Homeಎಕಾನಮಿಹಣಕಾಸು ವ್ಯವಸ್ಥೆ ಸುಧಾರಣೆ ಕುರಿತು RBI ಗವರ್ನರ್ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿ

ಹಣಕಾಸು ವ್ಯವಸ್ಥೆ ಸುಧಾರಣೆ ಕುರಿತು RBI ಗವರ್ನರ್ ಶಕ್ತಿಕಾಂತ್ ದಾಸ್ ಪತ್ರಿಕಾಗೋಷ್ಠಿ

- Advertisement -
- Advertisement -

ಪ್ರಸಕ್ತ ಪರಿಸ್ಥಿತಿಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಸಾಮಾನ್ಯವಾಗಿದ್ದು ಶೇ.81ರಷ್ಟು ಎಟಿಎಂಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ. ವಿದೇಶಿ ವಿನಿಮಯ ಸಂಗ್ರಹವು ಏಪ್ರಿಲ್ 10 ರವರೆಗೆ 475.5 ಬಿಲಿಯನ್ ಡಾಲರ್ ಗಳಷ್ಟಿದೆ ಎಂದು ಭಾರತೀಯ ರಿಸರ್ವ ವ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಆರ್.ಬಿ.ಐ ಸಧ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಏರುಪೇರು ಮತ್ತಷ್ಟು ಹೆಚ್ಚಾಗದಂತೆ ತಡೆಯಲು ಏನುಬೇಕಾದರು ಮಾಡುವುದು ಈ ಮಿಷನ್ ಉದ್ದೇಶವಾಗಿದೆ. ಈ ಪರಿಸ್ಥಿತಿಯಲ್ಲಿ ಆರ್.ಬಿ.ಐ. ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.

ವ್ಯವಸ್ಥೆಯಲ್ಲಿ ಸಮರ್ಪಕ ದ್ರವ್ಯತೆ ಕಾಪಾಡಿಕೊಳ್ಳಲು ಬ್ಯಾಂಕ್ ಸಾಲದ ಹರಿವನ್ನು ಸುಗಮಗೊಳಿಸಿದೆ. ಮತ್ತಷ್ಟು ಉತ್ತೇಜಿಸಲು ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಮಾರುಕಟ್ಟೆಯಲ್ಲಿ ಔಪಚಾರಿಕ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡಲು ಕೇಂದ್ರ ಬ್ಯಾಂಕ್‌ಗಳು ಕ್ರಮ ತೆಗೆದುಕೊಂಡಿವೆ ಎಂದರು.

ಆರ್.ಬಿ.ಐ. 50 ಸಾವಿರ ಕೋಟಿ ರೂಗಳಿಗೆ ಉದ್ದೇಶಿತ ದೀರ್ಘಾವಧಿಯ ರೆಪೋ ಕಾರ್ಯಾಚರಣೆಯನ್ನು ಸೂಕ್ತ ಗಾತ್ರದ ಮೂಲಕ ಆರಂಭಿಸಿದರೆ ನಾವು ಪರಿಸ್ಥಿತಿಯನ್ನು ನಿರ್ಣಯಿಸುತ್ತೇವೆ ಮತ್ತು ಆ ಮೊತ್ತವನ್ನು ಹೆಚ್ಚಿಸಬಹುದಾಗಿದೆ ಎಂದು ತಿಳಿಸಿದರು.

ಲಾಕ್‌ಡೌನ್‌ನಿಂದಾಗಿ ವಿಶ್ವ ಮಾರುಕಟ್ಟೆಗಳ ವಹಿವಾಟಿಗೆ ಭಾರತವು ಭಾಗಿಯಾದಲು ಅಡ್ಡಿಪಡಿಸಿದೆ ಮತ್ತು ಆರ್ಥಿಕ ಹಿಂಜರಿತದ ಭಯವನ್ನು ಉಂಟುಮಾಡಿದೆ. ಆರ್‌ಬಿಐ ಈಗಾಗಲೇ ­REPO ದರವನ್ನು 75 ಬೇಸಿಸ್ ಪಾಯಿಂಟ್‌ಗಳಿಗೆ ಇಳಿಸಿದ್ದು, ಆರ್ಥಿಕತೆ 15 ವರ್ಷಗಳ್ಟು ಹಿಂದೆಸರಿದಿದ್ದು 4.4 ಕ್ಕೆ ಇಳಿದಿದೆ. ಕೊರೊನಾ ವೈರಸ್‌ನಿಂದ ಏಕಾಏಕಿ ಉಂಟಾಗಿರುವ ಪರಿಣಾಮಗಳ ವಿರುದ್ಧ ಹಣಕಾಸು ವ್ಯವಸ್ಥೆಯನ್ನು ಸುಧಾರಿಸಲು ಕೆಲವು ಕ್ರಮಗಳನ್ನು ಘೋ‍ಷಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಕ್ಕಳಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಮಾಂಸಾಹಾರ ತರದಂತೆ ಸೂಚಿಸಿದ ಶಾಲೆ: ಆರೋಪ

0
ಜೈಪುರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಮಕ್ಕಳಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಮಾಂಸಾಹಾರವನ್ನು ತರದಂತೆ ನಿಷೇಧಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಈ ಬಗೆಗಿನ ಆರೋಪವನ್ನು ಶಾಲೆಯ ಮುಖ್ಯೋಪಾಧ್ಯಾಯರು ನಿರಾಕರಿಸಿದ್ದಾರೆ. ಕಥೆಗಾರ ಮತ್ತು ಚಿತ್ರಕಥೆಗಾರ, ದರಾಬ್...