Homeರಾಜಕೀಯ`ನೋಡ್ರಿ ನಂಗೆ ಮಂತ್ರಿ ಸ್ಥಾನುದ ಮ್ಯಾಲೆ ಯಾವ್ ಸೀಮೆ ಮಮುಕಾರುವೂ ಇಲ್ಲ.

`ನೋಡ್ರಿ ನಂಗೆ ಮಂತ್ರಿ ಸ್ಥಾನುದ ಮ್ಯಾಲೆ ಯಾವ್ ಸೀಮೆ ಮಮುಕಾರುವೂ ಇಲ್ಲ.

- Advertisement -
- Advertisement -

`ನಾನು ಎಜ್ಜಾಟ್ಲಿ ಇಸಕಂಠ ಪರಂಪರೆಯವ್ನು. ಮಾಧ್ಯಮುದವ್ರು ನನ್ನನ್ನು ಉಗುದು ಉಪ್ಪಿನ್ಕಾಯಿ ಹಾಕಿದ್ರು ಐ ಡೋಂಟ್ ಕೇರ್. ಅವ್ರಿಗೆ ಹ್ಯೆದ್ರಿಕ್ಯೆಂಡು ನಾನಾಡೊ ಮಾತು ನಿಲ್ಸೋಕೆ ನಾನೇನು ರಣಹ್ಯೇಡಿ ಅಪ್ಪ ಅಮ್ಮುಗೆ ಹುಟ್ಟಿದೋನಲ್ಲ. ಬೈ-ದು-ಬೈ ಮುಠ್ಠಾಳತನುವ ಬಂಡ್ವಾಳ ಮಾಡ್ಕ್ಯಂಡಿರೋ ಈ ಬುದ್ದಿಜ್ಯೀವಿಗಳು ನಂ ಹಿಂದೂತ್ವಕ್ಕೆ ಮಸಿ ಬಳೀತಾ ಕುಂತವ್ರೆ ಕಣ್ರಿ. ಅವ್ರಿಗೆ ಕಡಿವಾಣ ಹಾಕ್ಲೇಬೇಕು’

– ಅನಂತ್ ಕುಮಾರ್ ಹೆಗಡೆ, ಕಾಮನ್‍ಸೆನ್ಸ್ ಕಳ್ಕೊಂಡಿರೋ ಕೇಂದ್ರ ಮಂತ್ರಿ

* * * *

`ನೋಡ್ರಿ ನಂಗೆ ಮಂತ್ರಿ ಸ್ಥಾನುದ ಮ್ಯಾಲೆ ಯಾವ್ ಸೀಮೆ ಮಮುಕಾರುವೂ ಇಲ್ಲ. ನಂ ಜಿಲ್ಲಾ ಕಾರ್ಯಕರ್ತುರು ನನ್ನನ್ನ ಮಂತ್ರಿ ಮಾಡ್ದಿದ್ದಕ್ಕೆ ಬೆಂಗ್ಳೂರಿಗೆ ಹ್ವೋಗಿ ಪಕ್ಸುದ ಸದಸ್ಯತ್ವುಕ್ಕೆ ರಾಜೀನಾಮೆ ಬಿಸಾಕಿ ಬಂದಿದಾರೆ ಅಂತ ಪೇಪರ್ರು, ಟೀವಿಲಿ ನೋಡಿ ತಿಳ್ಕಂಡಿದಿನೆ ವರ್ತು ಹೆಚ್ಚೇನು ಗೊತ್ತಿಲ್ಲ. ನನ್ ಮ್ಯೇಲಿನ ಅಭಿಮಾನುಕ್ಕೆ ಹಂಗೆ ಮಾಡ್ಯವ್ರೆ ಆಟೆಯಾ. ಅಲ್ಲಾ ಕಣ್ರೀ ಜನಸೇವೆಗಿಂತ ಮಂತ್ರಿ ಪದುವಿ ದೊಡ್ಡದಾ. ತೆಗ್‍ತೆಗೀರಿ, ಶಾಸಕನಾಗೆ ಜನಸೇವೆ ಮಾಡ್ತೀನಿ ನೋಡ್ತಾ ಇರಿ. ಐ ಪ್ರಾಮಿಸ್ ಯೂ…’

– ಶಾಮನೂರು ಶಿವಶಂಕರಪ್ಪ, ಇಳಿವಯಸ್ಸಿನ ನವಚೈತನ್ಯದ ವೈರಾಗಿ ರಾಜಕಾರಣಿ

* * * *

`ಲುಕ್ ಮೈ ಡಿಯರ್ ಹಿಂದೂ ಭಾಯಿಜಾನ್ಸ್. ನಂ ರಾಜ್ಯುದಾಗೆ ಕ್ವೊಲೆಗುಳಾದ್ರೆ ಮೋದಿ ಮಹಾತ್ಮುರನ್ನ ಕೆಲವ್ರು ಪ್ರಸ್ನೆ ಮಾಡ್ತಾರೆ. ನಾನು ಏನ್ ಹೇಳ್ತೀನಿ ಅಂದ್ರೆ, ಗೌರಿ ಮಲ್ಡರ್‍ಗೂ ಮ್ವೋದಿಗೂ ಏನ್ ಸಮಂಧ ಉಂಟು ನೀವೇ ಹೇಳ್ರಿ. ನಂ ರಾಜ್ಯುದಲ್ಲಿ ನಾಯಿ ಸತ್ರೆ, ಆ ಮಹಾತ್ಮುರು ಯಾಕೆ ಉತ್ರ ಕೊಡ್ಬೇಕು ಅಂತೀನಿ’

-ಪ್ರಮೋದ್ ಮುತಾಲಿಕ್, ತನಿಖೆಗೆ ಬೆಚ್ಚಿ ಬಿದ್ದಿರೋ ಆರೆಸ್ಸೆಸ್‍ನ ಸಾಪ್ಟ್‍ಶತ್ರು.

* * * *

`ಹಡೆಯೋ ಶಕ್ತಿ ಇದ್ದಾಗ್ಲೆ ಲಗ್ನಾ ಮಾಡ್ಬೇಕ್ರಿ..! ಹೊತ್ತಿಗೆ ಸರ್ಯಾಗಿ ಲಗ್ನಾ ಮಾಡ್ಲಿಲ್ಲ ಅಂದ್ರೆ, ಏನೂ ಪ್ರಯೋಜುನ ಇರಲ್ಲ. ಅಟಲ್ ಬಿಯಾರಿ ವಾಜ್ಪೇಯಿ ಹತ್ತಾರು ವರ್ಸ ಮೊದ್ಲೇ ಈ ದ್ಯೇಸುಕ್ಕೆ ಪರ್ದಾನಿ ಆಗ್ಬುಟ್ಟಿದ್ದ್ರೆ, ನಂ ದ್ಯೇಸುದ ಚಿತ್ರಾನೆ ಬ್ಯಾರೆ ಆಗ್ತಿತ್ತು ಕಣ್ರೀ’

– ಶಿವಾನಂದ ಎಸ್. ಪಾಟೀಲ್, ಆರೋಗ್ಯ ಮಂತ್ರಿಯಾದ ಹಡೆಯೋ ಡಿಪಾರ್ಟ್‍ಮೆಂಟ್ ಸ್ಪೆಷಲಿಸ್ಟು

* * * *

ದೇವ್ರತ್ರ ಹ್ವೋಗೊ ವಯಸ್ಸಾಗಿರೋ ಶ್ರೀರಾಮಸೇನೆಯ ಹೆಡ್ಡಾಪೀಸು ಮುತಾಲಿಕ್ಕು ಈಗ್ಲಾದ್ರು ಸಮಾಜುಕ್ಕೆ ಉಳಿ ಹಿಂಡೋದು ಬಿಟ್ಟ್‍ಬಿಟ್ಟಿ, ಸನ್ನಡುತೆ ಹಾದೀಲಿ ಬದುಕ್ಲಿ. ದೇವ್ರತ್ರ ಹ್ವೋಗಕ್ಕೆ ಟಿಕೇಟ್ ತಕೊಂಡು ಏರ್‍ಪೋರ್ಟ್‍ನಲ್ಲಿ ಕಾಯ್ತಾ ಕೂತಿರೋ ಆಯಪ್ಪನ ಬಗ್ಗೆ ನಂಗೆ ಭಾರೀ ನೋವಿದೆ ಕಣ್ರೀ. ಫಸ್ಟು ಎಸ್ಸೈಟಿನೋರು ಆವಯ್ಯುನ ಹಿಡ್ಕಂಡು ತನುಖೆ ಮಾಡ್ಬೇಕು ನೋಡ್ರಿ’

– ಸೀಎಂ ಇಬ್ರಾಹಿಂ, ರಸವತ್ತಾಗಿ ಕನ್ನಡ
ಮಾತಾಡೋ ಖಾದಿ ಸಾಬಣ್ಣ.

* * * *

`ನಾನು ಮಂತ್ರಿಗಿರಿ ಮ್ಯಾಕೆ ಶ್ಯಾನೆ ಆಸೆ ಮಡಿಕ್ಕ್ಯಂಡಿದ್ದೆ. ಆದ್ರೆ ಕೆಲವ್ರ ಹಿಕಮತ್ತಿನಿಂದ ಕೈ ತ್ಯೆಪ್ಪಿ ಹೋಗೈತಿ. ಪರ್ವಾಗಿಲ್ಲ ಶಾಸಕಿಯಾಗೆ ಜನ್ರ ಸೇವೆ ಮಾಡ್ತೀನಿ. ಬೈ-ದು-ಬೈ ನಂ ಪಕ್ಸುದ ವರಿಸ್ಟ್ರು ಅದ್ಯಾವ ಮಾನದಂಡ ನೋಡಿ ಜೈಮಾಲಾಗೆ ಸಚಿವೆ ಮಾಡಿದ್ರೋ ನಾ ಕಾಣೆ. ಮೋಸ್ಟ್ಲೀ, ಆಯಮ್ಮನ `ಸೇವೆ’ ಕಂಡು ತಥಾಸ್ತು ಅಂದಿರ್ಬೈದು. ಅಯ್ಯೋ, ಕಂಡೋರ ಇಚಾರ ನಮಿಗ್ಯಾಕೆ ಬಿಡ್ರೀ…’

– ಲಕ್ಷ್ಮಿ ಹೆಬ್ಬಾಳ್ಕರ್, ಮಿನಿಸ್ಟ್ರು ಕುರ್ಚಿಗೆ ಹಾಕಿದ್ದ ಕರ್ಚೀಪಿನಲ್ಲೇ ಕಣ್ಣೊರೆಸಿಕೊಳ್ತಿರೋ ಡೀಕೇಶಿ ಅನುಯಾಯಿ.

* * * *

`ನೋಡಿ… ಮೂವತ್ತೆಂಟು ಸೀಟು ಗ್ಯೆದ್ದ ಪಕ್ಸುಕ್ಕೆ ಎಪ್ಪತ್ತೆಂಟು ಗ್ಯೆದ್ದ ನ್ಯಾಷುನಲ್ ಪಾರ್ಟಿ ಬೆಂಬಲ ನೀಡುತ್ತೆ ಅಂದ್ರೆ, ಅದರ ಹಿಂದೆ ದ್ಯೇವ್ರ ಅನುಗ್ರಹ ಇದೆ ಅಂತ್ಲೇ ಅರ್ತ. ಕುಮಾರಸ್ವಾಮಿಯೋರಿಗೆ ಬಹುಮತ ಸಿಕ್ಕಿಲ್ಲ ಅನ್ನೋ ನೋವು ನನಿಗೆ ಇರೋದು ನಿಜಾ… ಅಧಿಕಾರ ಕೊಟ್ರೂ ದೇವ್ರು ಅವ್ರನ್ನ ಪರೀಕ್ಸ ಮಾಡ್ತಾ ಕುಂತವ್ನೆ. ಒಂದು ವರ್ಸ ಯಾವ ಚ್ಯಿಂತೇನೂ ಇಲ್ಲ. ಆಮ್ಯಾಲೆ ಹೆಂಗೋ ಗೊತ್ತಿಲ್ಲ’

– ದೇವೇಗೌಡ್ರು, ಜನತಾದಳದ ಜಾತ್ಯತೀತ ಮುತ್ಸದ್ದಿ

* * * *

`ಈ ವಿಮರ್ಶಕರು ಏನು ಅದಾರಲ್ರೀ, ಅವುರೇ ದೊಡ್ಡ ಕ್ವೊಲೆಗಡುಕರು. ಮಹಾನ್ ಪಕ್ಷಪಾತಿಗಳು. ನನ್ನ ಹೆಸುರಲ್ಲೇ `ಗೌಡ’ ಇದೆ ಅನ್ನೋ ಕಾರುಣಕ್ಕೇ ಇವುನನ್ನು ಮಟ್ಟ ಹಾಕ್ಬೇಕು ಅನ್ನೋ ಹಂತಕ್ಕೆ ವಿಮರ್ಶೆ ಇಳುದೋಗ್ಯದೆ. ಇಂಥೋರು ಗ್ವೋಡೆ, ಕಬ್ಬುಣದ ಸರಳುಗಳ್ನ ನಿರ್ಮಿಸ್ತಾ ಕುಂತವ್ರೆ. ಥೂತ್ತೇರಿ…’

– ದೊಡ್ಡರಂಗೇಗೌಡ್ರು,
ಮೋದಿ ಸ್ತುತಿಯ ಕಂಡಕಾವ್ಯ ಬರೆದು ಪದ್ಮಶ್ರೀ
ಋಣ ತೀರಿಸಿದ ಗ್ರಾಮ್ಯ ಸೊಗಡಿನ ಸಾಹಿತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...