ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿರುವ ಭಾರತೀಯ ರೂಪಾಯಿ ಮೌಲ್ಯವು ಯುಎಸ್ ಡಾಲರ್ ಎದುರು ಮಂಗಳವಾರ ಮತ್ತಷ್ಟು ಕುಸಿದಿದೆ. ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು ಬಂಡವಾಳ ಲಾಭದ ಮೇಲಿನ ತೆರಿಗೆ ದರವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಮಾಡಿದ ನಂತರ ಸ್ಥಳೀಯ ಷೇರುಗಳ ಕುಸಿತದಿಂದ ಒತ್ತಡಕ್ಕೆ ರೂಪಾಯಿ ಮೌಲ್ಯ ಒಳಗಾಯಿತು.
ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರಿಗೆ ಕೆಲವು ಹಣಕಾಸು ಆಸ್ತಿಗಳ ಮೇಲಿನ ಬಂಡವಾಳ ಲಾಭದ ವಿನಾಯಿತಿ ಮಿತಿಯನ್ನು ವರ್ಷಕ್ಕೆ ₹1.25 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರ ಯೋಜಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.
ನಂತರ, ರೂಪಾಯಿಯು ಡಾಲರ್ ಮುಂದೆ 83.69 ಕ್ಕೆ ಕುಸಿಯಿತು. ಬಜೆಟ್ ಘೋಷಣೆಯ ಮೊದಲು 83.6275 ಗೆ ಹೋಲಿಸಿದರೆ, ಹಿಂದಿನ ಸಾರ್ವಕಾಲಿಕ ಕನಿಷ್ಠ 83.6775 ಅನ್ನು ದಾಟಿದೆ. ಬಜೆಟ್ ಪ್ರಕಟಣೆಗಳ ನಂತರ ಷೇರು ಮಾರುಕಟ್ಟೆಯು ಕುಸಿದಿದ್ದು, ಇದು ಅಲ್ಪಾವಧಿಯಲ್ಲಿ ಮಾರುಕಟ್ಟೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ ಬಂಡವಾಳ ಮಾರುಕಟ್ಟೆಗಳಲ್ಲಿ ನಿವ್ವಳ ಖರೀದಿದಾರರಾಗಿದ್ದಾರೆ. ಅವರು ವಿನಿಮಯ ಮಾಹಿತಿಯ ಪ್ರಕಾರ ₹ 3,444.06 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ 2023-24, 2024-25ರಲ್ಲಿ ಭಾರತದ ಜಿಡಿಪಿಯು ಶೇಕಡಾ 6.5-7 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ಶೇಕಡಾ 8.2 ರಷ್ಟಿತ್ತು. ಆರ್ಥಿಕ ಸಮೀಕ್ಷೆಯಲ್ಲಿನ ಪ್ರಕ್ಷೇಪಣವು ರಿಸರ್ವ್ ಬ್ಯಾಂಕ್‌ನ ಬೆಳವಣಿಗೆಯ ಅಂದಾಜಿನ 7.2 ಶೇಕಡಾಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.
ಇದನ್ನೂ ಓದಿ; ಜನಗಣತಿಯ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸದ ನಿರ್ಮಲಾ ಸೀತಾರಾಮನ್; ಕಾಂಗ್ರೆಸ್ ವಿರುದ್ಧ ವಾಗ್ದಾಳಿ


