Homeಅಂತರಾಷ್ಟ್ರೀಯಸಿರಿಯಾ ಮತ್ತು ಇರಾಕ್‌ನಲ್ಲಿ ಪ್ರಜಾಪ್ರಭುತ್ವದ ಮೂಲಬೇರುಗಳ ಮೇಲೆ ಟರ್ಕಿಯ ದಾಳಿಗಳು

ಸಿರಿಯಾ ಮತ್ತು ಇರಾಕ್‌ನಲ್ಲಿ ಪ್ರಜಾಪ್ರಭುತ್ವದ ಮೂಲಬೇರುಗಳ ಮೇಲೆ ಟರ್ಕಿಯ ದಾಳಿಗಳು

- Advertisement -
- Advertisement -

ಸಿರಿಯಾ ಮತ್ತು ಇರಾಕ್‌ನಲ್ಲಿಯ ಕರ್ಡಿಶ್ ಜನರ ವಿರುದ್ಧ ಆಪರೇಷನ್ ಕ್ಲಾ-ಲಾಕ್ ಹೆಸರಿನ ಅತಿದೊಡ್ಡ ಮಿಲಿಟರಿ ದಾಳಿಯನ್ನು ಟರ್ಕಿಯ ಪ್ರಭುತ್ವ ಶುರು ಮಾಡಿ ಈಗ ಒಂದು ತಿಂಗಳಾಗಿದೆ. ಈ ವಿಶೇಷ ಪಡೆಗಳು ಕರ್ಡಿಸ್ತಾನದ ಪರ್ವತಗಳಿಗೆ ತಲುಪಿವೆ ಹಾಗೂ ಅಲ್ಲಿ ಬಾಂಬ್ ದಾಳಿ ಹಗಲೂರಾತ್ರಿ ನಿರಂತರ ನಡೆಯುತ್ತಿದೆ. ಈ ದಾಳಿಗೆ ನ್ಯಾಟೋ ಬೆಂಬಲವಾಗಿ ನಿಂತಿದೆ.

ಆಪರೇಷನ್ ಕ್ಲಾ-ಕ್ ಎಂಬುದು ಟರ್ಕಿಯು 2019ರಲ್ಲಿ ಆರಂಭಿಸಿದ ದಾಳಿಗಳ ಸರಣಿಯಲ್ಲಿ ಇತ್ತೀಚಿನದು. ಟರ್ಕಿಯ ಈ ದಾಳಿಗಳಿಂದ ನೂರಾರು ಸಾವುಗಳಾಗಿವೆ. ಈ ದಾಳಿಗಳು ಇರಾಕ್ ಮತ್ತು ಸಿರಿಯಾದ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತವೆ. ಇಳು ಸಿರಿಯಾದ ರೊಜಾವದಲ್ಲಿನ ಜನರು ಈಗ ಮುನ್ನೆಲೆಗೆ ತಂದುಕೊಳ್ಳುತ್ತಿರುವ ರಾಜಕೀಯ ಸಂರಚನೆಗಳ ಮೇಲಿನ ದಾಳಿಗಳಾಗಿವೆ.

ಸಿರಿಯಾದ ಒಳಗೆ ಇರುವ ಮೂಲಭೂತವಾದಿ, ಪುರುಷಪ್ರಧಾನ ಮತ್ತು ನಿರಂಕುಶ ಶಕ್ತಿಗಳಿಗೆ ಪರಿಣಾಮಕಾರಿಯಾದ ಪ್ರತಿರೋಧ ತೋರುತ್ತಿರುವುದಕ್ಕೆ ಮತ್ತು ತನ್ನ ವಿಶಿಷ್ಟವಾದ ಹಾಗೂ ಸ್ಫೂರ್ತಿದಾಯಕವಾದ ನೆಲಮಟ್ಟದ ಪ್ರಜಾಪ್ರಭುತ್ವಕ್ಕಾಗಿ ರೋಜವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಟರ್ಕಿ ದೇಶವು ಈಗ ರಷಿಯ-ಉಕ್ರೇನ್ ಯುದ್ಧವನ್ನು ಬಳಸಿಕೊಂಡು ಕರ್ಡಿಶ್ ಜನರ ಮೇಲೆ ತನ್ನ ದಾಳಿಗಳನ್ನು ಇನ್ನಷ್ಟು ಹೆಚ್ಚಿಸಿದೆ.

ಇರಾಕ್ ಮತ್ತು ಸಿರಿಯಾದಲ್ಲಿನ ಕರ್ಡಿಶ್ ಜನರು ಹೆಚ್ಚಿರುವ ಪ್ರದೇಶಗಳಲ್ಲಿ ಟರ್ಕಿಯು ವಾಯುದಾಳಿ, ಸ್ವಯಂಚಾಲಿತ ಡ್ರೋನ್‌ಗಳು ಮತ್ತು ಅರ್ಟಿಲರಿ ದಾಳಿಗಳನ್ನು ಮಾಡಿ, ಟರ್ಕಿಯಲ್ಲಿನ ಕರ್ಡಿಶ್ ಜನರೊಂದಿಗೆ ಅವರ ಸಂಪರ್ಕ ಕಡಿತಗೊಳಿಸಲು ಯೋಜಿಸಿದೆ. ಈ ಡ್ರೋನ್‌ಗಳು ಫ್ರೀ ಕರ್ಡಿಶ್ ಆಂದೋಲನದ ಹೋರಾಟಗಾರರನ್ನು ಗುರಿ ಮಾಡಿವೆ.

ಏನಿದು ಆಪರೇಷನ್ ಕ್ಲಾ-ಲಾಕ್?

ಸಿರಿಯಾದ ಆಂತರಿಕ ಯುದ್ಧದಲ್ಲಿ, ಟರ್ಕಿಯು ಸಿರಿಯಾದ ಉತ್ತರದ ಭಾಗಗಳನ್ನು ಆಕ್ರಮಿಸತೊಡಗಿತು. ತಮ್ಮ ಸಾಮಾನ್ಯ ಹಿತಾಸಕ್ತಿಗಳ ಕಾರಣಕ್ಕಾಗಿ ಹಾಗೂ ಯುದ್ಧದ ಅವ್ಯವಸ್ಥೆ, ಗೊಂದಲಗಳ ಕಾರಣದಿಂದಾಗಿ ದ ಕರ್ಡಿಶ್ ರೆಸಿಸ್ಟೆನ್ಸ್ ಮತ್ತು ಟರ್ಕಿಯ ಸರಕಾರವು ಶಾಂತಿಯ ಮಾತುಕತೆಗಳನ್ನು ನಡೆಸಿದವು. ಪಿಕೆಕೆಯು (ಕರ್ಡಿಸ್ತಾನ್ ವರ್ಕರ್ಸ್ ಪಾರ್ಟಿ) ತನ್ನ ಚಟುವಟಿಕೆಗಳನ್ನು ಪರ್ವತಗಳಿಗೆ ಸೀಮಿತಗೊಳಿಸುವುದಾಗಿ ಒಪ್ಪಿಕೊಂಡಿತು ಹಾಗೂ ಟರ್ಕಿಯು ಪಿಕೆಕೆ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುವುದಾಗಿ ಒಪ್ಪಿಕೊಂಡಿತು.

ಟರ್ಕಿಯು ಇರಾಕ್‌ನಲ್ಲಿ ತನ್ನ ಮಿಲಿಟರಿ ನೆಲೆಗಳನ್ನು ವಿಸ್ತರಿಸುವ ಕೆಲಸ ಶುರು ಮಾಡಿತು. ಇರಾಕ್‌ನಲ್ಲಿ ಕರ್ಡಿಶ್ ಚಳವಳಿ ಗಟ್ಟಿಗೊಳ್ಳದಂತೆ ತಡೆಯಲು ಹಾಗೂ ಆಂದೋಲನವನ್ನು ಟರ್ಕಿಯಲ್ಲಿಯೇ ಸೀಮಿತಗೊಳಿಸಲು ಇದನ್ನು ಮಾಡಿತು. ಟರ್ಕಿ ಇರಾಕ್‌ನಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸುವ ಕ್ರಮವನ್ನು ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರಮಣಕಾರಿ ನಡೆ ಎಂದು ಕರೆಯಲಾಗಿದೆ. 2015ರಲ್ಲಿ ಪಿಕೆಕೆ ಮತ್ತು ಟರ್ಕಿಯ ನಡುವಿನ ಸಂಘರ್ಷವು ಮತ್ತೆ ಪ್ರಾರಂಭವಾಯಿತು.

ಟರ್ಕಿ ಪ್ರಭುತ್ವ ಟರ್ಕಿಯಲ್ಲಿರುವ ಕರ್ಡಿಶ್ ಪಕ್ಷಗಳ ಮೇಲೆಯೂ ತನ್ನ ದಾಳಿಗಳನ್ನು ನಡೆಸಿತು. ಭಯೋತ್ಪಾದನೆಯನ್ನು ಬೆಂಬಲಿಸುವ ಆರೋಪ ಅವರ ಮೇಲೆ ಹೊರಿಸಲಾಯಿತು ಹಾಗೂ ಕರ್ಡಿಶ್ ಬಹುಸಂಖ್ಯಾತ ಪ್ರದೇಶಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ನಾಯಕರನ್ನು ಒಳಗೊಂಡು, ಸಾವಿರಾರು ಸಾರ್ವಜನಿಕ ಉದ್ಯೋಗಿಗಳನ್ನು ಬಂಧಿಸಲಾಯಿತು.

2015ರಿಂದ ಘರ್ಷಣೆಗಳು ಶುರುವಾದವು. ಪಿಕೆಕೆಯು ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ ಎಂದು ಟರ್ಕಿಯು ಆರೋಪಿಸಿತು ಹಾಗೂ ಟರ್ಕಿಯು ತನ್ನ ಸದಸ್ಯರ ಮೇಲೆ ದಾಳಿ ಮಾಡುತ್ತಿದೆ ಎಂದು ಪಿಕೆಕೆ ಆರೋಪ ಮಾಡಿತು.

2015ರಲ್ಲಿ ಟರ್ಕಿಯು ’ಕ್ಲಾ’ ಆಪರೇಷನ್‌ಗಳ ಸರಣಿಯನ್ನು ಪ್ರಾರಂಭಿಸಿತು, ಅದರಲ್ಲಿ ಇರಾಕ್ ಮತ್ತು ಸಿರಿಯಾದಲ್ಲಿನ ಕರ್ಡಿಶ್ ಪ್ರದೇಶಗಳ ಮೇಲೆ ಡ್ರೋನ್ ಮತ್ತು ವಾಯುದಾಳಿಗಳನ್ನು ಮಾಡಲಾಯಿತು. ಈ ಕ್ಲಾ ಆಪರೇಷನ್‌ಗಳು ಟರ್ಕಿಯ ಭಯೋತ್ಪಾದನಾ ವಿರೋಧಿ ಕ್ಯಾಂಪೇನ್‌ನ ಭಾಗವಾಗಿದ್ದು, ಅವುಗಳನ್ನು ಟರ್ಕಿ ಮತ್ತು ಇತರ ನೆರೆ ರಾಷ್ಟ್ರಗಳಲ್ಲಿ ಕರ್ಡಿಶ್ ಮತ್ತು ಇತರ ಪ್ರತಿರೋಧ ಧ್ವನಿಗಳನ್ನು ಅಡಗಿಸಲು ಬಳಸುತ್ತಿದೆ.

ಕರ್ಡಿಶ್ ಆಂದೋಲನ ಶುರುವಾಗಿದ್ದು ಹೇಗೆ?

ಮೊದಲ ವಿಶ್ವಯುದ್ಧದ ಸಮಯದಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ಸಾಮ್ರಾಜ್ಯಗಳು ಒಟ್ಟೊಮನ್ ಸಾಮ್ರಾಜ್ಯವನ್ನು ಸೋಲಿಸಲು ಆಗತಾನೇ ಹುಟ್ಟಿದ ಅರಬ್ ರಾಷ್ಟ್ರೀಯವಾದಿ ಆಂದೋಲನಗಳ ಜೊತೆಗೆ ಕೈಜೋಡಿಸಿದವು. ಒಟ್ಟೊಮನ್ ಸಾಮ್ರಾಜ್ಯ ಕುಸಿದ ನಂತರ ಮಧ್ಯಪೂರ್ವದ ಹೆಚ್ಚಿನ ಪ್ರದೇಶಗಳನ್ನು ಫ್ರೆಂಚ್‌ರು ಮತ್ತು ಬ್ರಿಟಿಷರು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡರು. ಅರಬ್ ರಾಷ್ಟ್ರೀಯವಾದ ಆಂದೋಲನದ ಮೈತ್ರಿಕೂಟಕ್ಕೆ ದ್ರೋಹ ಬಗೆದು, ಆ ಪ್ರದೇಶಗಳನ್ನು ತಮ್ಮಲ್ಲೇ ಹಂಚಿಕೊಂಡರು. ಹಾಗೂ ಈ ಪ್ರದೇಶಗಳಿಗೆ ಸ್ವಾತಂತ್ರ್ಯ ನೀಡಬೇಕಾಗಿ ಬಂದಾಗ, ಅವರುಗಳು ಬೇಕಾಬಿಟ್ಟಿಯಾಗಿ ಗಡಿಗಳನ್ನು ರಚಿಸಿ ಹೊರಟರು, ಈಗಿನ ಮಧ್ಯಪೂರ್ವದ ದೇಶಗಳು ಆ ರೀತಿಯಲ್ಲಿ ರಚನೆಯಾದವು. ಪಾಶ್ಚಾತ್ಯ ವ್ಯಾಪಾರಿ ಹಿತಾಸಕ್ತಿಗಳನ್ನು ಬೆಂಬಲಿಸಲು ಕೆಲವು ದೇಶಗಳನ್ನು ವಿಭಜಿಸಲಾಯಿತು.

ಆಧುನಿಕ ಟರ್ಕಿ, ಸಿರಿಯಾ, ಇರಾಕ್ ಮತ್ತು ಇರಾನ್‌ಅನ್ನು ಕನೆಕ್ಟ್ ಮಾಡುವ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟುಗಳೇ ಕರ್ಡಿಶ್ ಜನರು. ಇವರು ಹಲವು ದೇಶಗಳಲ್ಲಿ ಅಲ್ಪಸಂಖ್ಯಾತರಾಗಿದ್ದರು ಹಾಗೂ ತಮ್ಮದೆಂದು ಹೇಳಿಕೊಳ್ಳಬಹುದಾದ ಯಾವುದೇ ದೇಶ ಇವರಿಗೆ ಇರಲಿಲ್ಲ.

1980ರಲ್ಲಿ ಟರ್ಕಿಯ ವಿರುದ್ಧ ಪಾರ್ಟಿಯಾ ಕರ್ಕರೆನ್ ಕರ್ಡಿಸ್ತಾನ್ (ಕರ್ಡಿಸ್ತಾನ್ ಕಾರ್ಮಿಕರ ಪಕ್ಷ)ವು ಸ್ವತಂತ್ರ ಕರ್ಡಿಸ್ತಾನ್‌ಗಾಗಿ ಗೆರಿಲ್ಲಾ ಕ್ಯಾಂಪೇನ್ ಶುರುಮಾಡಿತು. ಪಕ್ಷವು ಮೊದಲಿಗೆ ಅಬ್ದುಲ್ಲಾ ಒಜಲಾನ್ ನೇತೃತ್ವದಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಿತು. ಪಿಕೆಕೆಯನ್ನು ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಲಾಯಿತು ಹಾಗೂ 1999ರಲ್ಲಿ ಟರ್ಕಿಶ್ ಸರಕಾರವು ಒಜಲಾನ್‌ನನ್ನು ಬಂಧಿಸಿತು.

ಶಾಂತಿ ಮತ್ತು ಅರಾಜಕತೆಯೆಡೆಗೆ

ಜೈಲಿನಲ್ಲಿ ಒಜಲಾನ್ ಅವರು ವಿಶ್ವದ ಇತರೆಡೆ ಆದ ಆಂದೋಲನಗಳ ಬಗ್ಗೆ ಅಧ್ಯಯನ ಮಾಡಿದರು. ಅವರು ವಿಶೇಷವಾಗಿ ಆಕರ್ಷಿಸಲ್ಪಟ್ಟಿದ್ದು ಅರಾಜಕತೆಯ (ಅನಾರ್ಕಿಸ್ಟ್), ಮಹಿಳಾವಾದದ, ಪರಿಸರವಾದದ ಹಾಗೂ ಯುದ್ಧ ವಿರೋಧಿ ಆಂದೋಲನಗಳಿಂದ. ಅವರು ತಮ್ಮ ನಿಲುವುಗಳನ್ನು ಬದಲಿಸಿಕೊಂಡರು. ಒಂದು ಸ್ವತಂತ್ರ ಕರ್ಡಿಶ್ ರಾಷ್ಟ್ರಕ್ಕಾಗಿ ಹೋರಾಟದ ಬದಲಿಗೆ ಅವರು ಸ್ವಾಯತ್ತತೆಗಾಗಿ ಹಾಗೂ ರಾಷ್ಟ್ರೀಯ ಗಡಿಗಳ ವಿರುದ್ಧ ಸೆಣೆಸಬೇಕು ಎಂದು ವಾದಿಸಿದರು.

ನಿಜ ಅರ್ಥದಲ್ಲಿ ಸ್ವತಂತ್ರವಾಗಲು, ಪ್ರತಿಯೊಂದು ಹಂತದಲ್ಲಿ ಕರ್ಡಿಶ್ ಜನರು ಸ್ವಾತಂತ್ರಕ್ಕಾಗಿ ಹೋರಾಟ ಮಾಡಬೇಕಾಯಿತು. ಅವರು ತಮ್ಮ ಸಮುದಾಯದೊಳಗೇ ಸ್ವತಂತ್ರವಾಗುವ ಅಗತ್ಯವಿತ್ತು, ಅದರರ್ಥ ಅವರು ಪುರುಷಪ್ರಧಾನ ವ್ಯವಸ್ಥೆಯೊಂದಿಗೆ ಹೋರಾಟ ಮಾಡಬೇಕಿತ್ತು. ಅವರು ಬಂಡವಾಳಶಾಹಿ ಶಕ್ತಿಗಳೊಂದಿಗೆ ಹೋರಾಟ ಮಾಡಬೇಕಿತ್ತು. ಇತರೆ ಸ್ಥಳೀಯ ಸಮುದಾಯಗಳೊಂದಿಗೆ ಸಹಕಾರದಿಂದ ಕೆಲಸ ಮಾಡಬೇಕಾಗಿತ್ತು. ಸರಕಾರ ಮಾಡುತ್ತಿರುವ ಹಿಂಸೆಗೆ ಪ್ರತಿರೋಧ ತೋರಬೇಕಿತ್ತು. ಸ್ಥಳೀಯ ಸಮುದಾಯಗಳು ಆಂದೋಲನದ ನಿಯಂತ್ರಣದಲ್ಲಿದ್ದರೆ ಪ್ರತಿರೋಧವು ಪರಿಣಾಮಕಾರಿಯಾಗುವುದು ಎಂದು ಒಜಲಾನ್‌ಗೆ ಅನಿಸಿತು ಹಾಗೂ ಪ್ರದೇಶದಲ್ಲಿ ಸ್ವಾಯತ್ತತೆ ಸೃಷ್ಟಿಸಲು ಇತರರೊಂದಿಗೆ ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಿದರು. ಒಂದು ಹೊಸ ಕರ್ಡಿಶ್ ದೇಶವನ್ನು ಸೃಷ್ಟಿಸಲು ಹೋರಾಡುವುದು, ಇತರ ಸಮಸ್ಯೆಗಳನ್ನು ಮರುಸೃಷ್ಟಿ ಮಾಡುತ್ತವೆ ಎಂದು ಅವರಿಗೆ ಅನಿಸಿತು. ಅದು ಕ್ರಾಂತಿಕಾರಿಗಳ ಒಂದು ಆಯ್ದ ಗುಂಪಿನ ಮೇಲೆ ಅವಲಂಬಿತವಾಗಿರುವಂತೆ ಮಾಡುತ್ತದೆ ಎಂದು ಅವರಿಗನ್ನಿಸಿತು. ಅದು ಕರ್ಡಿಶ್‌ಯೇತರ ಸಮುದಾಯಗಳೊಂದಿಗೆ ವೈಷಮ್ಯ ಹುಟ್ಟುಹಾಕುತ್ತದೆ ಹಾಗೂ ವಿಮೋಚನೆಗೊಂಡ ಮಹಿಳೆಯರ ಸಕ್ರಿಯ ಬೆಂಬಲವಿಲ್ಲದೇ ಅದು ದುರ್ಬಲವಾಗಿರುತ್ತದೆ ಎಂದು ತಿಳಿದರು.

ಅವರು ನಂತರ ಅರಾಜಕತೆಯನ್ನು (ಅನಾರ್ಕಿಸಂ) ಪ್ರತಿಪಾದಿಸುವ ಚಿಂತಕರ ಕಡೆಗೆ ತಿರುಗಿ, ಸಂಘಟಿಸುವ ಹೊಸ ಥಿಯರಿಯನ್ನು ಹುಟ್ಟುಹಾಕಿದರು. ಅರಾಜಕತೆ ಎಂದರೆ ಅವ್ಯವಸ್ಥೆಯಲ್ಲ, ಅದರ ಬದಲಿಗೆ ಅದು ಎಲ್ಲಾ ರೀತಿಯ ಪ್ರಾಬಲ್ಯದ-ದಬ್ಬಾಳಿಕೆಯ ವಿರುದ್ಧದ ಹೋರಾಟ. ಅರಾಜಕತೆ ಅಥವಾ ಅನಾರ್ಕಿಸಂ, ಅಥವಾ ಅನ್ ಅಂದರೆ ರಹಿತ ಹಾಗೂ ಆರ್ಕಿ ಅಥವಾ ರಾಜಕತೆ ಎಂದರೆ ಆಳ್ವಿಕೆ ಮಾಡುವಾತ, ಅದರರ್ಥ ಪುರುಷಪ್ರಧಾನ ವ್ಯವಸ್ಥೆ, ಶ್ರೇಣೀಕರಣ ವ್ಯವಸ್ಥೆ, ರಾಜಪ್ರಭುತ್ವ ಮತ್ತು ಒಲಿಗಾರ್ಕಿ ಅಂದರೆ ಕೆಲವರ ಆಳ್ವಿಕೆ, ಇವೆಲ್ಲವುದರ ಹಲವಾರು ರೀತಿಯ ಪ್ರಾಬಲ್ಯ-ದಬ್ಬಾಳಿಕೆಯ ವಿರುದ್ಧದ ನಿಲುವು. ಒಜಲಾನ್ ಈ ಪರಿಕಲ್ಪನೆಗಳನ್ನು ಕರ್ಡಿಶ್‌ನ ಸಂದರ್ಭಕ್ಕೆ ಅನುಗುಣವಾಗಿ ಮಾರ್ಪಾಡು ಮಾಡಿ, ಡೆಮಾಕ್ರಟಿಕ್ ಕನ್ಫೆಡರಲಿಸಂ ಎಂದು ಕರೆಯಲಾದ ಮಾದರಿಯನ್ನು ಸೃಷ್ಟಿಸಿದರು.

ಈ ಡೆಮಾಕ್ರಟಿಕ್ ಕನ್ಫೆಡರಲಿಸಂನ ಒಳಗೆ ಜಿನಿಯಾಲಜಿ ಅಥವಾ ಮಹಿಳಾ ವಿಜ್ಞಾನದ ಥಿಯರಿ ಇದೆ. ಒಂದು ಸಮಾಜ ಸ್ವತಂತ್ರವಾಗಬೇಕೆಂದರೆ, ಮಹಿಳೆಯರನ್ನು ಶೋಷಿಸುವ ಸಾಂಪ್ರದಾಯಿಕ ಬಂಧನಗಳನ್ನು ಮುರಿಯಬೇಕು. ಡೆಮಾಕ್ರಟಿಕ್ ಕನ್ಫೆಡರಲಿಸಂನ ಥಿಯರಿಯು ಮಹಿಳೆಯರ ನೇತೃತ್ವದ ರಚನೆಗಳನ್ನು, ಸ್ಥಳೀಯ ಆಡಳಿತ ವ್ಯವಸ್ಥೆಗಳನ್ನು ರಚಿಸಬೇಕೆಂದು ವಾದಿಸುತ್ತದೆ ಹಾಗೂ ಕಾರ್ಮಿಕರ ನೇತೃತ್ವದ ಸಹಕಾರ ಸಂಘಗಳನ್ನು ಬೆಂಬಲಿಸುತ್ತದೆ. ಪ್ರಭುತ್ವದ ನಿಯಂತ್ರಣದಲ್ಲಿರುವ ಸಂಸ್ಥೆಗಳ ಅಧಿಕಾರವನ್ನು ಕಡಿತಗೊಳಿಸಲಾಗುತ್ತದೆ ಹಾಗೂ ಸಮಾಜದಲ್ಲಿ ಎಲ್ಲರಿಗೂ ಪೊಲೀಸ್ ತರಬೇತಿ ನೀಡಲಾಗುತ್ತದೆ. ಪೊಲೀಸ್ ತರಬೇತಿಯು ಸ್ತ್ರೀವಾದಿ ಅಂಶಗಳನ್ನು ಒಳಗೊಂಡಿರುತ್ತದೆ ಹಾಗೂ ಮಹಿಳೆಯರ ಸಬಲೀಕರಣ ಮಾಡುವ ಉದ್ದೇಶ ಹೊಂದಿರುತ್ತದೆ. ಸ್ಥಳೀಯ ಘರ್ಷಣೆಗಳನ್ನು ಸ್ಥಳೀಯ ಮಂಡಳಿಗಳು ನಿರ್ವಹಿಸುತ್ತವೆ. ಅಲ್ಲಿ ಕೇವಲ ಮಹಿಳೆಯರನ್ನು ಒಳಗೊಂಡ ಮಂಡಳಿಗಳೂ ಇರುತ್ತವೆ, ಅದರೊಂದಿಗೆ ಮಿಶ್ರ-ಲಿಂಗ ಮಂಡಳಿಗಳೂ ಇರುತ್ತವೆ ಹಾಗೂ ಕೌಟುಂಬಿಕ ಹಿಂಸಾಚಾರದಂತಹ ಮಹಿಳೆಯರ ಶೋಷಣೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಮಿಶ್ರ ಲಿಂಗ ಮಂಡಳಿಗಳನ್ನು ಮೀರಿ ನಿರ್ಣಯ ತೆಗೆದುಕೊಳ್ಳುವಂತೆ ಕೇವಲ ಮಹಿಳೆಯರು ಇರುವ ಮಂಡಳಿಗಳಿಗೆ ಅಧಿಕಾರ ಇರಬೇಕು. ಮಹಿಳೆಯರ ವಿಂಗ್‌ಗಳನ್ನು ಮಾತ್ರ ಹೊಂದಿರುವುದಕ್ಕಿಂತಲೂ, ಸಮಾಜದಲ್ಲಿ ಪುರುಷರ ವಿರೋಧ
ಎದುರಿಸುತ್ತಿರುವಾಗಲೂ ಕೆಲವು ನಿರ್ದಿಷ್ಟ ವಿಷಯಗಳನ್ನು ನಿರ್ವಹಿಸಲು ಮಹಿಳಾ ಸಂಘಟನೆಗಳನ್ನು ಸಬಲೀಕರಣ ಮಾಡಬೇಕೆಂದು ಡೆಮಾಕ್ರಟಿಕ್ ಕನ್ಫೆಡರಲಿಸಂ ವಾದಿಸುತ್ತದೆ. ರೊಜವಾದಲ್ಲಿ ಇರುವ ಆತ್ಮ ರಕ್ಷಣೆಯ ಪಡೆಗಳಲ್ಲಿ 40% ಮಹಿಳೆಯರೇ ಇದ್ದಾರೆ. ಸಿರಿಯಾದ ಆಂತರಿಕ ಯುದ್ಧದ ಸಮಯದಲ್ಲಿ ಈ ಪಡೆಗಳು ಐಎಸ್‌ಐಎಲ್ ವಿಸ್ತರಣೆಯನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.

ಇರಾಕ್ ಮತ್ತು ಸಿರಿಯಾದ ಕರ್ಡಿಶ್ ಪ್ರದೇಶಗಳ ಮೇಲೆ ಆಗುತ್ತಿರುವ ಟರ್ಕಿಯ ದಾಳಿಯು ವಿದೇಶಿ ನೆಲದ ಮೇಲೆ ಆಗುತ್ತಿರುವ ಕಾನೂನುಬಾಹಿರ ದಾಳಿಯಾಗಿದೆ ಹಾಗೂ ಇದನ್ನು ಗಟ್ಟಿಯಾಗಿ ಖಂಡಿಸಬೇಕಿದೆ. ವಿಶ್ವಾದ್ಯಂತ ಜನರು ಈ ದಾಳಿಗಳನ್ನು ಖಂಡಿಸುತ್ತಿದ್ದಾರೆ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಬ್ರಾಹ್ಮಣ್ಯ ಯಾಜಮಾನ್ಯ ಉಳಿಸಿಕೊಳ್ಳುವ ಹುನ್ನಾರ; ಸುಳ್ಳು ಸಮರ್ಥನೆಗಿಳಿದ ಸಚಿವ ಬಿ.ಸಿ ನಾಗೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...