Homeಎಕಾನಮಿಯೋಜನೆಯೇ ಇಲ್ಲದ ಮೋದಿ ಲಾಕ್‌ಡೌನ್ : ವೈರಸ್ ಕೊಲ್ಲದಿದ್ದರೂ, ಆರ್ಥಿಕತೆಯ ಮರಣ ನಿಶ್ಚಿತ!

ಯೋಜನೆಯೇ ಇಲ್ಲದ ಮೋದಿ ಲಾಕ್‌ಡೌನ್ : ವೈರಸ್ ಕೊಲ್ಲದಿದ್ದರೂ, ಆರ್ಥಿಕತೆಯ ಮರಣ ನಿಶ್ಚಿತ!

ಅತ್ಯಂತ ಕೆಟ್ಟದಾಗಿ ಯೋಜಿಸಲಾದ ಅಥವಾ ನಿರ್ದಿಷ್ಟವಾದ ಯೋಜನೆಯೇ ಇಲ್ಲದ ಮೋದಿಯ ರಾಷ್ಟ್ರೀಯ ಕರ್ಫ್ಯೂ ಅಥವಾ ಲಾಕ್‌ಡೌನ್ ಭಾರತೀಯರನ್ನು ಹಸಿವಿನಿಂದ ಕೊಲ್ಲಬಹುದೇ ಹೊರತು, ಅದು ವೈರಸ್‌ನಿಂದ ಅವರನ್ನು ರಕ್ಷಿಸುವುದು ಕಷ್ಟಸಾಧ್ಯ.

- Advertisement -
- Advertisement -

ಶಿವಂ ವಿಜ್

ಅನುವಾದ: ನಿಖಿಲ್ ಕೋಲ್ಪೆ

ಕೊರೋನ ವೈರಸ್ ನಿಯಂತ್ರಣದಲ್ಲಿ ಈ ತನಕ ಬಹಳಷ್ಟು ಒಳ್ಳೆಯ ಸಾಧನೆ ತೋರಿದ ದೇಶಗಳು ಸಂಪೂರ್ಣ, ದೇಶವ್ಯಾಪಿ ಕರ್ಫ್ಯೂ ಮಾದರಿಯ ಲಾಕ್‌ಡೌನ್ ಹೇರಿಲ್ಲ ಎಂದು ಗಮನಿಸುವುದು ಅಗತ್ಯ. ಈ ದೇಶಗಳಲ್ಲಿ ಸಿಂಗಾಪುರ, ತೈವಾನ್, ಜರ್ಮನಿ ಮತ್ತು ತುರ್ಕಿ ಸೇರಿವೆ. ಇವೆಲ್ಲವೂ ಆರಂಭವಾದ ಚೀನಾದಲ್ಲಿಯೂ ಹ್ಯುಬೆಯ್ ಪ್ರಾಂತ್ಯವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿತ್ತಾದರೂ, ಇಡೀ ದೇಶದಲ್ಲಿ ಅದನ್ನು ಮಾಡಿರಲಿಲ್ಲ.

ಆದರೆ, ಪ್ರಧಾನಿ ನರೇಂದ್ರ ಮೋದಿ 130 ಕೋಟಿ ಜನರನ್ನು ಕರ್ಫ್ಯೂ ಮಾದರಿಯ ಲಾಕ್‌ಡೌನ್‌ನಲ್ಲಿ ಇರಿಸಿದ್ದಾರೆ. ಪಾಸ್‌ಗಳನ್ನು ನೀಡುವಾಗ ಅಧಿಕಾರಿಗಳು ‘ಕರ್ಫ್ಯೂ’ ಎಂಬ ಪದವನ್ನು ಬಳಸುತ್ತಿರುವುದರಿಂದ ಅದನ್ನು ರಾಷ್ಟ್ರೀಯ ಕರ್ಫ್ಯೂ ಎಂದು ಕರೆಯುವುದೇ ಸಮಂಜಸವಾಗಿದೆ.

21 ದಿನಗಳ ರಾಷ್ಟ್ರೀಯ ಕರ್ಫ್ಯೂ ಖಂಡಿತವಾಗಿಯೂ ಈ ಮಾರಣಾಂತಿಕ ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಬಹಳಷ್ಟು ನೆರವಾಗಲಿದೆ. ಆದರೆ, 21 ದಿನಗಳ ನಂತರ ಏನಾಗಲಿದೆ? ಆ ಬಳಿಕ ವೈರಸೇನೂ ಮಾಯವಾಗುವುದಿಲ್ಲ- ಕನಿಷ್ಟ ನಮಗೆ ಲಸಿಕೆ ಸಿಗುವ ತನಕ. ಲಸಿಕೆಯನ್ನು ಅಭಿವೃದ್ಧಿಪಡಿಸಿದ ಮೇಲೂ ಪ್ರತೀ ಭಾರತೀಯನಿಗೆ ಲಸಿಕೆ ಹಾಕಲು ಕೆಲವು ತಿಂಗಳುಗಳೇ ಬೇಕು. ಈ ಕೆಲವು ತಿಂಗಳುಗಳು ಎಂಬುದು ಒಂದು ಆಶಾವಾದಿ ಅಂದಾಜು. ಬೇರೆ ಮಾತುಗಳಲ್ಲಿ ಹೇಳುವುದಾದಲ್ಲಿ ಕೆಲವು ವರ್ಷಗಳ ಕಾಲ ನಾವು ಈ ಗೋಜಲಿನಲ್ಲಿ ಇರಲಿದ್ದೇವೆ.

ಆದುದರಿಂದ, 21 ದಿನಗಳ ರಾಷ್ಟ್ರೀಯ ಲಾಕ್‌ಡೌನನ್ನು ಭಾರಿ ಪ್ರಮಾಣದ ಪರೀಕ್ಷಾ ಸೌಲಭ್ಯಗಳ ನಿರ್ಮಾಣಕ್ಕೆ ಕಾಲಾವಕಾಶ ಪಡೆಯುವ ಪ್ರಯತ್ನ ಎಂಬಂತೆ ಕಾಣಬೇಕಾಗಿದೆ. ಇದರಿಂದ ರೋಗಲಕ್ಷಣ ರಹಿತರನ್ನೂ ಪರೀಕ್ಷಿಸಿ, ಶಂಕಿತರನ್ನು ಪ್ರತ್ಯೇಕಿಸಬಹುದು. ನಮಗೆ ಸೂಕ್ತ ಔಷಧಿಗಳು ಮತ್ತು ಸಾಮೂಹಿಕವಾಗಿ ಹಾಕಲು ಬೇಕಾದಷ್ಟು ಲಸಿಕೆ ಸಿಗುವ ವರೆಗೆ ಇದೊಂದೇ ಕೊರೋನ ವೈರಸ್ ಪಿಡುಗನ್ನು ನಿಯಂತ್ರಿಸಲು ಇರುವ ಹಾದಿ.

ಈ ಪೆಡಂಭೂತದ ವಿವರಗಳು

ದುರದೃಷ್ಟವಶಾತ್, ನರೇಂದ್ರ ಮೋದಿ ತನ್ನ ಎರಡೂ ಭಾಷಣಗಳಲ್ಲಿ ಭಾರತವು ಸಾಮೂಹಿಕ ಪರೀಕ್ಷೆಯ ಹಾದಿಯನ್ನು ಹಿಡಿಯದೇ ಇರುವ ಆತಂಕದ ವಿಷಯದ ಬಗ್ಗೆ ಏನನ್ನೂ ಹೇಳಿಲ್ಲ. ನಮಗೆ ತ್ವರಿತ, ಅಗ್ಗದ, ಸುಲಭವಾಗಿ ಲಭ್ಯವಾಗುವ ಪರೀಕ್ಷೆಗಳು ಬೇಕು. ಒಬ್ಬ ವ್ಯಕ್ತಿಯಲ್ಲಿ ರೋಗ ಲಕ್ಷಣಗಳು ಕಂಡುಬಂದ ತಕ್ಷಣವೇ, ಆ ವ್ಯಕ್ತಿ ವೈದ್ಯಕೀಯ ಸಿಬ್ಬಂದಿ ಮತ್ತು ಕುಟುಂಬದ ಇತರ ಸದಸ್ಯರೂ ಸೇರಿದಂತೆ ಬೇರೆಯವರಿಗೆ ಅದನ್ನು ಹರಡದಂತೆ ತಡೆಯಲು ಉತ್ತಮವಾದ ಪ್ರತ್ಯೇಕಿಸುವ (quarantine) ವ್ಯವಸ್ಥೆ ಬೇಕು.

ಭಾರತದ ಕೊರೋನ ವೈರಸ್ ಸೋಂಕಿತರ ಅಧಿಕೃತ ಸಂಖ್ಯೆಯನ್ನು ನಂಬಿದರೆ ನೀವು ನಿಜಕ್ಕೂ ಮುಗ್ಧರು. ಪರೀಕ್ಷೆಯೇ ಇಲ್ಲದೆ, ಕೊರೋನ ವೈರಸ್ ಸಾವು ಎಂಬ ಗಣನೆಗೂ ಬಾರದೆ, ಏಕಾಏಕಿಯಾಗಿ ನ್ಯುಮೋನಿಯಾಕ್ಕೆ ಬಲಿಯಾದವರಿದ್ದಾರೆ.

ವ್ಯಾಪಕವಾದ ಪರೀಕ್ಷಾ ಸೌಲಭ್ಯ ಮತ್ತು ವೈದ್ಯರಿಗೆ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ)ಗಳ ಕೊರತೆ ಒಂದು ಹಗರಣವೇ ಸರಿ. ಈ 21 ದಿನಗಳು ಈ ಎರಡು ಸಮಸ್ಯೆಗಳನ್ನು ಪರಿಹರಿಸಲು ಮೋದಿಗಿರುವ ಕೊನೆಯ ಅವಕಾಶ. ಎಲ್ಲರಿಗಿಂತಲೂ ಹೆಚ್ಚಿನ ಜವಾಬ್ದಾರಿ ಇರಬೇಕಾದುದು ಅವರಿಗೇ. ಜೊತೆಗೆ ರಾಜ್ಯ ಸರಕಾರಗಳು ಕೂಡಾ ಪರೀಕ್ಷೆಗೆ ಒಳಪಡಲಿವೆ.

ದುಃಖದ ವಿಷಯವೆಂದರೆ, ಯೋಜನೆ ಮತ್ತು ಅನುಷ್ಟಾನದ ವಿವರಗಳನ್ನು ಕುರಿತು ಚಿಂತಿಸಲು ಮೋದಿ ಸರಕಾರಕ್ಕೆ ಸಾಮರ್ಥ್ಯವಿಲ್ಲ ಎಂದು ಸಾಕ್ಷ್ಯಾಧಾರಗಳು ಸೂಚಿಸುತ್ತವೆ. ನೌಟಂಕಿಯನ್ನು ಸಾಧನೆ ಎಂದು ಭಾವಿಸುವ ಮೋದಿಯ ಟಿಪಿಕಲ್ ಸಮಸ್ಯೆಯಿಂದಾಗಿ, ಇದು ಇನ್ನೊಂದು ನೋಟು ಅಮಾನ್ಯೀಕರಣದ ರೂಪ ಪಡೆಯುತ್ತಿದೆ.

ಪ್ರಸ್ತುತ ಎಂದರೆ, ಎಷ್ಟು ಜನ ಮೋದಿಯ ಸಲಹೆಯಂತೆ ಜಾಗಟೆ ಬಡಿದರು, ಎಷ್ಟು ಜನ ಮನೆಯೊಳಗೆ ಉಳಿದರು ಎಂಬುದಲ್ಲ. ಪ್ರಸ್ತುತ ಎಂದರೆ, ಎಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಎಷ್ಟು ವೈದ್ಯರಿಗೆ ಸುರಕ್ಷಾ ಸಾಧನಗಳನ್ನು ಒದಗಿಸಲಾಗಿದೆ, ತಕ್ಷಣದಲ್ಲಿ ಸರಕಾರ ಎಷ್ಟು ವೆಂಟಿಲೇಟರ್‌ಗಳನ್ನು ಉತ್ಪಾದಿಸಿದೆ ಅಥವಾ ಖರೀದಿಸಿದೆ ಎಂಬುದಾಗಿದೆ. ಇತರ ಪ್ರಸ್ತುತ ವಿಷಯಗಳೆಂದರೆ, ಪ್ರತ್ಯೇಕಿಸುವ ಕೇಂದ್ರಗಳು, ಒಳಾಂಗಣ ಕ್ರೀಡಾಂಗಣ ಅಥವಾ ಮಾನವ ವಾಸಕ್ಕೆ ಯೋಗ್ಯವಾದ ಕಟ್ಟಡಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳು ಮತ್ತು ಪ್ರತ್ಯೇಕಿಸುವ ಕೇಂದ್ರಗಳು.

ಮೋದಿಗೆ ಇಂತಹಾ ವಿವರಗಳನ್ನು ಪರಿಶೀಲಿಸುವ ತಾಳ್ಮೆಯಾಗಲೀ, ಆಸಕ್ತಿಯಾಗಲೀ ಇದ್ದಂತಿಲ್ಲ. ಬಹುಶಃ ಆತ ತನ್ನ ವಾಕ್ಚಾತುಯರ್ಯಕ್ಕೆ ಚಪ್ಪಾಳೆ ಗಿಟ್ಟಿಸುವ ಮುಂದಿನ “ರಾಷ್ಟ್ರವನ್ನುದ್ದೇಶಿಸಿ ಭಾಷಣ”ದ ತಯಾರಿಯಲ್ಲಿ ತೊಡಗಿರಬಹುದು. ಆತ ಕಷ್ಟಕರ ಕೆಲಸಗಳನ್ನು ರಾಜ್ಯ ಸರಕಾರಗಳ ಹೆಗಲಿಗೆ ತಳ್ಳಿ, ಈ ಕಷ್ಟಕಾಲದಲ್ಲಿ ತನ್ನ ರಾಜಕೀಯ ರೇಟಿಂಗ್‌ ಉಳಿಸಿಕೊಳ್ಳುವ ಪ್ರಚಾರ ತಂತ್ರಗಳ ಮೇಲೆ ಗಮನಹರಿಸಬಹುದು.

ವೈರಸ್ ನಿಮ್ಮನ್ನು ಕೊಲ್ಲದಿದ್ದಲ್ಲಿ…

ಒಂದು ವೇಳೆ ನಾವು ಈ ಪಿಡುಗಿನಿಂದ ಪಾರಾದರೂ, ಮುಂದೆ ಬರಲಿರುವ ಆರ್ಥಿಕ ಕುಸಿತದಿಂದ ಪಾರಾಗಲಾರೆವು. ಆರ್ಥಿಕತೆ ಕೂಡಾ ಮೋದಿಯ ಗಮನದಲ್ಲಿಲ್ಲ. ಕಳೆದ 45 ವರ್ಷಗಳಲ್ಲೇ ಹೆಚ್ಚಿನ ನಿರುದ್ಯೋಗ ದರಕ್ಕೆ ಕಾರಣವಾದ ದುರಂತಕಾರಿ ಆರ್ಥಿಕ ನೀತಿಗಳ ಹೊರತಾಗಿಯೂ ಆತ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹಾಗಿರುವಾಗ ಆತ ಆರ್ಥಿಕತೆಯ ಕುರಿತು ಏಕೆ ಚಿಂತಿಸಬೇಕು?

ಅಮಾನ್ಯೀಕರಣ ಮತ್ತು ಜಿಎಸ್‌ಟಿಗಳು ಬೇಡಿಕೆಯನ್ನು ಕೊಂದವು. ಕೆಟ್ಟದಾಗಿ ಯೋಜಿಸಲಾದ ಈ ರಾಷ್ಟ್ರೀಯ ಕರ್ಫ್ಯೂ ಪೂರೈಕೆ ಜಾಲಗಳನ್ನು ಕೊಲ್ಲಲಿದೆ. ಕೊನೆಯಲ್ಲಿ ನಮಗೆ ಭಾರತದ ಅತ್ಯಂತ ದೊಡ್ಡ ಆವಿಷ್ಕಾರವಾಗಿರುವ “ಸೊನ್ನೆ” ಮಾತ್ರ ಉಳಿಯಲಿದೆ.

ಮೋದಿ ಹೆಚ್ಚಿನ ಸಮಯವನ್ನೇ ಕೊಡದೆ ರಾಷ್ಟ್ರೀಯ ಕರ್ಫ್ಯೂ ಘೋಷಿಸಿದರು. ರಾತ್ರಿ 8.00 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ಮಧ್ಯ ರಾತ್ರಿಯಿಂದಲೇ ಕರ್ಫ್ಯೂ ಜಾರಿಗೆ ಬಂತು. ಅಮಾನ್ಯೀಕರಣದ ರೀತಿಯಲ್ಲೇ. ಆತ ಜನರಿಗೆ ಸ್ವಲ್ಪ ಕಾಲಾವಕಾಶವನ್ನು ಏಕೆ ಕೊಡಲಿಲ್ಲ? ಬೆಳಿಗ್ಗೆ 8.00 ಗಂಟೆಗೆ ಭಾಷಣ ಮಾಡಬಹುದಿತ್ತಲ್ಲವೆ? ನೋಡಿ, ಇದು ಟಿ.ವಿ.ಯ ಪ್ರೈಮ್ ಟೈಮ್‌ನ ಗರಿಷ್ಟ ಪ್ರಚಾರ ಗಿಟ್ಟಿಸುವುದಕ್ಕಾಗಿ.

ಗೃಹ ಸಚಿವಾಲಯವು ಕೆಲವು ವಿನಾಯಿತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಆದರೆ, ಅದನ್ನು ರಸ್ತೆಯಲ್ಲಿರುವ ಪೊಲೀಸರಿಗೆ ವಿವರಿಸಲು ಹೋಗಿ ನೋಡಿ. ಭಾರತೀಯ ಪೊಲೀಸರು ತಮಗೆ ಅತ್ಯಂತ ಪ್ರಿಯವಾದ ಕೆಲಸವನ್ನೇ ಮಾಡುತ್ತಿದ್ದಾರೆ. ಅದೆಂದರೆ, ಭಾರತೀಯ ಪ್ರಜೆಗಳಿಗೇ ಲಾಠಿಯಲ್ಲಿ ಥಳಿಸುವುದು. ಇದೇ ವೇಳೆಗೆ ಸಾವಿರಾರು ಟ್ರಕ್‌ಗಳು ರಾಜ್ಯಗಳ ಗಡಿಗಳಲ್ಲಿ ಸಿಕ್ಕಿಬಿದ್ದಿವೆ. ಔಷಧಿ, ಹಾಲು, ದಿನಸಿ, ಆಹಾರ ಮತ್ತು ಪತ್ರಿಕೆಗಳಂತಹ ಅತ್ಯಂತ ಆವಶ್ಯಕ ವಸ್ತುಗಳ ಪೂರೈಕೆ ಜಾಲಗಳು ಬುಡಮೇಲಾಗಿವೆ. ಕಟಾವಿನ ಅಂದರೆ, ರಾಬಿ ಋತುವಿನಲ್ಲಿ ಈ ಕೆಲಸವನ್ನು ರಾಷ್ಟ್ರೀಯ ಕರ್ಫ್ಯೂ ನಡುವೆ ಹೇಗೆ ನಡೆಸುವುದು ಎಂದು ಲಕ್ಷಾಂತರ ರೈತರು ಚಿಂತಿತರಾಗಿದ್ದಾರೆ ಎಂಬ ವಿಷಯ ಪ್ರಧಾನಿಯ ಕಚೇರಿಯಲ್ಲಿ ಯಾರಿಗೂ ಗೊತ್ತಿರುವಂತಿಲ್ಲ. ದೇಶವು ಒಂದು ಸಾಂಕ್ರಾಮಿಕ ಪಿಡುಗನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೇ ದೇಶದ ವೈದ್ಯಕೀಯ ಜಾಲವನ್ನು ಬುಡಮೇಲುಗೊಳಿಸುವುದು ಕೇವಲ ಮೋದಿಗಷ್ಟೇ ಸಾಧ್ಯ.

ಈ ತನಕ ದೊಡ್ಡ ಹಣಕಾಸು ಪ್ಯಾಕೇಜನ್ನು ಘೋಷಿಸದ ಏಕೈಕ ವಿಶ್ವನಾಯಕನೆಂದರೆ ಮೋದಿ. ಹಣಕಾಸು ಸಚಿವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಆತ ತನ್ನ ಮೊದಲ ಭಾಷಣದಲ್ಲಿ ಹೇಳಿದ್ದರು. ಆದರೆ, ಈ ವಿಷಯ ತಮಗೆ ಗೊತ್ತಾದುದೇ ಪ್ರಧಾನಿ ಭಾಷಣದಿಂದ ಎಂದು ಹಣಕಾಸು ಸಚಿವಾಲಯದ ಮೂಲಗಳು ಹೇಳುತ್ತಿವೆ.

ಕೊರೋನದಿಂದ ಉಂಟಾಗುವ ಆರೋಗ್ಯ ವೆಚ್ಚವನ್ನು ಭರಿಸಲು ಹೆಚ್ಚುವರಿ 15,000 ಕೋಟಿ ರೂ.ಗಳನ್ನು ಅವರು ಘೋಷಿಸಿದ್ದಾರೆ. ಆದರೆ ಇದು ಕೇಂದ್ರ ದಿಲ್ಲಿಯನ್ನು ನವೀಕರಿಸುವ ಅನಗತ್ಯವಾದ, ಸ್ವಮೋಹಿ ಯೋಜನೆಗೆ ಆತ ತೆಗೆದಿಟ್ಟ ಹಣಕ್ಕಿಂತ 5,000 ಕೋಟಿ ರೂ. ಕಡಿಮೆ.

ಈ ರೀತಿ ನಡೆದರೆ, ಕೊರೋನ ವೈರಸ್‌ನಿಂದ ಸಾಯುವ ಜನರಿಗಿಂತಲೂ ಹೆಚ್ಚು ಜನರು ಹಸಿವಿನಿಂದ ಸಾಯಬಹುದು. ಮೋದಿಯ ಕಳಪೆ ಆಡಳಿತ ಕೌಶಲ, ವಿವರಗಳ ಕುರಿತು ಶೂನ್ಯ ಗಮನ, ಆಡಳಿತಕ್ಕಿಂತಲೂ ಭಾಷಣಕ್ಕೆ ಮಹತ್ವ ಎಲ್ಲಾ ಸೇರಿ ಈ ಬಿಕ್ಕಟ್ಟನ್ನು ದೊಡ್ಡ ದುರಂತವನ್ನಾಗಿ ಮಾಡಬಹುದು. ಇನ್ನು ಕೆಲವೇ ವಾರಗಳಲ್ಲಿ ಅಧಿಕೃತ ಅಂಕಿಅಂಶಗಳನ್ನು ಮೀರಿದ ಮಹಾಮಾರಿಯನ್ನು ಮತ್ತು 1980 ದಶಕದ ಆರ್ಥಿಕತೆಯನ್ನು ನಾವು ಎದುರು ನೋಡಬೇಕಾಗಿ ಬರಬಹುದು.

(ಲೇಖಕರು ‘ದಿ ಪ್ರಿಂಟ್’ನ ಕಾಂಟ್ರಿಬ್ಯೂಟಿಂಗ್ ಎಡಿಟರ್ ಆಗಿದ್ದು, ಅಭಿಪ್ರಾಯಗಳು ಲೇಖಕರದ್ದು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಿಮ್ಮ ಮೌನ ಯುವಜನರನ್ನು ಕೇವಲ ಕೀಟಗಳಂತೆ ನೋಡುತ್ತೀರಿ ಎಂಬುದಕ್ಕೆ ಒಪ್ಪಿಗೆಯಾಗಿದೆ’: ಮೋದಿಗೆ ಬಹಿರಂಗ ಪತ್ರ ಬರೆದ ಸಿಜೆಪಿ

"ಈ ದೇಶದ ಯುವಜನರನ್ನು ನೀವು ಕೇವಲ ನಿರ್ಲಕ್ಷಿಸಬೇಕಾದ ಕೀಟಗಳಂತೆ ನೋಡುತ್ತಿದ್ದೀರಾ?" ಎಂದು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ (ಜುಲೈ 4) ಬಹಿರಂಗ ಪತ್ರ ಬರೆದಿದೆ. ದೇಶದ...

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...

ಜಿಲ್ಲಾ ನ್ಯಾಯಾಧೀಶೆ ತಬಸ್ಸುಮ್ ಖಾನ್‌ಗೆ ಬಲಪಂಥೀಯರಿಂದ ಬೆದರಿಕೆ : ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್

ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ...

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪ

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಪಕ್ಷಪಾತ ಧೋರಣೆ ತಳೆದಿದೆ ಎಂದು ಆರೋಪಿಸಿ, 24 ವಿರೋಧ ಪಕ್ಷಗಳ ನಾಯಕರು ಹಾಗೂ ಒಬ್ಬರು ಸ್ವತಂತ್ರ...

ಬೆಂಗಳೂರು| ಕೆ.ಆರ್. ವೃತ್ತದ ಬಳಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ; ಹಲವರಿಗೆ ಗಾಯ

ಇಂದು ಬೆಳಿಗ್ಗೆ ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಜನನಿಬಿಡ ಕೆ.ಆರ್. ವೃತ್ತ ಜಂಕ್ಷನ್ ಬಳಿ ಎರಡು ಬಿಎಂಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡರು. ಡಿಕ್ಕಿಯ ಪರಿಣಾಮ ಬಸ್ಸಿನೊಳಗೆ ಹಲವಾರು ಪ್ರಯಾಣಿಕರು...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...