಾಷ್ಟ್ರಗಳ ದ್ವೇಷ ಕಟ್ಟಿಕೊಳ್ಳುವುದು ಕೂಡ ದೇಶದ ಅಭಿವೃದ್ಧಿಗೆ ಮಾರಕ. ಅದು ಅಮೆರಿಕದ ಶಸ್ತ್ರಾಸ್ತ್ರ ವ್ಯವಹಾರಕ್ಕೆ ಸಹಕಾರಿಯಾಗಬಹುದು ಅಷ್ಟೆ ಹೊರತು ಭಾರತಕ್ಕೆ ಮೂರು ಕಾಸಿನ ಉಪಯೋಗವಿಲ್ಲ. ಈಗ ಪ್ರಸ್ತುತ ಬಿಜೆಪಿ ಸರ್ಕಾರದ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವರು ಟ್ರಂಪ್ ಭಜನೆಯಿಂದ ಹೊರಬಂದು, ಡೆಮಾಕ್ರಟಿಕ್ ಪಕ್ಷದ ಆಡಳಿತದ ಅಮೆರಿಕದ ಜೊತೆಗಿನ ಬಾಂಧವ್ಯವನ್ನು ಹೇಗೆ ಸರಿಪಡಿಸಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ. ಇದು ಅವರ ಆಡಳಿತದಲ್ಲಿಯೂ ಏನಾದರೂ ಧನಾತ್ಮಕ ಬದಲಾವಣೆ ತರಬಹುದೇ ಎಂಬುದು ಕೂಡ ಭರವಸೆಯ ಚಿಂತನೆ ಆಗಬಹುದು!

ಅಮೆರಿಕದ ರಿಪಬ್ಲಿಕನ್ಸ್ ಮತ್ತು ಡೆಮಾಕ್ರಟ್ಸ್ ಸಿದ್ಧಾಂತಗಳಲ್ಲಿ ಸ್ಪಷ್ಟವಾದ ಭಿನ್ನತೆಗಳಿವೆ. ಭಾರತದ ಬಿಜೆಪಿಯೊಂದಿಗೆ, ಇಲ್ಲಿನ ’ರಿಪಬ್ಲಿಕನ್ ಪಾರ್ಟಿ ತುಂಬಾ ಸಾಮ್ಯತೆಗಳಿರುವುದನ್ನು ಕಾಣಬಹುದು. ಒಬ್ಬ ರಿಪಬ್ಲಿಕನ್ ಬಿಳಿಯ ಶ್ರೇಷ್ಠತೆಯನ್ನು ಒಪ್ಪುತ್ತಾನೆ. ಅದೇರೀತಿ ಭಾರತದ ಬಲಪಂಥೀಯರಿಗೆ ಹಿಂದುತ್ವ ಬಹಳ ಮುಖ್ಯವಾಗುತ್ತದೆ. ಭಾರತದಲ್ಲಿ ಹೇಗೆ ತಮ್ಮ ಜಾತಿಯವನು ಕಡು ಭ್ರಷ್ಟನಾದರೂ ನಮ್ಮವನು ಎಂಬ ಕಾರಣಕ್ಕೆ ಬೆಂಬಲಿಸುವುದನ್ನು ಮತ್ತು ಚುನಾವಣೆಯಲ್ಲಿ ಗೆಲ್ಲಿಸುವುದನ್ನು ಹೇಗೆ ಕಾಣುತ್ತೇವೆಯೋ ಇದೇ ರೀತಿ ಟ್ರಂಪ್ ಎಂಥವನೇ ಆದರೂ ನಮ್ಮವನು ಎಂಬ ಮನೋಭಾವ ಅಮೆರಿಕದ ಬಲಪಂಥೀಯ ಬಿಳಿಯರಲ್ಲಿ ಇದೆ. ಈ ಕಾರಣಕ್ಕೆ ಟ್ರಂಪ್ ಈಗ ಸೋತಿರಬಹುದು; ಆದರೆ ಟ್ರಂಪ್‌ಯಿಸಂ ಅಮೆರಿಕದಲ್ಲಿ ಇನ್ನೂ ಜೀವಂತವಾಗಿದೆ ಎಂದು ಹೇಳಬಹುದು.

ಬೈಡನ್ ಅಮೆರಿಕದಲ್ಲಿ ಈಗಿರುವ ಅಮಾನವೀಯ, ಅಲ್ಪಸಂಖ್ಯಾತರ ಬಗೆಗಿನ ಅಸಹನೆಯ ಧೋರಣೆಯನ್ನು ಪ್ರತಿನಿಧಿಸುವ ಧ್ರುವೀಕರಣವನ್ನು ಸರಿಪಡಿಸಿ, ಅಮೆರಿಕದ ಎಲ್ಲ ಜನತೆಯನ್ನು ವಿವೇಕದತ್ತ ಕೊಂಡೊಯ್ಯಬಹುದೇನೋ ಎಂಬ ಭರವಸೆಯೊಂದಿಗೆ ಅಮೆರಿಕ ಜನತೆ ಸದ್ಯಕ್ಕೆ ನಿಟ್ಟುಸಿರುಬಿಡುವಂತಾಗಿದೆ.

ಡಾ.ಅಮರ್ ಕುಮಾರ್
(ಸುಮಾರು ಐದು ದಶಕಗಳಿಂದ ಅಮೆರಿಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ಮೂಲದ ಅಮರ್ ಕುಮಾರ್ ಜನಪರ ಚಿಂತಕರು. ಅವರ ಜೊತೆಗಿನ ಸಂವಾದದೊಂದಿಗೆ ಮೂಡಿದ ಅಮೆರಿಕ ಚುನಾವಣೆಯ ಬಗೆಗಿನ ಸಂಗತಿಗಳನ್ನು ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿರುವ ನಾರಾಯಣ ಕ್ಯಾಸಂಬಳ್ಳಿ ಅಕ್ಷರ ರೂಪಕ್ಕೆ ಇಳಿಸಿದ್ದಾರೆ)


ಇದನ್ನೂ ಓದಿ: ಬಿಹಾರ ಫಲಿತಾಂಶ ವಿಶ್ಲೇಷಣೆ: ನಿತೀಶ್ ಕಳೆದುಕೊಂಡದ್ದೇನು? ತೇಜಸ್ವಿ ಗಳಿಸಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....