ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಮೋದಿನಗರದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪೈಕಿ ಓರ್ವ ಬಾಲಕಿಯನ್ನು ಕೊಲೆ ಮಾಡಲಾಗಿದ್ದು, ಮತ್ತೊಬ್ಬ ಬಾಳಕಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಆರೋಪಿಯನ್ನು ಮೋದಿನಗರ ಪೊಲೀಸರು ಬಂಧಿಸಿದ್ದು, ಹಲವೆಡೆ ಶೋಧ ಕಾರ್ಯ ಮುಂದುವರಿದಿದೆ. ಪೊಲೀಸರು ರಕ್ಷಿಸಿದ ಮಗು 6 ವರ್ಷದವರಾಗಿದ್ದಾರೆ. ಮೃತಪಟ್ಟ ಮಗು 9 ವರ್ಷದವರಾಗಿದ್ದು, ಶವ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ.
ಘಟನೆಯ ಬಗ್ಗೆ ಗ್ರಾಮಾಂತರ ಎಸ್ಪಿ ಇರಾಜ್ ರಝಾ ಮಾತನಾಡಿ, “ಗ್ರಾಮದ ಯುವಕನೊಬ್ಬ ಇಬ್ಬರು ಬಾಲಕಿಯರನ್ನು ಸೈಕಲ್‌ನಲ್ಲಿ ಕರೆದುಕೊಂಡು ಹೋಗಿದ್ದ. ಮಾಹಿತಿ ಸಿಕ್ಕ ತಕ್ಷಣ ತಂಡಗಳನ್ನು ರಚಿಸಿದೆವು. ನಾಲ್ಕು ಪೊಲೀಸ್ ಠಾಣೆಗಳ ಪೊಲೀಸ್ ಪಡೆಗಳನ್ನು ಕಳುಹಿಸಲಾಗಿತ್ತು. ತಂಡಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಭಾಗಿಯಾಗಿದ್ದರು” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಗ್ರಾಮಸ್ಥರ ನೆರವಿನಿಂದ ನಿನ್ನೆ ಒಂದು ಹೆಣ್ಣು ಮಗು ಪತ್ತೆಯಾಗಿದೆ. ಎರಡನೇ ಮಗುವಿನ ಪತ್ತೆಗೆ ಪ್ರಯತ್ನ ನಡೆಸಲಾಗಿತ್ತು. ಆದರೆ ಇಂದು ಬಾಲಕಿ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: 250 ರೂ. ಶಾಲಾ ಶುಲ್ಕ ಕಟ್ಟಿಲ್ಲವೆಂದು 3ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ
“ಈ ಸಂಬಂಧ ಕಾನೂನು ಕ್ರಮ ಜರುಗಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ಕೂಡ ನಡೆಸಲಾಗುತ್ತಿದೆ. ನಾವು ಮುಂದಿನ ತನಿಖೆಯನ್ನು ಮುಂದುವರಿಸುತ್ತಿದ್ದೇವೆ” ಎಂದು ಇರಾಜ್ ರಝಾ ಹೇಳಿದ್ದಾರೆ.
Police have sent the body for post-mortem & the kidnapper, a resident of the village, has also been arrested by the police. One child is 6 years old who was recovered by police, while other is 9 years old whose body was recovered by the police this morning: Iraj Raza, SP Rural
— ANI UP/Uttarakhand (@ANINewsUP) August 19, 2022
ಆರೋಪಿ ಮದ್ಯವ್ಯಸನಿಯಾಗಿದ್ದ
ಅತ್ಯಾಚಾರದ ಬಳಿಕ ಬಾಲಕಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಟೈಮ್ಸ್ ನೌ ವರದಿ ಹೇಳಿದೆ. ಘಟನೆಯಿಂದ ಜನರು ಉದ್ರಿಕ್ತರಾಗಿದ್ದು ಈ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ರಾಜಸ್ಥಾನ: ದಲಿತ ಬಾಲಕನನ್ನು ಥಳಿಸಿ ಕೊಂದ ಶಿಕ್ಷಕನ ಪರ ಪ್ರತಿಭಟನೆಯಲ್ಲಿ ಚಪ್ಪಾಳೆ ತಟ್ಟಿದ ಜಲೋರ್ ಜಿಲ್ಲಾಧಿಕಾರಿ, ಎಸ್‌ಪಿ?
“ಆರೋಪಿ ಮದ್ಯ ವ್ಯಸನಿಯಾಗಿದ್ದು, ಅಂದು ಕುಡಿದಿದ್ದ. ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ದುಷ್ಕರ್ಮಿ ಯಾವುದೆ ಕೆಲಸವನ್ನು ಮಾಡುತ್ತಿರಲಿಲ್ಲ. ಬಾಲಕಿಯರಿಬ್ಬರಿಗೂ ಆರೋಪಿಯ ಪರಿಚಯ ಇದ್ದುದರಿಂದ ಅವರ ಜೊತೆ ಸೈಕಲ್‌ನಲ್ಲಿ ತೆರಳಿದ್ದರು” ಎಂದು ಮೃತ ಬಾಲಕಿಯ ಅಜ್ಜಿ ಹೇಳಿದ್ದಾರೆ ಎಂದು ಟೈಮ್ಸ್ ನೌ ವರದಿ ತಿಳಿಸಿದೆ.


