Homeಅಂಕಣಗಳುನಾನಂತೂ ನಿವೃತ್ತಿಯಾಗಲ್ಲ ಕಂಡ್ರೀ!

ನಾನಂತೂ ನಿವೃತ್ತಿಯಾಗಲ್ಲ ಕಂಡ್ರೀ!

- Advertisement -
- Advertisement -

ಮೋದಿ ಸರಕಾರ ಒಂಬತ್ತು ವರ್ಷ ತುಂಬಿಸಿದ ಸಂತಸವನ್ನು, ದೇಶದ ತುಂಬ ಸಭೆ ಸಮಾರಂಭ ಯಜ್ಞ ಹೋಮ ಹವನ ಇತ್ಯಾದಿ ವೈದಿಕಾಚರಣೆಗಳಿಂದ ವಿಜೃಂಭಿಸಲು ತಯಾರಾಗುತ್ತಿರುವಾಗಲೇ ಭೀಕರ ರೈಲ್ವೆ ಅಪಘಾತ ಸಂಭವಿಸಿದೆ. ಎದೆ ನಡುಗಿಸುವ ಈ ಘಟನೆಯಿಂದ ದೇಶವೇ ಬೆಚ್ಚಿಬಿದ್ದಿದೆ. ಈ ಘಟನೆಗೆ ಕಾರಣರ್‍ಯಾರು, ಹೊಣೆಗಾರರಾರು ಎಂಬ ಚರ್ಚೆಯು ಅವ್ಯಾಹತವಾಗಿ ನಡೆದಿದೆ. ಇದು ಒಂದೆಡೆಯಾದರೆ ಮೋದಿಯವರ ಒಂಬತ್ತು ವರ್ಷದ ಸಂಭ್ರಮದ ಸಮಯದಲ್ಲಿ ಸಂಭವಿಸಿದ ಸಾವುಗಳನ್ನು ನೆನೆಯುವುದಾದರೆ: 2019ರಲ್ಲಿ ನಡೆದ ಘಟನೆಯಲ್ಲಿ, 40 ಜನ ಸೈನಿಕರ ಬಲಿದಾನಕ್ಕೆ ಸರಕಾರದ ನಿರ್ಲಕ್ಷವೇ ಕಾರಾಣವೆಂದು ಜಮ್ಮುಕಾಶ್ಮೀರದ ಮಾಜಿ ರಾಜ್ಯಪಾಲರು ಬಹಿರಂಗಂಪಡಿಸಿದ್ದಾರೆ; ನಂತರ ಕೃಷಿಕಾಯ್ದೆ ಜಾರಿಯನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ನಡೆದ ರೈತ ಪ್ರತಿಭಟನೆಯಲ್ಲಿ 750 ಜನ ರೈತರು ಅಸುನೀಗಿದರು. ಆ ಸಾವುಗಳ ಬಗ್ಗೆ ಮಾತನಾಡದ ಪ್ರಧಾನಿಯವರು, ಶಿವಮೊಗ್ಗ ಸುಬ್ಬಣ್ಣ ಎಂಬ ಗಾಯಕರೊಬ್ಬರು ತೀರಿಕೊಂಡಾಗ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಾವಿನಂಚಿನಲ್ಲಿದ್ದ ಸಿದ್ದೇಶ್ವರ ಸ್ವಾಮಿಗಳಿಗೆ ಫೋನ್ ಮಾಡಿದರು; ಆದರೆ ಸಿದ್ದೇಶ್ವರರಿಗೆ ಮಾತನಾಡಲು ಸಾಧ್ಯವಾಯಿತೋ ಇಲ್ಲವೋ! ಇವೆಲ್ಲಾ ಘಟನೆ ಪ್ರಧಾನಿಯ ಒಂಬತ್ತು ವರ್ಷದ ಸಂಭ್ರಮದಲ್ಲಿ ನೆನೆಸುವ ಘಟನೆಗಳಂತಲ್ಲಾ, ಥೂತ್ತೇರಿ.

*****

ಕಾಂಗ್ರೆಸ್ ಪಕ್ಷ ಚುನಾವಣಾ ಸಮಯದಲ್ಲಿ ಘೋಷಣೆ ಮಾಡಿದ ಗ್ಯಾರಂಟಿಗಳನ್ನು, ಸರ್ಕಾರ ರಚಿಸಿದ ಮೇಲೆ ಜಾರಿ ಮಾಡಲು ತೆಗೆದುಕೊಂಡ ಹದಿನೈದು ದಿನಗಳ ಅವಧಿಯಲ್ಲಿ, ಮನೆಯಿಂದ ಈಚೆಗೆದ್ದು ಬಂದ ಸೋತ ಬಿಜೆಪಿ ಎಮ್ಮೆಲ್ಲೆಗಳು, ಗ್ಯಾರಂಟಿಗಳನ್ನು ತಕ್ಷಣವೇ ಜಾರಿ ಮಾಡದಿದ್ದರೆ ಹೋರಾಟ ಮಾಡುತ್ತೇವೆ ಎಂದಿದ್ದರು. ದಳದ ಕುಮಾರಣ್ಣನವರು ಬೀದಿಗಿಳಿಯುವ ಬೆದರಿಕೆ ಹಾಕಿದರು. ಇದಾವುದಕ್ಕೂ ಕಿವಿಗೊಡದ ಸಿದ್ದು ಟೀಮು ಗ್ಯಾರಂಟಿಗಳನ್ನು ಜಾರಿ ಮಾಡಿಯೇಬಿಟ್ಟಿತು. ಇದರಿಂದ ಆಘಾತಗೊಂಡಂತಾದ ಟಿ.ವಿ ಮಾಧ್ಯಮದವರು ಸರಕಾರವನ್ನು ಅಕಾರಣವಾಗಿ ಟೀಕಿಸುವ ಅಡ್ನಾಡಿಗಳನ್ನು ತಂದು ಕೂರಿಸಿಕೊಂಡು ಎರಡು ಸಾವಿರ ರೂಗಳಿಂದ ಅತ್ತೆ ಸೊಸೆ ಜಗಳ ಶುರುವಾಗುತ್ತೆ, ಲಕ್ಷ ರೂಗಳ ಸಂಬಳ ತೆಗೆಯುವ ಕೆಲ ಮಹಿಳೆಯರಿಗೆ 2000 ಕೊಡುವುದು ಎಷ್ಟು ಸರಿ, ಈ ಭಾಗ್ಯಗಳಿಂದ ದೇಶ ದಿವಾಳಿಯಾಗುತ್ತೆ, ಇವುಗಳ ಮುಂದುವರಿಕೆ ಸಾಧ್ಯವಿಲ್ಲ ಎಂದು ಬೊಬ್ಬೆ ಹೊಡೆದವಲ್ಲ. ಸಾಮಾನ್ಯವಾಗಿ ಬಿಜೆಪಿ ಮನಸ್ಸುಗಳು ಬಡವರು ಸಫಲರಾಗುವುದನ್ನು ಸಹಿಸುವುದಿಲ್ಲವಂತಲ್ಲಾ, ಥೂತ್ತೇರಿ.

*****

ಬಿಜೆಪಿ ಮನಸ್ಸುಗಳಿಗೆ ಗ್ಯಾರಂಟಿ ಭಾಗ್ಯಗಳನ್ನು ಏಕೆ ಸಹಿಸಲಾಗುವುದಿಲ್ಲ ಎಂದರೆ ಅವರ ಧರ್ಮಗುರುವಾದ ಗೋಳವಲಕರ ಬಡವರ ಉದ್ಧಾರದ ವಿರೋಧಿ; ಬಡವರು ಅದರಲ್ಲೂ ಶೋಷಿತಜಾತಿ ಜನರಿಗೆ ಯಾವ ಸವಲತ್ತನ್ನು ಕೊಡಬಾರದು, ಅವರು ಉನ್ನತ ಹುದ್ದೆಗೆ ಬರದಂತೆ ನೋಡಿಕೊಳ್ಳಬೇಕು, ಅವರು ಎ.ಸಿ ಮತ್ತು ಡಿ.ಸಿ ಹಾಗೂ ತಹಸೀಲ್ದಾರನಾಗದಂತೆ ನೋಡಿಕೊಳ್ಳಬೇಕು, ನಿಮ್ಮನ್ನ ನೋಡಿದ ಕೂಡಲೇ ಅವರು ನಿಮ್ಮ ಪಾದ ನೋಡುತ್ತ ನಿಲ್ಲಬೇಕು, ಅದು ಬಿಟ್ಟು ಸರಿಸಮಾನರಾಗಿ ವರ್ತಿಸಬಾರದು, ಬಡವರು ಮತ್ತು ಕೆಳಜಾತಿಗಳು ಎಂದಿನವರೆಗೆ ಬಡವರಾಗಿರುತ್ತಾರೊ ಅಲ್ಲಿಯವರೆಗೆ ನೀವು ಸುಖವಾಗಿರುತ್ತೀರಿ ತಿಳಿಯಿರಿ ಎಂದು ಆತ ಹೇಳಿದ್ದಾನೆ. ಈ ವೇದವಾಕ್ಯ ಅವರ ಬರವಣಿಗೆಯಲ್ಲಿ ದಾಖಲಾಗಿದೆ. ಅನುಮಾನಗೊಂಡವರು ಗೋಳವಲಕರನನ್ನ ಓದಬಹುದು. ಅದನ್ನು ಓದಿಕೊಂಡ ಬಿಜೆಪಿಗಳು ಗ್ಯಾರಂಟಿ ಜಾರಿಯಾದಂದಿನಿಂದ ನಿದ್ದೆಯನ್ನೆ ಕಳೆದುಕೊಂಡು, ಗ್ಯಾರಂಟಿ ನಂಬಬೇಡಿ ಎಂದು ಕೂಗಾಡುತ್ತ ತಿರುಗುತ್ತಿವೆಯಂತಲ್ಲಾ, ಥೂತ್ತೇರಿ.

*****

ರಾಜಕಾರಣದಲ್ಲಿದ್ದರೆ ಮಾತ್ರ ಎಲ್ಲ ರೀತಿಯ ಮಜಗಳನ್ನೂ ಮಾಡುತ್ತ, ಆಸ್ತಿಪಾಸ್ತಿ ಗಳಿಸುತ್ತ, ಅದನ್ನು ನಿಭಾಯಿಸುತ್ತಾ ಇರಬಹುದುದೆಂದು ನಂಬಿರುವ ರಾಜಕಾರಣಿಗಳ ಪೈಕಿ ಮುಂಚೂಣಿಯಲ್ಲಿರುವ ಹೊನ್ನಾಳಿ ರೇಣುಕಾಚಾರಿ ಚುನಾವಣಾ ಫಲಿತಾಂಶ ಬಂದಕೂಡಲೇ ಸಿಡಿಲು ಬಡಿದವನಂತೆ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ ಹೊನ್ನಾಳಿಯ ಜೊತೆಗೆ ಇಡೀ ನಾಡೇ ಬೆಚ್ಚುವಂತೆ ಮಾಡಿಬಿಟ್ಟರಲ್ಲಾ. ಬಿಜೆಪಿಯ ಜೊತೆಗೆ ಇಡೀ ನಾಡನ್ನೇ ಡಲ್ಲು ಮಾಡಿದ ರೇಣುಕಾಚಾರಿಯನ್ನು ಮಾತನಾಡಿಸಿ ಸಾಂತ್ವಾನ ಹೇಳುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್‌ಟೋನ್: “ನೀವು ಪ್ರಯತ್ನಿಸುತ್ತಿರುವ ಗ್ರಾಹಕ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ”; ಮತ್ತೆಮತ್ತೆ ಫೋನ್ ಮಾಡಲಾಗಿ ರಿಂಗಾಯ್ತು. “ಕ್ಯಂಚಾಲೊ ಮಚ್ಚಾಲೊ ಯಂಗವುಲಾ ನಿನ್ ಡವ್‌ಗಳು”..

“ಹಲೊ ಯಾರ್ರಿ?”

“ನಾನು ಸಾರ್ ಯಾಹು. ನಿಮ್ಮ ಬಾಮೈದುನ ಗೆಳೆಯ.”

“ಬಾಮೈದನ ಗೆಳೆಯ ಆಗಿದ್ರೆ ಅವುನಿಗೆ ಫೋನ್ ಮಾಡ್ರಿ.”

“ನಿಮ್ಮತ್ರ ಒಂದೆರಡು ಮಾತಾಡಬೇಕು ಸಾರ್.”

“ಅದೇನು ಜಲ್ದಿ ಹೇಳ್ರಿ.”

“ಬ್ಯುಸಿನಾ ಸಾರ್?”

“ಇಲ್ಲಿ ಕ್ರಿಕೆಟ್ ಆಡ್ತಾಯಿದ್ದಿನಿ ಕಂಡ್ರಿ.”

“ಎಲ್ಲಿ ಸಾರ್?”

“ನಮ್ಮೂರ ಸ್ಕೂಲು ಮೈದಾನದಲ್ಲಿ.”

“ಯಾರ ಜೊತೆ ಸಾರ್?”

“ಇನ್ಯಾರು.. ನಮ್ಮೂರ ಹುಡುಗರ ಜೊತೆ ಆಡ್ತಾಯಿದ್ದಿನಿ ಕಂಡ್ರೀ.”

“ನಿಜಕ್ಕೂ ನೀವು ಅಪರೂಪದ ರಾಜಕಾರಣಿ ಸಾರ್. ಮಂಡಿ ಉದ್ದ ನೀರಲ್ಲಿ ತೆಪ್ಪ ನಡುಸ್ತಿರಿ. ಸಣ್ಣುಡಗರ ಜೊತೆ ಕ್ರಿಕೆಟ್ ಆಡ್ತಿರಿ. ರಾಜಕಾರಣಿ ಈ ತರ ತಮಾಸಿಯಾಗಿರಬೇಕು ಸಾರ್.”

“ನಾನು ಯಾವತ್ತು ತಮಾಸಿ ಕಂಡ್ರಿ. ಯಾವುದ್ನೂ ಸೀರಿಯಸ್ಸಾಗಿ ತಗಳದಿಲ್ಲ.”

“ತಗೊಬಾರ್ದು ಸಾ. ಅಂಗೆ ತಗಂಡಿದ್ರೆ ಇಷ್ಟೊತ್ತಿಗೆ ಮನೆ ಬಿಟ್ಟು ಎಲ್ಲೋ ಇರ್ತಿದ್ರಿ ಅಲ್ಲುವಾ ಸರ್?”

“ಮುಗದೋದ ಕತೆನೆಲ್ಲ ನಾನೇ ಯೋಚನೆ ಮಾಡ್ತಯಿಲ್ಲ, ಇನ್ನ ನೀವ್ಯಾಕೆ ತಲೆ ಕೆಡಿಸಿಕೊಳ್ತಿರಿ.”

“ಈಶ್ವರಪ್ಪ ಅಂಥ ವ್ಯಕ್ತಿ ಮತ್ತೆ ನೀವು ಜೊತೆಲಿ ಸೋತರಿ; ಅವುರು ಚುನಾವಣಾ ರಾಜಕೀಯದಿಂದ ನಿವೃತ್ತರಾದ್ರೆ ನೀವು ರಾಜಕಾರಣದಿಂದ್ಲೇ ನಿವೃತ್ತರಾದರಲ್ಲಾ ಸಾರ್.”

“ರೀ ನಾನಿನ್ನೂ ನಿವೃತ್ತಿಯಾಗಿಲ್ಲ ಕಂಡ್ರಿ.”

“ಮತ್ತೆ ಘೋಷಣೆ ಮಾಡಿದರಲ್ಲಾ ಸಾರ್?”

“ಅದು ರಿಜಲ್ಟ್ ಬಂದಾಗ ಅಂಗಂದೆ; ಈಗ ನಮ್ಮ ಕ್ಷೇತ್ರದ ಜನತೆ ನೀವು ನಿವೃತ್ತಿಯಾದ್ರೆ ನಮ್ಮ ಕತೆಯೇನು ಅಂತಾವುರೆ..”

“ಗೆದ್ದಿರೋರು ನೋಡಕತರೆ ಬುಡಿ ಸಾರ್.”

“ಗೆದ್ದಿರೋರು ಅವುರ ಕಡಿಯೋರ್ನ ನೋಡಕತರೆ ಕಂಡ್ರಿ. ನನ್ನ ಪಾಲೊಯರ್ಸ್‌ನ ಯಾರು ರಕ್ಷಣೆ ಮಾಡ್ತರ್ರಿ?”

“ರಕ್ಷಣೆ ಮಾಡಬೇಕಾದ ಸ್ಥಿತಿಯಿದಿಯಾ ಸಾರ್?”

“ಇಲ್ಲಿನ ಮುಸ್ಲಿಮರಿಗೂ ನನಿಗೂ ಆಗಲ್ಲ ಕಂಡ್ರಿ.”

“ಶಾಸಕನಾದವನು ಎಲ್ಲಾ ಜನಾಂಗದ ರಕ್ಷಕನಾಗಬೇಕು ಸಾರ್. ಅದು ಬಿಟ್ಟು ಒಂದು ಜನಾಂಗನ ಅಪಾಯಕಾರಿಗಳು ದೇಶದ್ರೋಹಿಗಳು, ನಂಬಿಕೆಗೆ ಯೋಗ್ಯರಲ್ಲ ಅಂತ ಸುಳ್ಳುಸುಳ್ಳೆ ಬೈದರೆ ಅವರ ಮನಸ್ಸಿಗೆ ನೋವಾಗಲ್ಲಾವಾ ಸಾರ್?”

“ನೋವಾಗೋ ಅಂತ ಕೆಲಸ ಯಾಕ್ ಮಾಡಬೇಕ್ರಿ?”

“ಹೊನ್ನಾಳಿಲಿ ಯಾರಿಗೂ ಆಗದೆಯಿರೊ ಸಮಸ್ಯೆ ನಿಮಗ್ಯಂಗಾಯ್ತು ಸಾರ್? ಅಲ್ಲಿನ ಮುಸ್ಲಿಮರು, ಕುರುಬರು, ಲಿಂಗಾಯತರು ಮತ್ತು ಇತರೆ ಶೋಷಿತ ಜಾತಿಗಳ ಜೊತೆ ಆರಾಮಾಗಿರುವಾಗ, ನೀವು ಬಂದು ಈ ಮುಸ್ಲಿಮರ ನಂಬಬೇಡಿ ಅವರ ಮಸೀದಿಲಿ ವೆಪನ್ನಿವೆ, ಮಾರಕಾಸ್ತ್ರಗಳಿವೆ ಅಂತ ರೈಲು ಬುಟ್ಟು ಬೊಬ್ಬೆ ಹೊಡೆದರಲ್ಲಾ, ಇದು ಹೊನ್ನಾಳಿ ಜನಗಳಿಗೆ ಸುಳ್ಳು ಅನ್ನಸ್ತು. ಅದಕ್ಕೆ ತಕ್ಕ ಶಿಕ್ಷೆ ಅಂದ್ರೆ ನಿಮ್ಮನ್ನ ಚುನಾವಣೆಲಿ ಸೋಲುಸೋದನ್ನ ಯಲ್ಲ ಜನಾಂಗ ಮಾಡಿ ತೋರಿಸಿದಾವೆ ಸಾರ್. ಈ ಟೈಮಲ್ಲಿ ನಿಮ್ಮ ನಿವೃತ್ತಿ ಘೋಷಣೆ ಬಹಳ ಸೂಕ್ತವಾಗಿದೆ ಸಾರ್. ನಿಜಕ್ಕೂ ಪ್ರಾಯಶ್ಚಿತ್ತ ಅಂದ್ರೆ ಇದೆನೆ.”

“ನಾನು ನಿವೃತ್ತಿಯಾಗಿಲ್ಲ ಕಣ್ರಿ. ಮತ್ತೆ ಚುನಾವಣೆಗೆ ಬರ್ತಿನಿ.”

“ಜನ ಪುನಹ ಸೋಲಿಸಿದ್ರೆ?”

“ಆಗ ಬೇಕಾದ್ರೆ ನಿವೃತ್ತಿ ಘೋಷಣೆ ಮಾಡ್ತಿನಿ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....