Homeಮುಖಪುಟ2 ಕೋಟಿ ಉದ್ಯೋಗ ಎಲ್ಲಿ: "ಉತ್ತರ ಕೊಡಿ ಮೋದಿ" ಎಂದು 25 ಲಕ್ಷಕ್ಕೂ ಹೆಚ್ಚು ಟ್ವೀಟ್!

2 ಕೋಟಿ ಉದ್ಯೋಗ ಎಲ್ಲಿ: “ಉತ್ತರ ಕೊಡಿ ಮೋದಿ” ಎಂದು 25 ಲಕ್ಷಕ್ಕೂ ಹೆಚ್ಚು ಟ್ವೀಟ್!

ಬುಧವಾರ ಬೆಳಗ್ಗೆಯಿಂದ ಆರಂಭವಾಗಿರುವ #modi_jawab_do ಅಭಿಯಾನದಲ್ಲಿ ಈ ವರದಿ ಬರೆಯುವ ವೇಳೆ 2.47 ಮಿಲಿಯನ್ ಟ್ವೀಟ್‌ಗಳು ದಾಖಲಾಗಿದ್ದವು.

- Advertisement -
- Advertisement -

ದೇಶದಲ್ಲಿ ಹೆಚ್ಚಾಗುತ್ತಿರುವ ನಿರುದ್ಯೋಗದ ವಿರುದ್ದ ಎಚ್ಚೆತ್ತಿರುವ ಯುವಜನತೆ ಸಾಲು ಸಾಲು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಯಾವುದೇ ಉತ್ತಮ ಪ್ರತಿಕ್ರಿಯೆ ಸಿಗದ ಕಾರಣ ಬುಧವಾರ (ಮಾರ್ಚ್ 3) ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ‘ಮೋದಿ ಉತ್ತರ ಕೊಡಿ’ (ಮೋದಿ ಜವಾಬ್ ದೋ) ಅಭಿಯಾನ ಆರಂಭಿಸಿದ್ದಾರೆ.

ಬುಧವಾರ ಬೆಳಗ್ಗೆಯಿಂದ ಆರಂಭವಾಗಿರುವ #modi_jawab_do ಅಭಿಯಾನದಲ್ಲಿ ಈ ವರದಿ ಬರೆಯುವ ವೇಳೆ 2.47 ಮಿಲಿಯನ್ ಟ್ವೀಟ್‌ಗಳು ದಾಖಲಾಗಿದ್ದವು. ವಿದ್ಯಾರ್ಥಿಗಳು, ಯುವಜನತೆ, ವಿರೋಧಪಕ್ಷಗಳು ಸೇರಿದಂತೆ ದೇಶದ ಜನರು ಪ್ರಧಾನಿಯವರನ್ನು ಉತ್ತರ ಕೇಳಿದ್ದಾರೆ.

ಟ್ವಿಟರ್‌ನಲ್ಲಿ ಉತ್ತರ ಕೇಳಿರುವ ಯುವಜನತೆ ತಮ್ಮದೆ ಕೆಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದರೆ, ವಿದ್ಯಾರ್ಥಿಗಳು ಕೂಡ ತಮ್ಮ ಬೇಡಿಕೆಗಳನ್ನು ಟ್ವಿಟರ್‌ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ ತಿಂಗಳಿಗೆ ₹ 2,000 ಸಹಾಯ ಧನ- ಪ್ರಿಯಾಂಕ ಗಾಂಧಿ

ಪ್ರಧಾನಿಯವರೇ ನಾವು ಈ ಸಮಸ್ಯೆಗಳಿಗೆ ಮಾತ್ರ ಪರಿಹಾರ ಕೇಳುತ್ತಿದ್ದೇವೆ ಉತ್ತರ ನೀಡಿ ಎಂದು ಬೇಡಿಕೆಗಳ ಪಟ್ಟಿಯನ್ನು ಯುವಜನತೆ ಮುಂದಿಟ್ಟಿದ್ದಾರೆ.
(1) ಸಮಯೋಚಿತ ಅಧಿಸೂಚನೆ
(2) ಸಮಯೋಚಿತ ಪರೀಕ್ಷೆ
(3) ಸಮಯೋಚಿತ ಫಲಿತಾಂಶ
(4) ವೇಯ್ಟಿಂಗ್ ಲಿಸ್ಟ್
(5) ಹುದ್ದೆಗಳನ್ನು ಹೆಚ್ಚಿಸಿ
(6) ನಿಯಮಿತ ನೇಮಕಾತಿ
(7) ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಧಾರಣೆ

ಇವುಗಳ ಬಗ್ಗೆ ದಯವಿಟ್ಟು ಉತ್ತರ ನೀಡಿ ಪ್ರಧಾನಿಯವರೇ ಎಂದಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಆರೋಪಿಗೆ ಸಂತ್ರಸ್ತೆಯನ್ನು ಮದುವೆಯಾಗಲು ಸಲಹೆ: ಸುಪ್ರೀಂ ನಡೆಗೆ ತೀವ್ರ ಖಂಡನೆ

ವಿದ್ಯಾರ್ಥಿಗಳು ತಮ್ಮ ಬೇಡಿಕೆ ಪಟ್ಟಿಯನ್ನು ಇಟ್ಟು ಉತ್ತರಿಸುವಂತೆ ಕೇಳಿದ್ದಾರೆ.

1. ಖಾಲಿ ಹುದ್ದೆಗಳನ್ನು ಹೆಚ್ಚಿಸಿ

2. ಸಮಯೋಚಿತ ಪರೀಕ್ಷೆ
3. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ
4. ಸಮಯೋಚಿತ ಫಲಿತಾಂಶಗಳು
5. ವೇಗವಾದ ನೇಮಕಾತಿ

ಇವುಗಳ ಬಗ್ಗೆ ಏನಾದರೂ ಮಾತನಾಡಿ ಎಂದು ಆಗ್ರಹಿಸಿದ್ದಾರೆ.

ಯುವಜನತೆಯ ಅಭಿಯಾನವನ್ನು ಬೆಂಬಲಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ, ವಿದ್ಯಾರ್ಥಿಗಳ, ನಿರುದ್ಯೋಗದ ಕುರಿತ ಪ್ರಶ್ನೆಗಳಿಗೆ ಉತ್ತರಿಸಿ ಎಂದು #modi_jawab_do ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸರ್ಕಾರದ ವೈಫಲ್ಯಗಳ ಪ್ರಚಾರ: 100 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ’ಜನಧ್ವನಿ’ ಜಾಥಾ

ಈ ದೇಶದ ನಿರುದ್ಯೋಗಿಗಳು, ಕಾರ್ಮಿಕರು, ರೈತರು, ದಲಿತರು, ಬುಡಕಟ್ಟು ಸಮುದಾಯಗಳು ನಿಮ್ಮಿಂದ ಉತ್ತರವನ್ನು ಬಯಸಿದ್ದಾರೆ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.

ಮೋದಿಯವರ ದಾಡಿ ಬೆಳೆದಂತೆ ಉದ್ಯೋಗದ ಗ್ರಾಫ್‌ ಕೂಡ ಕೆಳಗಿಳಿಯುತ್ತಿದೆ ಎಂದು ಪ್ರಧಾನಿಯವರ ದಾಡಿಯ ಚಿತ್ರವನ್ನು ಹಂಚಿಕೊಂಡು ಯೋಗೇಂದ್ರ ಸಿಂಗ್ ಎನ್ನುವವರು ವ್ಯಂಗ್ಯವಾಡಿದ್ದಾರೆ.

ಯುವಜನತೆ ಇಷ್ಟು ಕೇಳಿಕೊಂಡರು ಮಾತನಾಡದ ಪ್ರಧಾನಿ ಎಂದು ನಿದ್ದೆ ಮಾಡುತ್ತಿರುವ ಕುಂಬಕರ್ಣನಿಗೆ ಹೋಲಿಸಿ ಹಲವಾರು ಟ್ವೀಟ್‌ಗಳನ್ನು ಮಾಡಲಾಗಿದೆ.

ನಿರುದ್ಯೋಗದ ಬಗ್ಗೆ ಮಾತನಾಡದ, ಪ್ರಧಾನ ಮಂತ್ರಿಯವರಲ್ಲಿ ಒಂದು ಪ್ರಶ್ನೆ ಕೇಳದ ಸುದ್ದಿ ಮಾಧ್ಯಮಗಳನ್ನು ಬಾಯ್ಕಾಟ್ ಮಾಡಿ ಎಂದು ಯುವಜನತೆ ಕೇಳುತ್ತಿದ್ದಾರೆ.

ಈಗಾಗಲೇ ಹಲವಾರು ಬಾರಿ ದೇಶದಲ್ಲಿ ಯುವಜನತೆ ಉದ್ಯೋಗಕ್ಕಾಗಿ ಬೀದಿಗಿಳಿದಿದೆ. ಆದರೂ ಕೂಡ ಯಾವುದೇ ಉಪಯೋಗವಾಗಿಲ್ಲ. ದಿನಕಳೆದಂತೆ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಲೇ ಇದೆ.


ಇದನ್ನೂ ಓದಿ: ಸಮಾಜದ ಆರೋಗ್ಯ ಮುಖ್ಯ, ಆದಾಯ ಅಲ್ಲ: ಅಕ್ರಮ ಮದ್ಯ ನಿಷೇದಕ್ಕೆ ಆಗ್ರಹಿಸಿ ಟ್ವಿಟರ್‌ ಅಭಿಯಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಇದ್ದ ಊದ್ಯೋಗಗಳನ್ನ ನುಂಗಿ ,ಸಕಾ೯ರಿ ವಲಯಗಳನ್ನ ಖಾಸಗಿಕರಣ ಗೊಳಿಸುವ ಇವರು ಊದ್ಯೋಗಗಳನ್ನ ಭವಿಷ್ಯ ಸ್ವಗ೯ದಲ್ಲಿ ಸೃಷ್ಟಿಸಬಹುದು

  2. ಅಂಬಾನಿ ಗಾಗಿ ಪ್ರಧಾನಿ ಯಾದವರು…
    ಭಾರತೀಯರ ಗಾಗಿ ಅಲ್ಲ….
    ಉತ್ತರವೇಕೆ ಕೊಡಬೇಕು…..

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...