ಬಿಜೆಪಿ ಆಡಳಿತದ ಉತ್ತರ ಪ್ರದೇಶದ ಅಲಿಗಢವನ್ನು ಹರಿಗಢ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯತ್ ಅನುಮೋದಿಸಿದೆ ಎಂದು ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ಮಂಗಳವಾರ ತಿಳಿಸಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆಯನ್ನು ಕಳುಹಿಸಲಾಗಿದೆ.
ಅಲಿಗಢದ ಮರುನಾಮಕರಣದ ಕ್ರಮವನ್ನು ಯುಪಿ ಸರ್ಕಾರವು ಅನುಮೋದಿಸಿದರೇ, ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಮರುನಾಮಕರಣಗೊಂಡ ಸ್ಥಳಗಳ ಒಂದು ದೊಡ್ಡ ಪಟ್ಟಿಗೆ ಅಲಿಗಢ ಕೂಡ ಸೇರುತ್ತದೆ. 2019 ರ ಜನವರಿಯಲ್ಲಿ ಕುಂಭ ಮೇಳ ಹತ್ತಿರದಲ್ಲಿರುವಾಗಲೇ ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಲಾಗಿದೆ.
“ನಾವು ಸೋಮವಾರ ಜಿಲ್ಲಾ ಪಂಚಾಯತ್ ಸಭೆ ನಡೆಸಿ ಕೆಲವು ಪ್ರಸ್ತಾಪಗಳನ್ನು ಅಂಗೀಕರಿಸಿದ್ದೇವೆ. ಅವುಗಳಲ್ಲಿ ಮೊದಲನೆಯ ಪ್ರಸ್ತಾವನೆ ಅಲಿಗಢವನ್ನು ಹರಿಗಢ ಎಂದು ಮರುನಾಮಕರಣ ಮಾಡುವುದು. ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಈ ಕುರಿತ ಪ್ರಸ್ತಾವನೆಯನ್ನು ನಾವು ಮುಖ್ಯಮಂತ್ರಿಗೆ ಕಳುಹಿಸಿದ್ದೇವೆ. ಪ್ರಸ್ತಾವನೆಯನ್ನು ಅನುಮೋದಿಸುವ ಭರವಸೆ ಇದೆ” ಎಂದು ಅಲಿಗಢ ಜಿಲ್ಲಾ ಪಂಚಾಯತ್ ಮುಖ್ಯಸ್ಥ ವಿಜಯ್ ಸಿಂಗ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜೀವ್ ಗಾಂಧಿ ಖೇಲ್ ರತ್ನ ಇನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ: ಪ್ರಧಾನಿ
ಅಲಿಗಢವನ್ನು ಹರಿಗಢ ಎಂದು ಮರುನಾಮಕರಣ ಮಾಡುವ ಒತ್ತಾಯವು ಬ್ಲಾಕ್ ಪಂಚಾಯತ್ ನಾಯಕರಾದ ಕೊಹ್ರಿ ಸಿಂಗ್ ಮತ್ತು ಉಮೇಶ್ ಯಾದವ್ ಅವರಿಂದ ಬಂದಿದೆ ಎಂದು ಪಂಚಾಯತ್ ಸದಸ್ಯರು ತಿಳಿಸಿದ್ದಾರೆ.
ಅಲಿಗಢದ ಧನಿಪುರ್ ಏರ್ ಸ್ಟ್ರಿಪ್ ಅನ್ನು ಕಲ್ಯಾಣ್ ಸಿಂಗ್ ಏರ್ ಸ್ಟ್ರಿಪ್ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಪಂಚಾಯತ್ ಅನುಮೋದಿಸಿದೆ ಎಂದು ಸ್ಥಳೀಯ ಸಂಸ್ಥೆಯ ಸದಸ್ಯರು ತಿಳಿಸಿದ್ದಾರೆ.
ಇತ್ತಿಚೆಗೆ ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಇನ್ನು ಮುಂದೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಇದನ್ನೂ ಓದಿ: ‘ಯೋಗಿ ನಿಮ್ಮ ಚರ್ಮ ಸುಲಿಯುತ್ತಾರೆ!’; ರೈತರಿಗೆ ಬಹಿರಂಗವಾಗಿ ಬೆದರಿಸಿದ ಯುಪಿ ಬಿಜೆಪಿ


