Homeಮುಖಪುಟಹಾಸ್ಟೆಲ್ ಯುವತಿಯರನ್ನು ಬೆತ್ತಲಾಗಿಸಿ ನೃತ್ಯ ಮಾಡಿಸಿದ ಪೊಲೀಸರು: ತನಿಖೆಗೆ ಆದೇಶ

ಹಾಸ್ಟೆಲ್ ಯುವತಿಯರನ್ನು ಬೆತ್ತಲಾಗಿಸಿ ನೃತ್ಯ ಮಾಡಿಸಿದ ಪೊಲೀಸರು: ತನಿಖೆಗೆ ಆದೇಶ

ಜಲ್‌ಗಾಂವ್‌ ಹಾಸ್ಟೆಲ್‌ನ ಯುವತಿಯರು ದೂರಿದಂತೆ, ಕೆಲವು ಪೊಲೀಸರು ಮತ್ತು ಹೊರಗಿನವರು ತನಿಖೆಯ ನೆಪದಲ್ಲಿ ಹಾಸ್ಟೆಲ್‌ ಒಳಗೆ ಬಂದು ಬೆತ್ತಲಾಗಿ ನೃತ್ಯ ಮಾಡಲು ಒತ್ತಾಯಿಸಿದ್ದಾರೆ.

- Advertisement -
- Advertisement -

ಮಹಾರಾಷ್ಟ್ರದ ಜಲ್‌ಗಾಂವ್‌ ಹಾಸ್ಟೆಲ್‌ನ ಯುವತಿಯರನ್ನು ಬೆತ್ತಲಾಗಿ ನೃತ್ಯ ಮಾಡುವಂತೆ ಪೊಲೀಸರು ಒತ್ತಾಯಿಸಿರುವ ಘಟನೆಯ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಗೃಹಮಂತ್ರಿ ಅನಿಲ್ ದೇಶ್ಮುಖ್ ಆದೇಶಿಸಿದ್ದಾರೆ. ಇದರ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರ ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಷಯವನ್ನು ವಿರೋಧ ಪಕ್ಷದ ಸದಸ್ಯರು ಕೈಗೆತ್ತಿಕೊಂಡ ನಂತರ ಸಚಿವರು ರಾಜ್ಯ ವಿಧಾನಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ.

ಬಿಜೆಪಿ ಮುಖಂಡ ಸುಧೀರ್ ಮುಂಗಂತಿವಾರ್ ಮಹಾರಾಷ್ಟ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.

ಜಲ್‌ಗಾಂವ್‌ ಹಾಸ್ಟೆಲ್‌ನ ಯುವತಿಯರು ದೂರಿದಂತೆ, “ಕೆಲವು ಪೊಲೀಸರು ಮತ್ತು ಹೊರಗಿನವರು ತನಿಖೆಯ ನೆಪದಲ್ಲಿ ಹಾಸ್ಟೆಲ್‌ ಒಳಗೆ ಬಂದು ಬೆತ್ತಲಾಗಿ ನೃತ್ಯ ಮಾಡಲು ಒತ್ತಾಯಿಸಿದ್ದಾರೆ” ಎಂದು ಹಲವು ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇದನ್ನೂ ಓದಿ: ‘ನಾವು ಯಾರ ಮೀಸಲಾತಿಯನ್ನೂ ಕಿತ್ತುಕೊಳ್ಳಲ್ಲ’ – ಪಂಚಮಸಾಲಿ ಸ್ವಾಮೀಜಿಯ ವಿಶೇಷ ಸಂದರ್ಶನ

ಅದರ ವೀಡಿಯೊ ಕ್ಲಿಪ್ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

“ಇದು ಅತ್ಯಂತ ದುರದೃಷ್ಟಕರ ಘಟನೆ. ಇದರ ಬಗ್ಗೆ ತನಿಖೆ ನಡೆಸಲು ನಾಲ್ಕು ಸದಸ್ಯರ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಕೋರಲಾಗಿದೆ. ವರದಿಯ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು” ಅನಿಲ್ ದೇಶಮುಖ್ ಹೇಳಿದರು.

ಆದರೆ ಇದು ಸರ್ಕಾರದ ವೈಫಲ್ಯ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.


ಇದನ್ನೂ ಓದಿ: ಬಿಜೆಪಿಯ ನಾಯಕರು ಒಬ್ಬೊಬ್ಬರಾಗಿ ದೇಶದ ಮುಂದೆ ಬೆತ್ತಲಾಗುತ್ತಿದ್ದಾರೆ: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...