Homeಚಳವಳಿಸಿಎಎ ಜಾರಿ ವಿಳಂಬ: ನಿಯಮ ರೂಪಿಸುವಲ್ಲಿ ವಿಫಲವಾದ ಕೇಂದ್ರ ಸರ್ಕಾರ

ಸಿಎಎ ಜಾರಿ ವಿಳಂಬ: ನಿಯಮ ರೂಪಿಸುವಲ್ಲಿ ವಿಫಲವಾದ ಕೇಂದ್ರ ಸರ್ಕಾರ

ಸಂಸದೀಯ ಸಂಪ್ರದಾಯದಂತೆ ಕಾಯ್ದೆಯ ಅಧಿಸೂಚನೆ ಹೊರಡಿಸಿದ ದಿನದಿಂದ ಆರು ತಿಂಗಳ ಅವಧಿ ಒಳಗೆ ಕಾಯ್ದೆ ಜಾರಿಗೊಳಿಸಬೇಕು.

- Advertisement -
- Advertisement -

ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ವಿಳಂಬವಾಗಲಿದ್ದು, ತಿದ್ದುಪಡಿ ಕಾಯ್ದೆಯನ್ನು ನಿಗದಿತ ಆರು ತಿಂಗಳ ಅವಧಿಯೊಳಗೆ ನಿಯಮಗಳನ್ನು ರೂಪಿಸುವಲ್ಲಿ ಮತ್ತು ಅರ್ಜಿಯನ್ನು ಅಂತಿಮಗೊಳಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ವಿವಿಧ ವರದಿಗಳನ್ನು ಉಲ್ಲೇಖಿಸಿ thewire.in ತಿಳಿಸಿದೆ.

ಸಂಸದೀಯ ಸಂಪ್ರದಾಯದಂತೆ ಈ ಕಾಯ್ದೆಯ ಅಧಿಸೂಚನೆ ಹೊರಡಿಸಿದ ದಿನದಿಂದ ಆರು ತಿಂಗಳ ಅವಧಿ ಒಳಗೆ ಕಾಯ್ದೆ ಜಾರಿಗೊಳಿಸಬೇಕು. ಜೂನ್ 18ಕ್ಕೆ ಆರು ತಿಂಗಳ ಅವಧಿ ಮುಗಿದಿದೆ ಎಂದು ಜುಲೈ 17 ರಂದು ದಿ ಅಸ್ಸಾ ಟ್ರೈಬುನ್ ವರದಿ ಮಾಡಿದೆ ಎಂದು ಅದು ಹೇಳಿದೆ.

ದಿ ಹಿಂದೂ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿರುವ ದಿ ವೈರ್ ಗೃಹ ಸಚಿವಾಲಯ ಜನವರಿ 10, 2020ರಂದು ಅಧಿಸೂಚನೆ ಹೊರಡಿಸಿತ್ತು. ಅದರಂತೆ ಜುಲೈ 10ಕ್ಕೆ ನಿಗದಿತ ಅವಧಿ ಮುಗಿದಿದೆ ಎಂದು ತಿಳಿಸಿದೆ.

ಪೌರತ್ವ (ತಿದ್ದುಪಡಿ) ಕಾಯ್ದೆ 1955 ಅನ್ನು ಡಿಸೆಂಬರ್ 10, 2019ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನವರಿ 2020 ಅಧಿಸೂಚನೆ ಹೊರಡಿಸಿತ್ತು.

ಹೊಸ ತಿದ್ದುಪಡಿ ಕಾಯ್ದೆಯು ಮುಸ್ಲೀಂ ಬಾಹುಳ್ಯವಿರುವ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಥಾನಿಸ್ಥಾನದ ಧಾರ್ಮಿಕ ಅಲ್ಪಸಂಖ್ಯಾತರಾದ ಹಿಂದೂ, ಸಿಖ್, ಪಾರ್ಸಿ, ಕ್ರಿಶ್ಚಿಯನ್, ಜೈನ್ ಮತ್ತು ಬುದ್ದಿಸ್ಟ್ ಗಳಿಗೆ ಭಾರತದ ಪೌರತ್ವ ನೀಡಲು ಅನುಮತಿಸುತ್ತದೆ.

ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕಾರ ಭಾರತದಲ್ಲಿ ಮೊದಲ ಬಾರಿಗೆ ಧರ್ಮದ ಆದಾರದ ಮೇಲೆ ಪೌರತ್ವ ನೀಡಲು ಅನುಮತಿಸಲಾಗಿದೆ. ಇದರ ವಿರುದ್ಧ ಅಸ್ಸಾಂ ಸೇರಿದಂತೆ ದೇಶಾದ್ಯಂತ ಭಾರೀ ಪ್ರತಿಭಟನೆಗಳು ವ್ಯಕ್ತವಾದವು. 1985ರ ಅಸ್ಸಾಂ ಒಪ್ಪಂದದ ತತ್ವಗಳನ್ನು ಈ ತಿದ್ದುಪಡಿ ಕಾಯ್ದೆ ಉಲ್ಲಂಘಿಸುತ್ತದೆ ಎಂದು ಪ್ರತಿಭಟನೆ ನಡೆದಿದ್ದವು.

ಅಸ್ಸಾಂ ಟ್ರೈಬೂನ್ ಗೃಹ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿರುವ ವೈರ್, ಅವಧಿ ವಿಸ್ತರಣೆಗೆ ಹೊಸದಾಗಿ ಅನುಮತಿ ಪಡೆಯಲು ಸಿದ್ದತೆ ನಡೆಸಿದೆ. ಆದರೆ ಸಂಸದೀಯ ಅಧೀನ ಶಾಸನ ಸಮಿತಿಯಲ್ಲಿ ಎನ್‌‌ಡಿಎ ಯೇತರ ಪಕ್ಷಗಳು ಬಹುಮತ ಹೊಂದಿರುವುದು ಸರ್ಕಾರಕ್ಕೆ ತೊಡಕಾಗಿದೆ ಎಂದು ವೈರ್ ವರದಿ ತಿಳಿಸಿದೆ.


ಓದಿ: ಸಿಎಎ ವಿರೋಧಿಗಳ ಬೇಟೆ ಮುಂದುವರಿಕೆ…!


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರು ಹುದ್ದೆಯಿಂದ ವಜಾ!

0
ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಹುದ್ದೆಯಿಂದ ವಜಾಗೊಳಿಸಿದ್ದಾರೆ. ಈ ಹಿಂದೆ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಎಎಪಿಯ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಅವರು...