Homeಮುಖಪುಟಯುಪಿ: ಮುಸ್ಲಿಮರಲ್ಲಿ ಭಯ ಹರಡಿಸಲೆಂದೇ ದುಷ್ಕರ್ಮಿಗಳ ಗುಂಪು ಮುಸ್ಲಿಂ ವ್ಯಕ್ತಿಯನ್ನು ಕೊಂದಿತ್ತು: ‘ದಿ ವೈರ್‌’ ವರದಿ

ಯುಪಿ: ಮುಸ್ಲಿಮರಲ್ಲಿ ಭಯ ಹರಡಿಸಲೆಂದೇ ದುಷ್ಕರ್ಮಿಗಳ ಗುಂಪು ಮುಸ್ಲಿಂ ವ್ಯಕ್ತಿಯನ್ನು ಕೊಂದಿತ್ತು: ‘ದಿ ವೈರ್‌’ ವರದಿ

- Advertisement -
- Advertisement -

ಸೆಪ್ಟೆಂಬರ್ 2ರಂದು ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ವಿನಯ್‌ಪುರದಲ್ಲಿ ದಾವೂದ್ ಅಲಿ ತ್ಯಾಗಿ ಎಂಬ 50 ವರ್ಷದ ಮುಸ್ಲಿಂ ವ್ಯಕ್ತಿಯ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಸುಮಾರು 20 ಮಂದಿ ತ್ಯಾಗಿಯವರ ಮೇಲೆ ತಡರಾತ್ರಿ ಕೋಲು ಮತ್ತು ಚೂಪಾದ ವಸ್ತುಗಳಿಂದ ಹಲ್ಲೆ ಮಾಡಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೆ ತ್ಯಾಗಿ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

ತ್ಯಾಗಿ ಅವರ ಕುಟುಂಬವು, “ಇದು ಉದ್ದೇಶಪೂರ್ವಕ ಕೃತ್ಯ” ಎಂದಿದೆ. “ಈ ದಾಳಿಯು ಎಲ್ಲ ಪ್ರಕರಣಗಳಂತೆ ಒಂದಾದ ಪ್ರಕರಣವಲ್ಲ. ವಾಸ್ತವವಾಗಿ, ಮುಸ್ಲಿಮರಲ್ಲಿ ಭಯವನ್ನು ಹುಟ್ಟುಹಾಕುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯ ಇದಾಗಿದೆ” ಎಂದು ಕುಟುಂಬ ಹೇಳಿರುವುದಾಗಿ ‘ದಿ ವೈರ್‌’ ವರದಿ ಮಾಡಿದೆ. ಆದರೆ ಪೊಲೀಸರು ಬೇರೆ ಕಾರಣವನ್ನು ಹೇಳುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತ್ಯಾಗಿ ರೈತರಾಗಿದ್ದು ತನ್ನ ಹೆಂಡತಿ ಮತ್ತು ಮಗಳೊಂದಿಗೆ ವಿನಯ್‌ಪುರದಲ್ಲಿ ವಾಸಿಸುತ್ತಿದ್ದರೆ, ಇವರ ಮೂವರು ಗಂಡು ಮಕ್ಕಳು ದೆಹಲಿಯಲ್ಲಿ ಓದುತ್ತಿದ್ದಾರೆ. ಅಂದು  ಏನಾಯಿತು ಎಂಬುದರ ಕುರಿತು ‘ದಿ ವೈರ್‌’ನೊಂದಿಗೆ ಮಾತನಾಡಿದ ತ್ಯಾಗಿ ಅವರ ಪುತ್ರ ಶಾರುಖ್, “ನನ್ನ ತಂದೆಯವರು ಮನೆಯ ವಾರಂಡದಲ್ಲಿ ನಮ್ಮ ಸಂಬಂಧಿಕರೊಂದಿಗೆ ಕುಶಲೋಪರಿಯಲ್ಲಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಏಳೆಂಟು ಬೈಕ್‌ಗಳಲ್ಲಿ 22 ಮಂದಿಯ ತಂಡ ಬಂದಿತು. ತಂದೆಯವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ಮಾಡಲಾಯಿತು” ಎಂದು ಶಾರುಖ್ ವಿವರಿಸಿದ್ದಾರೆ.

“ಅವರು ನನ್ನ ತಂದೆಯ ತಲೆಯ ಮೇಲೆ ದಾಳಿ ಮಾಡಿದರು. ಅವರ ಕೈಗೆ ಮೂರು ಕಡೆ ಗಾಯಗಳಾದವು. ಅವರು ನನ್ನ ಸೋದರಸಂಬಂಧಿಗಳ ಮೇಲೂ ದಾಳಿ ನಡೆಸಿದರು. ಆದರೆ ನನ್ನ ಸೋದರರು ಚಿಕ್ಕವಯಸ್ಸಿನವರಾಗಿದ್ದು, ಹೇಗೋ ಓಡಿ ತಪ್ಪಿಸಿಕೊಂಡರು. ನನ್ನ ತಂದೆ ಮೇಲೆ ದಾಳಿ ಮಾಡುವಾಗ ‘ಜೈ ಶ್ರೀರಾಮ್’ ಘೋಷಣೆಯನ್ನು ಕೂಗುತ್ತಿದ್ದರು” ಎಂದು ಶಾರುಖ್ ದೂರಿದ್ದಾರೆ.

ಇದನ್ನೂ ಓದಿರಿ: ಶೂಟೌಟ್‌ ವೇಳೆ ಅವರು ಪಾನಮತ್ತರಾಗಿದ್ದರು’: ಯುಪಿ ಪೊಲೀಸರಿಂದ ಉತ್ತರಾಖಂಡ ಬಿಜೆಪಿ ನಾಯಕನ ಪತ್ನಿಯ ಹತ್ಯೆ

ದಾಳಿಯ ನಂತರ ತ್ಯಾಗಿಯವರನ್ನು ಚಿಕಿತ್ಸೆಗಾಗಿ ಮೀರತ್‌ನ ಕುಟುಂಬ ಆರೋಗ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ವೇಳೆಗೆ ಸಾವನ್ನಪ್ಪಿದ್ದಾರೆ.

ಖೇಕ್ರಾ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 3 ರಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌  ದಾಖಲಿಸಲಾಯಿತು. ಭಾರತೀಯ ದಂಡ ಸಂಹಿತೆ ಸೆಕ್ಷನ್ 147 (ಗಲಭೆಗೆ ಶಿಕ್ಷೆ), 148 (ಗಲಭೆ, ಮಾರಣಾಂತಿಕ ಆಯುಧದಿಂದ ಶಸ್ತ್ರಸಜ್ಜಿತ); 149 (ಕಾನೂನುಬಾಹಿರ ಸಭೆಯ ತಪ್ಪಿತಸ್ಥರು); ಮತ್ತು 302 (ಕೊಲೆ) ಅಡಿ ಪ್ರಕರಣ ದಾಖಲಿಸಿದರು. ಆದರೆ ಶಾರುಖ್‌ ವಿವರಿಸಿದಂತೆ ಪ್ರಕರಣ ದಾಖಲಾಗಿಲ್ಲ. ‘ಜೈ ಶ್ರೀರಾಮ್’ ಎಂದದ್ದು ಎಫ್‌ಐಆರ್‌ನಲ್ಲಿ ಇಲ್ಲ ಎಂದು ‘ದಿ ವೈರ್‌’ ಗಮನ ಸೆಳೆದಿದೆ.

ಇದಾದ ನಂತರ ಸೆಪ್ಟೆಂಬರ್ 5 ರಂದು, ಖೇಕ್ರಾ ಪೊಲೀಸರು ತ್ಯಾಗಿ ಅವರ ಹತ್ಯೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿರುವುದಾಗಿ ಹೇಳಿಕೆ ನೀಡಿದರು. ನಿಕ್ಕಿ ಅಲಿಯಾಸ್ ವಿಕ್ಕಿ, ಹರೀಶ್, ಮೋಹಿತ್ ಮತ್ತು ದಿಲೀಪ್- ಬಂಧಿತ ಆರೋಪಿಗಳು. ಇವರೆಲ್ಲರೂ ವಿನಯ್‌ಪುರದ ಸಮೀಪವಿರುವ ಭಗೋತ್‌ನ ನಿವಾಸಿಗಳಾಗಿದ್ದಾರೆ.

PC: The Wire

ಎರಡು ಮೋಟಾರು ಬೈಕ್‌ಗಳು ಮತ್ತು ಎರಡು ಸ್ಟಿಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಲ್ವರು ಆರೋಪಿಗಳನ್ನು ವಿಚಾರಣೆ ಮಾಡಿದ ನಂತರ ಪೊಲೀಸರು, “ಭಗೋತ್ ಮತ್ತು ವಿನಯ್‌ಪುರ ನಿವಾಸಿಗಳ ನಡುವೆ ಜಗಳವಾಗಿತ್ತು. ಬಂಧಿತ ನಾಲ್ವರು ವಿನಯ್‌ಪುರದಲ್ಲಿ ಯಾರ ಮೇಲಾದರೂ ದಾಳಿ ಮಾಡಲು ನಿರ್ಧರಿಸಿದ್ದರು” ಎಂದಿದ್ದಾರೆ.

‘ಹಳ್ಳ ಹಿಡಿಯುತ್ತಿರುವ ಪ್ರಕರಣ’

ತ್ಯಾಗಿ ಅವರ ಹತ್ಯೆಯಾಗಿ ಒಂದು ತಿಂಗಳು ಕಳೆದರೂ ತನಿಖೆಯು ಕೋಲ್ಡ್ ಸ್ಟೋರೇಜ್‌ನಲ್ಲಿದೆ. ಹೆಚ್ಚಿನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತ ಕುಟುಂಬವು ದುರ್ಬಲವಾಗಿದ್ದು, ಭಯ ಮತ್ತು ಅಭದ್ರತೆಯಿಂದ ಬದುಕುತ್ತಿದೆ.

ಇದಲ್ಲದೆ ತ್ಯಾಗಿ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂಬ ಭರವಸೆ ಸಿಕ್ಕಿತ್ತು. ಅದು ಕೂಡ ಈಡೇರಿಲ್ಲ.

ಕುಟುಂಬ ಸದಸ್ಯರನ್ನು ಹೆದರಿಸುವ ಪ್ರಯತ್ನ ಇತ್ತೀಚೆಗೆ ನಡೆದಿದೆ. ಕುಟುಂಬದ ಭಯವನ್ನು ಹೆಚ್ಚಿಸಲಾಗಿದೆ ಎಂದು ಶಾರುಖ್ ಹೇಳಿಕೊಂಡಿದ್ದಾರೆ.

“ಮೂರು ದಿನಗಳ ಹಿಂದೆ, ನನ್ನ ಅಣ್ಣ ಮತ್ತು ನನ್ನ ಚಿಕ್ಕಪ್ಪ ಹೊಲಕ್ಕೆ ಹೋಗಿದ್ದರು – ಅಪರಾಧಿಗಳ ಹೊಲಗಳು ನಮ್ಮ ಪಕ್ಕದಲ್ಲಿವೆ. ಆ ದಿನ ನನ್ನ ಸಹೋದರನನ್ನು ಅವರು ಸುತ್ತುವರಿದಿದ್ದರು” ಎಂದು ಶಾರುಖ್ ದೂರಿದ್ದಾರೆ.

“ನಾವು ಬೆದರಿಕೆಯನ್ನು ಅನುಭವಿಸಿದ್ದೇವೆ; ಮತ್ತೊಮ್ಮೆ, ಏನಾದರೂ ಸಂಭವಿಸಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕುಟುಂಬಕ್ಕೆ ಎದುರಾಗಿರುವ ಬೆದರಿಕೆಯ ಕುರಿತು ‘ದಿ ವೈರ್‌’ನೊಂದಿಗೆ ಮಾತನಾಡಿದ ಬಾಗ್‌ಪತ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ), ನೀರಜ್ ಕುಮಾರ್ ಜಾದೌನ್, “ದಾಳಿಯ ಬಗ್ಗೆ ಕುಟುಂಬಕ್ಕೆ ಆತಂಕವಿತ್ತು. ಅದನ್ನು ಸರಿಪಡಿಸಲಾಗಿದೆ” ಎಂದಿದ್ದಾರೆ.

ಇದನ್ನೂ ಓದಿರಿ: ಪಂಜಾಬ್‌: ಪಾರ್ಕ್‌ನಲ್ಲಿ ಕುಳಿತ್ತಿದ್ದ ವಿದ್ಯಾರ್ಥಿನಿಯರಿಗೆ ಥಳಿಸಿದ ಮಹಿಳಾ ಪೊಲೀಸರು; ನೆಟ್ಟಿಗರ ಖಂಡನೆ

ಇದರ ನಡುವೆ ಶಾರುಖ್, “ನಾಲ್ಕು ಜನರನ್ನು ಬಂಧಿಸಲಾಗಿದೆ. ಆದರೆ ಒಂದು ತಿಂಗಳು ಕಳೆದಿದೆ ಮತ್ತು ಪ್ರಕರಣವು ಹಳ್ಳಹಿಡಿಯುತ್ತಿದೆ” ಎಂದು ಆರೋಪಿಸಿದ್ದಾರೆ.

“ಜನರು (ಸಾಕ್ಷಿಗಳು) ಮುಂದಿಟ್ಟಿರುವ (ಅಪರಾಧಿಗಳ) ಹೆಸರುಗಳು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರೊಂದಿಗೆ ಸಂಪರ್ಕ ಹೊಂದಿವೆ. ಒಂದಲ್ಲ ಎರಡೆರಡು ಬಾರಿ ಪೊಲೀಸರು ಅವರ ಮನೆಗೆ ಭೇಟಿ ನೀಡಿದರೂ ಹೆಚ್ಚಿನ ಬೆಳವಣಿಗೆಗಳು ಆಗಿಲ್ಲ” ಎಂದು ವಿಷಾದಿಸಿದ್ದಾರೆ.

‘ಯೋಜಿತ ದಾಳಿಗೆ ನಡೆದಿತ್ತು ಸಭೆ’

ತ್ಯಾಗಿ ಹತ್ಯೆಗೂ ಮುನ್ನ ಬಾಘೋಟ್‌ನಲ್ಲಿ ಸಭೆ ನಡೆದಿದ್ದು, ಮುಸ್ಲಿಮರನ್ನು ಹೆದರಿಸುವ ಯೋಜನೆ ರೂಪಿಸಲಾಗಿತ್ತು ಎಂದು ತ್ಯಾಗಿ ಅವರ ಕುಟುಂಬದ ಸದಸ್ಯರು ಹಾಗೂ ಹೋರಾಟಗಾರರು ಹೇಳಿದ್ದಾರೆ.

ಹೋರಾಟಗಾರ ದೇವೇಂದ್ರ ಧಾಮಾ ‘ದಿ ವೈರ್‌’ಗೆ ಪ್ರತಿಕ್ರಿಯಿಸಿ, “ಕೆಲವು ಗಂಡಸರು ಅಗ್ಗದ ಜನಪ್ರಿಯತೆಯನ್ನು ಬಯಸಿದ್ದರು. ಇದಕ್ಕಾಗಿಯೇ ದಾಳಿ ನಡೆಸಲಾಗಿದೆ. ಘಟನೆಯ ಮೊದಲು ಬಾಘೋಟ್‌ನಲ್ಲಿ ಸಭೆ ನಡೆದಿತ್ತು. ಮತ್ತೊಂದು ಸಭೆ ನಡೆದಿದ್ದು 60-65 ಜನರು ಅದರಲ್ಲಿದ್ದರು. ಈ ಪ್ರದೇಶದ ಮುಸ್ಲಿಮರಲ್ಲಿ ಭಯವನ್ನು ಹುಟ್ಟುಹಾಕುವುದು ಅವರ ಉದ್ದೇಶವಾಗಿತ್ತು. ಕೊಲ್ಲುವುದು ಅಥವಾ ಲೂಟಿ ಮಾಡುವುದು ಅವರ ಗುರಿಯಾಗಿರಲಿಲ್ಲ. ಆದರೆ ಭಯವನ್ನು ಹರಡುವುದು ಮುಖ್ಯವಾಗಿತ್ತು” ಎಂದು ವಿವರಿಸಿದ್ದಾರೆ.

“ಅವರು ಗ್ರಾಮವನ್ನು ಪ್ರವೇಶಿಸಿ, ತ್ಯಾಗಿ ಮೇಲೆ ಹಲ್ಲೆ ನಡೆಸಿದರು. ನಂತರ ಚದುರಿಹೋದರು. ಇದಕ್ಕೂ ಮುನ್ನ ಗ್ರಾಮದ ಮಸೀದಿಯಲ್ಲಿ ನಮಾಜ್ ಓದುವ ಪ್ರಯತ್ನ ನಡೆಸಲಾಗಿತ್ತು” ಎಂದು ಧಾಮಾ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿನ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಆಧಾರಿಸಿ ಬಿಬಿಸಿ ಗ್ರೌಂಡ್ ರಿಪೋರ್ಟ್ ಮಾಡಿದೆ. ದಾಳಿಯಲ್ಲಿ ಭಾಗವಹಿಸಲು ಸಭೆ ನಡೆದಿತ್ತು. ದಾಳಿಯನ್ನು ಪ್ರಚೋದಿಸುವ ಗುರಿಯನ್ನು ಹೊಂದಿರುವ ಪೋಸ್ಟ್‌ಗಳನ್ನು ಬಂಧಿತ ನಾಲ್ವರು ಆರೋಪಿಗಳಲ್ಲಿ ಒಬ್ಬರಾದ ದಿಲೀಪ್‌ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿರಿ: ‘ಜಾಗತಿಕ ಹಸಿವು ಸೂಚ್ಯಂಕ-2022’: 107 ನೇ ಸ್ಥಾನಕ್ಕೆ ಕುಸಿದ ಭಾರತ

ದಿ ವೈರ್‌ನೊಂದಿಗೆ ಮಾತನಾಡುತ್ತಾ ರಾಜಕೀಯ ಸಂಬಂಧ ಸಭೆ ನಡೆದಿದೆ ಎಂಬ ಪ್ರತಿಪಾದನೆಗಳನ್ನು ಪೊಲೀಸರು ನಿರಾಕರಿಸಿದ್ದಾರೆ. ನಾಲ್ವರನ್ನು ಬಂಧಿಸಲಾಗಿದೆ ಎಂದು ಖೇಕ್ರಾ ಪೊಲೀಸ್ ಠಾಣೆಯ ವೃತ್ತಾಧಿಕಾರಿ ವಿಜಯ್ ಚೌಧರಿ ತಿಳಿಸಿದ್ದಾರೆ. ಉಳಿದ ವ್ಯಕ್ತಿಗಳಿಗಾಗಿ ನಾವು ಗಮನ ಹರಿಸಿದ್ದೇವೆ. “ಸಭೆ ನಡೆಸಿ ಪಿತೂರಿ ನಡೆದಿದೆ. ಆದರೆ, ಅದು ರಾಜಕೀಯವಾಗಿರಲಿಲ್ಲ. ಇದು ಹಳೆಯ ವಿಚಾರಕ್ಕೆ ಸಂಬಂಧಿಸಿದ ಪೋಸ್ಟ್ ಆಗಿದೆ” ಎಂದಿದ್ದಾರೆ.

ಶಾರುಖ್ ಮತ್ತು ಅವರ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಿದ್ದರೂ, ಅವರು ಭಯದಿಂದ ಬದುಕುತ್ತಿದ್ದಾರೆ. ವಿನಯ್‌ಪುರದಲ್ಲಿ ಗುರ್ಜರ್‌ಗಳು ಮತ್ತು ಮುಸ್ಲಿಮರು ವಾಸವಿದ್ದಾರೆ. ಶಾರುಖ್ ಪ್ರಕಾರ, ಸುತ್ತಮುತ್ತಲಿನ ಹಳ್ಳಿಗಳು ಗುರ್ಜರ್ ಪ್ರಾಬಲ್ಯ ಹೊಂದಿವೆ.

“ಈ ಪ್ರದೇಶದಲ್ಲಿನ ಉದ್ವಿಗ್ನತೆಯಿಂದಾಗಿ ನಾವು ಗ್ರಾಮದಿಂದ ಹೊರಹೋಗಲು ಬಯಸುತ್ತಿದ್ದೇವೆ. ನಾವು ಆಡಳಿತದ ಮೇಲೆ ಕುರುಡು ನಂಬಿಕೆ ಇಟ್ಟಿದ್ದೆವು. ಸರ್ಕಾರಿ ನೌಕರಿಯೊಂದಿಗೆ ನಮಗೆ ಬೆಂಬಲ ನೀಡುವ ಭರವಸೆ ಇನ್ನೂ ಈಡೇರಿಲ್ಲ. ನಾವೆಲ್ಲರೂ ಇನ್ನೂ ಓದುತ್ತಿರುವುದರಿಂದ ನನ್ನ ತಂದೆಯ ಅಲ್ಪ ಆದಾಯವನ್ನೇ ಅವಲಂಬಿಸಿದ್ದೆವು” ಎಂದಿದ್ದಾರೆ ಶಾರುಖ್‌.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...