Homeಅಂಕಣಗಳುಪುಟಕ್ಕಿಟ್ಟ ಪುಟಗಳುಪುಟಕ್ಕಿಟ್ಟ ಪುಟಗಳು: ಲಿಯೋ ಟಾಲ್ಸ್‌ಟಾಯ್‌ರವರ ಯುದ್ಧ ಮತ್ತು ಶಾಂತಿ

ಪುಟಕ್ಕಿಟ್ಟ ಪುಟಗಳು: ಲಿಯೋ ಟಾಲ್ಸ್‌ಟಾಯ್‌ರವರ ಯುದ್ಧ ಮತ್ತು ಶಾಂತಿ

ಯುದ್ಧಾಸ್ತ್ರಗಳು ಹೇರಳವಾಗಿ ವ್ಯಾಪಾರದ ಸರಕಾದ ಮೇಲೆ, ಹೂಡಿದ ಬಂಡವಾಳಕ್ಕೆ ಲಾಭ ತರಲು ಯುದ್ಧಗಳನ್ನು ಒಲ್ಲೆ ಒಲ್ಲೆ ಎನ್ನುತ್ತಲೇ ಕಾರಣಗಳನ್ನು ಸೃಷ್ಟಿಸುತ್ತಾರೆ ಬಲಿಷ್ಟ ರಾಷ್ಟ್ರದ ಬಂಡವಾಳದ ಕೈಗಳು.

- Advertisement -
- Advertisement -

ಲಿಯೋ ಟಾಲ್ಸ್‌ಟಾಯ್ ಅವರ ಕಾದಂಬರಿ ‘ವಾರ್ ಅಂಡ್ ಪೀಸ್’ ನಾನಾ ಕಾರಣಗಳಿಂದ ಬಹು ಪ್ರಖ್ಯಾತವಾದದ್ದು. ಆದರೆ ಟಾಲ್ಸ್‌ಟಾಯ್ ಅದನ್ನು ಕಾದಂಬರಿ ಎನ್ನದೇ ‘ಹೇಳಬೇಕೆಂದರೆ ಅದೊಂದು ಕಾವ್ಯ, ಇನ್ನೂ ಹೇಳಬೇಕೆಂದರೆ ಅದು ಚರಿತ್ರೆಯ ಕಾಲಾನುಕ್ರಮಣಿಕೆ’ ಎನ್ನುತ್ತಾರೆ. ಕಾದಂಬರಿಯಲ್ಲಿ ಬಹುಪಾಲು ತಾತ್ವಿಕ ಚರ್ಚೆಗಳು ಮತ್ತು ಸಂವಾದಗಳಿದ್ದು ಕಾದಂಬರಿಯ ವ್ಯಾಪ್ತಿಗೆ ಸೇರುವಂತಹ ವಿವರ ಪ್ರವರಗಳಿಂದ ಹೊರತಾಗಿದೆ.

ಸ್ಥೂಲವಾಗಿ ‘ಯುದ್ಧ ಮತ್ತು ಶಾಂತಿ’ಯ ಭೂಮಿಕೆಯನ್ನು ಗುರುತಿಸುವುದಾದರೆ ನೆಪೋಲಿಯನ್ ರಶಿಯಾದ ಮೇಲೆ 1812ರಲ್ಲಿ ಮಾಡಿದ ದಾಳಿಯ ಕಥನವದು. ಆದರೆ ಆ ಸನ್ನಿವೇಶದಲ್ಲಿ ಜಮೀನುದಾರನೊಬ್ಬನ ಅಕ್ರಮ ಸಂತಾನದ ಫಲವಾದ ಪಿಯರೆ ಬೆಜುಕೋವ್ ತನ್ನ ಸ್ವಾಮಿತ್ವಕ್ಕಾಗಿ ಹೋರಾಡುತ್ತಾ ತನ್ನ ತಾತ್ವಿಕ ಸಾರ್ಥಕತೆಗಾಗಿ ಹೆಣಗಾಡುವ ಕಥೆ ಇದಾಗಿದೆ. ಹಾಗಂತ ಒಂದು ವ್ಯಕ್ತಿಯ ಸುತ್ತಲಿನ ಕತೆಯಲ್ಲವಿದು. ನೂರಾರು ಪಾತ್ರಗಳನ್ನು ಹೊಂದಿರುವ ಈ ಕಥನದಲ್ಲಿ ಯುದ್ಧ, ಶಾಂತಿ, ಮುದಿತನ, ಯೌವನ, ಸಾವು, ಮದುವೆ, ಭಿನ್ನಸ್ತರಗಳ ಬದುಕುಗಳನ್ನೆಲ್ಲಾ ಚರ್ಚಿಸುತ್ತಾ ಹೋಗುವುದರಿಂದ, ರಶಿಯಾದ ಸಾಮಾಜಿಕ ಪ್ರಭಾವಗಳು ವಿವಿಧ ವರ್ಗ ಮತ್ತು ಕ್ಷೇತ್ರಗಳ ವ್ಯಕ್ತಿಗಳ ಮೇಲೆ ಎಂತೆಂತಹ ಪ್ರಭಾವಗಳನ್ನು ಬೀರಿದ್ದವು ಎಂಬುದರ ಅನಾವರಣವಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ವಿಷಯಗಳನ್ನು ನಿಷ್ಟುರವಾಗಿ, ಪ್ರಾಮಾಣಿಕವಾಗಿ ಮತ್ತು ಪಕ್ಷಪಾತರಹಿತವಾಗಿ ನೋಡುವುದು.

ಈ ಕಾದಂಬರಿಯ ಸೌಂದರ್ಯವೇ ಅದು. ವಸ್ತುವಿಷಯಗಳನ್ನು ಯಥಾಸ್ಥಿತಿಯಲ್ಲಿ ಸಾಕ್ಷೀಕರಿಸುವುದು. ಆದರೆ ಯಥಾಸ್ಥಿತಿವಾದವನ್ನು ಖಂಡಿಸುವುದು. ಅಥವಾ ಪುರೋಗಾಮಿತನವನ್ನು ಬಯಸುವುದು. ರಾಜಕುಮಾರ ಆಂಡ್ರೀ ಬೊಲ್ಕೊನ್ಸ್ಕಿ ತನ್ನ ಕುಟುಂಬವನ್ನು ಬಿಟ್ಟು ನೆಪೋಲಿಯನ್ ವಿರುದ್ಧವಾಗಿ ಯುದ್ಧಕ್ಕಾಗಿ ತೆರಳುವನು. ಅವನ ಮತ್ತು ನಟಾಶ ರೊಸ್ತೋವ್, ಕುಲೀನ ಮನೆತನದ ಸುಂದರವಾದ ಹುಡುಗಿಯ ನಡುವಿನ ಪ್ರಸಂಗಗಳು, ವ್ಯಕ್ತಿಗತವಾದ ಸೆಳೆತಗಳು, ಕುಟುಂಬದ ಘನತೆ ಮತ್ತು ಸಾಂದರ್ಭಿಕ ಅನಿವಾರ್ಯತೆಗಳ ತಾಕಲಾಟಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಅವಳಿಗೆ ಪ್ರೇಮ, ಕಾಮ, ವ್ಯಾಮೋಹ ಎಲ್ಲವೂ ಒಂದೇ ಆಗಿದ್ದು ಎಲ್ಲದರಿಂದ ಹೊರತಾಗುವಂತಹ ಸ್ಥಿತಿಯೂ ಕೂಡಾ ಒಂದು ಪ್ರತಿಮಾ ಸಂದೇಶವೇ ಆಗಿದೆ.

ರಾಜಕೀಯ ಸಂಘರ್ಷದ ಕಾರಣಕ್ಕೆ ಯುದ್ಧವೆಂಬುದು ನಡೆದರೂ ಅದು ಅಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ರೈತರು, ಕುಲೀನರು, ನಾಗರಿಕರು, ಸೈನಿಕರು ಎಲ್ಲರೂ ಸಮಸ್ಯೆಗಳನ್ನು ಅನುಭವಿಸುವತ್ತಾರೆ. ಅವರ ಕಾಲಘಟ್ಟದಲ್ಲಿ ಮತ್ತು ಗತಿಸಿದ ಚರಿತ್ರೆಯಲ್ಲಿಯೇ ಎದುರಿಸದಂತಹ ಸಂಕಟಗಳಿಂದ ಬಳಲಬೇಕು. ಅದೇ ಯುದ್ಧ ಮತ್ತು ಶಾಂತಿಯಲ್ಲಿಯೂ ಆಗುವುದು. ಟಾಲ್ಸ್ಟಾಯ್ ಈ ಹಿನ್ನೆಲೆಗಳ ಎಲ್ಲಾ ಪ್ರತಿನಿಧಿಗಳನ್ನು ಪಾತ್ರಗಳನ್ನಾಗಿಸಿ ಮಾನುಷವಾಗಿ ಚಿತ್ರಿಸುತ್ತಾಹೋಗುತ್ತಾರೆ. ಮನುಷ್ಯ ಹೃದಯದ ಸಂವೇದನೆಯುಳ್ಳವರಿಗೆಲ್ಲಾ ಸ್ಪಂದಿಸುವ ದುಃಖ ದುಮ್ಮಾನಗಳು – ಭಾವುಕತೆಗೂ ಮತ್ತು ತಾತ್ವಿಕತೆಗೂ ಭಿನ್ನಬೇಧಗಳನ್ನು ಕಾಣಲಾಗದು.

ಟಾಲ್ಸ್‌ಟಾಯ್ ಅವರ ಕಾಲಘಟ್ಟಕ್ಕೆ 60 ವರ್ಷಗಳ ಮುನ್ನದ ಕತೆಯ ಭೂಮಿಕೆಯಾದರೂ ಅವರಲ್ಲಿ ಫ್ರಾನ್ಸ್ ಮಾಡಿದ ಯುದ್ಧದ ಛಾಯೆ ಪೂರ್ತಿ ಕರಗಿಹೋಗಿರಲಿಲ್ಲ. ಯುದ್ಧವೇ ಹಾಗೆ. ಯಾವುದೇ ಕಾರಣದಿಂದ ಅದು ನಡೆದರೂ ಸಾಮಾಜಿಕ ಮತ್ತು ರಾಜತಾಂತ್ರಿಕ ವ್ಯವಸ್ಥೆ ಹದಗೆಡುತ್ತದೆ. ಜನತೆಗಾಗಿಯೇ ಆ ವ್ಯವಸ್ಥೆ ಇರುವುದಾದರೂ, ಅದಕ್ಕೆ ಬೀಳುವ ಏಟಿನಿಂದ ಉಂಟಾಗುವ ಅವ್ಯವಸ್ಥೆಯಿಂದ ಯಾವುದೇ ತಪ್ಪನ್ನು ಮಾಡಿರದ ಜನರು ಶಿಕ್ಷೆ ಅನುಭವಿಸುತ್ತಾರೆ. ತಮ್ಮ ಹಿತರಕ್ಷಣೆಗಾಗಿ ವ್ಯವಸ್ಥೆ ಎಂದು ನಂಬಿರುವ ಜನರು ಎದುರುನೋಡದ ತೊಂದರೆಗಳಿಗೆ ಎದೆಯೊಡ್ಡಬೇಕಾಗುತ್ತದೆ. ಶಿಕ್ಷಣದ ಸಮಸ್ಯೆ, ಉದ್ಯೋಗದಿಂದಲೇ ಅನ್ನವನ್ನು ಗಳಿಸಿಕೊಳ್ಳುವರ ಸಮಸ್ಯೆ, ವೈದ್ಯಕೀಯ ಸೌಲಭ್ಯಗಳಲ್ಲಿ ವ್ಯತ್ಯಯವುಂಟಾಗುವ ಸಮಸ್ಯೆ, ಗಮನವು ಯುದ್ಧದ ಕಡೆ ಹರಿಯುವುದರಿಂದ ಆಂತರಿಕವಾಗಿ ಸಡಿಲವಾಗುವ ಭದ್ರತಾ ವ್ಯವಸ್ಥೆ; ಹೀಗೆ ಅನೇಕಾನೇಕ ಸಮಸ್ಯೆಗಳು ಯುದ್ಧದ ಕಾರಣಗಳಿಂದಾಗುತ್ತವೆ.

ಯುದ್ಧವೆಂಬುದು ರೋಮಾಂಚನ. ಅದೊಂದು ಉನ್ಮತ್ತವಾದ ಭ್ರಾಮಕವಾದ ಆನಂದ. ಅದು ಕುಲೀನರ, ರಾಜಕಾರಣದ ಮತ್ತು ಆರ್ಥಿಕತೆಯ ಉತ್ತುಂಗದಲ್ಲಿರುವವರು ಬಲಿಪಶುಗಳನ್ನಾಗಿಸುವವರಿಗೆ ಮಾತ್ರವೇ ಬೇಕು. ದುಡಿಯುವವರಿಗಲ್ಲ, ಶ್ರಮಿಕರಿಗಲ್ಲ, ಮನೆಯಲ್ಲಿ ಮಕ್ಕಳನ್ನು ಸಲಹುವ ಮತ್ತು ಕುಟುಂಬವನ್ನು ನಿರ್ವಹಣೆ ಮಾಡುವ ಮಹಿಳೆಯರಿಗಲ್ಲ. ಆದರೆ ಇವರೆಲ್ಲರ ಸಮೂಹದ ಪ್ರತಿನಿಧಿಯಂತಿರುವ ರಾಜಕಾರಣ ವ್ಯವಸ್ಥೆಯನ್ನು ಯುದ್ಧಕ್ಕೆಳೆಯುವುದು ಮತ್ತು ಯುದ್ಧವನ್ನು ಎದುರಿಸುವಂತೆ ಮಾಡುವುದು, ಏನೇ ಆದರೂ ಯುದ್ಧದ ರೋಮಾಂಚನ ಒಲ್ಲದ, ಬದುಕಿನ ಉಸುರಿಗೆ ಹಾತೊರೆಯುವವರ ನರಳಾಟಕ್ಕೆ ಕಾರಣವಾಗುತ್ತದೆ.

‘ಯುದ್ಧ ಮತ್ತು ಶಾಂತಿಯ’ಲ್ಲಿ ಅನೇಕ ಕತೆಗಳಿವೆ, ಅನೇಕ ಬದುಕುಗಳಿವೆ. ನಾಯಕ ಎಂದೋ, ನಾಯಕಿ ಎಂದೋ ಯಾರೂ ಇಲ್ಲ. ಸಿದ್ಧಸೂತ್ರದ ನಾಯಕ ಮತ್ತು ನಾಯಕಿಯ ಪಾತ್ರವನ್ನು ನಿರೀಕ್ಷಿಸುವವರಿಗೆ ಯಾರೂ ಸಿಗುವುದಿಲ್ಲ. ಹಾಗೆಂದು ಇದು ಐತಿಹಾಸಿಕ ಕಾದಂಬರಿಯೂ ಅಲ್ಲ. ಕಲಾವಿದನಾಗಿ ಟಾಲ್ಸ್‌ಟಾಯ್ ಒಮ್ಮೆ ಕಂಡರೆ, ಮತ್ತೊಮ್ಮೆ ಬೋಧನೆಗಳನ್ನು ಮಾಡುವ ಋಷಿಯಾಗಿ ಬದಲಾಗುತ್ತಾರೆ. ಮತ್ತೊಮ್ಮೆ ಕ್ರಾಂತಿಕಾರಿಯಾಗಿ ವ್ಯವಸ್ಥೆಯೊಳಗಿನ ತಿದಿಗಳಿಗೆ ಕೆರಳುತ್ತಾರೆ.

ಮನುಷ್ಯನ ತಿಕ್ಕಲುತನದ ಉನ್ಮತ್ತತೆಗೆ ಶಾಂತಿಯ ಅವಧಿಯೂ ಕೂಡಾ ಯುದ್ಧದ ಸಿದ್ಧತೆಯೇ ಆಗಿರುತ್ತದೆ. ಯುದ್ಧಾಸ್ತ್ರಗಳು ಹೇರಳವಾಗಿ ವ್ಯಾಪಾರದ ಸರಕಾದ ಮೇಲೆ, ಹೂಡಿದ ಬಂಡವಾಳಕ್ಕೆ ಲಾಭ ತರಲು ಯುದ್ಧಗಳನ್ನು ಒಲ್ಲೆ ಒಲ್ಲೆ ಎನ್ನುತ್ತಲೇ ಕಾರಣಗಳನ್ನು ಸೃಷ್ಟಿಸುತ್ತಾರೆ ಬಲಿಷ್ಟ ರಾಷ್ಟ್ರದ ಬಂಡವಾಳದ ಕೈಗಳು.

ಸುಮಾರು 1225 ಪುಟಗಳನ್ನು ಹೊಂದಿರುವ ‘ಯುದ್ಧ ಮತ್ತು ಶಾಂತಿ’ಯ ಕಾದಂಬರಿಯನ್ನು ಪರಿಚಯಿಸಲು ಸಾಧ್ಯವಾಗದ ಈ ಲೇಖನ ಅದು ಯುದ್ಧದ ಬಗ್ಗೆ ಹೊಂದಿರುವ ಧೋರಣೆಯ ಒಂದು ಮುಖವನ್ನು ಮಾತ್ರ ಧ್ವನಿಸುತ್ತದೆ. ಆದರೆ ಅದನ್ನು ಓದುವಾಗ ಯುದ್ಧದ ನೆರಳಿನಲ್ಲಿರುವ ಎಲ್ಲಾ ದೇಶಗಳೂ ನಮ್ಮ ಕಣ್ಪಟಲದ ಮುಂದೆ ಹಾದುಹೋಗುವಂತೆ ಮಾಡುವುದು ಈ ಕಾದಂಬರಿಯ ಶಕ್ತಿ.


ಇದನ್ನು ಓದಿ: ವಿಶೇಷ ಲೇಖನ: ಹೊಸ ತಲೆಮಾರಿಗೆ ಗೊತ್ತಿಲ್ಲದ ಡಾ.ಎಚ್ಚೆನ್ ಅವರ ‘ಹೋರಾಟದ ಹಾದಿ’ಯ ಕುರಿತು ಡಾ.ಸಿಎನ್ಆರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...