Homeನ್ಯಾಯ ಪಥರಾಯಚೂರು ಲೋಕಸಭಾ ಕ್ಷೇತ್ರ : ಮತ್ತೆ ಜಾರಲಿದೆಯೆ ಕಾಂಗ್ರೆಸ್ ತೆಕ್ಕೆಗೆ?

ರಾಯಚೂರು ಲೋಕಸಭಾ ಕ್ಷೇತ್ರ : ಮತ್ತೆ ಜಾರಲಿದೆಯೆ ಕಾಂಗ್ರೆಸ್ ತೆಕ್ಕೆಗೆ?

- Advertisement -
- Advertisement -

ರಾಯಚೂರು ಲೋಕಸಭಾ ಕ್ಷೇತ್ರ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವಾಲ್ಮೀಕಿ ಸಮುದಾಯ ನಿರ್ಣಾಯಕ ಪಾತ್ರ ವಹಿಸಲಿದೆ. ಇಲ್ಲಿ ಒಂದು ವಾರದ ಹಿಂದೆಯೇ ಹಾಲಿ ಸಂಸದ ಬಿ.ವಿ ನಾಯಕ್‍ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಜೆಡಿಎಸ್ ಮೈತ್ರಿಯ ಕಾರಣಕ್ಕೆ ಕಾಂಗ್ರೆಸ್ ಅನ್ನು ಬೆಂಬಲಿಸಲಿದೆ. ಬಿ.ವಿ ನಾಯಕ್ ಬಗ್ಗೆ ಕ್ಷೇತ್ರದಲ್ಲಿ ಈ ಹಿಂದೆ ಒಳ್ಳೆಯ ಹೆಸರು ಇರಲಿಲ್ಲ. ಆದರೆ ಈಗ ಟಿಕೆಟ್ ಪಡೆದಿರುವ ಪ್ರತಿಸ್ಪರ್ಧಿ ಬಿಜೆಪಿಯ ರಾಜಾ ಅಮರೇಶ್ವರ್ ನಾಯಕ್ ಪ್ರಬಲನಾಗಿ ಕಾಣುತ್ತಿಲ್ಲ. ಟಿಕೆಟ್ ಸಿಗದ ಕಾರಣಕ್ಕೆ ಬಂಡಾಯದ ಬಿಸಿ ಅಮರೇಶ್ ನಾಯಕ್‍ರನ್ನು ಸುಡುತ್ತಲೇ ಇದೆ.

ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳ ದಂಡೇ ಇತ್ತು. ಮೊದಲನೆಯದಾಗಿ ರಾಜಾ ಅಮರೇಶ್ವರ್ ನಾಯಕ್ ಟಿಕೆಟ್‍ಗಾಗಿ ಪ್ರಬಲ ಸ್ಪರ್ಧೆ ಒಡ್ಡಿದ್ದರು. ಇನ್ನು ಎರಡನೆಯ ಪೈಪೋಟಿ ನಡೆಸಿದ್ದು ಬಿಜೆಪಿಯ ಮಾಜಿ ಶಾಸಕ ತಿಪ್ಪರಾಜ ಹವಾಲ್ದಾರ. ಈತ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಯಚೂರು ಗ್ರಾಮಾಂತರ ಕ್ಷೇತ್ರದಿಂದ ನಿಂತು ಸೋತಿದ್ದ. ಆಗಿನಿಂದ ಎಂಪಿ ಟಿಕೆಟ್ ಮೇಲೆ ಕಣ್ಣಿಟ್ಟು ಕೆಲಸ ಮಾಡಿದ್ದ. ಇದು ಈತನ ಗುರು ಹಾಲಿ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಕಿವಿಗೆ ಬಿದ್ದಿದೆ ತಡ ತನಗೂ ಟಿಕೆಟ್ ಬೇಕೆಂದು ಹಠ ಹಿಡಿದು ಕೂತಿದ್ದ. ಈತನಿಗೆ ತಾನು ಎಂಪಿ ಆಗುವುದಕ್ಕಿಂತ ತಾನು ಬೆಳೆಸಿದ, ತನ್ನ ಶಿಷ್ಯ ತಿಪ್ಪರಾಜು ಎಂಪಿ ಆಗದಂತೆ ತಡೆಯುವುದು ಮುಖ್ಯವಾಗಿತ್ತು. ಅದಕ್ಕಾಗಿ ತನಗೂ ಕೊಡಿ ಎಂಬ ದಾಳ ಉರುಳಿಸಿದ್ದ. ಕೊನೆಗೆ ಬಿಜೆಪಿ ಅಳೆದು ತೂಗಿ ರಾಜಾ ಅಮರೇಶ್ ನಾಯಕ್‍ಗೆ ಟಿಕೆಟ್ ನೀಡಿದೆ.

ಅಲ್ಲಿಗೆ ಶಿವನಗೌಡನಾಯಕ್ ತನ್ನ ಉದ್ದೇಶ ಫಲಿಸಿದ್ದಕ್ಕೆ ತಣ್ಣಗಾದರೆ, ಟಿಕೆಟ್ ತಪ್ಪಿದ್ದಕ್ಕೆ ತಿಪ್ಪರಾಜು ಕುದಿಯಲಾರಂಭಿಸಿದ್ದಾನೆ. ಟಿಕೆಟ್ ಗಾಗಿ ಯಡಿಯೂರಪ್ಪನಿಗೆ ದುಂಬಾಲು ಬಿದ್ದಿದ್ದ ಈತ, ಈಗ ಇದು ಯಡ್ಯೂರಪ್ಪನವರಿಗೆ ಮಾಡುತ್ತಿರುವ ಅವಮಾನ ಎಂದು ಬಹಿರಂಗವಾಗಿ ತನ್ನ ಅಸಮಾಧಾನ ಹೊರಹಾಕಿದ್ದಾನೆ. ಈ ಬಂಡಾಯದ ಬಿಸಿ ಬಿಜೆಪಿಗೆ ದೊಡ್ಡ ತಲೆನೋವಾಗಿದೆ. ಆದರೆ ಅತ್ತ ಕಾಂಗ್ರೆಸ್ ಜೆಡಿಎಸ್‍ನಲ್ಲಿ ಯಾವುದೇ ಬಂಡಾಯವಿಲ್ಲದೆ ಅನಾಯಾಸವಾಗಿ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಉತ್ಸುಕರಾಗಿದ್ದಾರೆ.

ಕಾಂಗ್ರೆಸ್‍ನ ಭದ್ರ ಕೋಟೆಯಾಗಿರುವ ಇಲ್ಲಿ  ಜಾರಕಿಹೊಳಿ ಬ್ರದರ್ಸ್ ಪ್ರಭಾವ ದಡ್ಡವಾಗಿ ಹರಡಿದೆ. ಅವರ ಸಂಬಂಧಿಗಳು ರಾಜಕೀಯದ ಆಯಕಟ್ಟಿನ ಸ್ಥಾನದಲ್ಲಿ ಕೂತಿದ್ದಾರೆ. ಬಿ.ವಿ ನಾಯಕ್ ಕೂಡ ಜಾರಕಿಹೊಳಿ ಸಹೋದರರಿಗೆ ಸಂಬಂಧಿಯಾದ ಕಾರಣ ಎಲ್ಲರೂ ಅವರ ಪರ ಒಗ್ಗಟ್ಟಾಗಿ ನಿಂತಿದ್ದಾರೆ. ಇನ್ನು ಬಿಜೆಪಿ ಪಾಳಯದಲ್ಲಿ ಅಂತಹ ಒಗ್ಗಟ್ಟು ಕಂಡುಬರುತ್ತಿಲ್ಲ. ಬಂಡಾಯದ ಕಾರಣಕ್ಕಾಗಿ ಕೊನೆಗಳಿಗೆಯಲ್ಲಿ ಟಿಕೆಟ್ ನೀಡಲಾಗಿದೆ. ಕಳೆದ ಚುನಾವಣೆಯಲ್ಲಿಯೂ ಸಹ ಕೊನೆ ಗಳಿಗೆಯಲ್ಲಿ ಟಿಕೆಟ್ ನೀಡಿದ್ದೇ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿತ್ತು. ಈ ಬಾರಿಯ ಬಂಡಾಯದ ಬಿಸಿಯಿಂದ ತಪ್ಪಿಸಿಕೊಳ್ಳಲು ಕೊನೆ ಗಳಿಗೆಯಲ್ಲಿ ಟಿಕೆಟ್ ನೀಡಿ ಮೋದಿ ಮುಖ ಇಟ್ಟುಕೊಂಡು ವೋಟು ಕೇಳಿ ಎಂದು ಹಿರಿಯಲು ಸಲಹೆ ನೀಡುತ್ತಿದ್ದಾರೆ.

ಅಷ್ಟೆಲ್ಲಾ ಮೋದಿ ಅಲೆ ಇದ್ದ 2014ರಲ್ಲಿಯೇ ಗೆಲ್ಲಲಾಗದ ಬಿಜೆಪಿ ಈ ಬಾರಿ ಇಷ್ಟೆಲ್ಲಾ ಗೊಂದಲಗಳ ನಡುವೆ ಗೆಲ್ಲುವುದು ಕಷ್ಟ. ಇದೆಲ್ಲದರ ಅನುಕೂಲ, ಹೆಚ್ಚಿನ ಸಂಖ್ಯೆಯ ಶಾಸಕರು, ಜೆಡಿಎಸ್‍ನ ಬೆಂಬಲ, ಸಂಬಂಧಿಗಳ ನೆರವು ಎಲ್ಲವೂಗಳಿಂದ ಬಿ.ವಿ ನಾಯಕ್ ಮರು ಆಯ್ಕೆಯಾಗುವ ಸೂಚನೆಗಳಿವೆ. ತನ್ನ ಭದ್ರಕೋಟೆಯನ್ನು ಕಾಂಗ್ರೆಸ್ ಮತ್ತಷ್ಟು ಭದ್ರ ಮಾಡಿಕೊಳ್ಳಲು ಎಲ್ಲಾ ಅವಕಾಶಗಳಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...