Homeಮುಖಪುಟವಿರೋಧ ಅಂದರೇನು, ವಿರೋಧ ಪಕ್ಷ ಅಂದರ ಏನು? ನಿಮಗೇನಾರ ಗೊತ್ತಾ?

ವಿರೋಧ ಅಂದರೇನು, ವಿರೋಧ ಪಕ್ಷ ಅಂದರ ಏನು? ನಿಮಗೇನಾರ ಗೊತ್ತಾ?

- Advertisement -
- Advertisement -

ನಿಮ್ಮಲ್ಲಿ ವಿರೋಧ ಪಕ್ಷದ ಪರವಾಗಿ ಇರುವವರು ಯಾರು? ಹೋಗಲಿ ವಿರೋಧ ಪಕ್ಷ ಅಂದರ ಏನು? ಹೋಗಲಿ ಆತಲಾಗ ವಿರೋಧ ಅಂದ್ರ ಏನು ?

ಈ ಗಹನವಾದ ವಿಷಯ ಇಂದಿನ ಖೋಲಿಯ ವಸ್ತು.

ರಾಜಕೀಯ ಶಾಸ್ತ್ರ ಓದೋ ಹುಡುಗರ ನಡುವ ಒಂದು ಬಹುಚರ್ಚಿತ ಮಾತು ಐತಿ : “ನಮ್ಮ ಸಂವಿಧಾನದಾಗ ಆಡಳಿತ ಪಕ್ಷ ಅನ್ನೋ ಪದ ಇಲ್ಲಾ. ಆದರ ವಿರೋಧ ಪಕ್ಷ ಅನ್ನೋ ಪದ ಐತಿ’. ಈ ಮಾತು ಯಾಕ ಹೇಳತಾರ ಅಂದ್ರ, “ಭಾರತ ಅನ್ನೋದು ಆಡಳಿತ ಪಕ್ಷ ಕೇಂದ್ರಿತ ಪ್ರಜಾಪ್ರಭುತ್ವ ಅಲ್ಲ, ಅದು ಸಮ್ಮಿಳಿತ ಪ್ರಜಾಪ್ರಭುತ್ವ, ಇದರಲ್ಲಿ ವಿರೋಧ ಪಕ್ಷಕ್ಕೆ ಭಾಳ ಪ್ರಾಮುಖ್ಯತೆ ಇದೆ’ ಅಂತ ತಿಳಿಸಲಿಕ್ಕೆ.

ಬ್ರಿಟಿಷ್ ಸರ್ಕಾರದಾಗ ವಿರೋಧ ಪಕ್ಷ ಅಂದ್ರ ಬಹಳ ಗೌರವ. ವಿರೋಧ ಪಕ್ಷದ ನಾಯಕನಿಗೆ ಛಾಯಾ ಪ್ರಧಾನಿ ಅಂತ, ಇತರ ನಾಯಕರಿಗೆ ಛಾಯಾ ಕೃಷಿ ಸಚಿವ, ಛಾಯಾ ಹಣಕಾಸು ಸಚಿವ, ಛಾಯಾ ರಕ್ಷಣಾ ಸಚಿವ, ಇತ್ಯಾದಿ ಹೆಸರುಗಳಿಂದ ಕರೀತಾರ.

ಅವರು ತಮಗೆ ವಹಿಸಿಕೊಟ್ಟ ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಸಂಸತ್ತಿನಲ್ಲಿ ಮಾತಾಡತಾರ. ಅಲ್ಲದೇ ಪ್ರತಿ ಬಾರಿ ಆ ಕ್ಷೇತ್ರದ ಬಗ್ಗೆ ಸರಕಾರ ಏನಾದರೂ ಹೊಸಾ ನೀತಿ ಮಾಡಿದರ, ಅಥವಾ ಬದಲಾವಣೆ ಮಾಡಿದರ, ಅದಕ್ಕ ಸಂಬಂಧ ಪಟ್ಟ ಛಾಯಾ ಸಚಿವರು ಮಾತಾಡತಾರ. ನಮ್ಮಲ್ಲಿ ಹಂಗ ಯಾರಾರರ, ಏನೇನರ ತಲಿಯೊಳಗ ಒಂದು- ಒಂದು ಮಾತಾಡೋದಿಲ್ಲ.

ಹಂಗಾರ ನಮ್ಮ ಹಿರಿಯರೆಲ್ಲ – ಯಾರು ಯಾರು ಈ ದೇಶದ ಸ್ವಾತಂತ್ರ್ಯದ ಸಲುವಾಗಿ ಮನಿ ಬಿಟ್ಟು ಓಡಿಹೋಗಿ, ಸಾಲಿ, ನೌಕರಿ ಬಿಟ್ಟು ವರ್ಷಗಟ್ಟಲೆ ತಪ್ಪಿಸಿಕೊಂಡು ಅಡ್ಡಾಡಿದವರು- ಈ ದೇಶದ ಸರ್ಕಾರದ ಸ್ವರೂಪ ಹೆಂಗ ಇರಬೇಕು ಅಂತ ನಿರ್ಧಾರ ಮಾಡಿದಾಗ ಅವರ ತಲಿಯೊಳಗ ಏನು ಇತ್ತು?

ಅವರಿಗೆ ಈ ದೇಶ ಬಹಳ ದೊಡ್ಡದು, ಅದನ್ನ ಸರಿಯಾಗಿ ನಡಸಬೇಕು ಅಂದ್ರ ಇದು ಬಹುಜನರ ಸರಕಾರದಿಂದ ಮಾತ್ರ ಸಾಧ್ಯ ಅನ್ನೋದು ಗೊತ್ತಿತ್ತು. ಚುನಾವಣೆ ಅನ್ನೋದು ಲಕ್ ಬೈ ಛಾನ್ಸ್ ಅನ್ನೋದು ಗೊತ್ತಿತ್ತು. ಬರೇ ಒಂದು ವೋಟಿನಿಂದ ಗೆದ್ದ ಮನಿಶಾ ಜನರ ಪ್ರತಿನಿಧಿ ಆಗಿಬಿಡೋದು, ಸೋತವ ಮೂಲಿ ಒಳಗ ಕೂಡೋದು, ಅದು ತಪ್ಪು ಅಂತ ಅವರಿಗೆ ಗೊತ್ತಿತ್ತು.

ನಮ್ಮ ದೇಶದ ಮುಂದಿನ ದಾರಿ ನಿರ್ಧಾರ ಮಾಡೋವಾಗ ಎಲ್ಲಾ ಮತದಾರರ ಅಭಿಪ್ರಾಯವನ್ನೂ ಪರಿಗಣಿಸಬೇಕು, ವಿರೋಧ ಪಕ್ಷದವರೂ ಇಲ್ಲಿ ಅಮುಖ್ಯರಲ್ಲ ಅಂತ ಅವರು ಠರಾವಿಸಿದ್ದರು.

ಹೀಂಗೇ ಮುಂದುವರೆದು ಸರಕಾರ ಅಂದ್ರ ಬರೇ ಕಾಯಾಂಗ ಅಲ್ಲ. ಅದರಾಗ ಮೂರು ಅಂಗ ಆದವು. ಅವು ಎಲ್ಲವೂ ಮುಖ್ಯ ಅಂದ್ರು. ಒಂದು ಹೆಜ್ಜಿ ಮುಂದ ಹೋಗಿ ಶಾಸಕಾಂಗ ಅನ್ನೋದು ಕಾಯಾಂಗಕ್ಕಿಂತ ಮುಖ್ಯ ಅಂತ ತಿಳಿಸಿ ಹೇಳಿದರು. ಕಾಯಾಂಗ ಅನ್ನೋದು ಶಾಸಕಾಂಗದ ಕೈ ಗೊಂಬೆ, ಅದನ್ನು ಇದು ಯಾವಾಗ ಬೇಕಾದಾದರೂ ಬೀಳಿಸಬಹುದು ಅಂತ ಸಾರಿದರು.

ಸಂವಿಧಾನದ ಪ್ರಕಾರ ವಿರೋಧ ಪಕ್ಷದ ಕೆಲಸ ಏನು ಅಂದರೆ ೧. ಸರ್ಕಾರದ ನೀತಿ- ನಿಯಮಗಳ ಸರಿ- ತಪ್ಪುಗಳ ವಿಮರ್ಶೆ ಮಾಡೋದು, ೨. ಯೋಜನೆ ಜಾರಿ ಬಗ್ಗೆ ತಮ್ಮ ಅಭಿಪ್ರಾಯ ತಿಳಸೋದು, ೩. ಸದನದೊಳಗ ಜನರ ದನಿ ಆಗೋದು ೪. ತೆರಿಗೆ ಹಣದ ಸರಿಯಾದ ಬಳಕೆ ಅಗೇದೋ ಇಲ್ಲೋ ನೋಡೋದು, ಮತ್ತು ಆಳುವವರು ಶಾಸಕರ ವಿಶ್ವಾಸ ಕಳೆದುಕೊಂಡರ ಅವರನ್ನ ತಕ್ಷಣಕ್ಕೆ ಮನಿಗೆ ಕಳಸೋದು, ಹೊಸಾ ನಾಯಕನ್ನ ಆಯ್ಕೆ ಮಾಡೋದು.

ಸರಕಾರ ಅನ್ನುವುದು, ಅದು ಯಾರದೇ ಇರಲಿ, ಅದನ್ನ, ಅದರ ಸರಿ- ತಪ್ಪುಗಳನ್ನ, ಅದರ ಜನಪರ ಹಾಗೂ ಜನ ವಿರೋಧಿ ನೀತಿ, ಅಥವಾ ಕಾರ್ಯಕ್ರಮಗಳ ಜಾರಿಗಳ ಬಗ್ಗೆ ಮಾತಾಡುವುದು ವಿರೋಧ ಪಕ್ಷದ ಮೂಲಭೂತ ಹಕ್ಕು. ಬಾಹುಳ್ಯದ ಪ್ರಜಾಪ್ರಭುತ್ವದಲ್ಲಿ ಇದು ಅವರ ಪವಿತ್ರ ಹಕ್ಕು. ಅದನ್ನು ಮಾಡದಿದ್ದರೆ ಅವರು ತಪ್ಪು ಮಾಡಿದಂಗೆ. ಅವರು ಜನರಿಗೆ ನೀಡಿದ ಜವಾಬುದಾರಿಯನ್ನು ತಪ್ಪಿಸಿಕೊಂಡಂತೆ.

ಇದನ್ನೆಲ್ಲಾ ಯಾಕ ಹೇಳಬೇಕಾತು ಅಂದ್ರ ಮೊನ್ನೆ ನಮ್ಮ ಗೃಹ ಸಚಿವ ಅಮಿತ್ ಷಾ ಅವರು ಆಡಳಿತ ಪಕ್ಷದ ಬಗ್ಗೆ ಮಾತಾಡೋ ವಿರೋಧ ಪಕ್ಷದವರು ಮೊದಲು ತಾವು ಏನು ಮಾಡಿದಾರ ಅನ್ನೋದು ತೋರಿಸಕೊಡಬೇಕು ಅಂತ ಫರಮಾನು ಕೊಟ್ಟಾರ.

ಅಂತವರಿಗೆ ಒಂಚೂರು ಬ್ರಿಟನ್‌ನ ಗಾರ್ಡಿಯನ ಪತ್ರಿಕೆಯ ಬಗ್ಗೆ ಹೇಳಬೇಕು. ಅವರು ಪ್ರತಿ ಚುನಾವಣೆಯ ನಂತರ ಈ ಪಕ್ಷ ಬಹುಮತ ಪಡೆದು ಆಳುವ ಪಕ್ಷವಾಗಿದೆ. ಆ ಪಕ್ಷ ವಿರೋಧ ಪಕ್ಷವಾಗಿ ಜನರ ಪಕ್ಷವಾಗಿದೆ ಅಂತ ಘೋಷಿಸುವ ಪರಂಪರೆ ಹೊಂದಿದೆ. ತನ್ನನ್ನು ತಾನು ಸರ್ವಕಾಲಿಕ ವಿರೋಧ ಪಕ್ಷ ಅಂತ ಹೇಳಿಕೊಂಡಿದೆ.

ಇದು ಸದನದ ಎಡಗಡೆ, ಬಲಗಡೆ ಕೂಡುವ ಎಲ್ಲರಿಗೂ ತಿಳಿಯಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...