Homeಕರ್ನಾಟಕ'ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ' - ಪಂಚಮಸಾಲಿ ಸ್ವಾಮೀಜಿಯ ವಿಶೇಷ ಸಂದರ್ಶನ

‘ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ’ – ಪಂಚಮಸಾಲಿ ಸ್ವಾಮೀಜಿಯ ವಿಶೇಷ ಸಂದರ್ಶನ

ಖಂಡಿತವಾಗಿಯೂ ರೈತರ ಹೋರಾಟದ ಬೆಂಬಲಿಗ ನಾನು. ಆದರೆ, ಮಾಧ್ಯಮಗಳು ಈ ರೈತ ಹೋರಾಟವನ್ನು ತಪ್ಪಾಗಿ ಬಿಂಬಿಸಿವೆ. ನಾವೇನಾದರೂ ಈಗ ರೈತ ಹೋರಾಟದ ಪರ, ಕೃಷಿ ಕಾನೂನುಗಳ ವಿರುದ್ಧ ಹೇಳಿಕೆ ಕೊಟ್ಟರೆ ನಮ್ಮ ಮೀಸಲಾತಿ ಹೋರಾಟವನ್ನು ಮಾಧ್ಯಮಗಳು ತುಳಿದೇ ಬಿಡುತ್ತವೆ- ಪಂಚಮಸಾಲಿ ಸ್ವಾಮೀಜಿ

- Advertisement -
- Advertisement -

ರಾಜಧಾನಿಗೆ ಪಾದಯಾತ್ರೆ, ರಾಜಧಾನಿಯಲ್ಲಿ ಬೃಹತ್ ಸಭೆ ನಡೆಸುವ ಮೂಲಕ ಲಿಂಗಾಯತರ ಒಳಪಂಗಡವಾದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಒತ್ತಡ ಹಾಕಲಾಗಿದೆ.

ಇದರ ನೇತೃತ್ವ ವಹಿಸಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಿಂದೆಲ್ಲ ಪ್ರಗತಿಪರ ಚಳುವಳಿಗಳಲ್ಲಿ ಕಾಣಿಸಿಕೊಂಡವರು. ಆದರೆ, ಈಗ ಅವರ ನೇತೃತ್ವದ ಹೋರಾಟ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಕುರಿತು ಫೋನಿನಲ್ಲಿ ಸ್ವಾಮೀಜಿ ನಾನುಗೌರಿ.ಕಾಂ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ನಾನುಗೌರಿ: ರಾಜ್ಯದಲ್ಲಿ ಲಿಂಗಾಯತರು ಬಹುಸಂಖ್ಯಾತರು. ಅದರಲ್ಲಿ ಬಹು ಸಂಖ್ಯಾತರಾದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡುವುದು ತಪ್ಪಲ್ಲವೆ?

ಸ್ವಾಮೀಜಿ: ಆರ್ಥಿಕವಾಗಿ ಪಂಚಮಸಾಲಿಗಳು ತುಂಬ ತೊಂದರೆಯಲ್ಲಿದ್ದಾರೆ. ಕೃಷಿಯನ್ನೇ ಆಧಾರ ಮಾಡಿಕೊಂಡಿರುವ ಸಮುದಾಯ ಸಂಕಷ್ಟದಲ್ಲಿದೆ. ಶೈಕ್ಷಣಿಕವಾಗಿಯೂ ಹಿಂದುಳಿದಿದ್ದಾರೆ. ಹೀಗಿರುವಾಗ ಹೆಚ್ಚಿನ ಮೀಸಲಾತಿ ಕೇಳಲು ಸಂವಿಧಾನವೇ ಅವಕಾಶ ನೀಡಿದೆ.

ಇದನ್ನೂ ಓದಿ: ಲಿಂಗಾಯತ ಮತಗಳಿಗಾಗಿ ಗುದಮುರಗಿ: ಪಂಚಮಸಾಲಿಗಳು ಪಾರ್ಟಿ ಬದಲಿಸಿದರೆ….?

ನಾನುಗೌರಿ: ನಿಮ್ಮ ಉತ್ತರದಲ್ಲೇ ಹಲವು ಪ್ರಶ್ನೆ ಇವೆ. ಕೃಷಿಕರು-ಕೃಷಿ ಕಾರ್ಮಿಕರೇ ಹೆಚ್ಚಿರುವ ಪಂಚಮಸಾಲಿಗಳ ಹೋರಾಟ ಮುನ್ನಡೆಸುವಾಗ ನೀವು ಸಾಂಕೇತಿಕವಾಗಿ ನೇಗಿಲು ಹಿಡಿದಿದ್ದಿರಿ. ಆದರೆ, ಒಮ್ಮೆಯೂ, ಎಲ್ಲಿಯೂ ನೀವು ಕರಾಳ ಕೃಷಿ ಕಾನೂನುಗಳ ವಿರುದ್ಧ ಮತ್ತು ಪ್ರತಿಭಟಿಸುತ್ತಿರುವ ರೈತರ ಪರ ಒಂದೂ ಹೇಳಿಕೆ ನೀಡಿಲ್ಲವಲ್ಲ?

ಸ್ವಾಮೀಜಿ: ಖಂಡಿತವಾಗಿಯೂ ರೈತರ ಹೋರಾಟದ ಬೆಂಬಲಿಗ ನಾನು. ಆದರೆ, ಮಾಧ್ಯಮಗಳು ಈ ರೈತ ಹೋರಾಟವನ್ನು ತಪ್ಪಾಗಿ ಬಿಂಬಿಸಿವೆ. ನಾವೇನಾದರೂ ಈಗ ರೈತ ಹೋರಾಟದ ಪರ, ಕೃಷಿ ಕಾನೂನುಗಳ ವಿರುದ್ಧ ಹೇಳಿಕೆ ಕೊಟ್ಟರೆ ನಮ್ಮ ಮೀಸಲಾತಿ ಹೋರಾಟವನ್ನು ಮಾಧ್ಯಮಗಳು ತುಳಿದೇ ಬಿಡುತ್ತವೆ.

ನಾನುಗೌರಿ: ಬಹುಪಾಲು ಪಂಚಮಸಾಲಿಗಳು ಬಿಜೆಪಿಯ ಬೆಂಬಲಿಗರಾಗಿರುವ ಕಾರಣಕ್ಕೆ ನೀವು ಸಾಫ್ಟ್ ಸ್ಟ್ಯಾಂಡ್ ತಗೊಂಡಿದ್ದೀರಾ ಎಂಬ ಆರೋಪವಿದೆಯಲ್ಲ?

ಸ್ವಾಮೀಜಿ: ಹಾಗೇನೂ ಇಲ್ಲ. ನಮ್ಮ ಬೇಡಿಕೆ ಈಡೇರಬೇಕು ಅಷ್ಟೇ. ಸಮುದಾಯದ ಪಾಲಿಟಿಕಲ್ ಒರಿಯೆಂಟೆಶನ್ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ ಅನಿಸುತ್ತದೆ.

ನಾನುಗೌರಿ: ಪ್ರತಿಭಟನೆ ಎಂದರೆ, ಅದು ಪ್ರಭುತ್ವದ ವಿರುದ್ಧವೇ ಇರುತ್ತದೆ. ನಿಮ್ಮ ಪ್ರತಿಭಟನೆ-ಹೋರಾಟ ಕೇಂದ್ರ-ರಾಜ್ಯಗಳ ಬಿಜೆಪಿ ಸರ್ಕಾರದ ವಿರುದ್ಧವಾಗಿರುವಾಗ, ನಿಮ್ಮ ಸಭೆ-ಸಮಾವೇಶಗಳಲ್ಲಿ ಸಚಿವರಾದ ನಿರಾಣಿ-ಸಿಸಿ ಪಾಟೀಲರಿಗೇನು ಕೆಲಸ?

ಸ್ವಾಮೀಜಿ: ಅವರು ಜನಾಂಗದ ನಾಯಕರಾಗಿ ಭಾಗವಹಿಸಿದ್ದಾರೆ ಅಷ್ಟೇ…

ಇದನ್ನೂ ಓದಿ: ನಮ್ಮದು ರಾಷ್ಟ್ರೀಯ ಪಕ್ಷ, ಹಾಗಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ನನಗಿಲ್ಲ: ಸಿಎಂ ಯಡಿಯೂರಪ್ಪ!

ನಾನುಗೌರಿ: ಹಿಂದೆ ನೀವು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಇದ್ದಿರಿ. ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ ಎಲ್ಲ ಬಡ ಲಿಂಗಾಯತರಿಗೂ ಶೈಕ್ಷಣಿಕ ಮೀಸಲಾತಿ ತನ್ನಿಂದ ತಾನೇ ಸಿಗುತ್ತಿತ್ತು ಅಲ್ಲವೆ?

ಸ್ವಾಮೀಜಿ: 800-900 ವರ್ಷಗಳ ಹಿಂದೆಯೇ ಲಿಂಗಾಯತ ಪ್ರತ್ಯೇಕ ಧರ್ಮವಾಗಿದೆ. ಅದಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿ ಎಂಬುದು ನಮ್ಮ ಬೇಡಿಕೆ. ಆದರೆ, ಸರ್ಕಾರಗಳು ಮತ್ತು ಮಾಧ್ಯಮಗಳು ಇಡೀ ಹೋರಾಟವನ್ನೆ ತಪ್ಪಾಗಿ ಬಿಂಬಿಸಿದವು. ಈಗ ಒಂದು ಜಾತಿಗಾಗಿ ನಾವು ನ್ಯಾಯಬದ್ಧ ಮೀಸಲಾತಿ ಕೇಳುತ್ತಿದ್ದೇವೆ.

ನಾನುಗೌರಿ: ಗೌರಿ ಲಂಕೇಶ್ ಮತ್ತು ಪ್ರೊ ಕಲಬುರ್ಗಿ ಅವರ ಹತ್ಯೆಗಳನ್ನು ನೀವು ತೀವ್ರವಾಗಿ ಖಂಡಿಸಿದವರು. ಅವರನ್ನು ಕೊಂದ ಸಿದ್ದಾಂತಗಳನ್ನೇ ಉಸಿರಾಡುವ ಬಸನಗೌಡ ಪಾಟೀಲ್ ಯತ್ನಾಳರು ನಿಮ್ಮ ಹೋರಾಟದ ರಾಜಕೀಯ ಮುಖವಾಣಿ ಆಗಿದ್ದಾರೆ ಅಲ್ಲವೆ?

ಸ್ವಾಮೀಜಿ: ಗೌರಿ ಮತ್ತು ಕಲಬುರ್ಗಿಯವರ ಬಗ್ಗೆ ನನಗೆ ತುಂಬ ಗೌರವ ಇದೆ. ಸತ್ಯ ಹೇಳುವವರನ್ನು ಎದುರಿಸಲಾಗದ ಹೇಡಿಗಳು ಕೊಲೆಯ ಮಟ್ಟಕ್ಕೆ ಇಳಿದಿದ್ದಾರೆ. ಯತ್ನಾಳ್ ಮುಂಚಿನಿಂದಲೂ ಆರ್‌ಎಸ್‌ಎಸ್ ಸಿದ್ದಾಂತದವರು ಎಂಬುದು ಗೊತ್ತೇ ಇರುವ ವಿಷಯ. ನಮ್ಮ ಸಭೆ-ಸಮಾವೇಶಗಳಲ್ಲಿ ಅವರು ಕೇವಲ ಜನಾಂಗದ ಮುಖಂಡರಾಗಿಯಷ್ಟೇ ಭಾಗವಹಿಸಿದ್ದಾರೆ. ನಾನು ಎಂದಿಗೂ ಕೊಲ್ಲುವ ಸಿದ್ದಾಂತ, ದ್ವೇಷ ಸೃಷ್ಟಿಸುವ ಐಡಿಯಾಲಜಿಯ ವಿರುದ್ಧವೇ ಇದ್ದೇನೆ.

ನಾನುಗೌರಿ: ‘3ಎ’ ಮತ್ತು ‘3ಬಿ’ಯಲ್ಲಿ ಇರುವ ಇತರ ಲಿಂಗಾಯತರ ಬಗ್ಗೆ ತಮಗೆ ಕಾಳಜಿ ಇಲ್ಲವೆ?

ಸ್ವಾಮೀಜಿ: ನಮ್ಮ ಸಮುದಾಯದ ಪರ ನಾವು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇತರ ಲಿಂಗಾಯತರೂ ಹೋರಾಟ ಮಾಡಿದರೆ ಬೆಂಬಲ ನೀಡುತ್ತೇವೆ.

ನಾನುಗೌರಿ: ದೊಡ್ಡ ಸಮುದಾಯವೊಂದು 2ಎ ಹೊಕ್ಕರೆ ಅಲ್ಲಿರುವ ಇತರ ಧ್ವನಿಯಿಲ್ಲದ ಸಮುದಾಯಗಳ ಹಕ್ಕುಗಳಿಗೆ ಧಕ್ಕೆ ಆಗುತ್ತಲ್ಲ?

ಸ್ವಾಮೀಜಿ: ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ. ಸಂವಿಧಾನದ ಪ್ರಕಾರ ನಮಗೆ ಸಿಗಬೇಕಾದ ಮೀಸಲಾತಿ ಸೌಲಭ್ಯ ನೀಡಲು ಹಲವು ಮಾರ್ಗಗಳಿವೆ.

ಸಂದರ್ಶನ: ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ಹಕ್ಕಿಗಾಗಿ ಹೋರಾಡಬಾರದೆ? ಮಸಿ ಬಳಿಯುವುದು ಪ್ರತಿಭಟನೆಯೇ?: ಉಡುಪಿ ಸ್ಬಾಮೀಜಿಯ ಸಮಸ್ಯೆಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...