Homeಕರ್ನಾಟಕಕೊರೋನಾಲಜಿ ಏನೆಂದು ಬಲ್ಲಿರಾ, ನೀವು ಬಲ್ಲಿರಾ?

ಕೊರೋನಾಲಜಿ ಏನೆಂದು ಬಲ್ಲಿರಾ, ನೀವು ಬಲ್ಲಿರಾ?

- Advertisement -
- Advertisement -

ಇದೇ ಎಪ್ರಿಲ್ 13 ನೇ ತಾರೀಕಿನಂಗ ವಿಶ್ವದಾಗ 18 ಲಕ್ಷ 95 ಸಾವಿರ ಜನರಿಗೆ ಕೊರೊನಾ ಸೋಂಕು ಹಬ್ಬೇದ. ಅದರಾಗ ಸುಮಾರು. 1 ಲಕ್ಷ 17 ಸಾವಿರ ಜನ ನಿಧನ ಹೊಂದಿದಾರ ಮತ್ತು ಸುಮಾರು 4 ಲಕ್ಷ 38 ಸಾವಿರ ಜನ ಆರಾಮಾಗಿದಾರ. ಹಿಂದೂಸ್ತಾನದಾಗ 9,635 ಜನರಿಗೆ ರೋಗ ಬಂದು 331 ಜನ ಸತ್ತಾರ. ಸತ್ತವರಿಗಿಂತ ಉಳದವರ ಸಂಖ್ಯ ಸುಮಾರು ನಾಲ್ಕು ಪಟ್ಟು ಅನ್ನೋದನ್ನ ನಾವು ಮರಿಯೋದು ಬ್ಯಾಡ.

ಆದರ ನಮ್ಮ ಭಾರತದಾಗ ಒಂದು ಮಜಾ ಆಗೇತಿ. ಸಿಂಧೂ ನದಿಯ ದೊಣ್ಣೆ ನಾಯಕರೂ, ಕೇಂದ್ರ ಗೃಹ ಸಚಿವರೂ ಆದ ಮಿತಿಯಿಲ್ಲದ ಮಹಿಪತಿ ಅಮಿತ ಷಾ ಅವರು ಇಲ್ಲಿಯವರೆಗೂ ಹೊರಗ ಕಾಣಿಸಿಕೊಂಡಿಲ್ಲ.

ಈ ಕೊರೋನಾದ ಬಗ್ಗೆ `ಕುಛ ಕರೋ ನಾ’ ಅಂತ ಅವರಿಗೆ ಅವರ ನಾಯಕರು ಹೇಳಿರಬಹುದು. ಅಥವಾ ಅವರಿಗೆ ಮೈಗೆ ಹುಷಾರಿಲ್ಲದಂಗ ಆಗಿರಬಹುದು. ಅಥವಾ ಅವರು ಸುಂಕದಕಟ್ಟಿಯೊಳಗ ಕುತಗೊಂಡು `ನಾನು ಎದ್ದು ಬಂದರ ನೋಡು’ ಅಂತ ಹೆದರಸೋ ಕುಂಟನಂಗ ಸುಮ್ಮನೇ ಕೂತಿರಬಹದು. ಏಲ್ಲಾ ಅಸ್ತ್ರಗಳು ಮುಗದ ಮ್ಯಾಲೆ ಬ್ರಹ್ಮಾಸ್ತ್ರ ಬರೋಹಂಗ ಅವರು ಸೈನ್ಯ, ಅರೆ ಸ್ಯನ್ಯ, ಪೊಲೀಸೋ, ಅರೆ ಪೊಲೀಸೋ, ಅವರ್ಯಾರು ಸಿಗಲಿಲ್ಲ ಅಂದರ ಕಡೀಕೆ ಪೊಲೀಗಳ ಸೈನ್ಯ ಕಟಗೊಂಡು ರೋಡಿಗೆ ಇಳಿಯಬಹುದು. ಹಂಗ ಮಾಡಿದರನ ನನಗೆ ಮುಂದ ಕಿರೀಟ ಸಿಗಬಹುದು ಅಂದುಕೊಂಡಿರಬಹುದು.

ಏನರ ಇರಲಿ.

ಅವರ ಮನಸಿನೊಳಗ ಪರಮನ ಪ್ರವೇಶ ಮಾಡಿದರ ಏನಿರಬಹುದು ಅಂತ ನೋಡಿದರ ಒಂದು ಕೊರೊನೋಲೋಜಿ ಸ್ಪಷ್ಟವಾಗಿ ಕಾಣತದ.
ನವಂಬರ ಎರಡನೇ ವಾರದೊಳಗ ಚೈನಾದ ವುಹಾನ ಪ್ರಾಂತದಾಗ ಕೊರೋನಾ ಬಂತು. ಮಾರವಾಡಿಗಳ ಮನಿ ದೇವರುಗಳಾದ ಚೀನಾದವರು “ಅದೇನು ಬರೇ ಫ್ಲೂ…ಪಿಸ್ಯಾ” ಅಂತ ಅಲಕ್ಷ ಮಾಡಿದರು. ಈ ಅಲಕ್ಷದಿಂದ ಎಪ್ರಿಲ ತನಕಾ ಲಕ್ಷ ಜನ ಜೀವ ಕಳಕೊಳ್ಳೋಹಂಗಾತು.

ಅದಾಗಿ ಒಂದು ತಿಂಗಳಿಗೆ ಚೈನಾದವರು ಅಮೇರಿಕದವರ ಜೊತಿಗಿ ವ್ಯಾಪಾರ ಒಪ್ಪಂದ ಮಾಡಿಕೊಂಡರು. ಅದರಾಗ `ದೇವರ ಕೈಚಳಕ’ ದಿಂದಾಗಿ ಏನರ ಅಮೇರಿಕಾ ಕಂಪನಿಗಳಿಗೆ ನಷ್ಟ ಆದರ ನಾವು ಜವಾಬುದಾರರಲ್ಲ ಅಂತ ಒಂದು ಸಾಲು ಹಾಕಿದರು.

ಅದಾಗಿ ಒಂದು ತಿಂಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾದ ಟೆಡ್ರೋಸ್ ಅಧಾನಾಮ ಅನ್ನೋ ಅರ್ಧ ಹೆಸರಿನ ಮನುಷ ಇದು ಪ್ರಾದೇಶಿಕ ಸಮಸ್ಯೆ. ಇದನ್ನ ಜಾಗತಿಕ ಸಮಸ್ಯೆ ಅನ್ನಲಿಕ್ಕೆ ನಾವು ತಯಾರು ಇಲ್ಲ ಅಂತಂದರು. ಇದರ ಮುಂದಿನ ತಿಂಗಳ ಏನೇನೂ ಆಗಲಿಲ್ಲ. ಬರೇ ಚೈನಾದ ಸುದ್ದಿ, ಅಲ್ಲಿನ ಸಾವು – ನೋವು ಇಷ್ಟ. ಬ್ಯಾರೆ ದೇಶದೊಳಗ ಅಂದರ ಇರಾನು- ಇರಾಕು- ಕೋರಿಯಾದಾಗ ಹಿಂಗದ – ಹಂಗದ ಅನ್ನೋ ಮಾತು. ಯುರೋಪಿನ – ಅಮೇರಿಕಾದ ಮಾತು ಬರಲಿಲ್ಲ.

ಫೆಬ್ರವರಿಯೊಳಗ ಇಟಲಿಯ ಸಾವಿನ ಸನ್ನಿ. ಅದಕ್ಕ ಹತ್ತಿಕೊಂಡ ಇದ್ದ ಇತರ ಯುರೋಪಿನ ದೇಶಗಳ ಬಗ್ಗೆ ಯಾರೂ ಮಾತಾಡಲಿಲ್ಲ. ನಾವು ಮಾತಾಡಲಿಲ್ಲ ಅಂದರ ವೈರಸ್ಸು ಏನು ಬಿಡತಾವ? ಅವು ಸಾವಿನ ಸೈನಿಕರಹಂಗ ಬೆನ್ನು ಹತ್ತಿ ಬಂದವು.

ಮಾರ್ಚಿನ್ಯಾಗಂತೂ ಸುದ್ದಿಯ ಹಂಗು ಇಲ್ಲದನ ಸಾವಿನ ಆಟ ಜೋರಾತು.

ಅದು ತೀರ ಕೈ ಮೀರಿ ಹೋದ ಮ್ಯಾಲೆ, ಮಾರ್ಚ 19 ಕ್ಕ ಘನ ಸರಕಾರ ವಿಮಾನ ನಿಲ್ದಾಣಗಳನ್ನ ಬಂದು ಮಾಡಿತು. ಜನವರಿಯಿಂದ ಮಾರ್ಚ ಒಳಗ ಸುಮಾರು 15 ಲಕ್ಷ ಜನ ಭಾರತದೊಳಗ ಹಾರಿಕೊಂಡು ಬಂದಾರ ಅಂತ ಕೇಂದ್ರ ವಿಮಾನಯಾನ ಕಾರ್ಯದರ್ಶಿ ಹೇಳಿದರು. ಅವರನ್ನ ಯಾರನ್ನೂ ಸರಿಯಾಗಿ ತಪಾಸಣೆ ಮಾಡಿಲ್ಲ. ಅವರೊಳಗ ಎಷ್ಟು ಮಂದಿಗೆ ಸೋಂಕು ಇತ್ತೋ, ಅವರು ಎಷ್ಟು ಮಂದಿಗೆ ಅದನ್ನ ಖುಷಿಯಿಂದ ಹಂಚಿದರೋ ಗೊತ್ತಿಲ್ಲ.

ಈಗ ಏನಾಗೇದ ಅಂದರ ನಮ್ಮ ಸುದ್ದಿ ಭಯೋತ್ಪಾದಕರು ತಬ್ಲೀಘಿ ಜಮಾತಿನವರನ್ನ ಕರೊನಾ ಜಿಹಾದಿಗಳು ಅಂತ ಹಣೆ ಪಟ್ಟಿ ಕಟ್ಟಿ ಬಿಟ್ಟಾರ. ಅವರು ಬೇಜವಾಬ್ದಾರಿಯಿಂದ ಇದ್ದಾರ, ಇಷ್ಟೆಲ್ಲಾ ಭಾನಗಡಿ ಇದ್ದರೂ ದೆಹಲಿಗೆ ಹೋದರು ಅನ್ನೋದು ಬ್ಯಾರೆ. ಆದರ ಅವರು ಬೇಕಂತ ಮಾಡಲಿಕ್ಕೆ ಹತ್ಯಾರ. ಬ್ಯಾರೆಯವರ ಜೀವ ತಗೀಲಿಕ್ಕೆ ಸೋಂಕು ಹಂಚಲಿಕ್ಕೆ ಹತ್ಯಾರ ಅಂತ ಅಪಪ್ರಚಾರ ನಡದದ.

ಸಾಮಾನ್ಯ ಜ್ಞಾನ ಇದ್ದವರು ಯಾರೂ ಇದನ್ನ ಒಪ್ಪಲಿಕ್ಕೆ ಸಾಧ್ಯ ಇಲ್ಲ. ಬ್ಯಾರೆ ಅವರಿಗೆ ಹಂಚಲಿಕ್ಕೆ ಸಂಚು ಮಾಡೋರು ತಮ್ಮವರನ್ನ ಮೂರುವರೆ ಸಾವಿರ ಜನರನ್ನ ದೆಹಲಿಯೊಳಗ ಒಂದ ಕಡೆ ಕೂಡಿಸಿ ಸೋಂಕು ಹಂಚಿಕೊಳತಿದ್ದರೇನು? ಹೋಗಲಿ ಅಲ್ಲಿಂದ ಬಂದ ಮ್ಯಾಲೆ ಅವರು ಯಾರಿಗೆ ಸೋಂಕಿಸಲಿಕ್ಕೆ ಹತ್ಯಾರ? ತಮ್ಮ ಕುಟುಂಬದವರನ್ನ- ನೆರೆ ಹೊರೆಯವರನ್ನ. ಅವರು ಮುಸ್ಲಿಮ ಕಾಲನಿ ಬಿಟ್ಟು ಬ್ಯಾರೆ ಕಡೆ ಮನಿ ಮಾಡಲಿಕ್ಕೆ ನಾವು ಅವರನ್ನ ಬಿಟ್ಟರಲ್ಲಾ ಅವರು ಹಂಗ ಮಾಡೋದು?

ದೆಹಲಿ ನಿಜಾಮುದ್ದಿನಿಗೆ ಹೋದವರನ್ನ ಹೆಂಗ ಹಿಡಕೊಂಡು ಹಿಡಕೊಂಡು ತಪಾಸಣೆ ಮಾಡಲಿಕ್ಕೆ ಹತ್ಯಾರಲ್ಲಾ ಹಂಗ ಬ್ಯಾರೆ ಜಾತ್ರೆ- ಮದುವಿ- ಹುಟ್ಟಿದ ಹಬ್ಬ- ಗುರುದ್ವಾರ- ಚರ್ಚು ಭಜನಿ ಯೊಳಗ ಸೇರಿಕೊಂಡವರನ್ನ ತಪಾಸಣೆ ಮಾಡಲಿಲ್ಲ.

ಪಂಜಾಬಿನ ಗುರುದ್ವಾರದೊಳಗ ಒಂದು ವಾರ ನಡೆದ ಕಾರ್ಯಕ್ರಮದಿಂದಾಗಿ 20 ಸಾವಿರ ಜನ ಕ್ವಾರಂಟೈನಿಗೆ ಒಳಗಾಗಿದಾರ. ಅದರಾಗ ಹಾಡಿದ ರಾಗಿ ಸಂತರೊಬ್ಬರು ತೀರಿಕೊಂಡು ಹೋದ ಮ್ಯಾಲೆ ಇದು ಬೆಳಕಿಗೆ ಬಂತು. ಇನ್ನು ಬ್ಯಾರೆ ಕಡೆ, ಇಡೀ ದೇಶದ ತುಂಬಾ ಎಷ್ಟು ಇಂಥಾ ಜನ ಜಂಗುಳಿ ಕಾರ್ಯಕ್ರಮ ಆಗ್ಯಾವೋ ಯಾವಾನಿಗೆ ಗೊತ್ತು? ಆದರ ನಮ್ಮ ಸರಕಾರದ ಹೆಕ್ಕಿ – ಹೆಕ್ಕಿ ತೆಗೆದ ನಿರ್ಧಾರಗಳಿಂದ ಬರೆ ಜಮಾತಿನವರನ್ನ ತಪಾಸಣೆ ಮಾಡಿ ಅವರಿಗೆ ಕೆಟ್ಟ ಹೆಸರು ಬರೋಹಂಗಾತು. ಇದು ಕೇಂದ್ರದ ಬೇಜವಾಬುದಾರಿ ಇರಬಹುದು, ಅಥವಾ ಅವರು ಬೇಕಂತ ಮಾಡಿರಬಹುದು. ಅದನ್ನ ಅವರೇ ಹೇಳಬೇಕು.

ಇಡೀ ವಿಶ್ವದೊಳಗ ಅತಿ ಕಡಿಮಿ ತಪಾಸಣೆ ನಡಿಯೋ ದೇಶ ಭಾರತ. ಒಂದು ನೂರಾ ಮೂವತ್ತು ಕೋಟಿ ಜನರ ತಪಾಸಣೆಗೆ 160 ಸರಕಾರಿ ಹಾಗೂ 50 ಖಾಸಗಿ ಪ್ರಯೋಗಾಲಯ ಅದಾವು. ಎಲ್ಲಾ ಸೇರಿ ಒಂದು ದಿನಕ್ಕ ಬರೇ 5,000 ತಪಾಸಣೆ ನಡೀಬಹುದು.

ದಕ್ಷಿಣ ಕರ್ನಾಟಕದಾಗ ಐದು ಇದ್ದರ ಉತ್ತರದಾಗ ಮೂರು. ಬಳ್ಳಾರಿ ಜಿಲ್ಲಾಧಿಕಾರಿ ಪ್ರಯೋಗಾಲಯದ ಪಿಸಿಆರ್ ಯಂತ್ರ ಖರೀದಿ ಮಾಡಿ ಇಟಗೊಂಡರ ಸಹಿತ ಅವರಿಗೆ ಜಲ್ದಿ ಪರವಾನಗಿ ಸಿಗಲಿಲ್ಲ. ಬೆಳಗಾವಿಯೊಳಗ ಕೇಂದ್ರ ಸರಕಾರದ ಪ್ರಯೋಗಾಲಯ, ಜವಾಹರಲಾಲ ನೆಹರೂ ವೈದ್ಯ ವಿಜ್ಞಾನ ಕಾಲೇಜಿನ ವರು ಕೇಳಿದರೂ ಸಹ ಪರವಾನಗಿ ಸಿಗಲಿಲ್ಲ.

ಈ ರೀತಿಯ ಚುನಾಯಿತ ತಪಾಸಣೆಯನ್ನ, ಧರ್ಮಾಧಾರಿತ ನಿರ್ಧಾರಗಳನ್ನ ವೈಜ್ಞಾನಿಕ ಅನ್ನಬೇಕೋ, ಹುಷಾರು ಅನ್ನಬೇಕೋ, ಕುತಂತ್ರ ಅನ್ನಬೇಕೋ? ಇದರ ಹಿಂದ ರಾಜಕೀಯ ಐತಿ ಅಂತೀರೋ, ಇಲ್ಲಾ ಅಂತೀರೋ?

ಆಳುವ ಪಕ್ಷದ ಚಾಣಕ್ಯ ನೀತಿಯನ್ನ ಕಂಡವರು ಮಾತ್ರ ಇದು ಅವರ ಮುಂದಿನ ಚುನಾವಣಾ ತಂತ್ರ ಅನಲಿಕ್ಕೆ ಹತ್ಯಾರ.

ಮೊದಲಿನ ಚುನಾವಣೆಗೆ ಜುಮಲಾ ಆತು ಎರಡನೇ ಚುನಾವಣೆಗೆ ಪುಲವಾಮಾ ಸಾಕಾತು. ಇನ್ನ ಇದು ಈ ಕೋರೋನಾ ಪುರಾಣ ಎಷ್ಟು ಖಾರಪುಡಿ- ಮಸಾಲೆ ಕುಟ್ಟಿ ಇಟ್ಟದ ಅಂದರ ಮುಂದೆ ಬರೋ ಎಲ್ಲಾ ಚುನಾವಣೆಗಳಿಗೆ ಇದು ಸಾಕಾಗತದ ಅಂತ ಅವರಿಗೆ ಅನಸತದ. ಹೌದೇ, ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸಯನ್ಸ ಬಗ್ಗೆ ಕಮ್ಮಿ ತಿಳುವಳಕೆ ಇರುವ ತಬ್ಲಿಗಿ ಹಿಂಬಾಲಕನ್ನು ಮೀಡಿಯಾಗಳು ರುಬ್ಬಿದವೇ ಹೊರತು, ಹೆಚ್ವು ಕಲಿತು ಹೊರನಾಡುಗಳಿಂದ ಕರೋನಾ ಕರೆತಂದವರನ್ನಲ್ಲ.
    ಆಳ್ವಿಕೆಯ ಹೆಡ್ಡತನವನ್ನೂ ಬಯಲುಮಾಡಲಿಲ್ಲ.

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...