Homeಕರ್ನಾಟಕಉತ್ತರ ಕನ್ನಡ : ಬಿಜೆಪಿ ಹಣೆಬರಹ ದೇಶಪಾಂಡೆ `ಕೈ'ಯಲ್ಲಿ

ಉತ್ತರ ಕನ್ನಡ : ಬಿಜೆಪಿ ಹಣೆಬರಹ ದೇಶಪಾಂಡೆ `ಕೈ’ಯಲ್ಲಿ

- Advertisement -
- Advertisement -

| ಶುದ್ಧೋದನ |
ಉತ್ತರ ಕನ್ನಡದಲ್ಲಿ ವಿಪರೀತ ಬಿಸಿಲಿನ ಉರಿ ಮತ್ತು ಅಷ್ಟೇ ಪ್ರಮಾಣದ ಲೋಕಸಭಾ ಚುನಾವಣೆ ಕಾವು. ಜನರ ತಾತ್ಸಾರಕ್ಕೆ ತುತ್ತಾಗಿರುವ ಬಿಜೆಪಿಯ ಅನಂತಮಾಣಿ ಮೇಲೆ ಆಸ್ನೋಟಿಕರ್ ಏಕಾಂಗಿ ವೀರನಂತೆ ಮುಗಿಬೀಳುತ್ತಿದ್ದಾನೆ.
ಬರೋಬ್ಬರಿ 22 ವರ್ಷದ ಸಂಸದಗಿರಿಯಲ್ಲಿ ಅನಂತ್ಮಾಣಿ ಯೋಜನಾಬದ್ಧವಾಗಿ ಜಿಲ್ಲೆಗೆ ದ್ರೋಹ ಬಗೆದಿದ್ದಾನೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಎಂದು ತಲೆ ಕೆಡಿಸಿಕೊಳ್ಳದ ಮಾಣಿ ಹೇಳೋದೊಂದು ಮಾಡೋದೊಂದು ಎಂಬುದು ಅರ್ಥವಾಗಿರುವ ಜನರಿಗೆ ಆತನ ಸಹವಾಸ ಸಾಕಾಗಿದೆ. ಇದರ ಅರ್ಥ ಇಷ್ಟೇ, ಮೈತ್ರಿಕೂಟದ ಕಿಂಗ್‍ಪಿನ್ ಆರ್.ವಿ.ದೇಶಪಾಂಡೆ ಮನಸಿಟ್ಟು ಕೆಲಸ ಮಾಡಿದರೆ ಜಿಲ್ಲೆಯ ರಾಜಕಾರಣದ ದಿಕ್ಕು ಬದಲಿಸುವುದು ಕಷ್ಟವಿಲ್ಲ.

ತನಗೆ ರಾಜಕೀಯ ದೀಕ್ಷೆ ಕೊಟ್ಟಿದ್ದ ಗುರು ಚಿತ್ತರಂಜನ್‍ರ ನಿಗೂಢ ಹತ್ಯೆಯ ಸೂತಕದ ಅಡಿಯಲ್ಲಿ ಮೊದಲ ಬಾರಿ ಸಂಸದನಾದ ಅನಂತ್ಮಾಣಿಯ ಆನಂತರದ 3 ಗೆಲುವುಗಳು ದೇಶಪಾಂಡೆ ಕೊಟ್ಟ ಉಡುಗೊರೆಗಳಂತಿದ್ದವು. ಆರನೇ ಬಾರಿ ಅನಂತ ಮಾಣಿ ಸ್ಪರ್ಧಿಸಿದಾಗ ದೇಶಪಾಂಡೆ ಕಾಂಗ್ರೆಸನ್ನು ತನಗರಿವಿಲ್ಲದಂತೆ ನಿರ್ನಾಮ ಮಾಡಿ ಆಗಿತ್ತು. ಹಾಗಾಗಿ ತನ್ನ ಮಗ ಪ್ರಶಾಂತ್ ಕಾಂಗ್ರೆಸ್ ಕ್ಯಾಂಡಿಡೇಟ್ ಆದರೂ ದೇಶಪಾಂಡೆಗೆ ಗೆಲ್ಲಿಸಿಕೊಳ್ಳಲಾಗಲಿಲ್ಲ. ದಿಲ್ಲಿ ಡಿಟೇಲ್ ರಾಜಕಾರಣಿ ಮಾರ್ಗರೇಟ್ ಆಳ್ವಾ ಜಿಲ್ಲಾ ಕಾಂಗ್ರೆಸ್‍ನ ಅಧಿನಾಯಕಿಯಾಗಿದ್ದ ಕಾಲದಲ್ಲಿ ಆಕೆಯ ಸೀರೆಯ ಚುಂಗು ಹಿಡಿದು ಕಾಂಗ್ರೆಸ್‍ಗೆ ನುಸುಳಿದ್ದ ಪಾಂಡೇಜಿ ಆಮೇಲೆ ಆಕೆಯ ವಿರುದ್ಧವೇ ತಿರುಗಿನಿಂತು ಕಾಂಗ್ರೆಸ್‍ನ ನಿರ್ನಾಮ ಮಾಡಿದ್ದು ಈಗ ಇತಿಹಾಸ.

ಒನ್ಸ್ ಎಗೇನ್, ಈಗ ಮೈತ್ರಿಕೂಟದ ಸೋಲು ಗೆಲುವು ದೇಶಪಾಂಡೆ ಕೈಲಿರುವುದಂತೂ ಖರೆ!!.
ಮೈತ್ರಿಕೂಟದ ಕ್ಯಾಂಡಿಡೇಟ್ ಆನಂದ ಅಸ್ನೋಟಿಕರ್ ಕಂಡರೆ ದೇಶಪಾಂಡೆಗೆ ಲಾಗಾಯ್ತಿನಿಂದಲೂ ಅಷ್ಟಕಷ್ಟೇ. ಆಸ್ನೋಟಿಕರ್ ತಂದೆ ವಸಂತ ಅಸ್ನೋಟಿಕರ್ ಎಂಬ ದಿವಂಗತ ರಾಬಿನ್‍ಹುಡ್, ಮ್ಯಾಗಿ ಕ್ಯಾಂಪಿನಲ್ಲಿದ್ದ ಕಾರವಾರದ ಅಂದಿನ ಶಾಸಕ. ಈತ ಭೂಗತ ಲೋಕದ ಜಿದ್ದಿಗೆ ಬಲಿಯಾದ. ಆತನ ಹೆಂಡತಿಯನ್ನು ಎಮ್ಮೆಲ್ಸಿ ಮಾಡಲು ಮ್ಯಾಗಿ ಪ್ರಯತ್ನಿಸಿದಾಗ ಇದೇ ದೇಶಪಾಂಡೆ ಅಡ್ಡಗಾಲು ಹಾಕಿದ್ದ. ಆದರೂ ಮ್ಯಾಗಿ ಶುಭಲತಾ ಅಸ್ನೋಟಿಕರ್‍ರನ್ನು ವಿಧಾನ ಪರಿಷತ್‍ಗೆ ಕಳಿಸಿದ್ದರು.

ಆನಂದ್ ಪ್ರಾಯಕ್ಕೆ ಬಂದ ನಂತರ ಮ್ಯಾಗಿ ಅಜ್ಜಿಯ ವಿರುದ್ಧವೇ ತಿರುಗಿಬಿದ್ದ. 2004ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಮ್ಯಾಗಿ ತನ್ನ ಚೇಲಾ ಅಶೋಕ್ ನಾಯ್ಕನನ್ನು ಕಾಂಗ್ರೆಸ್‍ನಿಂದ ಕಣಕ್ಕೆ ಇಳಿಸಿದ್ದು ಇದಕ್ಕೆ ಕಾರಣ. ಯಾಕೆಂದರೆ ಈ ಅಶೋಕ ಕಾರವಾರ ರಾಜಕಾರಣದಲ್ಲಿ ಆನಂದ್‍ಗೆ ವಿರೋಧಿಯಾಗಿದ್ದ. ಹೀಗಾಗಿ ಆನಂದ ಹಠಕ್ಕೆ ಬಿದ್ದು ಅಂದು ಬಿಜೆಪಿಯ ಅನಾಮಧೇಯ ಗಂಗಾಧರ ಭಟ್ಟ ಎಂಬುವನ ಪರ ಪ್ರಚಾರ ನಡೆಸಿ ಗೆಲ್ಲಿಸಿದ್ದಲ್ಲದೆ ಪರೋಕ್ಷವಾಗಿ ತಾನೇ ಶಾಸಕಗಿರಿ ನಡೆಸಿದ್ದ.

ಯಾವಾಗ ಆನಂದ್, ಮ್ಯಾಗಿ ವಿರುದ್ಧ ತಿರುಗಿಬಿದ್ದರೋ ಆಗ ಆತನಿಗೆ ಗಾಡ್‍ಫಾದರ್ ಆಗಿ ನಿಂತದ್ದು ದೇಶಪಾಂಡೆ! ಮ್ಯಾಗಿಯ ಪ್ರಬಲ ವಿರೋಧದ ನಡುವೆಯೂ ಆತನನ್ನು 2005ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕಾರವಾರದ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ದರು. ಗೆದ್ದ ಆನಂದ ಮೂರೇ ತಿಂಗಳಿಗೆ ಆಪರೇಷನ್ ಕಮಲಕ್ಕೆ ಬಲಿಯಾಗಿ ರಾಜಕೀಯ ಬದುಕನ್ನೇ ಹಾಳು ಮಾಡಿಕೊಂಡಿದ್ದ. ಆ ಕಾರಣಕ್ಕೆ ದೇಶಪಾಂಡೆಗೆ ಈಗಲೂ ಆನಂದನ ಮೇಲಿನ ಸಿಟ್ಟು ಕಡಿಮೆಯಾಗಿಲ್ಲ. ಆನಂದ್ ಮೈತ್ರಿಕೂಟದ ಕ್ಯಾಂಡಿಡೇಟ್ ಎಂದು ಘೋಷಣೆ ಆದಾಗ ಎದುರಾಳಿ ಅನಂತ್ಮಾಣಿಗಿಂತಲೂ ಹೆಚ್ಚು ಡಿಸ್ಟರ್ಬ್ ಆದದ್ದು ಇದೇ ದೇಶಪಾಂಡೆ!


ಪಕ್ಕದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್‍ರನ್ನು ಜೆಡಿಎಸ್‍ಗೆ ಕಾಂಗ್ರೆಸ್ ಎರವಲು ಕೊಟ್ಟಂತೆ ಉತ್ತರಕನ್ನಡದಲ್ಲೂ ಡಿಸಿಸಿ ಅಧ್ಯಕ್ಷನೂ ತನ್ನ ಆಜ್ಞಾನುಧಾರಿಯೂ ಆದ ಭೀಮಣ್ಣ ನಾಯಕನಿಗೆ ಜೆಡಿಎಸ್ ಬಣ್ಣ ಬಳಿಯುವುದು ದೇಶಪಾಂಡೆ ಇರಾದೆಯಾಗಿತ್ತು. ಆದರೆ ಗೌಡರು, ಆಸ್ನೋಟಿಕರ್ ಬೇಡವೆಂದಾದರೆ ರಾಮಕೃಷ್ಣ ಹೆಗಡೆಯ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆಯನ್ನು ಒಪ್ಪಿಕೊಳ್ಳುವಿರಾ ಎಂದು ಕೇಳಿದಾಗ ದೇಶಪಾಂಡೆ ದಂಗಾಗಿಹೋದರು. ಗುರು ಹೆಗಡೆ ಫ್ಯಾಮಿಲಿಗೂ ದೇಶಪಾಂಡೆಗೂ ಪುರಾತನ ಹಗೆ ಹೊಗೆಯಾಡುತ್ತಲೇ ಇದೆ. ಹಾಗಾಗಿ ದೇಶಪಾಂಡೆ ಆಸ್ನೋಟಿಕರ್ ಕ್ಯಾಂಡಿಡೇಚರ್ ಒಪ್ಪಿಕೊಳ್ಳಬೇಕಾಯ್ತು.


ಮೈತ್ರಿಕೂಟದ ಹುರಿಯಾಳಿನ ಹೆಸರು ಬಹಿರಂಗವಾಗಿ ವಾರವೇ ಕಳೆದರೂ ದೇಶಪಾಂಡೆ ಮೊಗಮ್ಮಾಗೆ ಹೆಜ್ಜೆ ಹಾಕುತ್ತಿದ್ದಾರೆ. ಆನಂದ ಆಸ್ನೋಟಿಕರ್, ದೇಶಪಾಂಡೆ ಮನೆಗೆ ಹೋಗಿ ಅಡ್ಡಬಿದ್ದು ಬಂದರೂ ದೇಶಪಾಂಡೆ ಮಾತ್ರ ಜಿಲ್ಲೆಯತ್ತ ತಲೆಹಾಕಿಲ್ಲ. ಎಲ್ಲಿಯೂ ಆನಂದ್‍ಗೆ ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಹೇಳಿಲ್ಲ. ಕಾಂಗ್ರೆಸ್-ಜೆಡಿಎಸ್ ಜಿಲ್ಲಾ ಲೀಡರ್‍ಗಳ ಜಂಟಿ ಪತ್ರಿಕಾಗೋಷ್ಠಿ ಹೊತ್ತಲ್ಲೂ ದೇಶಪಾಂಡೆಯ ಶಿಷ್ಯ ಭೀಮಣ್ಣ ನಾಯ್ಕ, ಆನಂದ ಅಂತರ ಕಾಯ್ದುಕೊಂಡಿದ್ದರು. ಈ ಭೀಮಣ್ಣ ಬಿಜೆಪಿಯ ಅನಂತ್ಮಾಣಿಯ ಅಂತರಂಗದ ಗೆಣೆಕಾರ. ಅನಂತ್ಮಾಣಿ ಶಿರಸಿಯ ವೈದ್ಯರಿಗೆ ಒಡೆದು ರಕ್ತ ಹರಿಸಿದಾಗ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಸಾಂಕೇತಿಕವಾಗಿ ಕುಳಿತೆದ್ದು “ನಂಗೆ ಥಂಡಿ, ಕೆಮ್ಮು” ಎಂದು ಹೇಳಿ ಮಾತನಾಡದೆ ಮನೆಗೆ ಹೋಗಿದ್ದು ಅವರಿಬ್ಬರ ಗೆಳೆತನಕ್ಕೆ ಸಾಕ್ಷಿ.

ಸದ್ಯಕ್ಕೆ ಆಂಟಿಇನ್‍ಕಂಬೆನ್ಸಿಯಲ್ಲಿ ತೊಳಲಾಡುತ್ತಿರುವ ಬಿಜೆಪಿಯ ಅನಂತ್ಮಾಣಿ ವಿರುದ್ಧ ಮೈತ್ರಿಕೂಟ ಒಟ್ಟಾಗಿ ಅಖಾಡಕ್ಕಿಳಿದರೆ ಜಿಲ್ಲೆಯಲ್ಲಿ ಮತ್ತೆ ಸೆಕ್ಯುಲರ್ ರಾಜಕಾರಣ ಪ್ರತಿಷ್ಠಾಪಿಸುವುದು ಕಷ್ಟವೇನಲ್ಲ. ಇದು ಭವಿಷ್ಯದಲ್ಲಿ ದೇಶಪಾಂಡೆ ಮಗನ ರಾಜಕಾರಣಕ್ಕೂ ನೆರವಾಗುತ್ತದೆ. ಆದರೆ ದೇಶಪಾಂಡೆ ಇಷ್ಟು ವಿಶಾಲವಾಗಿ ಯೋಚಿಸಬಲ್ಲರೇ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ| ‘ಬಾಂಗ್ಲಾದೇಶಿ’ ಎಂದು ಆರೋಪಿಸಿ ಮುಸ್ಲಿಂ ಕಾರ್ಮಿಕನನ್ನು ಥಳಿಸಿದ ಗುಂಪು

ಬಾಂಗ್ಲಾದೇಶಿ ಎಂದು ಸುಳ್ಳು ಆರೋಪ ಹೊರಿಸಿ ಮುಸ್ಲಿಂ ಕಾರ್ಮಿಕನ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ. ಬಲಿಪಶು ಖುರ್ಷಿದ್ ಆಲಂ, ಧಾರ್ಮಿಕ ಘೋಷಣೆಗಳನ್ನು ಪಠಿಸಲು ನಿರಾಕರಿಸಿದ ನಂತರ ಸುಮಾರು...

ರಾಜ್ಯ ಸರ್ಕಾರದ ಸಮೀಕ್ಷೆಯಲ್ಲಿ ಇವಿಎಂ ಮೇಲೆ ಜನ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದ ವರದಿ : ಅಲ್ಲಗಳೆದ ಸಚಿವ ಪ್ರಿಯಾಂಕ್ ಖರ್ಗೆ

ಹೆಚ್ಚಿನ ನಾಗರಿಕರು ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುತ್ತಿವೆ ಎಂದು ನಂಬುತ್ತಾರೆ ಹಾಗೂ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೇಲಿನ ನಂಬಿಕೆ ಹೆಚ್ಚಾಗಿದೆ ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರಕಟಿಸಿದ ರಾಜ್ಯವ್ಯಾಪಿ ಸಮೀಕ್ಷೆಯ...

ಉಡುಗೊರೆಯಾಗಿ ನೀಡಿದ್ದ ಮೊಬೈಲ್ ಫೋನ್‌ಗಳನ್ನು ಅಸ್ಸಾಂ ಸರ್ಕಾರಕ್ಕೆ ಹಿಂದಿರುಗಿಸಿದ ಪತ್ರಕರ್ತರು

ಅಸ್ಸಾಂ ಸರ್ಕಾರದಿಂದ ಹೊಸ ವರ್ಷದ ಉಡುಗೊರೆಯಾಗಿ ಪಡೆದ ಮೊಬೈಲ್ ಫೋನ್‌ಗಳನ್ನು ಕನಿಷ್ಠ ಇಬ್ಬರು ಪತ್ರಕರ್ತರು ಗುರುವಾರ ಹಿಂದಿರುಗಿಸಿದ್ದಾರೆ ಎಂದು 'ಸ್ಕ್ರೋಲ್' ವರದಿ ಮಾಡಿದೆ. ಅಸ್ಸಾಂನ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯದಲ್ಲಿ ನೋಂದಾಯಿಸಲಾದ 2,200...

ಕೋಗಿಲು ಬಡಾವಣೆ ಮನೆಗಳ ತೆರವು : ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರಿನ ಕೋಗಿಲು ಬಡಾವಣೆಯ ವಾಸಿಂ ಹಾಗೂ ಫಕೀರ್ ಕಾಲೊನಿಗಳ ಸುಮಾರು ‌300 ಮನೆಗಳನ್ನು ನೆಲಸಮ ಮಾಡಿ, ಮೂರು ಸಾವಿರಕ್ಕೂ ಹೆಚ್ಚು ಜನರನ್ನು ಬೀದಿಗೆ ತಳ್ಳಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಸಾರ್ವಜನಿಕ...

ರ‍್ಯಾಗಿಂಗ್ ದೈಹಿಕ ಹಿಂಸೆ; ಎರಡು ತಿಂಗಳ ಬಳಿಕ 19 ವರ್ಷದ ವಿದ್ಯಾರ್ಥಿನಿ ಸಾವು

ಹಿಮಾಚಲ ಪ್ರದೇಶದ ಧರ್ಮಶಾಲಾದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಘಟನೆಯು ಇಡೀ ರಾಜ್ಯವನ್ನೇ ಆಘಾತಕ್ಕೆ ದೂಡಿದೆ. 19 ವರ್ಷದ ಬಾಲಕಿಯ ಸಾವಿನ ಗಂಭೀರ ಪ್ರಕರಣಗಳಲ್ಲಿ ಕಾಲೇಜಿನ ಅಧ್ಯಾಪಕರು ಮತ್ತು ಮೂವರು ವಿದ್ಯಾರ್ಥಿನಿಯರ ಹೆಸರಿದೆ....

ಮುಸ್ಲಿಂ ಲೀಗ್‌ ಚಂದ್ರಿಕಾದ ಸಂಪಾದಕೀಯ ಪ್ರಕಟಿಸಿದ ಜನ್ಮಭೂಮಿ ಪತ್ರಿಕೆ : ಮುಜುಗರಕ್ಕೊಳಗಾದ ಬಿಜೆಪಿಯ ಮುಖವಾಣಿ

ವರ್ಷದ ಆರಂಭದಲ್ಲಿ ಅಚ್ಚರಿ ಎಂಬಂತೆ, ಕೇರಳ ಬಿಜೆಪಿಯ ಮುಖವಾಣಿಯಾದ ಮಲಯಾಳಂ ದಿನಪತ್ರಿಕೆ 'ಜನ್ಮಭೂಮಿ', ಪ್ರತಿಸ್ಪರ್ಧಿ ಪತ್ರಿಕೆಯಾದ ಇಂಡಿಯನ್‌ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌) ಪಕ್ಷದ ಮುಖವಾಣಿ 'ಚಂದ್ರಿಕಾ'ದ ಸಂಪಾದಕೀಯ ಪ್ರಕಟಿಸಿ ಮುಜುಗರಕ್ಕೀಡಾಗಿದೆ. 'ಜನ್ಮಭೂಮಿ' ಪತ್ರಿಕೆಯ...

ಕೆಕೆಆರ್ ತಂಡಕ್ಕೆ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಖರೀದಿ; ಶಾರುಖ್ ಖಾನ್ ಅವರನ್ನು ‘ದೇಶದ್ರೋಹಿ’ ಎಂದ ರಾಮಭದ್ರಾಚಾರ್ಯ

ಇಂಡಿಯನ್ ಪ್ರೀಮಿಯರ್ ಲೀಗ್ 2026 ರ ಸೀಸನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಖರೀದಿ ಮಾಡಿದ್ದಕ್ಕಾಗಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಹಿಂದೂ ಆಧ್ಯಾತ್ಮಿಕ ನಾಯಕ...

“ನಾವೆಲ್ಲರೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ”: ನ್ಯೂಯಾರ್ಕ್‌ನ ನೂತನ ಮೇಯರ್ ಝೊಹ್ರಾನ್ ಮಮ್ದಾನಿಯಿಂದ ಉಮರ್ ಖಾಲಿದ್‌ಗೆ ಪತ್ರ

ಜೈಲಿನಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರಿಗೆ ನ್ಯೂಯಾರ್ಕ್‌ ನಗರದ ನೂತನ ಮೇಯರ್ ಝೊಹ್ರಾನ್ ಮಮ್ದಾನಿ ಅವರು ಕೈಬರಹದ ಪತ್ರವೊಂದನ್ನು ಬರೆದಿದ್ದಾರೆ ಎಂದು, ಖಾಲಿದ್ ಸ್ನೇಹಿತೆ ಬನೋಜ್ಯೋತ್ಸ್ನಾ...

ಮಧ್ಯಪ್ರದೇಶ| ಹಸು ಮೇಯಿಸುವ ವಿಚಾರಕ್ಕೆ ಜಗಳ; ದಲಿತ ಕುಟುಂಬದ ಮೇಲೆ ಗುಂಡು ಹಾರಿಸಿದ ಗುಂಪು

ದಲಿತ ಕುಟುಂಬವೊಂದರ ಹೊಲದಲ್ಲಿ ಪ್ರಬಲ ಜಾತಿ ಜನರ ಹಸುಗಳು ಮೇಯಿಸುವುದನ್ನು ವಿರೋಧಿಸದ್ದಕ್ಕೆ ದಲಿತ ಕುಟುಂಬದ ಮೇಲೆ ಗುಂಡು ಹಾರಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದಾಳಿಕೋರರು ಮನಬಂದಂತೆ ಗುಂಡು ಹಾರಿಸಿ ನಂತರ ದಲಿತ...

ಬಳ್ಳಾರಿ | ರೆಡ್ಡಿ ಬಣಗಳ ನಡುವೆ ಘರ್ಷಣೆ : ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ

ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ (ಜ.1) ರಾತ್ರಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ರೆಡ್ಡಿ ಬಣಗಳ ನಡುವೆ ಘರ್ಷಣೆ ಉಂಟಾಗಿದ್ದು, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತನೋರ್ವ ಗುಂಡು ತಗುಲಿ ಮೃತಪಟ್ಟ...