HomeಮುಖಪುಟNPR ಕುರಿತು ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಖ್ಯಾತ ಚಿಂತಕ ಶಿವಸುಂದರ್ ಏನು ಹೇಳುತ್ತಾರೆ??

NPR ಕುರಿತು ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಖ್ಯಾತ ಚಿಂತಕ ಶಿವಸುಂದರ್ ಏನು ಹೇಳುತ್ತಾರೆ??

"ಜನರು ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಬೇಕಿಲ್ಲ" ಎಂಬ ಗೃಹಮಂತ್ರಿಗಳ ಹೇಳಿಕೆ ಹೇಗಾದರೂ ಮಾಡಿ ಜನರನ್ನು NPRಗೆ ಒಪ್ಪಿಸಿ "ಪೌರತ್ವ ಪರಿಶೀಲನೆಯ" ಉರುಳಿಗೆ ತಾವೇ ಸಿಕ್ಕಿಹಾಕಿಕೊಳ್ಳುವಂತೆ ಮಾಡುವ ದುರುದ್ದೇಶವನ್ನು ಹೊಂದಿದೆ..

- Advertisement -
- Advertisement -

ನಿನ್ನೆ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್‌ ಶಾರವರು NPRಗೆ ದಾಖಲೆ ತೋರಿಸಬೇಕಿಲ್ಲ. ನಿಮಗೆ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಬೇಕಿಲ್ಲ. ನಿಮ್ಮನ್ನು ಡೌಟ್‌ಫುಲ್‌ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಹೇಳಿಕೆಗೆ ಹಲವು ವಯಲಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಖ್ಯಾತ ಚಿಂತಕ ಮತ್ತು ಹೋರಾಟಗಾರ ಶಿವಸುಂದರ್‌ ಪ್ರತಿಕ್ರಿಯೆ ನೀಡಿದ್ದಾರೆ. ಅದರ ಪೂರ್ಣಪಾಠ ಕೆಳಗಿನಂತಿದೆ.

ಪೌರತ್ವ ನೊಂದಣಿ ಹಾಗು ಎನ್ ಪಿ ಆರ್ ಬಗ್ಗೆ ಗೃಹಮಂತ್ರಿ ಅಮಿತ್ ಷಾ ರಾಜ್ಯ ಸಭೆಯಲ್ಲಿ ಗಳಹಿದ ಸುಳ್ಳುಗಳ ಕುರಿತು :

NPR-NRC- CAAಗಳ ವಿರುದ್ಧ ದೇಶಾದ್ಯಂತ ಜನರು ರಾಜಿಯಿಲ್ಲದ ಹೋರಾಟ ನಡೆಸುತ್ತಿರುವುದರಿದ ಕಂಗೆಟ್ಟಿರುವ ಮೊ-ಷಾ ಸರ್ಕಾರ ಸುಳ್ಳುಗಳನ್ನು ಹೇಳುವ ಮೂಲಕ ಹೋರಾಟವನ್ನು ದಾರಿ ತಪ್ಪಿಸುವ ಹುನ್ನಾರ ನಡೆಸಿದೆ. ನಿನ್ನೆ ರಾಜ್ಯಸಭೆಯಲ್ಲಿ ಗೃಹಮಂತ್ರಿ ಅಮಿತ್ ಶಾ ನೀಡಿರುವ ಹೇಳಿಕೆಗಳು ಅದಕ್ಕೆ ತಾಜಾ ಉದಾಹರಣೆ. ಆದ್ದರಿಂದ ದೇಶದ ಜನತೆ ಗೃಹಮಂತ್ರಿಯವರ ಹೇಳಿಕೆಯಲ್ಲಿರುವ ಈ ಕೆಳಗಿನ ಸುಳ್ಳುಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಸುಳ್ಳು-1- NPR ಮಾಹಿತಿ ಸಂಗ್ರಹಣೆ ಹಂತದಲ್ಲಿ ಜನರು ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರ ನೀಡಬೇಕಿಲ್ಲ.

ವಾಸ್ತವ : NPR ಮಾಡುತ್ತಿರುವುದೇ ದೇಶದ ಎಲ್ಲಾ ಜನರ ಪೌರತ್ವವನ್ನು ಪರೀಕ್ಷಿಸಲು. ಅದ್ಕಕೆಂದೇ ಪ್ರತಿಯೊಬ್ಬ ಪೌರನ ತಂದೆ ಮತ್ತು ತಾಯಿಯರ ಹುಟ್ಟಿದ ದಿನ ಹಾಗು ಸ್ಥಳದ ಮಾಹಿತಿಯನ್ನು ನಿರ್ದಿಷ್ಟವಾಗಿ ಕೇಳಲಾಗುತ್ತದೆ. ಅದಕ್ಕೆ ಕೊಟ್ಟ ಉತ್ತರವನ್ನು ಆಧರಿಸಿಯೇ ದೇಶದ ಜನರ ಪೌರತ್ವವು ಪರೀಕ್ಷೆಗೆ ಒಳಪಡುತ್ತದೆ.

NPR ಮತ್ತು NRC ಗಳ ಹುಟ್ಟಿಗೆ ಕಾರಣವಾದ Citizenship (Registration Of Citizens and Issue Of National Identity Cards) Rules 2003ದ ಉಪನಿಯಮ 4 (1)ರ ಪ್ರಕಾರ – ಕೇಂದ್ರ ಸರ್ಕಾರವು ಒಂದು ರಾಷ್ಟ್ರೀಯ ಪೌರತ್ವ ನೊಂದಣಿ ಪಟ್ಟಿಯನ್ನು ತಯಾರಿಸುವ ಸಲುವಾಗಿ ದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ವ್ಯಕ್ತಿಗಳ ಮತ್ತು ಕುಟುಂಬಗಳ ಪೌರತ್ವ ವಿವರಗಳನ್ನೂ ಒಳಗೊಂಡಂತೆ ಅಗತ್ಯವಿರುವ ಎಲ್ಲಾ ವಿವರಗಳನ್ನು ದೇಶಾದ್ಯಂತ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬಹುದು .

ಉಪನಿಯಮ 4 (3) ರ ಪ್ರಕಾರ – ಸ್ಥಳೀಯ ಮಟ್ಟದ ರಾಷ್ಟ್ರೀಯ ನಾಗರಿಕರ ಪಟ್ಟಿಯನ್ನು ತಯಾರಿಸುವ ಸಲುವಾಗಿ NPR ನಲ್ಲಿ ಸಂಗ್ರಹಿಸಲಾದ ವ್ಯಕ್ತಿಗಳ ಮತ್ತು ಕುಟುಂಬಗಳ ವಿವರಗಳನ್ನು ಸ್ಥಳೀಯ ನಾಗರಿಕ ನೊಂದಣಿ ರಿಜಿಸ್ಟ್ರಾರ್ (ಅಂದರೆ ಸ್ಥಳೀಯ ತಹಸೀಲ್ದಾರರು) VERIFY AND SCRUTINIZE ಅಂದರೆ ಪರೀಕ್ಷಿಸಿ ಪರಿಶೀಲಿಸುತ್ತಾರೆ.

ಉಪನಿಯಮ 4 (4) ರ ಪ್ರಕಾರ – ಈ ಪರಿಶೀಲನಾ ಹಂತದಲ್ಲಿ ಯಾವುದಾದರೂ ವ್ಯಕ್ತಿಯ ಪೌರತ್ವ ಸಂಬಂಧಿ ವಿವರಗಳು ಸಂಶಯಾಸ್ಪದವಾಗಿ ಕಂಡುಬಂದಲ್ಲಿ ಮತ್ತಷ್ಟು ಪರಿಶೀಲನೆ ಮಾಡಲು NPR ಪಟ್ಟಿಯಲ್ಲಿರುವ ಆ ವ್ಯಕ್ತಿಯ ಹೆಸರಿನ ಮುಂದೆ ಸ್ಥಳೀಯ ರಿಜಿಸ್ಟ್ರಾರ್ ಅವರು ಸೂಕ್ತ ಟಿಪ್ಪಣಿಗಳನ್ನು ದಾಖಲಿಸುತ್ತಾರೆ ಮತ್ತು ಪರಿಶೀಲನೆ ಪೂರ್ಣಗೊಂಡ ನಂತರ ಅನುಮಾನಾಸ್ಪದವಾದ ಪೌರತ್ವವೆಂದು ಕಂಡುಬಂದಲ್ಲಿ ಸೂಕ್ತವಾದ ನಮೂನೆಯಲ್ಲಿ ಆ ವ್ಯಕ್ತಿಗಳಿಗೆ ಅಥವಾ ಕುಟುಂಬಗಳಿಗೆ ತಿಳಿಸುತ್ತಾರೆ.

ಉಪನಿಯಮ 7 ((2) ರ ಪ್ರಕಾರ- ತನ್ನ ಕುಟುಂಬಕ್ಕೆ ಸಂಬಂಧಪಟ್ಟ NPR ಪ್ರಶ್ನಾವಳಿಗಳಿಗೆ ಸರಿಯಾದ ಉತ್ತರ ಕೊಡುವುದು ಕುಟುಂಬದ ಮುಖ್ಯಸ್ಥನ ಜವಾಬ್ದಾರಿಯಾಗಿದೆ.

ಇದು ಹಾಲಿ ಇರುವ ನಿಯಮಾವಳಿಗಳು. ಇದಕ್ಕೆ ಈವರೆಗೆ ಸರ್ಕಾರ ಯಾವುದೇ ತಿದ್ದುಪಡಿ ಮಾಡಿಲ್ಲ.

ಹಾಗೂ NPR ಪ್ರಕ್ರಿಯೆಯಲ್ಲಿ ಉತ್ತರ ಇಲ್ಲದಿರುವುದು ಮತ್ತು ಕೊಡದಿರುವುದು ನಮ್ಮ ಪೌರತ್ವವನ್ನೇ ಪ್ರಶ್ನೆಗೊಳಪಡಿಸುತ್ತದೆ.

ಆದ್ದರಿಂದ “ಜನರು ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಬೇಕಿಲ್ಲ” ಎಂಬ ಗೃಹಮಂತ್ರಿಗಳ ಹೇಳಿಕೆ ಹೇಗಾದರೂ ಮಾಡಿ ಜನರನ್ನು NPRಗೆ ಒಪ್ಪಿಸಿ “ಪೌರತ್ವ ಪರಿಶೀಲನೆಯ” ಉರುಳಿಗೆ ತಾವೇ ಸಿಕ್ಕಿಹಾಕಿಕೊಳ್ಳುವಂತೆ ಮಾಡುವ ದುರುದ್ದೇಶವನ್ನು ಹೊಂದಿದೆ.

ಎಲ್ಲಿಯತನಕ Citizenship (Registration Of Citizens and Issue Of National Identity Cards) Rules 2003 ನಿಮಯದ ಮೇಲಿನ ಉಪನಿಯಮಾವಳಿಗಳನ್ನು ರದ್ದುಮಾಡುವುದಿಲ್ಲವೋ / ತಿದ್ದುಪಡಿ ಮಾಡುವುದಿಲ್ಲವೋ ಅಲ್ಲಿಯವರೆಗೆ ಗೃಹಮಂತ್ರಿಯವರ ಹೇಳಿಕೆ ಕೇವಲ ದಾರಿ ತಪ್ಪಿಸುವ ಹೇಳಿಕೆಯಷ್ಟೇ ಆಗಿರುತ್ತದೆ.

ಹಾಗೊಂದು ವೇಳೆ ಈ ನಿಯಮಗಳನ್ನು ರದ್ದು ಮಾಡಿಬಿಟ್ಟರೆ ಅಥವಾ ತಿದ್ದುಪಡಿಯಾದರೆ ನಿರ್ದಿಷ್ಟ ಜನಸಮುದಾಯಗಳ ಪೌರತ್ವ ಪರಿಶೀಲನೆ ಮಾಡಬೇಕೆಂಬ ಬಿಜೆಪಿ ಸರ್ಕಾರದ ಉದ್ದೇಶವೇ ಈಡೇರುವುದಿಲ್ಲ.

ಆದ್ದರಿಂದಲೇ ಯಾವ ತಿದ್ದುಪಡಿಯನ್ನು ಮಾಡದೆ ಕೇವಲ ಹೇಳಿಕೆಯನ್ನು ನೀಡುತ್ತಾ ಜನರನ್ನು NPR ಗೆ ಒಪ್ಪಿಸುವ ಹಾಗು NPR-NRC- CAA ಗಳ ವಿರುದ್ಧದ ಹೋರಾಟವನ್ನು ಹಾದಿತಪ್ಪಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ.

ಆದ್ದರಿಂದ ಎಲ್ಲಿಯ ತನಕ ಸರ್ಕಾರವು ದೇಶದ ಜನರ ಪೌರತ್ವ ವನ್ನೇ ಅನುಮಾನಿಸುವ ಹಾಗು ಇಡೀ ಜನಕೋಟಿಯನ್ನು ಪೌರತ್ವ ಸಾಬೀತು ಪಡಿಸುವ ಅಸಾಧ್ಯ ಪರೀಕ್ಷೆಗೆ ಒಡ್ಡುವ

1. ಭಾರತದ ಪೌರತ್ವ ಕಾಯಿದೆ-1955ಕ್ಕೆ ವಾಜಪೇಯಿ ಸರ್ಕಾರ ತಂದ 14-A ತಿದ್ದುಪಡಿಯನ್ನು ಹಾಗು
2. Citizenship (Registration Of Citizens and Issue Of National Identity Cards) Rules 2003 ಗಳನ್ನುರದ್ದುಗೊಳಿಸುವುದಿಲ್ಲವೋ ಅಲ್ಲಿಯತನಕ ಜನರು ಹಾಗು ವಿರೋಧ ಪಕ್ಷಗಳು ಸರ್ಕಾರದ ಯಾವುದೇ ದುರುದ್ದೇಶದ ಮಾತುಗಳು ಮತ್ತು ಹೇಳಿಕೆಗಳಿಗೆ ಬಲಿಯಾಗಬಾರದು.

ಸುಳ್ಳು-2- NPR ಹಂತದಲ್ಲಿ ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ.

ವಾಸ್ತವ- ಇದು ಅರ್ಧ ಸತ್ಯ . ಕೇಂದ್ರ ಸರ್ಕಾರ ಈ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಿರುವ NPR Training Manual ಪ್ರಕಾರ NPR ಮಾಹಿತಿ ಸಂಗ್ರಹ ಮಾಡಲು ಬರುವ ಅಧಿಕಾರಿಗಳಿಗೆ ಆಧಾರ್, ಡ್ರೈವಿಂಗ್ ಲೈಸೆನ್ಸ್ , ಮೊಬೈಲ್ ನಂಬರ್, ವೋಟರ್ ಕಾರ್ಡ್ ಮತ್ತು ಪಾಸ್ ಪೋರ್ಟ್ ದಾಖಲೆಗಳನ್ನು ತೋರಿಸಬೇಕು.
– ಈ ನಿಯಮವನ್ನು ಸರ್ಕಾರ ಈ ಕ್ಷಣದವರೆಗೂ ಹಿಂತೆಗೆದುಕೊಂಡಿಲ್ಲ.

ಸುಳ್ಳು – 3- CAA ಪೌರತ್ವ ಕೊಡುವ ಕಾಯಿದೆಯೇ ಹೊರತು ಪೌರತ್ವವನ್ನು ಕಿತ್ತುಕೊಳ್ಳುವ ಕಾಯಿದೆಯಲ್ಲ

ವಾಸ್ತವ: ಇದು ಸುಳ್ಳು ಮತ್ತು ಅರ್ಧಸತ್ಯದಿಂದ ಕೂಡಿರುವ ಹೇಳಿಕೆಯಾಗಿದೆ.
CAA ಕಾಯಿದೆ ಬಾಂಗ್ಲಾದೇಶ, ಪಾಕಿಸ್ತಾನ ಹಾಗು ಅಫ್ಘಾಅನಿಸ್ತಾನ ಗಳಿಂದ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗಿ ಅಥವಾ ದೌರ್ಜನ್ಯಗಳ ಭಯದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬರುವ ಹಿಂದು,ಸಿಖ್ಖ, ಜೈನ, ಬೌದ್ಧ, ಕ್ರಿಶ್ಚಿಯನ್ ಮತ್ತು ಪಾರ್ಸಿಗಳಿಗೆ ಆಶ್ರಯ ಮತ್ತು ಪೌರತ್ವವನ್ನು ಕೊಡುವ ಕಾಯಿದೆಯಾಗಿದೆ.

ಅಷ್ಟರಮಟ್ಟಿಗೆ ಅದು ಪೌರತ್ವವನ್ನು ಕೊಡುವ ಕಾಯಿದೆ. ಆದರೆ ಅದೇ ದೇಶಗಳಲ್ಲಿ ಅಹ್ಮದೀಯರು, ಹಜಾರಗಳು ಹಾಗು ಶಿಯಾಗಳು ಸಹ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆಂದು ಮೋದಿ ಸರ್ಕಾರವೇ 2018ರ ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಗೆ ದೂರಿತ್ತಿದೆ. ಆದರೆ CAA ಕಾಯಿದೆ ಅದೇ ದೇಶಗಳಿದ ಅದೇ ಬಗೆಯ ಧಾರ್ಮಿಕ ದೌರ್ಜನ್ಯಗಳಿಗೆ ತುತ್ತಾಗಿ ವಲಸೆ ಬರುವ ಈ ಸಮುದಾಯಗಳಿಗೆ ಬಾಗಿಲನ್ನು ಮುಚ್ಚುತ್ತದೆ.

ಆ ಅರ್ಥದಲ್ಲಿ CAA ಕಾಯಿದೆ ಉಳಿದ ಧರ್ಮಿಯರಿಗೆ ಪೌರತ್ವವನ್ನು ನಿರಾಕರಿಸುವ ಕಾಯಿದೆಯೇ ಆಗಿದೆ.

ಅಲ್ಲದೆ CAA ಕಾಯಿದೆಯ ನಿಮಿತ್ತವಿಲ್ಲದೆ ಈವರೆಗೆ ಯಾವುದೇ ದೇಶದಿಂದ ಯಾವುದೇ ಬಗೆಯ ದೌರ್ಜನ್ಯಗಳಿಗೆ ತುತ್ತಾಗಿ ಆಶ್ರಯ ಕೋರಿ ಬರುತ್ತಿದ್ದವರಿಗೆ ಭಾರತ ಆಶ್ರಯ ಕೊಡುವಂತಹ ಮತ್ತು ಅವರು ಕೋರಿದಲ್ಲಿ 7-11 ವರ್ಶಗಳ ನಂತರ ಪೌರತ್ವ ಕೊಡುವಂತ ಅವಕಾಶ 1955ರಲ್ಲಿ ರಚಿಸಲಾದ ಕಾಯಿದೆಯಲ್ಲೇ ಅಂತರ್ಗತವಾಗಿದೆ.

ಅಲ್ಲದೆ, CAA ಮೂಲಕ NRC ಪ್ರಕ್ರಿಯೆಯಲ್ಲಿ ದಾಖಲೆಗಳನ್ನು ತೋರಿಸಲಾಗದೆ ಅನುಮಾನಾಸ್ಪದರೆಂದು ಘೋಷಿತರಾಗುವ ಹಿಂದುಗಳಿಗೆ ಪೌರತ್ವ ಕೊಡಲಾಗುವುದೆಂಬ ಸರ್ಕಾರದ ಮತ್ತು ಬಿಜೆಪಿಯ ಗುಪ್ತ ಪ್ರಚಾರವು ಸಹ ಹಸಿಸುಳ್ಳಿನದಾಗಿದೆ.

ಏಕೆಂದರೆ CAA ಮೂಲಕ ಪೌರತ್ವ ಪಡೆಯಲು NRC ಯಿಂದ ಹೊರಬೀಳುವ ಭಾರತೀಯ ಹಿಂದುಗಳು ಮೊದಲು ತಾವು ಬಾಂಗ್ಲಾದೇಶೀಯರೊ ಅಥವಾ ಪಾಕಿಸ್ತಾನಿಯರೋ ಎಂದು ಸಾಬೀತು ಮಾಡಿಕೊಳ್ಳಬೇಕಾಗುತ್ತದೆ.

ಏಕೆಂದರೆ CAA ಸೌಲಭ್ಯ ಸಿಗುವುದು ಬಾಂಗ್ಲಾದೇಶ ಅಥವಾ ಪಾಕಿಸ್ತಾನಗಳಿಂದ ವಲಸೆ ಬಂದ ಹಿಂದುಗಳಿಗೆ ಹೊರತು ದಾಖಲೆಗಳಿಲ್ಲವೆಂಬ ಕಾರಣಕ್ಕೆ ಪೌರತ್ವ ಕಳೆದುಕೊಳ್ಳುವ ಭಾರತೀಯ ಹಿಂದುಗಳಿಗಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾಜಿ ರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ ಹಿಂದೆ ಇಡಿ ಒತ್ತಡ : ತನ್ನ ಹೊಸ ಪುಸ್ತಕದಲ್ಲಿ ಸಂಜಯ್ ರಾವುತ್ ಆರೋಪ

ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಮೋದಿ ಸರ್ಕಾರದ ವಿರುದ್ಧ ಕೈಗೊಂಡ ಸ್ವತಂತ್ರ ರಾಜಕೀಯ ನಡೆಗಳಿಗೆ ಪ್ರತಿಯಾಗಿ, ಜಾರಿ ನಿರ್ದೇಶನಾಲಯದ (ಇಡಿ) ಒತ್ತಡಕ್ಕೆ ಮಣಿದು 2025ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು...

ಯುಎನ್‌ಐ ಮಾಧ್ಯಮ ಕಚೇರಿಗೆ ಬೀಗ : ಪೊಲೀಸರ ವರ್ತನೆಗೆ ಪತ್ರಿಕಾ ಸಂಘಗಳು, ವಿಪಕ್ಷ ನಾಯಕರಿಂದ ತೀವ್ರ ಖಂಡನೆ

ಶುಕ್ರವಾರ (ಮಾ.20) ರಾತ್ರಿ ದೆಹಲಿ ಪೊಲೀಸರು ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (ಯುಎನ್‌ಐ) ಸುದ್ದಿ ಸಂಸ್ಥೆಯ ಕಚೇರಿಗೆ ಬೀಗ ಜಡಿದ ರೀತಿಗೆ ಪತ್ರಕರ್ತರ ಸಂಘಗಳು ಮತ್ತು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ದೆಹಲಿಯ...

ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್: ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬಕ್ಕೆ ಟಿಕೆಟ್

ಏಪ್ರಿಲ್ 9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರ ತೀವ್ರ ವಿರೋಧದ ನಡುವೆಯೂ ಕೃಷಿ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ್ ಅವರ...

ಕೇರಳ ವಿಧಾನಸಭೆ ಚುನಾವಣೆ : ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಕೇಸ್!

ಏಪ್ರಿಲ್ 9ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಗೆ ಕಾಸರಗೋಡಿನ ಮಂಜೇಶ್ವರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆ. ಸುರೇಂದ್ರನ್ ಮೇಲೆ ಬರೋಬ್ಬರಿ 242 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಈ ಮಾಹಿತಿ ಶನಿವಾರ...

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಆರು ಮಂದಿ ಶಾಸಕರನ್ನು ಅಮಾನತುಗೊಳಿಸಿದ ಬಿಜೆಡಿ

ಮಾರ್ಚ್ 16ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರು ಮಂದಿ ಶಾಸಕರನ್ನು ಒಡಿಶಾದ ಬಿಜು ಜನತಾದಳ (ಬಿಜೆಡಿ) ಅಮಾನತುಗೊಳಿಸಿದೆ ಎಂದು ವರದಿಯಾಗಿದೆ. ಒಟ್ಟು 8 ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ....

ಆಸ್ಕರ್ ನಾಮನಿರ್ದೇಶಿತ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಚಿತ್ರ ಪ್ರದರ್ಶನಕ್ಕೆ ಭಾರತದಲ್ಲಿ ನಿರ್ಬಂಧ!

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ಳನ್ನು ಇಸ್ರೇಲಿ ಸೈನಿಕರು ಸುಮಾರು 300 ಸುತ್ತು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿರುವ ಕಥೆಯನ್ನು ಹೇಳುವ, 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರದ ಪ್ರದರ್ಶನಕ್ಕೆ...

ವೈದ್ಯೆ ವಂದನಾ ದಾಸ್ ಹತ್ಯೆ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೇರಳ ನ್ಯಾಯಾಲಯ

ಕೊಲ್ಲಂ: ಆಸ್ಪತ್ರೆಯಲ್ಲಿ ನಡೆದ ಡಾ. ವಂದನಾ ದಾಸ್ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪರಾಧಿ ಜಿ. ಸಂದೀಪ್ ಗೆ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಆರೋಪಿಗೆ ಮರಣದಂಡನೆ ವಿಧಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ...

ಕಾಂಗ್ರೆಸ್, ರಾಹುಲ್ ಗಾಂಧಿ ಬಿಜೆಪಿಯ ಬಿ-ಟೀಮ್: ಕೇರಳ ಸಿಎಂ ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸಿದ್ದಾರೆ.   ಕೇಂದ್ರೀಯ ಸಂಸ್ಥೆಗಳು ಕೇರಳ...

‘ಬಿಜೆಪಿ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ, ಕೊನೆಯವರೆಗೂ ಹೋರಾಡುತ್ತೇವೆ’; ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮತದಾರರ ಪಟ್ಟಿಯ ಪರಿಷ್ಕರಣೆಯ ಮೂಲಕ ಜನರ "ಮತದಾನದ ಹಕ್ಕನ್ನು ಕಸಿದುಕೊಳ್ಳಲು" ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.  "ಮೋದಿ ಜಿ...

ಏಳು ವರ್ಷಗಳ ನಂತರ ಯುಎಪಿಎ ಪ್ರಕರಣದಲ್ಲಿ ಇಬ್ಬರು ಕಾಶ್ಮೀರಿ ಯುವಕರನ್ನು ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯ

ಏಳು ವರ್ಷಗಳಿಗೂ ಹೆಚ್ಚು ಕಾಲದ ನಂತರ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿಸಲ್ಪಟ್ಟ ಇಬ್ಬರು ಕಾಶ್ಮೀರಿ ಯುವಕರನ್ನು ಗುರುವಾರ ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಪ್ರಾಸಿಕ್ಯೂಷನ್ ತನ್ನ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಮತ್ತು ದೆಹಲಿ ಪೊಲೀಸರು...