ಸಫೂರ ಜರ್ಗರ್ ಮದುವೆಯಾಗದೆ ಗರ್ಭಿಣಿಯಾಗಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಬಿಜೆಪಿ ನಾಯಕ

ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ಸಂಶೋಧನಾ ವಿದ್ಯಾರ್ಥಿ ಸಫೂರ ಜರ್ಗರ್ ಅವರನ್ನು ಏಪ್ರಿಲ್ 10 ರಂದು ಬಂಧಿಸಲಾಯಿತು. ನಂತರ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಜಾಮೀನು ರಹಿತ ಅಪರಾಧಗಳ ಅಡಿಯಲ್ಲಿ ಆರೋಪ ಹೊರಿಸಲಾಯಿತು. ಆಕೆಯ ಬಂಧನದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಮೇಲೆ ಕೆಟ್ಟ ವೈಯಕ್ತಿಕ ದಾಳಿ ನಡೆಯುತ್ತಿದೆ.

ಮುಜಾಫರ್‌ಪುರದ ಬಿಜೆಪಿ ಸದಸ್ಯ ಎಂದು ಗುರುತಿಸಿಕೊಂಡಿರುವ ಮನೋಜ್ ಕುಮಾರ್ ಆಜಾದ್ ಅವರು ಆಕೆಯ ಕುರಿತು ಮೇ 4 ರಂದು ಟ್ವೀಟ್ ಮಾಡಿದ್ದಾರೆ. ಅದರಲ್ಲಿ “ಶಾಹೀನ್‌ ಬಾಗ್‌ನಲ್ಲಿ ದಂಗೆ ಮಾಡಿದ ನಂತರ ಅವಿವಾಹಿತ ಜಾಮಿಯಾ ಕಾನೂನು ವಿದ್ಯಾರ್ಥಿನಿ ಸಫೂರಾ ಜಾರ್ಗರ್ ಗಲಭೆಗಳನ್ನು ಪ್ರಚೋದಿಸಿದ ಆರೋಪದ ಮೇಲೆ ತಿಹಾರ್ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಆಕೆಯನ್ನು ಕರೋನವೈರಸ್ ಪರೀಕ್ಷೆಗೆ ಒಳಪಡಿಸಿದಾಗ, ಅವಳು ಎರಡು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ” ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟನ್ನು 7 ಸಾವಿರಕ್ಕೂ ಹೆಚ್ಚು ಜನ ಲೈಕ್‌ ಮಾಡಿದ್ದಾರೆ. ಅದೇ ರೀತಿಯಾಗಿ ಹತ್ತಾರು ಜನ ಅದೇ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಫ್ಯಾಕ್ಟ್-ಚೆಕ್

ನಾವು ಈ ವಿಷಯದ ಬಗ್ಗೆ ಸತ್ಯ ಪರಿಶೀಲನೆ ನಡೆಸುವ ಮೊದಲು ಮಹಿಳೆಯರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸೆಕ್ಸಿಸ್ಟ್ ಮತ್ತು ಅಸಹ್ಯಕರ ಕಾಮೆಂಟ್‌ಗಳೊಂದಿಗೆ ಗುರುತಿಸುವುದು ಸಾಮಾನ್ಯ ರೂಢಿಯಾಗಿಬಿಟ್ಟಿರುವುದನ್ನು ಖಂಡಿಸಬೇಕಿದೆ. ಅವರು ಅಲ್ಪಸಂಖ್ಯಾತ ಸಮುದಾಯದವರಾಗಿದ್ದರೆ ಕಿರುಕುಳವು ಇನ್ನೂ ಕೆಟ್ಟದ್ದಾಗಿರುತ್ತದೆ. ಜರ್ಗರ್ ಅವರ ವೈಯಕ್ತಿಕ ಜೀವನವು ಅವಳು ಜೈಲಿನಲ್ಲಿರುವ ಸದರಿ ಪ್ರಕರಣಕ್ಕೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಆದರೂ ಸಹ ಕೆಲವು ಜನರು ಆಕೆಯ ತೇಜೋವಧೆ ಮಾಡಲು ಅದನ್ನು ಬಳಸುತ್ತಿರುವುದು ದುರಾದೃಷ್ಟವಾಗಿದೆ.

ಮೊದಲನೇಯದಾಗಿ ಸಫೂರ ಜರ್ಗರ್ ಮದುವೆಯಾಗಿಲ್ಲ ಎಂಬುದು ದೊಡ್ಡ ಸುಳ್ಳಾಗಿವೆ. ಅವರು 2018 ರಲ್ಲಿ ವಿವಾಹವಾಗಿದ್ದಾರೆ. ಈ ಕುರಿತು ಆಕೆಯ ಪತಿಯೊಂದಿಗೆ ಆಲ್ಟ್‌ ನ್ಯೂಸ್‌ ಮಾತಾಡಿದಾಗ ಅವರು 2018 ರಲ್ಲಿ ಮದುವೆಯಾಗಿರುವುದನ್ನು ತಿಳಿಸಿದ್ದಾರೆ.

ಇದಲ್ಲದೆ, ಆಕೆಯ ಗರ್ಭಧಾರಣೆಯನ್ನು ಇತ್ತೀಚೆಗೆ ಜೈಲಿನಲ್ಲಿ ಕಂಡುಹಿಡಿಯಲಾಯಿತು ಎಂಬ ಹೇಳಿಕೆಯೂ ಸುಳ್ಳು. ಜರ್ಗರ್‌ನನ್ನು ವಶಕ್ಕೆ ತೆಗೆದುಕೊಂಡ ಏಪ್ರಿಲ್ ಆರಂಭದಿಂದಲೂ ಇದು ಈಗಾಗಲೇ ಸುದ್ದಿಯಲ್ಲಿತ್ತು. ಏಪ್ರಿಲ್ 12 ರಿಂದ ಐಎಎನ್‌ಎಸ್ ವರದಿಯ ಸ್ಕ್ರೀನ್‌ಶಾಟ್ ಕೆಳಗೆ ನೀಡಲಾಗಿದೆ. ಅದರಂತೆ ಏಪ್ರಿಲ್ 10 ರಂದು ಬಂಧನಕ್ಕೊಳಗಾದಾಗ ಜರ್ಗರ್ ಮೂರು ತಿಂಗಳ ಗರ್ಭಿಣಿ ಎಂದು ಉಲ್ಲೇಖಿಸಿ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು ಎಂದು ಅದು ವರದಿ ಮಾಡಿದೆ.

ಫೆಬ್ರವರಿ 10 ರಂದು ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ನಡೆದ ಜಗಳದಲ್ಲಿ ಜರ್ಗರ್ ಮೂರ್ಛೆ ಹೋಗಿದ್ದರು. ಸ್ವಲ್ಪ ಸಮಯದವರೆಗೆ ಅವರು ಆಸ್ಪತ್ರೆಗೆ ದಾಖಲಾಗಬೇಕಾಗಿತ್ತು ಎಂದು ಅಲ್ ಜಜೀರಾ ವರದಿ ಮಾಡಿದೆ. “ಅಂದಿನಿಂದ, ಗರ್ಭಧಾರಣೆಯ ಕಾಳಜಿಯೊಂದಿಗೆ, ಅವಳು ಕ್ರಮೇಣ ತನ್ನ ದೈಹಿಕ ಚಲನೆಯನ್ನು ನಿರ್ಬಂಧಿಸಿದ್ದಳು. ಮತ್ತು COVID-19 ಸ್ಫೋಟಗೊಂಡ ನಂತರ, ಅಗತ್ಯ ಕೆಲಸಗಳನ್ನು ಹೊರತುಪಡಿಸಿ ಅವಳು ಮನೆಯಿಂದ ಹೊರಗುಳಿಯುವುದನ್ನು ನಿಲ್ಲಿಸಿದ್ದಳು. ಅವಳು ಹೆಚ್ಚಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಳು ” ಎಂದು ಆಕೆಯ ಪತಿ ಹೇಳಿದ್ದಾರೆ.

ಜಾಮೀನು ಕೋರಿ ಏಪ್ರಿಲ್ 21 ರಂದು ಸಲ್ಲಿಸಿದ ಮತ್ತೊಂದು ನ್ಯಾಯಾಲಯದ ಅರ್ಜಿಯಲ್ಲಿಯೂ ಸಹ ಆಕೆಯ ವೈದ್ಯಕೀಯ ಸ್ಥಿತಿಯನ್ನು ಸಹ ಸೂಚಿಸುತ್ತದೆ. ಅಂದರೆ ಗರ್ಭಿಣಿಯಾದ ಕಾರಣಕ್ಕೆ ಜಾಮೀನು ನೀಡಬೇಕೆಂದು ಉಲ್ಲೇಖಿಸಿದೆ.

“ಸಫೂರ ವಿವಾಹಿತೆ ಎಂಬುದು ಸಾರ್ವಜನಿಕ ವಲಯದಲ್ಲಿದ್ದರೂ, ಪ್ರೇರಿತ ಮತ್ತು ದುರುದ್ದೇಶಪೂರಿತ ಪೋಸ್ಟ್‌ಗಳ ಮೂಲಕ ತಪ್ಪು ಅಭಿಪ್ರಾಯವನ್ನು ಸೃಷ್ಟಿಸಲಾಗುತ್ತಿದೆ. ಅವಳನ್ನು ಮತ್ತು ಸಿಎಎ ವಿರೋಧಿ ಶಾಹೀನ್ ಬಾಗ್ ಆಂದೋಲನವನ್ನು ಅಪಚಾರ ಮಾಡುವ ಉದ್ದೇಶದೊಂದಿಗೆ ಈ ಸುಳ್ಳು ಸುದ್ದಿ ಬಿತ್ತರಿಸಲಾಗಿದೆ” ಎಂದು ವೃಂದಾ ಗ್ರೋವರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಣ್ಣು ಮಕ್ಕಳು ದನಿಎತ್ತಿದ್ದರೆ ಅವರು ಸಾಮಾಜಿಕ ಕಾರ್ಯಕರ್ತರು, ಲೇಖಕರು, ಪತ್ರಕರ್ತರು ಅಥವಾ ವಿದ್ಯಾರ್ಥಿ ಕಾರ್ಯಕರ್ತರು ಯಾರೇ ಆಗಲಿ ಅವರ ವಯಕ್ತಿಕ ಜೀವನವನ್ನು ಎಳೆತಂದು ತೇಜೋವಧೆ ಮಾಡುವುದು ಸುಲಭವಾಗಿಬಿಟ್ಟಿದೆ. ಒಬ್ಬ ಮಹಿಳೆ ಅವಳು ಬಯಸಿದ್ದಲ್ಲಿ ಮದುವೆಯಾಗದೆಯೂ ತಾಯಿಯಾಗುವುದರಲ್ಲಿ ತಪ್ಪೇನಿದೆ? ಅದು ಅವಳ ಇಚ್ಚೆಯಲ್ಲವೇ? ಅವರ ಖಾಸಗಿತನವನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂಬುದನ್ನು ಅರಿತುಕೊಳ್ಳಬೇಕು.

ಸಫೂರ ಜರ್ಗರ್ ಅವಿವಾಹಿತ ಮಹಿಳೆ ಎಂದು ಸಾಮಾಜಿಕ ಮಾಧ್ಯಮಗಳು ಹೇಳುತ್ತಿರುವುದು ಸುಳ್ಳು. ಆಕೆಯ ಗರ್ಭಧಾರಣೆಯನ್ನು ಜೈಲಿನಲ್ಲಿ ಕಂಡುಹಿಡಿಯಲಾಗಿದೆ ಎಂಬ ವಾದವೂ ಆಧಾರರಹಿತವಾಗಿದೆ.


ಇದನ್ನೂ ಓದಿ: ಅಮೀರ್‌ ಖಾನ್‌ ಮೈದಾ ಹಿಟ್ಟಿ‌ನಲ್ಲಿ 15 ಸಾವಿರ ಹಂಚಿದ್ದು ಶುದ್ದ ಸುಳ್ಳು ಸುದ್ದಿ: ಹೀಗೆಳಿದ್ದು ಯಾರು ಗೊತ್ತೆ? 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here