Homeಮುಖಪುಟಹೋರ್ಡಿಂಗ್ ಸಮರ: ಅತ್ಯಾಚಾರ ಆರೋಪವಿರುವ ಬಿಜೆಪಿಗರ ಹೋರ್ಡಿಂಗ್ ಹಾಕಿಸಿದ ಸಮಾಜವಾದಿ ಪಕ್ಷ

ಹೋರ್ಡಿಂಗ್ ಸಮರ: ಅತ್ಯಾಚಾರ ಆರೋಪವಿರುವ ಬಿಜೆಪಿಗರ ಹೋರ್ಡಿಂಗ್ ಹಾಕಿಸಿದ ಸಮಾಜವಾದಿ ಪಕ್ಷ

- Advertisement -
- Advertisement -

ಬಿಜೆಪಿ ಮಾಜಿ ಶಾಸಕ ಕುಲದೀಪ್ ಸೆಂಗಾರ್ ಮತ್ತು ಅತ್ಯಾಚಾರ ಆರೋಪಿಯಾದ ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ್ ಫೋಟೋಗಳಿರುವ ಹೋರ್ಡಿಂಗ್ ಅನ್ನು ಹಾಕಲಾಗಿದ್ದು, ಇದನ್ನು ಸಮಾಜವಾದಿ ನಾಯಕರೊಬ್ಬರು ಮಾಡಿದ್ದಾರೆ ಎನ್ನಲಾಗಿದೆ. ಪೌರತ್ವ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರದ ಆರೋಪಿಗಳೆಂದು ಆರೋಪಿಸಿ ಸರ್ಕಾರ ಹಾಕಲಾಗಿರುವ ಹೋರ್ಡಿಂಗ್ ಪಕ್ಕದಲ್ಲೇ ಈ ಬ್ಯಾನರ್ ಹಾಕಲಾಗಿದೆ.

ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಐ.ಪಿ.ಸಿಂಗ್ ಅವರು “ಇದು ಈ ರಾಜ್ಯದ ಅಪರಾಧಿಗಳು, ಇವರಿಂದ ದೂರವಿರಿ” ಎಂಬ ಶೀರ್ಷಿಕೆಯಲ್ಲಿ ಕುಲದೀಪ್ ಸೆಂಗಾರ್ ಮತ್ತು ಚಿನ್ಮಯಾನಂದ್ ಅವರ ವಿರುದ್ಧದ ಆರೋಪಗಳ ವಿವರವಿರುವ ಹಾಗೂ ಅವರ ಫೋಟೋಗಳ ಸಹಿತವಿರುವ ಬ್ಯಾನರನ್ನು ರಾತ್ರಿ ಹಾಕಿದ್ದರು. ಬೆಳಿಗ್ಗೆ ಪೊಲೀಸರು ಅದನ್ನು ತೆರವುಗೊಳಿಸಿದ್ದಾರೆ.

“ಪ್ರತಿಭಟನಾಕಾರರಿಗೆ ಯಾವುದೇ ಖಾಸಗಿತನ ಇಲ್ಲದಿರುವಾಗ ಹಾಗೂ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಸೂಚನೆಯ ಹೊರತಾಗಿಯೂ ಆದಿತ್ಯನಾಥ್ ಸರ್ಕಾರವು ಹೋರ್ಡಿಂಗ್‌ಗಳನ್ನು ತೆಗೆದುಹಾಕದಿದ್ದಾಗ, ಲೋಹಿಯಾ ಜಂಕ್ಷನ್‌ನಲ್ಲಿ ನ್ಯಾಯಾಲಯಗಳ ಹೆಸರಿಸಿದ ಕೆಲವು ಅಪರಾಧಿಗಳ ಪೋಸ್ಟರನ್ನು ನಾನು ಕೂಡ ‘ಹೆಣ್ಣುಮಕ್ಕಳು ಹುಷಾರಾಗಿರಿ’ ಎಂದು ಸಾರ್ವಜನಿಕರ ಮಾಹಿತಿಗಾಗಿ ಹಾಕಿದ್ದೇನೆ” ಎಂದು ಐಪಿ ಸಿಂಗ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸೆಂಗಾರ್ ಮೇಲೆ ಉನ್ನಾವೊದಲ್ಲಿ ಹದಿಹರೆಯದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪವಿದೆ. ಮಾಜಿ ಬಿಜೆಪಿ ನಾಯಕರಾಗಿರುವ ಚಿನ್ಮಯಾನಂದ್ ಅವರನ್ನು ಶಹಜಹಾನ್‌ಪುರದಲ್ಲಿ ತನ್ನ ಶಿಕ್ಷಣ ಸಂಸ್ಥೆಯ ಕಾನೂನು ವಿದ್ಯಾರ್ಥಿಯನ್ನು ಒಂದು ವರ್ಷದಿಂದ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದೆ.

ಪೌರತ್ವ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರದ ಆರೋಪಿಗಳೆಂದು ಆರೋಪಿಸಿ ಹಾಕಲಾಗಿರುವ ಹೋರ್ಡಿಂಗ್‌ಗಳನ್ನು ಕೂಡಲೇ ತೆಗೆದುಹಾಕಬೇಕೆಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟಲ್ಲಿ ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್‌ ಸಹ ತೆಗೆದುಹಾಕಲು ತಾಕೀತು ಮಾಡಿದೆ. ಆದರೂ ಯೋಗಿ ಸರ್ಕಾರ ಹೋರ್ಡಿಂಗ್‌ ತೆರವುಗೊಳಿಸಿಲ್ಲ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...