ಮೊದಲ ಹಂತದ ಮತದಾನ ಮುಗಿದಿದ್ದು, ದಹಲಿಯಲ್ಲಿ ಗದ್ದುಗೆ ಹಿಡಿಯಲು ‘ಹೆಬ್ಬಾಗಿಲು’ ಎನಿಸಿರುವ ಉತ್ತರಪ್ರದೇಶದ ಪಶ್ಚಿಮ ಭಾಗದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು, ಅಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಇದು ಬಿಜೆಪಿ ಪಾಲಿಗೆ ಚಿಂತೆಯ ವಿಷಯವೇ ಆಗಿದೆ.
ಮತದಾನದ ಸಂಜೆ ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಆ ಎಂಟು ಕ್ಷೇತ್ರಗಳಲ್ಲಿ ಈ ಬಾರಿ ಶೇ. 63.9 ಮತದಾನವಾಗಿದ್ದರೆ, ಕಳೆದ ಸಲ ಶೇ. 66ರಷ್ಟು ಮತದಾನವಾಗಿತ್ತು. ಇಲ್ಲಿ ವ್ಯತ್ಯಾಸ ಕೇವಲ ಶೇ. 2.1 ಇರಬಹುದು. ಆದರೆ ಇದು ನಿರ್ಲಕ್ಷಿಸುವ ವಿಷಯವಲ್ಲ ಬಿಜೆಪಿ ಪಾಲಿಗೆ! ಚುನಾವಣಾ ತಜ್ಞರ ಪ್ರಕಾರ, ಬಿಜೆಪಿಯ ಬೆಂಬಲಿಗರು ಕಳೆದ ಸಲದಷ್ಟು ಉತ್ಸಾಹದಿಂದ ಈ ಸಲ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ.
ಪರಂಪರಾಗತ ಬಿಜೆಪಿ ಬೆಂಬಲಿಗರು ತುಂಬ ಪ್ರಜ್ಞಾಪೂರ್ವಕವಾಗಿ ಮತದಾನ ಮಾಡುತ್ತಾರೆ. ಆದರೆ ಈ ಎಂಟು ಕ್ಷೇತ್ರಗಳಲ್ಲಿ 2014ರ ಉತ್ಸಾಹ ಕಂಡುಬಂದಿಲ್ಲ.
2014ರಲ್ಲಿ ಈ ಪಶ್ಚಿಮ ಯುಪಿಯಲ್ಲಿ ಎಲ್ಲ ಎಂಟೂ ಸ್ಥಾನಗಳನ್ನು ದೊಡ್ಡ ಲೀಡ್‍ನಿಂದ ಗೆದ್ದಿತ್ತು. ಆಗ ಮೋದಿಯ ಸೃಷ್ಟಿತ ಹವಾ ಅದರ ನೆರವಿಗೆ ಬಂದಿತ್ತು. ಅದಲ್ಲದೇ ವಿಪಕ್ಷಗಳಲ್ಲಿ ಯಾವುದೇ ಒಗ್ಗಟ್ಟಿರಲಿಲ್ಲ.
2014ರಲ್ಲಿ ಮೊದಲ ಹಂತದಲ್ಲಿ ಈ ಎಂಟು ಕ್ಷೇತ್ರಗಳಲ್ಲಿ –ಮೀರತ್, ಬಾಗಪಟ್, ಬಿಕ್ನೋರ್, ಘಾಜಿಯಾಬಾದ್, ಕೈರಾನ, ಗೌತಮ್ ಬುದ್ಧಿ ನಗರ, ಸಹ್ರಾನಪುರ್ ಮತ್ತು ಮುಜಾಫರ್ ನಗರ- ಬಿಜೆಪಿ ಶೇ. 49ರಷ್ಟು ಮತ ಪ್ರಮಾಣವನ್ನು ಪಡೆದಿತ್ತು. ಇಲ್ಲಿ ಮತದಾನಕ್ಕೆ ಕಂಡು ಬಂದ ಜೋಶ್ ಉಳಿದ ಹಂತಗಳಲ್ಲೂ ಮುಂದುವರೆದಿತ್ತು.
ಈಗ ಕುಸ್ತಿ ಅಖಾಡವೇ ಬೇರೆ!
2014ರ ಪರಿಸ್ಥಿತಿ ಈಗಿಲ್ಲ. ಮಾಯಾವತಿಯ ಬಿಎಸ್‍ಪಿ, ಅಖಲೇಶ ಯಾದವರ ಸಮಾಜವಾದಿ ಪಾರ್ಟಿ ಮತ್ತು ಅಜಿತ್‍ಸಿಂಗ್‍ರ ರಾಷ್ಟ್ರೀಯ ಲೋಕದಳ ಘಟಬಂಧನ ರಚಿಸಿಕೊಂಡಿವೆ. ಪಶ್ಚಿಮ ಉತ್ತರಪ್ರದೇಶದಲ್ಲಿ ಪ್ರಬಲ ಜಾಟರು ಎಂದಿಗೂ ಆರ್‍ಎಲ್‍ಡಿ ಪರವೇ ಇದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ದ್ವೇಷಪೂರಿತ ಆಡಳಿತದಿಂದ ತತ್ತರಿಸಿರುವ ದಲಿತರು ಮತ್ತೆ ಬಿಎಸ್ಪಿ ಕಡೆ ಮುಖ ಮಾಡಿದ್ದಾರೆ. ಎಂದಿನಂತೆ ಈ ಸಲ ಮುಸ್ಲಿಮರು ಎಸ್ಪಿಯ ಪರವಿದ್ದಾರೆ. ಹೀಗಾಗಿ ಈ ಭಾಗದಲ್ಲಿ ನಿರ್ಣಾಯಕ ಎನಿಸಿರುವ ದಲಿತರು ಮತ್ತು ಮುಸ್ಲಿಮರು ಈಗ ಒಂದಾಗಿದ್ದು, ಬಿಜೆಪಿಗೆ ತಲೆನೋವು ತಂದಿದ್ದಾರೆ. ಜಾಟರು, ದಲಿತರು ಮತ್ತು ಮುಸ್ಲಿಮರ ಈ ಘಟಬಂಧನ ಈ ಎಂಟು ಕ್ಷೇತ್ರಗಳಲ್ಲಿ ಫಲಿತಾಂಶ ನಿರ್ಧರಿಸಲಿದೆ.
ಆದರೆ, ಇಲ್ಲಿರುವ ಒಂದು ಸಣ್ಣ ತೊಡಕೆಂದರೆ, ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿರುವುದು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಜಯಕ್ಕೆ ನೆರವಾಗಬಹುದು ಎನ್ನಲಾಗುತ್ತಿದೆ. ಕಾಂಗ್ರೆಸ್‍ನ ಸಹ್ರಾನಪುರ್ ಅಭ್ಯರ್ಥಿ ಇಮ್ರಾನ್ ಮಸೂದ್ ಮತ್ತು ಬಜ್ನೋರ್‍ನ ಅಭ್ಯರ್ಥಿ ನಾಸಿರುದ್ದೀನ್ ಸಿದ್ದಿಕಿ ಮುಸ್ಲಿಮರ ಮತಗಳನ್ನು ವಿಭಜಿಸುವ ಮೂಲಕ ಬಿಜೆಪಿಗೆ ನೆರವಾಗುವ ಸಾಧ್ಯತೆ ಇವೆ ಎನ್ನಲಾಗಿದೆ.
ಜಾಟರ ‘ಪವರ್‍ಪ್ಲೇ’!
ಈ ಸಲದ ಚುನಾವಣೆಯಲ್ಲಿ ಜಾಟರ ಶಕ್ತಿ ಒಂಥರಾ ‘ಎಕ್ಸ್’ ಫ್ಯಾಕ್ಟರ್ ತರಹ ಕೆಲಸ ಮಾಡಲಿದೆ. ಮೊದಲಿಂದಲೂ ಜಾಟರು ಆರ್‍ಎಲ್‍ಡಿ (ಈಗ ಘಟಬಂಧನದ ಭಾಗ) ಪಕ್ಷಕ್ಕೆ ನಿಷ್ಟೇ ವ್ಯಕ್ತಪಡಿಸುತ್ತ ಬಂದಿದ್ದರು. ಆದರೆ, 2013ರಲ್ಲಿ ನಡೆದ ಮುಜಾಫರ್‍ನಗರ ಕೋಮು ಗಲಭೆಯಯ ನಂತರ ಬಿಜೆಪಿ ಅವರನ್ನು ಹಿಂದೂತ್ವದ ಬ್ಯಾನರಿನಡಿ ಸೆಳೆದುಕೊಂಡು 2014ರ ಚುನಾವಣೆಯಲ್ಲಿ ಲಾಭ ಮಾಡಿಕೊಂಡಿತ್ತು. ಅಲ್ಲಿ ಮೊದಲಿಂದ ಇದ್ದ ಜಾಟರು-ಮುಸ್ಲಿಮರ ನಡುವಿನ ಸೌಹಾರ್ದ ಬದುಕನ್ನು ಜಾತಿ-ಧರ್ಮಗಳ ಹೆಸರಲ್ಲಿ ಬಿಜೆಪಿ ಒಡೆದಿತ್ತು. ಆದರೆ ಈಗ ಜಾಟರು ಮತ್ತು ,ಮುಸ್ಲಿಮರು ಎಚ್ಚೆತ್ತುಕೊಂಡಿದ್ದಾರೆ. ಗೋ ಮಾರಾಟ ನಿಷೇಧದ ಪರಿಣಾಮವಾಗಿ ಹೆಚ್ಚಿರುವ ಬಿಡಾಡಿ ದನಗಳು ಒಕ್ಕಲು ಮಕ್ಕಳು ಜಾಟರ ಬೆಳೆಗಳನ್ನು ನಾಶ ಮಾಡುತ್ತಿವೆ. ಕಬ್ಬಿಗೆ ನ್ಯಾಯಯುತ ಬೆಲೆ ಕೊಡುವಲ್ಲಿ ಉತ್ತರಪ್ರದೇಶ ಸರ್ಕಾರ ವಿಫಲವಾಗಿದೆ. ಹಾಗೆಯೇ ಅವರ ನಿಷ್ಟೇಯ ಪಕ್ಷ ಆರ್‍ಎಲ್‍ಡಿ ಈಗ ಘಟಬಂಧನದ ಮೂಲಕ ಜಾಟರನ್ನು ಮತ್ತೆ ತನ್ನಲ್ಲಿ ಉಳಿಸಿಕೊಂಡಿದೆ.
ಹೀಗಾಗಿ ಉತ್ತರ ಪ್ರದೇಶದಲ್ಲಿ ಈ ಸಲ ಮೋದಿ ಹೆಅಸರು, ರಾಷ್ಟ್ರೀಯ ಸುರಕ್ಷತೆ ಜಪ ಬಿಟ್ಟರೆ ಬಿಜೆಪಿಗೆ ಇಶ್ಯೂಗಳೇ ಇಲ್ಲ. 2014ರ ಮೋದಿ ಹವಾ ಠುಸ್ ಆಗಿದೆ. ಪುಲ್ವಾಮಾ ಘಟನೆ ಮತ್ತು ಬಾರಾಕೋಟ್ ವಾಯುದಾಳಿಯ ಮೇಲೆಯೇ ನಿಜೆಪಿ ಕ್ಯಾಂಪೇನ್ ಮಾಡುತ್ತಿದೆ.
ಮೊದಲ ಹಂತದಲ್ಲಿ ಇಷ್ಟೆಲ್ಲ ‘ದೇಶಭಕ್ತಿಯ’ ಪ್ರಚಾರದ ನಂತರವೂ ಎಂಟು ಕ್ಷೇತ್ರಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಬಿಜೆಪಿ ಪಾಲಿಗೆ ಇದು ‘ಅವಲಕ್ಷಣ’ವೇ ಅಲ್ಲವೇ? ಅಂದರೆ ರಾಜಕೀಯ ಅವಲಕ್ಷಣ!
ಕೃಪೆ: ದಿ ಕ್ವಿಂಟ್


