ಉತ್ತರ ಪ್ರದೇಶದ ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿ ಎಂಬುವವರು ನೋಯ್ಡಾದ ಗ್ರ್ಯಾಂಡ್ ಒಮ್ಯಾಕ್ಸ್ ಸೊಸೈಟಿ ಸೆಕ್ಟರ್ 93B ಅಪಾರ್ಟ್‌ಮೆಂಟ್‌ನ ಮಹಿಳಾ ನಿವಾಸಿಯೊಬ್ಬರನ್ನು ಅಶ್ಲೀಲ ಪದಗಳಿಂದ ನಿಂದಿಸಿ, ಕೈ ಮಾಡಿರುವ ಘಟನೆ ವರದಿಯಾಗಿದೆ.
ಅಪಾರ್ಟ್‌ಮೆಂಟ್‌ನ ಕಾಮನ್ ಏರಿಯಾ ಜಾಗವನ್ನು ಶ್ರಿಕಾಂತ್ ತ್ಯಾಗಿ ಅತಿಕ್ರಮಣ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. ಈ ಕುರಿತು ಅಪಾರ್ಟ್‌ಮೆಂಟ್ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಶ್ರೀಕಾಂತ್ ತ್ಯಾಗಿ ಬಳಿ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೆಟ್ಟ ಕೊಳಕು ಭಾಷೆಯಿಂದ ನಿಂದಿಸಿರುವ ಆತ ಮಹಿಳೆಯನ್ನು ತಳ್ಳಿ ಹಲ್ಲೆಗೆ ಮುಂದಾಗಿದ್ದಾರೆ.
Longer version of the video where BJP leader Shrikant Tyagi is seen abusing a woman.
Warning : **Abusive language** pic.twitter.com/1ahGdEjIUq— Mohammed Zubair (@zoo_bear) August 5, 2022
ನಿನ್ನ ಪತಿಗೆ ಹೇಳು ಈ ಜಾಗದಲ್ಲಿ ಏನು ಮಾಡಬಾರದು ಎಂದು ಶ್ರೀಕಾಂತ್ ತ್ಯಾಗಿ ಕೆಟ್ಟದಾಗಿ ಬೈಯ್ದು ಹೇಳುತ್ತಾರೆ. ಆಗ ಈ ಜಾಗ ಯಾರದು ಎಂದು ಮಹಿಳೆ ಪ್ರಶ್ನಿಸುತ್ತಾರೆ. ನಾನು ಖರೀದಿಸಿದ್ದೇನೆ ಎಂದು ತ್ಯಾಗಿ ಹೇಳುತ್ತಾರೆ. ಆಗ ಅದಕ್ಕೆ ದಾಖಲೆ ತೋರಿಸಿ ಎಂದು ಮಹಿಳೆ ಕೇಳಿದಾಗ ಸಿಟ್ಟಿಗೆದ್ದ ಆತ ತಳ್ಳಿ ಕೆಟ್ಟ ಭಾಷೆಯಲ್ಲಿ ನಿಂದಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
Abusive content
The extended version of the verbal spat. pic.twitter.com/dQOh6LwtB0
— Arvind Chauhan (Silly Soul | मूर्ख आत्मा) (@Arv_Ind_Chauhan) August 5, 2022
ಸದ್ಯ ಆ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಬಿಜೆಪಿ ಮುಖಂಡರು ಮಹಿಳೆಯರನ್ನು ನಡೆಸಿಕೊಳ್ಳುವ ಪರಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಹಿಳೆಯನ್ನು ನಿಂದಿಸಿದ, ಹಲ್ಲೆಗೆ ಮುಂದಾದ ಶ್ರೀಕಾಂತ್ ತ್ಯಾಗಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಶ್ರೀಕಾಂತ್ ತ್ಯಾಗಿ ಅಕ್ರಮ ಕಟ್ಟಡ ಕಟ್ಟುತ್ತಿರುವುದು ಕಳೆದ ಎರಡು ವರ್ಷಗಳಿಂದ ಅಲ್ಲಿ ವಿವಾದವಾಗಿ ಮಾರ್ಪಟ್ಟಿದೆ. ಈ ಹಿಂದೆಯೂ ನೋಯ್ಡಾ ಆಡಳಿತವು ಆತನಿಗೆ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ನೋಟಿಸ್ ಜಾರಿಗೊಳಿಸಿತ್ತು. ಆದರೆ ಆತ ಅದನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಅದನ್ನು ಪ್ರಶ್ನಿಸಿ ಮಹಿಳಾ ನಿವಾಸಿಯ ಮೇಲೆ ಕೈಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಶ್ರೀಕಾಂತ್ ತ್ಯಾಗಿ ಎಂಬುವವರು ಶಾಸಕನಲ್ಲದಿದ್ದರೂ ತನ್ನ ಕಾರಿಗೆ MLA ಎಂಬ ಸ್ಟಿಕ್ಕರ್ ಅಂಟಿಸಿಕೊಂಡು ವಸೂಲಿಗಿಳಿದಿದ್ದಾರೆ ಎಂದು ಹಲವು ಟ್ವಿಟರ್ ಬಳಕೆದಾರರು ಆರೋಪಿಸಿದ್ದಾರೆ.
ಇದನ್ನೂ ಓದಿ; ಬೆಂಗಳೂರಿನಲ್ಲಿ ಭೀಕರ ಘಟನೆ: ತನ್ನ ಮಗಳನ್ನು ನಾಲ್ಕನೇ ಅಂತಸ್ತಿನಿಂದ ಎಸೆದು ಕೊಂದ ವೈದ್ಯೆಯ ಬಂಧನ
Yogiraj goondarak