Homeಮುಖಪುಟಏಪ್ರಿಲ್‌ನಲ್ಲಿ ನಿರುದ್ಯೋಗ ದರ 27.1% ರಷ್ಟು ಏರಿಕೆ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯೆಂದ CMIE

ಏಪ್ರಿಲ್‌ನಲ್ಲಿ ನಿರುದ್ಯೋಗ ದರ 27.1% ರಷ್ಟು ಏರಿಕೆ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯೆಂದ CMIE

- Advertisement -
- Advertisement -

ಏಪ್ರಿಲ್‌ನಲ್ಲಿ ನಿರುದ್ಯೋಗ ದರ 27.1% ರಷ್ಟು ಏರಿಕೆಯಾಗಿದೆ ಎಂದು ಮುಂಬೈ ಮೂಲದ ವೇದಿಕೆಯಾದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಇ) ತಿಳಿಸಿದೆ.

2020ರ ಏಪ್ರಿಲ್‌ನಲ್ಲಿ ದೇಶದ ನಿರುದ್ಯೋಗ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ ಎಂದು ಇದು ಹೇಳಿದೆ. ಕೊರೊನಾ ಸೋಂಕಿನ ತಡೆಗೋಸ್ಕರ ದೇಶವೂ 3.0 ಲಾಕ್‌ಡೌನ್ ನ ಎರಡನೇ ದಿನ ಪ್ರವೇಶಿಸುತ್ತಿದ್ದಂತೆ ಆರ್ಥಿಕತೆಯಲ್ಲಿ ಉದ್ಯೋಗದ ಕೊರತೆಯಿಂದಾಗಿ ನಿರುದ್ಯೋಗ ದರ ಅಥವಾ ಆರ್ಥಿಕತೆಯಲ್ಲಿ ನಿರುದ್ಯೋಗಿಗಳ ಪಾಲು  ಶೇಕಡಾ 27.1 ಆಗಿದೆ. ಜಿಡಿಪಿ ಇಳಿಕೆಯಾಗುತ್ತಿರುವ ಸಮಯದಲ್ಲಿ ಸಿಎಂಐಇ ವರದಿಯು ಕೊರೊನಾದಿಂದಲೂ ಆರ್ಥಿಕ ಕುಸಿತವಾಗಿದೆ ಎಂದು ಹೇಳುತ್ತಿದೆ.

ಸಿಎಂಐಇ ನಿರುದ್ಯೋಗ ಸಮೀಕ್ಷೆಯನ್ನು 2016 ರಿಂದಲೂ ಮಾಡುತ್ತಿದ್ದು. ಅಂದಿನಿಂದ ಇದು ದೇಶದ ಕಾರ್ಮಿಕ ಮಾರುಕಟ್ಟೆಯ ಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತಿದೆ. ಇದು ತನ್ನ ಸಮೀಕ್ಷೆಯಲ್ಲಿ ತಿಂಗಳಿಗೆ 43,600 ಮನೆಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆ ನಡೆಸುತ್ತಿದೆ.

ಸಿಎಂಐಇ ಪ್ರಕಾರ, ಕೊರೊನಾ ಲಾಕ್‌ಡೌನ್ ಅನ್ನು ಹಿಂತೆಗೆದುಕೊಳ್ಳುವುದರಿಂದ ಜೀವನೋಪಾಯದ ವಿಷಯದಲ್ಲಿ ತ್ವರಿತ ಫಲಿತಾಂಶವನ್ನು ನೀಡುವ ನಿರೀಕ್ಷೆಯಿದೆ.


ಇದನ್ನೂ ಓದಿ: ಯೋಜನೆಯೇ ಇಲ್ಲದ ಮೋದಿ ಲಾಕ್‌ಡೌನ್ : ವೈರಸ್ ಕೊಲ್ಲದಿದ್ದರೂ, ಆರ್ಥಿಕತೆಯ ಮರಣ ನಿಶ್ಚಿತ!


ಅನೇಕ ಅರ್ಥಶಾಸ್ತ್ರಜ್ಞರು ಈಗಾಗಲೇ ತಮ್ಮ ಯೋಜನೆಗಳನ್ನು ಮಂದಿಟ್ಟಿದ್ದಾರೆ, ಕೆಲವರು ಕೊರೊನಾ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಹಿಂಜರಿತದ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಮಾರ್ಚ್ 25 ರಂದು ಪ್ರಾರಂಭವಾದ ಲಾಕ್‌ಡೌನ್‌ಗೆ ಮುಂಚೆಯೇ ದೇಶದ ಆರ್ಥಿಕತೆಯು ದೀರ್ಘಕಾಲದ ನಿಧಾನಗತಿಯ ಬೆಳವಣಿಗೆಯಿಂದ ಬಳಲುತ್ತಿದೆ ಎಂದು ಸಿಎಂಐಇ ಬೊಟ್ಟು ಮಾಡಿದೆ.

ಕೊರೊನಾ ವೈರಸ್ ಪರಿಣಾಮದಿಂದಾಗಿ ಅನೇಕ ಸಮೀಕ್ಷಾ ಗುಂಪುಗಳು ಆರ್ಥಿಕತೆಗೆ ಹೆಚ್ಚು ಕೆಟ್ಟ ಪರಿಸ್ಥಿತಿಯನ್ನು ಅಂದಾಜು ಮಾಡಿವೆ. ಫಿಚ್ ರೇಟಿಂಗ್ಸ್ 2021 ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇಕಡಾ 2 ರಷ್ಟು ವಿಸ್ತರಿಸಬಹುದು ಎಂದು ಹೇಳಿದೆ. ಇದು ಕಳೆದ ಮೂವತ್ತು ವರ್ಷಗಳಲ್ಲೇ ನಿಧಾನಗತಿಯ ಆರ್ಥಿಕ ವೇಗವಾಗಿದೆ.

ಮ್ಯೂಚುವಲ್ ಫಂಡ್ ಸೇರಿದಂತೆ ಸಾಲಗಾರರು, ಸಾಲದಾತರು ಹಾಗೂ ಇತರ ಸಂಸ್ಥೆಗಳು ಎದುರಿಸುತ್ತಿರುವ ಒತ್ತಡವನ್ನು ಕಡಿಮೆ ಮಾಡಲು ರಿಸರ್ವ್ ಬ್ಯಾಂಕ್ ಹಲವಾರು ಕ್ರಮಗಳನ್ನು ಪ್ರಕಟಿಸಿದೆ. ಕೊರೊನಾ ಲಾಕ್‌ಡೌನ್‌ನಿಂದ ಉಂಟಾಗುವ ದ್ರವ್ಯತೆ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಫೆಬ್ರವರಿ 2020 ರ ಹಣಕಾಸು ನೀತಿ ಸಭೆಯು ಜಿಡಿಪಿಯ ಶೇಕಡಾ 3.2 ರಷ್ಟು ಹಣವನ್ನು ಆರ್ಥಿಕತೆಗೆ ಸೇರಿಸಿದೆ.


ಇದನ್ನೂ ಓದಿ: ಕೊರೊನಾದಿಂದ ಉಂಟಾದ ಮಹಾನ್‌ ನಿರುದ್ಯೋಗ: ಅಮೇರಿಕದ ಜನರು ತಮ್ಮ ಅಹಂ ಬದಿಗಿಟ್ಟು ನೆರವು ಕೇಳುತ್ತಿದ್ದಾರೆ.


ನಮ್ಮ ಯೂ ಟ್ಯೂಬ್ ಚಾನೆಲ್‌ಗೆ  Subscribe ಆಗಲು ಇಲ್ಲಿ ಕ್ಲಿಕ್ ಮಾಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...