ಉತ್ತರಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ದುರ್ಗಾ ಮೂರ್ತಿ ನಿಮಜ್ಜನ ಮೆರವಣಿಗೆ ವೇಳೆ ಎರಡು ಸಮುದಾಯಗಳಿಗೆ ಸೇರಿದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.
ಪರಿಸ್ಥಿತಿಯನ್ನು ತಕ್ಷಣ ನಿಯಂತ್ರಿಸಲಾಗಿದೆ. ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಮೆರವಣಿಗೆ ಮುಂದುವರಿದಿದ್ದು, ಮೂರ್ತಿಯನ್ನು ನಿಮಜ್ಜನ ಮಾಡಲಾಗಿದೆ.
ದುರ್ಗಾ ಮೂರ್ತಿ ನಿಮಜ್ಜನ ಮೆರವಣಿಗೆಯು ಶ್ರೀನಗರ ಪ್ರದೇಶದಲ್ಲಿ ಸಾಗುತ್ತಿದ್ದಾಗ ಜನರು ಪರಸ್ಪರ ಬಣ್ಣ ಎರಚಿಕೊಳ್ಳುತ್ತಿದ್ದರು. ಬೇರೆ ಸಮುದಾಯದ ವ್ಯಕ್ತಿಯೊಬ್ಬರು ಮೆರವಣಿಗೆಯನ್ನು ವೀಕ್ಷಿಸುತ್ತಿದ್ದಾಗ ಅವರ ಮೇಲೆ ಬಣ್ಣದ ಪುಡಿ ಎರಚಲಾಗಿದೆ. ಬಳಿಕ ಮಾರಾಮಾರಿ ನಡೆದಿದೆ ಎಂದು ಮಹೋಬಾ ಪೊಲೀಸ್ ವರಿಷ್ಠಾಧಿಕಾರಿ ಅಪರ್ಣಾ ಗುಪ್ತಾ ಹೇಳಿದ್ದಾರೆ.
ಇಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಇಲ್ಲ. ಶಾಂತಿ ಸುವ್ಯವಸ್ಥೆ ಕಾಪಾಡಲಾಗಿದೆ. ಘಟನೆ ಬಳಿಕ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ವಿರುದ್ಧ ದೂರು ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮಜ್ಜನಕ್ಕೆ ತೆರಳುತ್ತಿದ್ದವರ ಗುಂಪಿನಲ್ಲಿದ್ದ ಬಾಲಕಿಯೊಬ್ಬಳು ಬೇರೊಂದು ಸಮುದಾಯಕ್ಕೆ ಸೇರಿದ ವ್ಯಕ್ತಿಯ ಮೇಲೆ ಬಣ್ಣ ಎಸೆದಿದ್ದಾರೆ. ಈ ವೇಳೆ ಕೋಪಗೊಂಡ ವ್ಯಕ್ತಿ ಇತರರೊಂದಿಗೆ ಸೇರಿ ಬಾಲಕಿಗೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
Tension prevailed in Srinagar police station area of #UttarPradesh's #Mahoba district when two communities clashed over playing of colours during Durga idol immersion procession on Tuesday. However, police deployed near the spot immediately acted by detaining three from the spot. pic.twitter.com/jl9v22Z70o
— TOI Cities (@TOICitiesNews) October 24, 2023
ಇದನ್ನು ಓದಿ; ಖ್ಯಾತ ಮಲಯಾಳಂ ನಟ ವಿನಾಯಕನ್ ಬಂಧನ


