Homeಮುಖಪುಟಮೋದಿ ಸರ್ಕಾರಕ್ಕಾದ ಎರಡು ಭಾರಿ ಹಿನ್ನಡೆಗಳು: ಆದರವು ಹಿನ್ನಡೆ ಅನಿಸುತ್ತಿಲ್ಲ!

ಮೋದಿ ಸರ್ಕಾರಕ್ಕಾದ ಎರಡು ಭಾರಿ ಹಿನ್ನಡೆಗಳು: ಆದರವು ಹಿನ್ನಡೆ ಅನಿಸುತ್ತಿಲ್ಲ!

ಕೃಷಿ ಕಾಯ್ದೆಗಳನ್ನು ತಡೆಯುವ ಮತ್ತು ಸಿಎಎ ಪ್ರಕ್ರಿಯೆ ಆರಂಭಿಸದಿರುವ ಎರಡೂ ನಿದರ್ಶನಗಳು ಸರ್ಕಾರದ ಹಿನ್ನಡೆಗಳೇ ಆಗಿವೆ. ಆದರೆ ಅವು ಹಿನ್ನಡೆಗಳಂತೆ ಕಾಣುತ್ತಿಲ್ಲವೇಕೆ?

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಅವಧಿಯಲ್ಲಿ, ಅವರು ತಮ್ಮ ಮೊದಲ ಪ್ರಯತ್ನಗಳಲ್ಲಿ ಒಂದನ್ನು ಹಿಂದಕ್ಕೆ ಪಡೆದರು. ಕೈಗಾರಿಕೆಗಳಿಗೆ ಭೂಸ್ವಾಧೀನ ಕಾನೂನನ್ನು ತಿದ್ದುಪಡಿ ಮಾಡುವುದು ಆ ಮೊದಲ ಪ್ರಯತ್ನವಾಗಿತ್ತು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಜೆಪಿ ಸರ್ಕಾರವನ್ನು ಕಟ್ಟಿ ಹಾಕಲು ಯಶಸ್ವಿಯಾದ ಅಪರೂಪದ ಕ್ಷಣವೆಂದು ಇಂದಿಗೂ ಈ ಕ್ರಮವನ್ನು ಪರಿಗಣಿಸಲಾಗಿದೆ. ಮೋದಿಯವರನ್ನು “ಸೂಟ್-ಬೂಟ್ ಸರ್ಕಾರ್” ಎಂದು ಕರೆದಿದ್ದ ರಾಹುಲ್, ಇದು ಕಾರ್ಪೊರೇಟ್ ಭಾರತದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ ಮತ್ತು ಜನಸಾಮಾನ್ಯರ ಹಿತಾಸಕ್ತಿಗಲ್ಲ ಎಂದು ಪ್ರಬಲ ವಿರೋಧ ವ್ಯಕ್ತ ಮಾಡಿದ್ದರು.

ಎರಡನೆಯ ಅವಧಿಯಲ್ಲಿ, ಮೋದಿಯವರು ಈಗಾಗಲೇ ಅಂತಹ ಎರಡು ರೀತಿಯ ಹಿನ್ನಡೆಗಳನ್ನು ಕಂಡಿದ್ದಾರೆ, ಆದರೆ ಅವು ಹಿನ್ನಡೆಗಳಂತೆ ಕಾಣದ ರೀತಿಯಲ್ಲಿ ಮ್ಯಾನೇಜ್ ಮಾಡಿದ್ದಾರೆ.

ಕೃಷಿ ಕಾನೂನು ಪ್ರಕರಣದಲ್ಲಿ ಅರ್ಜಿದಾರರೊಬ್ಬರ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ, ಕೃಷಿ ಕಾನೂನುಗಳ ಅನುಷ್ಠಾನವನ್ನು ತಡೆಯುವ ಸುಪ್ರೀಂ ಕೋರ್ಟ್‌ನ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದರು. ಸ್ಥಗಿತವನ್ನು “ರಾಜಕೀಯ ವಿಜಯ” ಎಂದು ನೋಡಬಾರದು ಮತ್ತು ಪ್ರತಿಭಟನಾಕಾರರು ತಾವು “ಈ ಸುತ್ತನ್ನು ಗೆದ್ದಿದ್ದೇವೆ” ಎಂದು ಭಾವಿಸಬಾರದು ಎಂದು ಹೇಳಿದರು.

ಇದನ್ನೂ ಓದಿ: Breaking: ಕೃಷಿ ಕಾನೂನುಗಳನ್ನು ಒಂದೂವರೆ ವರ್ಷ ತಡೆಯಲ್ಲಿಡಲು ಮುಂದಾದ ಕೇಂದ್ರ!

ಕೃಷಿ ಕಾನೂನುಗಳನ್ನು ಅಮಾನತುಗೊಳಿಸುವುದರ ಬಗ್ಗೆ ಸಾಳ್ವೆಯವರಿಗೆ ಹೆಚ್ಚಿನ ಚಿಂತೆಯಿಲ್ಲ, ಆದರೆ ಹಾಗೆ ಮಾಡಿದರೆ ಭಾರತದ ರೈತರು ಅದನ್ನು ‘ಗೆಲುವು” ಎಂದು ನೋಡುತ್ತಾರೆ ಎಂಬುದು ಅವರ ಚಿಂತೆ. ಅಂದರೆ ಅದು ಸರ್ಕಾರಕ್ಕಾದ ಮುಖಭಂಗ ಎಂಬುದು ಅವರ ಚಿಂತೆಯ ಮೂಲ.

ಕೃಷಿ ಕಾನೂನುಗಳು ಶೀಘ್ರದಲ್ಲೇ ಜಾರಿಯಾಗುತ್ತಿಲ್ಲ. ಅನುಷ್ಠಾನವನ್ನು ಒಂದೂವರೆ ವರ್ಷಗಳವರೆಗೆ ಸ್ಥಗಿತಗೊಳಿಸಲು ಸರ್ಕಾರ ಸಿದ್ಧವಿದೆ ಎಂದು ಘೋಷಿಸಲಾಗಿದೆ. ಇದು ಸರ್ಕಾರಕ್ಕೆ ಹಿನ್ನಡೆಯಂತೆ ಕಾಣದಿರಲು ಕಾರಣ, ಕಾನೂನುಗಳನ್ನು ರದ್ದುಗೊಳಿಸಲಾಗಿಲ್ಲ. ಅವನ್ನು ಹಿಂದಕ್ಕೆ ಪಡೆಯುವ ಮಾತನ್ನು ಆಡಿಲ್ಲ. ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಪ್ರತಿಭಟಿಸುತ್ತಿರುವವರ ಬೇಡಿಕೆಯ ಮುಂದೆ ರಾಜಕೀಯವಾಗಿ ಶರಣಾಗಲಿಲ್ಲ ಎಂದು ಸರ್ಕಾರ ಹೇಳಬಹುದು. ಈ ಸಂದರ್ಭದಲ್ಲಿ ರೈತರು ಬಿಗಿ ನಿಲುವಿಗೆ ಅಂಟಿಕೊಂಡಿದ್ದರೂ ಕೂಡ ಎರಡೂ ಕಡೆಯವರು ಗೆದ್ದೆವು ಎಂದು ಅಂದುಕೊಳ್ಳಬಹುದು.
ಮುಖ ಉಳಿಸಿಕೊಳ್ಳುವ ಸರ್ಕಾರದ ಈ ನಿರ್ಗಮನವು ಒಂದು ಹಿನ್ನಡೆಯೇ ಆಗಿದೆ. ವಾಸ್ತವದ ಸಂಗತಿಯೆಂದರೆ, ಹೊಸ ಕೃಷಿ ಕಾನೂನುಗಳಿಂದ ತೊಂದರೆಗೊಳಗಾದ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಂಡಿಗಳನ್ನು ನಾವು ನೋಡಲು ಹೋಗುವುದಿಲ್ಲ. ಕೃಷಿ ಮಾರಾಟವನ್ನು ಖಾಸಗೀಕರಣಗೊಳಿಸುವುದು ಸರ್ಕಾರದ ಉದ್ದೇಶವಾಗಿದ್ದರೆ, ಅದು ಆಗುತ್ತಿಲ್ಲ. ಕನಿಷ್ಠ 2021 ರಲ್ಲಿ ಅಂತೂ ಸಾಧ್ಯವಿಲ್ಲ. ಕನಿಷ್ಠ ಫೆಬ್ರವರಿ-ಮಾರ್ಚ್ 2022 ರಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯವರೆಗೂ ಅದು ಸಂಭವಿಸಲಾರದು. ತದನಂತರ ಲೋಕಸಭಾ ಚುನಾವಣೆಯು ತುಂಬಾ ಹತ್ತಿರದಲ್ಲಿರುತ್ತದೆ.

ಸಿಎಎ, ಕೊರೊನಾ: ಅಸ್ಸಾಂ-ಬಂಗಾಳ ಚುನಾವಣೆ

ಅಂತೆಯೇ, 2019 ರ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಈಗ ರಾಜಕೀಯ ಚರ್ಚೆಯಿಂದ ಹೊರಬಂದಿದೆ. ಇದು ಕೂಡ ಮಹತ್ವದ ಕಾನೂನೇ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಕೂಡ ಹಿನ್ನಡೆ ಅನುಭವಿಸಿದೆ. ಕೋವಿಡ್ ಕಾರಣಕ್ಕೆ ಕೇವಲ ಎನ್‌ಪಿಆರ್ ಮಾತ್ರವಲ್ಲ ಜನಗಣತಿಯನ್ನು ಕೂಡ ನಿಲ್ಲಿಸಿದ್ದಾರೆ.

ಎನ್‌ಆರ್‌ಸಿ-ಎನ್‌ಪಿಆರ್-ಸಿಎಎ ಕಾನೂನುಗಳ ವಿರುದ್ಧ 2019 ರಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗ, ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ನಡೆಸುವ ಉದ್ದೇಶವನ್ನು ಎಂದಿಗೂ ಹೊಂದಿಲ್ಲ ಎಂದು ಸರ್ಕಾರ ನಟಿಸಿತು. ಆದರೆ ಈಗ ಅವರು ಸಿಎಎಗೆ ಹಿಂದಿರುಗಿದ್ದಾರೆಂದು ತೋರುತ್ತದೆಯಾದರೂ ಅದರ ಲಕ್ಷಣಗಳು ದಟ್ಟವಾಗಿಲ್ಲ. ಕೃಷಿ ಕಾನೂನುಗಳಂತೆ, ಸಿಎಎ ಕಾನೂನಾಗಿ ಉಳಿಯುತ್ತದೆ. ಕಾನೂನನ್ನು ಕಾರ್ಯಗತಗೊಳಿಸಲು ಸರ್ಕಾರವು ನಿಯಮಗಳನ್ನು ಬಿಡುಗಡೆ ಮಾಡದ ಕಾರಣ ಅದನ್ನೇನೂ ಕಾನೂನು ದಸ್ತಾವೇಜಿನಿಂದ ಪುಸ್ತಕಗಳಿಂದ ತೆಗೆದುಹಾಕಬೇಕಾಗಿಲ್ಲ.

ಇದನ್ನೂ ಓದಿ:  ಸಿಎಎ ಜಾರಿ ವಿಳಂಬ: ನಿಯಮ ರೂಪಿಸುವಲ್ಲಿ ವಿಫಲವಾದ ಕೇಂದ್ರ ಸರ್ಕಾರ

ಆದ್ದರಿಂದ, ಸೈದ್ಧಾಂತಿಕವಾಗಿ, ಸರ್ಕಾರವು ಯಾವುದೇ ಹೊತ್ತಿನಲ್ಲಿ ಸಿಎಎ ನಿಯಮಗಳನ್ನು ತರಬಹುದು. ಆದರೆ ಅದು ಅಸ್ಸಾಂ, ಪಶ್ಚಿಮ ಬಂಗಾಳ ಚುನಾವಣೆಗಳಲ್ಲಿ ತಿರುಗುಬಾಣ ಆಗಬಹುದು ಎಂಬ ಭಯದಲ್ಲಿ ಸರ್ಕಾರವಿದೆ.

ಗೃಹ ಸಚಿವ ಅಮಿತ್ ಶಾ ಡಿಸೆಂಬರ್‌ನಲ್ಲಿ, “ಸಿಎಎ ನಿಯಮಗಳನ್ನು ಇನ್ನೂ ರೂಪಿಸಿಲ್ಲ, ಏಕೆಂದರೆ ಕೊರೊನಾ ಕಾರಣದಿಂದಾಗಿ ಇಂತಹ ಬೃಹತ್ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದಿಲ್ಲ. ವ್ಯಾಕ್ಸಿನೇಷನ್ ಪ್ರಾರಂಭವಾದ ತಕ್ಷಣ ನಾವು ಅದನ್ನು ಪರಿಗಣಿಸುತ್ತೇವೆ” ಎಂದಿದ್ದನ್ನು ಗಮನಿಸಿ.

ಪ್ರತಿಭಟನೆಯ ಶಕ್ತಿ

ಕೃಷಿ ಕಾಯ್ದೆಗಳನ್ನು ತಡೆಯುವ ಮತ್ತು ಸಿಎಎ ಪ್ರಕ್ರಿಯೆ ಆರಂಭಿಸದಿರುವ ಎರಡೂ ನಿದರ್ಶನಗಳು ಸರ್ಕಾರದ ಹಿನ್ನಡೆಗಳೇ ಆಗಿವೆ. ಈ ಹಿನ್ನಡೆಗಳಿಗೆ ಕಾರಣ ಅಂತಾ ಒಂದಿದ್ದರೆ ಅದು ಸಾರ್ವಜನಿಕರ ಪ್ರತಿಭಟನೆಯಾಗಿದೆ. ಸಂಸತ್ತು, ಪ್ರತಿಪಕ್ಷಗಳು, ಮಾಧ್ಯಮಗಳು, ನ್ಯಾಯಾಂಗ – ಇಂದು ಯಾವುದೇ ಸಂಸ್ಥೆಗಳು ಸಮತೋಲನದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಇದಕ್ಕಾಗಿಯೇ ಪ್ರತಿಭಟನೆ – ಶಾಂತಿಯುತ ಪ್ರತಿಭಟನೆ – ಪ್ರಜಾಪ್ರಭುತ್ವದ ಕೇಂದ್ರಬಿಂದುವಾಗಿದೆ, ಮತ್ತು ಇದಕ್ಕಾಗಿಯೇ ಪ್ರತಿಭಟನಾಕಾರರನ್ನು ಅತ್ಯಂತ ಕಠಿಣ ಕಾನೂನುಗಳ ಅಡಿಯಲ್ಲಿ ಗುರುತಿಸಿ ಅನೇಕ ಪ್ರಕರಣಗಳೊಂದಿಗೆ ತಳುಕು ಹಾಕಿ ಬಂಧನ ಮಾಡಲಾಗುತ್ತಿದೆ.

ಕೃಪೆ: ಶಿವಂ ವಿಜ್ (ದಿ ಪ್ರಿಂಟ್)


ಇದನ್ನೂ ಓದಿ: ಜೋ ಬೈಡನ್ ಆಡಳಿತದಿಂದ RSS-BJP ಸಂಪರ್ಕ ಹೊಂದಿರುವ ಡೆಮಾಕ್ರಟ್‌ಗಳು ಹೊರಕ್ಕೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...