Homeಮುಖಪುಟಮಾಜಿ ಗೃಹ ಸಚಿವ, ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ನಿವೃತ್ತಿ ಘೋಷಣೆ

ಮಾಜಿ ಗೃಹ ಸಚಿವ, ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ನಿವೃತ್ತಿ ಘೋಷಣೆ

- Advertisement -
- Advertisement -

ಕೇಂದ್ರದ ಮಾಜಿ ಗೃಹ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, 2024ರ ಸಾರ್ವತ್ರಿಕ ಚುನಾವಣೆಗೆ ಮೊದಲೇ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.

70ರ ದಶಕದ ಆರಂಭದಲ್ಲಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದ ಸುಶೀಲ್ ಕುಮಾರ್ ಶಿಂಧೆಗೆ ಇದೀಗ 83 ವರ್ಷ ವಯಸ್ಸಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ ಪ್ರಣಿತಿ ಶಿಂಧೆ ಸೊಲ್ಲಾಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

42 ವರ್ಷ ವಯಸ್ಸಿನ ಪ್ರಣಿತಿ ಶಿಂಧೆ ಅವರು ಸತತ ಮೂರು ಅವಧಿಗೆ ಸೋಲಾಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಸುಶೀಲ್ ಕುಮಾರ್ ಶಿಂಧೆ ಬಳಿಕ ಪುತ್ರಿ ಪ್ರಣಿತಿ ಶಿಂಧೆ ರಾಷ್ಟ್ರ ರಾಜಕಾರಣಕ್ಕೆ ತೆರಳುವ ಉದ್ದೇಶದಿಂದ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.

2014ರ ಚುನಾವಣೆಯ ನಂತರ ತನ್ನ ಮಗಳಿಗೆ ಕ್ಷೇತ್ರವನ್ನು ಬಿಟ್ಟುಕೊಡುವ ಇಂಗಿತವನ್ನು ಶಿಂಧೆ  ವ್ಯಕ್ತಪಡಿಸಿದ್ದರು. ಇದು ಅವರ ಅಂತಿಮ ಸ್ಪರ್ಧೆ ಎಂದು ಘೋಷಿಸಿದ್ದರು. ಚುನಾವಣಾ ಹಿನ್ನಡೆಯ ನಡುವೆಯೂ ಅವರು ತಮ್ಮ ರಾಜಕೀಯ ಪ್ರಯಾಣವನ್ನು ಮುಂದುವರೆಸಿದ್ದರು. 2014 ಮತ್ತು 2019ರಲ್ಲಿ  ಸೋಲಾಪುರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದರು.

ಶಿಂಧೆ ಅವರು ಸೋಲಾಪುರ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರು 2002ರಲ್ಲಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.  ಜನವರಿ 2003ರಿಂದ ನವೆಂಬರ್ 2004ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಬಳಿಕ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಿಸಲಾಗಿತ್ತು.

ಮನಮೋಹನ್ ಸಿಂಗ್ ಸರ್ಕಾರದಲ್ಲಿ ದೇಶದ ವಿದ್ಯುತ್ ಇಲಾಖೆಯ ಸಚಿವ ಸ್ಥಾನವನ್ನು ಮತ್ತು 2012ರಲ್ಲಿ ಗೃಹ ಸಚಿವರಾಗಿ ನೇಮಕಗೊಂಡಿದ್ದರು.

ಇದನ್ನು ಓದಿ: ಮಣಿಪುರ ಜನಾಂಗೀಯ ಕಲಹಕ್ಕೆ ಪ್ರಚೋದಿಸಿದ್ದು ಸಿಎಂ ಬಿರೇನ್ ಸಿಂಗ್: ಗಂಭೀರ ಆರೋಪ ಮಾಡಿದ ಬುಡಕಟ್ಟು ಸಂಸ್ಥೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read