ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಖ್ಯಾತ ಬಾಲಿವುಡ್ ನಟಿ ತಾಪ್ಸಿ ಪನ್ನು ಮತ್ತು ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರ ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಚಲನಚಿತ್ರ ನಿರ್ಮಾಪಕ ವಿಕಾಸ್ ಬಹ್ಲ್ ಅವರ ಆಸ್ತಿಗಳ ಮೇಲೆ ಕೂಡಾ ದಾಳಿ ನಡೆಸಲಾಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ. ಇಲಾಖೆಯು ಮುಂಬೈ ಮತ್ತು ಇತರ ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ ಎಂದು ವರದಿಯಾಗಿದ್ದು, ಈ ಶೋಧವು ‘ಫ್ಯಾಂಟಮ್ ಫಿಲ್ಮ್’ ಕಂಪೆನಿಯ ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿವೆ ಎಂದು ಹೇಳಲಾಗಿದೆ.
Income Tax raids underway at the properties of film director Anurag Kashyap and actor Taapsee Pannu in Mumbai: Income Tax Department
— ANI (@ANI) March 3, 2021
ಇದನ್ನೂ ಓದಿ: ಪ್ರಧಾನಿಯೇ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ; ಇವರು ಮಾಡಿದ್ದು ಸರಿಯೇ?- ಸ್ಪಷ್ಟನೆ ಕೇಳಿದ ಕೇಂದ್ರ
ಈ ವರ್ಷದ ಜನವರಿಯಲ್ಲಿ, ಮಧು ಮಾಂಟೆನಾ ಅವರು ಫ್ಯಾಂಟಮ್ ಫಿಲ್ಮ್ಸ್‌ನಲ್ಲಿ ಚಲನಚಿತ್ರ ನಿರ್ಮಾಪಕರಾದ ಅನುರಾಗ್ ಕಶ್ಯಪ್, ವಿಕ್ರಮ್ ಮೋಟ್ವಾನೆ ಮತ್ತು ವಿಕಾಸ್ ಬಹ್ಲ್ ಅವರ ಷೇರುಗಳನ್ನು ಖರೀದಿಸಿದ್ದರು. ಈ ಮೂಲಕ ಕಂಪನಿಯಿಂದ ಕಶ್ಯಪ್, ಮೋಟ್ವಾನೆ ಮತ್ತು ಬಹ್ಲ್ ಅವರು ಅಧಿಕೃತವಾಗಿ ನಿರ್ಗಮಿಸಿದ್ದರು.
ಈ ಪ್ರೊಡಕ್ಷನ್ ಮತ್ತು ವಿತರಣಾ ಕಂಪನಿಯನ್ನು 2011 ರಲ್ಲಿ ಮಾಂಟೆನಾ, ಕಶ್ಯಪ್, ಮೋಟ್ವಾನೆ ಮತ್ತು ಬಹ್ಲ್ ಸ್ಥಾಪಿಸಿದ್ದರು. 2015 ರಲ್ಲಿ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಈ ಕಂಪನಿಯ 50% ಪಾಲನ್ನು ಪಡೆದುಕೊಂಡಿತ್ತು.
ಅಕ್ಟೋಬರ್ 2018 ರಲ್ಲಿ, ಬಹ್ಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಬಹಿರಂಗವಾಗಿ ಕೇಳಿಬಂದ ನಂತರ ತಂಡವು ಒಟ್ಟಾಗಿ ಕೆಲಸ ಮಾಡದಿರಲು ನಿರ್ಧರಿಸಿತು. ಆದರೆ ನಂತರ ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ನ ಆಂತರಿಕ ದೂರುಗಳ ಸಮಿತಿಯು ಬಹ್ಲ್ ಅವರ ಮೇಲಿದ್ದ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿತ್ತು.
ತಾಪ್ಸೀ ಪನ್ನು ಮತ್ತು ಅನುರಾಗ್ ಕಶ್ಯಪ್ ‘ದೋಬಾರಾ’ ಚಿತ್ರೀಕರಣವನ್ನು ಪುನರಾರಂಭಿಸಿದ್ದಾರೆ.
ಇದನ್ನೂ ಓದಿ: ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ ತಿಂಗಳಿಗೆ ₹ 2,000 ಸಹಾಯ ಧನ- ಪ್ರಿಯಾಂಕ ಗಾಂಧಿ