ಉತ್ತರ ಕನ್ನಡ ಜಿಲ್ಲೆಯ ಜೊಯೊಡಾ ತಾಲೂಕಿನ ಸೂಪಾ ಅಣೆಕಟ್ಟೆಯ ಬಳಿ ಸೆಲ್ಫಿ ತೆಗೆಯಲು ಹೋಗಿ ಆಯತಪ್ಪಿ ಡ್ಯಾಂಗೆ ಬಿದ್ದಿದ್ದ ಪ್ರೇಮಿಗಳ ಮೃತದೇಹಗಳು ಪತ್ತೆಯಾಗಿದೆ. ಮೃತರನ್ನು ಬೀದರ್‌ನ ರಕ್ಷಿತಾ ಚಿದ್ರಿ ಮತ್ತು ಪುರುಷೋತ್ತಮ್ ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತು ಜೊಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀದರ್ ಮೂಲದ ಇಬ್ಬರು ಪ್ರವಾಸಕ್ಕೆ ಬಂದಿದ್ದು, ಏಪ್ರಿಲ್ 12 ರ ಶೂಕ್ರವಾರ ಸೂಪಾ ಡ್ಯಾಂ ಬಳಿ ಸೆಲ್ಫಿ ತೆಗೆಸಿಕೊಳ್ಳುವಾಗ ಆಯತಪ್ಪಿ ಕಾಳಿ ನದಿಗೆ ಬಿದ್ದಿದ್ದರು. ನಿನ್ನೆಯಿಂದಲೇ ಇಬ್ಬರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿತ್ತು. ಇಂದು ಪ್ರೇಮಿಗಳ ಮೃತದೇಹಗಳು ಪತ್ತೆಯಾಗಿದೆ.
ಮೃತ ಯುವತಿ ರಕ್ಷಿತಾ ಕಲಬುರಗಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದರು. ಪುರುಷೋತ್ತಮ್ ಬೀದರ್‌ನ ಕರ್ನಾಟಕ ಕಾಲೇಜಿನಲ್ಲಿ ಪದವಿ ಓದುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಜಪಾನ್ ಪರಮಾಣು ಸ್ಥಾವರದ ನೀರು ಸಮುದ್ರಕ್ಕೆ: ಭಾರತದ ಮೇಲೆ ಯಾವ ಪರಿಣಾಮ ಬೀರಲಿದೆ?
ಇಬ್ಬರು ಜೊಯಿಡಾ ತಾಲೂಕಿನ ಗಣೇಶಗುಡಿಗೆ ಪ್ರವಾಸಕ್ಕೆ ಎಂದು ಆಗಮಿಸಿದ್ದರು. ಸೋಮವಾರ ಸೂಪಾ ಡ್ಯಾಂ ಬಳಿಯಿರುವ ಕಾಳಿ ಸೇತುವೆಯಲ್ಲಿ ನಿಂತು ಸೆಲ್ಫಿ ತೆಗೆಯುತ್ತಿದ್ದ ವೇಳೆ ಕಾಲುಜಾರಿ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ನಿನ್ನೆಯಿಂದ ಹುಡುಕಾಡುತ್ತಿದ್ದರು. ಮುಳುಗು ತಜ್ಞರು, ಟ್ಯೂಬ್ ಬೋಟ್ ಹಾಗೂ ಕಯಾಕ್ ಮೂಲಕ ಹುಡುಕಾಟ ನಡೆಸಿದ್ದರು. ಇಂದು ಪ್ರೇಮಿಗಳ ಮೃತದೇಹಗಳು ಪತ್ತೆಯಾಗಿದೆ. ಸೂಪಾ ಅಣೆಕಟ್ಟನ್ನು ಕಾಳಿ ನದಿಗೆ ಕಟ್ಟಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಅತಿದೊಡ್ಡ ಅಣೆಕಟ್ಟು ಎಂಬ ಖ್ಯಾತಿ ಗಳಿಸಿದೆ.
ಇದನ್ನೂ ಓದಿ: ಸಾರಿಗೆ ನೌಕರರನ್ನು ವಾರೆಂಟ್ ಇಲ್ಲದೆ ಬಂಧಿಸಿ ‘ಪೊಲೀಸ್ ರಾಜ್ಯ’ ಮಾಡುತ್ತಿದ್ದಾರೆಯೆ: ಸಿದ್ದರಾಮಯ್ಯ