Homeದಲಿತ್ ಫೈಲ್ಸ್ಉತ್ತರ ಪ್ರದೇಶ: 250 ರೂ. ಶಾಲಾ ಶುಲ್ಕ ಕಟ್ಟಿಲ್ಲವೆಂದು 3ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು ಹೊಡೆದು...

ಉತ್ತರ ಪ್ರದೇಶ: 250 ರೂ. ಶಾಲಾ ಶುಲ್ಕ ಕಟ್ಟಿಲ್ಲವೆಂದು 3ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ

- Advertisement -
- Advertisement -

ರಾಜಸ್ಥಾನದ ಜಾಲೋರ್‌ ಮಾದರಿಯ ಮತ್ತೊಂದು ಭಯಾನಕ ಘಟನೆ ಉತ್ತರ ಪ್ರದೇಶದ ಶ್ರಾವಸ್ತಿಯಲ್ಲಿ ನಡೆದಿದೆ. ಮೂರನೇ ತರಗತಿಯಲ್ಲಿ ಓದುತ್ತಿದ್ದ ದಲಿತ ವಿದ್ಯಾರ್ಥಿಯನ್ನು 250 ರೂ. ಶುಲ್ಕವನ್ನು ಪಾವತಿಸದ ಕಾರಣಕ್ಕೆ ಬ್ರಾಹ್ಮಣ ಸಮುದಾಯದ ಶಿಕ್ಷಕ ಅನುಪಮ್ ಪಾಠಕ್ ನಿರ್ದಯವಾಗಿ ಥಳಿಸಿದ್ದಾನೆ. ಪರಿಣಾಮವಾಗಿ 8 ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಶ್ರಾವಸ್ತಿ ಜಿಲ್ಲೆಯ ಸಿರ್ಸಿಯಾದಲ್ಲಿರುವ ಚಲಾಹಿಯ ಪಂಡಿತ್ ಬ್ರಹ್ಮದತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಘಟನೆ ನಡೆದಿದೆ. ಆ.8ರಂದು ಶಾಲೆಗೆ ಹೋಗಿದ್ದ ವಿದ್ಯಾರ್ಥಿಗೆ ಶುಲ್ಕ ಪಾವತಿಸದ ಕಾರಣಕ್ಕೆ ಶಾಲಾ ಶಿಕ್ಷಕ ಅಮಾನುಷವಾಗಿ ಥಳಿಸಿದ್ದಾರೆ ಎಂದು ವಿದ್ಯಾರ್ಥಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಥಳಿಸಿದ ನಂತರ, ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದ್ದು, ನಂತರ ಅವರನ್ನು ಚಿಕಿತ್ಸೆಗಾಗಿ ಬಹ್ರೈಚ್‌ಗೆ ಕರೆದೊಯ್ಯಲಾಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕುಟುಂಬದವರ ಪ್ರಕಾರ, ವಿದ್ಯಾರ್ಥಿಯು ಆಗಸ್ಟ್ 17 ರ ಬುಧವಾರ ತಡರಾತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಘಟನೆಯ ಸಂದರ್ಭದಲ್ಲಿ ಉಂಟಾದ ತೀವ್ರ ಆಂತರಿಕ ರಕ್ತಸ್ರಾವದಿಂದಾಗಿ ಮಗು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಮಹಿಳೆಯ ಮೇಲೆ ಕೈ ಮಾಡಿ, ಅಶ್ಲೀಲ ಪದಗಳಲ್ಲಿ ನಿಂದಿಸಿದ ಬಿಜೆಪಿ ಮುಖಂಡ

ಸಂತ್ರಸ್ತ ಬಾಲಕನ ಸಹೋದರ ರಾಜೇಶ್ ವಿಶ್ವಕರ್ಮ ಸುದ್ದಿಗಾರರೊಂದಿಗೆ ಮಾತನಾಡಿ, “ತಿಂಗಳ ಶಾಲಾ ಶುಲ್ಕ 250 ರೂ.ಗಾಗಿ ನನ್ನ ಸಹೋದರನನ್ನು ಆತನ ಶಿಕ್ಷಕರು ಥಳಿಸಿದ್ದಾರೆ. ನಾನು ಅದನ್ನು ಆನ್‌ಲೈನ್‌ನಲ್ಲಿ ಪಾವತಿಸಿದ್ದೇನೆ ಆದರೆ ಶಿಕ್ಷಕರು ನನ್ನ ಸಹೋದರನನ್ನು ಅಮಾನುಷವಾಗಿ ಥಳಿಸಿದ್ದಾರೆ” ಎಂದು ಕಣ್ಣೀರಿಟ್ಟಿದ್ದಾರೆ.

ಇದೀಗ ಮೃತ ಬಾಲಕನ ಚಿಕ್ಕಪ್ಪ ಸಿರ್ಸಿಯಾ ಪೊಲೀಸರಿಗೆ ದೂರು ನೀಡಿದ್ದಾರೆ. ಶಿಕ್ಷಕ ಮೇಲ್ಜಾತಿಗೆ ಸೇರಿದವನಾಗಿದ್ದು ದಲಿತ ಎಂಬ ಕಾರಣಕ್ಕೆ ಸಂತ್ರಸ್ತ ಬಾಲಕನನ್ನು ಥಳಿಸಲಾಗಿದೆ ಎಂದು ಬಾಲಕನ ಕುಟುಂಬ ಆರೋಪಿಸಿದೆ ಎಂದು ನ್ಯಾಶನಲ್ ಹೆರಾಲ್ಡ್‌‌ ಪತ್ರಿಕೆ ವರದಿ ಮಾಡಿದೆ.

ವಿದ್ಯಾರ್ಥಿಯ ಸಾವಿನ ನಂತರ, ಉದ್ರಿಕ್ತ ಕುಟುಂಬ ಸದಸ್ಯರು ಸೇರಿದಂತೆ ಸ್ಥಳೀಯ ಜನರು ಭಿಂಗಾ ಸಿರ್ಸಿಯಾ ಮಾರ್ಗದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಭರವಸೆ ನೀಡಿ ಪ್ರತಿಭಟನಾಕಾರರನ್ನು ಶಾಂತಗೊಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ವಿದ್ಯಾರ್ಥಿಯನ್ನು 18 ಗಂಟೆಗಳ ಕಾಲ ಶೌಚಾಲಯದಲ್ಲಿ ಕೂಡಿಹಾಕಿದ ಶಿಕ್ಷಕ

ಮೃತ ವಿದ್ಯಾರ್ಥಿಯ ಚಿಕ್ಕಪ್ಪನ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಶ್ರಾವಸ್ತಿ ಎಸ್ಪಿ ಅರವಿಂದ್ ಕೆ.ಮೌರ್ಯ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...