Homeಮುಖಪುಟಸಂತ್ರಸ್ತ ಕುಟುಂಬದ ಮೇಲೆ FIR ದಾಖಲಿಸಿ: ಮೇಲ್ಜಾತಿಗಳ ಬೃಹತ್ ಸಭೆಯಲ್ಲಿ ಒತ್ತಾಯ!

ಸಂತ್ರಸ್ತ ಕುಟುಂಬದ ಮೇಲೆ FIR ದಾಖಲಿಸಿ: ಮೇಲ್ಜಾತಿಗಳ ಬೃಹತ್ ಸಭೆಯಲ್ಲಿ ಒತ್ತಾಯ!

ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯವು ಸಾಮೂಹಿಕ ಅತ್ಯಾಚಾರವನ್ನು ದೃಢಿಕರಿಸಿಲ್ಲ, ಆದ್ದರಿಂದ ನಾಲ್ವರು (ಆರೋಪಿಗಳನ್ನು) ಬಿಡುಗಡೆ ಮಾಡಬೇಕು ಎಂಬ ಒತ್ತಾಯ ಸಭೆಯಲ್ಲಿ ಕೇಳಿಬಂದಿದೆ.

- Advertisement -
- Advertisement -

ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಬಂಧಿಸಲ್ಪಟ್ಟ ಆರೋಪಿಗಳನ್ನು ಬೆಂಬಲಿಸಿ ಹತ್ರಾಸ್‌ನಲ್ಲಿ ಮೇಲ್ಜಾತಿ ಎಂದು ಕರೆಯಲ್ಪಡುವ ಸಮುದಾಯದ ಸದಸ್ಯರು ಬೃಹತ್ ಸಭೆ ನಡೆಸುತ್ತಿದ್ದಾರೆ.

ನಿಷೇದಾಜ್ಞೆ ಜಾರಿಯಲ್ಲಿದ್ದರೂ, ವಿರೋಧ ಪಕ್ಷಗಳ ನಾಯಕರು ಸಂತ್ರಸ್ತ ಕುಟುಂಬ ಬೇಟಿಗೆ ತೀವ್ರ ಅಡೆತಡೆಗಳಿರುವುದರ ನಡುವೆ ಈ ಬೃಹತ್ ಸಭೆಗೆ ಅನುಮತಿ ಹೇಗೆ ನೀಡಲಾಯಿತು ಎಂಬ ಪ್ರಶ್ನೆಗಳು ಎದ್ದಿವೆ.

“ನಾವು ಸಭೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಸಂತ್ರಸ್ತ ಯುವತಿಯ ಕುಟುಂಬದ ವಿರುದ್ಧ ಮೊದಲು ಎಫ್‌ಐಆರ್‌ ದಾಖಲಿಸಬೇಕು. ಆರೋಪಿಗಳನ್ನು ಸುಖಾಸುಮ್ಮನೆ ಗುರಿಯಾಗಿಸಲಾಗಿದೆ” ಎಂದು ಸಭೆಯ ಸಂಘಟಕರೊಬ್ಬರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಬಿಜೆಪಿ ನಾಯಕ ರಾಜ್ವೀರ್ ಸಿಂಗ್ ಪೆಹೆಲ್ವಾನ್ ಅವರ ಮನೆಯಲ್ಲಿ ಇಂದಿನ ಸಭೆ ನಡೆಯುತ್ತಿದೆ. ಠಾಕೂರ್‌ಗಳು ಮತ್ತು ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದಾರೆ. ಶುಕ್ರವಾರವೂ (ಅ.02) ಸಹ ಮೃತ ಸಂತ್ರಸ್ತ ಯುವತಿ ವಾಸಿಸುತ್ತಿದ್ದ ಹಳ್ಳಿಯ ಸಮೀಪದಲ್ಲೇ ಮೇಲ್ಜಾತಿ ಸಮುದಾಯದವರು ಸಭೆ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಹತ್ರಾಸ್ ಸಂತ್ರಸ್ತ ಕುಟುಂಬ ಕೇಳುತ್ತಿರುವುದೇನು?: 5 ಪ್ರಶ್ನೆಗಳನ್ನು ಮುಂದಿಟ್ಟ ಪ್ರಿಯಾಂಕ ಗಾಂಧಿ

 

ಸೆಪ್ಟೆಂಬರ್ 14 ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ನಾಲ್ವರು ಮೇಲ್ಜಾತಿಯ ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸೆಪ್ಟೆಂಬರ್ 29 ರಂದು ಯುವತಿ ಸಾವನ್ನಪ್ಪಿದರು, ಸ್ಥಳೀಯ ಪೊಲೀಸರು ಮರುದಿನ ಮುಂಜಾನೆ 2.30ಕ್ಕೆ ಮೃತ ಯುವತಿಯ ದೇಹವನ್ನು ಕುಟುಂಬಕ್ಕೆ ಒಪ್ಪಿಸದೇ ಸುಟ್ಟುಹಾಕಿದ್ದರು. ತಮ್ಮ ಒಪ್ಪಿಗೆಯಿಲ್ಲದೇ ಶವಸಂಸ್ಕಾರ ಬಲವಂತವಾಗಿ ಮಾಡಲಾಯಿತು ಎಂದು ಕುಟುಂಬವು ಆರೋಪಿಸಿದೆ.

ಸಾರ್ವಜನಿಕರ ಆಕ್ರೋಶ ಹೆಚ್ಚಾಗಿ, ಪ್ರತಿಭಟನೆಗಳು, ಧರಣಿಗಳು ನಡೆದ ಹಿನ್ನೆಲೆ ಹತ್ರಾಸ್‌ನಲ್ಲಿ ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ. ಆದರೆ ಇಂದಿನ ಸಭೆ ಖಾಸಗಿ ನಿವಾಸದಲ್ಲಿ ನಡೆಯುತ್ತಿರುವುದರಿಂದ ಪೊಲೀಸರ ಅನುಮತಿ ಅಗತ್ಯವಿಲ್ಲ ಎನ್ನಲಾಗಿದೆ.

ಮೊದಲ ಸಭೆಯಲ್ಲಿ ಪ್ರಕರಣದ ನಾಲ್ವರು ಆರೋಪಿಗಳು ನಿರಪರಾಧಿಗಳು ಎಂದು ಹೇಳಿದರು. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದರು. ಬಂಧಿತ ಆರೋಪಿಗಳನ್ನು ಬಿಡುಗಡೆ ಮಾಡದಿದ್ದರೆ ಆಂದೋಲನ ನಡೆಸುವುದಾಗಿ ಬೆದರಿಕೆ ಕೂಡ ಹಾಕಿದರು.

ಇದನ್ನೂ ಓದಿ: ದಲಿತ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗಳ ಪರ ನಿಂತ ಸವರ್ಣ ಪರಿಷತ್!

ಆಗ್ರಾ ಫೊರೆನ್ಸಿಕ್ ಸೈನ್ಸ್ ಲ್ಯಾಬ್‌ನ ವರದಿ ಮತ್ತು ದೆಹಲಿ ಆಸ್ಪತ್ರೆಯ ಶವಪರೀಕ್ಷೆಯ ವರದಿಯನ್ನೂ ಉಲ್ಲೇಖಿಸಿದ ಮುಖಂಡರು, ಘಟನೆ ನಡೆದು ಎಂಟು ದಿನಗಳ ನಂತರ ಅತ್ಯಾಚಾರ ಎಂದು ಹೇಗೆ ಹೇಳಲಾಯಿತು ಎಂದು ಪ್ರಶ್ನಿಸಿದ್ದಾರೆ.

Hathras ' Upper Caste ' Meet Planned Despite Sec 144

’ಆರೋಪಿಗಳ ಕುಟುಂಬ ಸದಸ್ಯರು ಮತ್ತು ಸಂತ್ರಸ್ತೆಯ ಕುಟುಂಬ ಸದಸ್ಯರ ನಾರ್ಕೊ ಪರೀಕ್ಷೆಯ ಹೊರತಾಗಿ ಈ ವಿಷಯದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ. ಇದರಿಂದಾಗಿ ನಿಜವಾದ ಅಪರಾಧಿಗೆ ಶಿಕ್ಷೆ ಸಿಗುತ್ತದೆ. ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯವು ಸಾಮೂಹಿಕ ಅತ್ಯಾಚಾರವನ್ನು ದೃಢಿಕರಿಸಿಲ್ಲ, ಆದ್ದರಿಂದ ನಾಲ್ವರು (ಆರೋಪಿಗಳನ್ನು) ಬಿಡುಗಡೆ ಮಾಡಬೇಕು’ ಎಂದು ಹಸಯನ್ ಬ್ಲಾಕ್ ಪ್ರಮುಖ್‌ನ ಪ್ರತಿನಿಧಿ ಸುಮಂತ್ ಕಿಶೋರ್ ಸಿಂಗ್ ಹೇಳಿದ್ದಾರೆ.

ಇತ್ತ ದೇಶವೇ ಹಸ್ರಾತ್ ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದು ಹೋರಾಟಕ್ಕೆ ಇಳಿದಿದ್ದರೇ, ತಮ್ಮ ಜಾತಿಯ ಜನರು ಯಾವುದೇ ತಪ್ಪು ಮಾಡಿಲ್ಲ, ಅವರು ಅಮಾಯಕರು ಎಂದು ಸಾಬೀತು ಮಾಡಲು ಮೇಲ್ಜಾತಿ ಸಮುದಾಯ ಪಣ ತೊಟ್ಟು ನಿಂತಿದ್ದಾರೆ. ಇದಕ್ಕೆ ಸಿಎಂ ಬೆಂಬಲ ಸಹ ಇದೆ ಎಂಬ ಆರೋಪ ಕೇಳಿಬಂದಿದೆ.


ಇದನ್ನೂ ಓದಿ: ಹತ್ರಾಸ್ ಪ್ರಕರಣ ಪಕ್ಷಕ್ಕೆ ರಾಜಕೀಯ ಹಾನಿಯುಂಟುಮಾಡಿದೆ: BJP ದಲಿತ ಸಂಸದರ ಉವಾಚ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...