HomeUncategorizedಬಿಜೆಪಿ ಸರ್ಕಾರದ ವೈಫಲ್ಯಗಳ ಪ್ರಚಾರ: 100 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ’ಜನಧ್ವನಿ’ ಜಾಥಾ

ಬಿಜೆಪಿ ಸರ್ಕಾರದ ವೈಫಲ್ಯಗಳ ಪ್ರಚಾರ: 100 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ’ಜನಧ್ವನಿ’ ಜಾಥಾ

ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿದ್ದ ಜನತೆಗೆ ಬೆಲೆ ಏರಿಕೆಯ ಬರೆ ಹಾಕಿದ್ದಾರೆ. ಬಿಜೆಪಿಯ ಇಂತಹ ಜನವಿರೋಧಿ ನೀತಿಗಳ ವಿರುದ್ಧ ಈ ಜನಧ್ವನಿ ಜಾಥಾ - ಕಾಂಗ್ರೆಸ್

- Advertisement -
- Advertisement -

ಇಂಧನ ಬೆಲೆ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಜನ ವಿರೋಧಿ ನೀತಿಗಳ ಬಗ್ಗೆ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ರಾಜ್ಯದ 100 ವಿಧಾನಸಭಾ ಕ್ಷೇತ್ರಗಳಲ್ಲಿ ’ಜನಧ್ವನಿ’ ಜಾಥಾಕ್ಕೆ ಕಾಂಗ್ರೆಸ್ ಬುಧವಾರ (ಮಾರ್ಚ್‌ 3) ಚಾಲನೆ ನೀಡಿದೆ.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು, 100 ಕ್ಷೇತ್ರಗಳ “ಜನಧ್ವನಿ ಜಾಥಾ’ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ, ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಜಾಥಾಕ್ಕೆ ಚಾಲನೆ ನೀಡಿದರು.

ಇಂದು (ಬುಧವಾರ) ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಮೊದಲ ಜಾಥಾ ನಡೆಯಲಿದೆ. ವಿಶೇಷ ವಾಹನದಲ್ಲಿ ಹೊರಟ ಪಕ್ಷದ  ಹಿರಿಯ ನಾಯಕರು, ವಿಧಾನಸಭೆ, ವಿಧಾನ ಪರಿಷತ್ ನಾಯಕರು ದೇವನಹಳ್ಳಿಯಲ್ಲಿ ಜಾಥಾ ನಡೆಸಲಿದ್ದು, ಮಧ್ಯಾಹ್ನದ ನಂತರ ಚಿಕ್ಕಬಳ್ಳಾಪುರಕ್ಕೆ ತೆರಳಲಿದ್ದಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ ತಿಂಗಳಿಗೆ ₹ 2,000 ಸಹಾಯ ಧನ- ಪ್ರಿಯಾಂಕ ಗಾಂಧಿ

ಹೆಗಲ ಮೇಲೆ ನೇಗಿಲು ಹೊತ್ತು ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಜಾಥಾಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಕುರಿ, ಮೇಕೆಗಳು ಸತ್ತರೆ ಪರಿಹಾರ ನೀಡುವ ‘ಅನುಗ್ರಹ’ ಯೋಜನೆ ಮರುಜಾರಿಗೊಳಿಸಿ: ಸಿದ್ದರಾಮಯ್ಯ

ಅಡುಗೆ ಅನಿಲದ ಬೆಲೆ ದಿನದಿನಕ್ಕೂ ಹೆಚ್ಚಿಸಿ ಜನಸಾಮಾನ್ಯರು ಅಡುಗೆ ಮಾಡಿ ತಿನ್ನಲಾಗದಂತೆ ಮಾಡಿ, “ನಾ ಖವುಂಗ, ನಾ ಖಾನೆದುಂಗ” ಎನ್ನುವ ತಮ್ಮ ಮಾತಿಗೆ ಪ್ರಧಾನಮಂತ್ರಿಯವರು ಅರ್ಥ ಕೊಟ್ಟಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿದ್ದ ಜನತೆಗೆ ಬೆಲೆ ಏರಿಕೆಯ ಬರೆ ಹಾಕಿದ್ದಾರೆ. ಬಿಜೆಪಿಯ ಇಂತಹ ಜನವಿರೋಧಿ ನೀತಿಗಳ ವಿರುದ್ಧ ಈ ಜನಧ್ವನಿ ಜಾಥಾ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

‘ಪಡಿತರ ಕೊಡುವ ಯೋಗ್ಯತೆ ಇಲ್ಲದ ಸರ್ಕಾರ. ಟಿವಿ, ಬೈಕ್ ಇದ್ದವರಿಗೆ ಬಿಪಿಎಲ್ ಕಾರ್ಡ್ ಇಲ್ಲ ಎನ್ನುವ ಮೂಲಕ ತಮ್ಮ ವೈಫಲ್ಯಕ್ಕೆ ಜನತೆಯನ್ನು ಬಲಿ ಕೊಡುತ್ತಿದೆ. ಇಂತಹ ಬೇಜವಾಬ್ದಾರಿ ಬಿಜೆಪಿ ಸರ್ಕಾರದ ವಿರುದ್ಧ ಜನಧ್ವನಿ ಜಾಥಾ’ ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ ಜಾಥಾಗೆ ಟೀಕಿಸಿರುವ ಬಿಜೆಪಿ, ’ಕಾಂಗ್ರೆಸ್‌ ಈಗ ಮಾಡುತ್ತಿರುವುದು ಜನಧ್ವನಿ ಹೋರಾಟವಲ್ಲ, ಹರಿದು ಮೂರು ಬಾಗಿಲಾಗಿರುವ ಪಕ್ಷವನ್ನು ಒಂದೆಡೆ ಸೇರಿಸಲು ಮಾಡುತ್ತಿರುವ ಒಂದು ಹೋರಾಟ ಅಷ್ಟೇ. ಡಿಕೆಶಿ ಬಣ, ಸಿದ್ದರಾಮಯ್ಯ ಬಣ ಮತ್ತು ಖರ್ಗೆ ಬಣ ಈ ಮೂರೂ ಬಣವನ್ನು ಸಮನ್ವಯಿಸಲು ನಡೆಸುತ್ತಿರುವ ಕಸರತ್ತೇ ಜನಧ್ವನಿ ಜಾಥಾ’ ಎಂದಿದೆ.


ಇದನ್ನೂ ಓದಿ: ನಮಗೆ 5 ವರ್ಷ ಕೊಡಿ; ಬಿಜೆಪಿಯ 25 ವರ್ಷದ ಆಡಳಿತವನ್ನು ಮರೆಯುತ್ತೀರಿ – ಗುಜರಾತ್‌ನಲ್ಲಿ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...