Homeಕಥೆ"ಗಂಧರ್ವಸೇನಾ ಸತ್ತಾಗ?" : ಪ್ರಸ್ತುತ ಯಾವುದೇ ವಿದ್ಯಮಾನಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ

“ಗಂಧರ್ವಸೇನಾ ಸತ್ತಾಗ?” : ಪ್ರಸ್ತುತ ಯಾವುದೇ ವಿದ್ಯಮಾನಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ

- Advertisement -
- Advertisement -

ರಾಜ ತನ್ನ `ಪರಿವಾರ’ ಸಮೇತ ಒಡ್ಡೋಲಗದಲ್ಲಿ ಬ್ಯುಸಿಯಾಗಿದ್ದ. ಅಷ್ಟೊತ್ತು ಮಿಸ್ಸಿಂಗ್ ಆಗಿದ್ದ ಮಂತ್ರಿ, ಜೋರಾಗಿ ರೋಧಿಸುತ್ತ ಕಣ್ಣೀರ ಧಾರೆ ಸುರಿಸುತ್ತ ಓಡೋಡಿ ಒಡ್ಡೋಲಗ ಪ್ರವೇಶಿಸಿದ. ಮಂತ್ರಿಯ ಸ್ಥಿತಿ ನೋಡಿ ರಾಜನಿಗೆ ಗಾಬರಿಯಾಯ್ತು. “ಏನಾಯ್ತು ಮಂತ್ರಪ್ಪ. ಅದ್ಯಾಕಿಂಗೆ ಸಣ್ಣಮಕ್ಕಳ ಥರ ಅತ್ಕೊಂಡು ಬತ್ತಾ ಇದೀಯ? ಮನೆಯಲ್ಲಿ ಹೆಂಡ್ರು, ಮಕ್ಕಳು ಕ್ಷೇಮವೆ” ರಾಜ ವಿಚಾರಿಸಿದ. “ಅಯ್ಯೋ ಏನಂಥಾ ಹ್ಯೇಳೋದು ಮಾರಾಜುರೆ. ಗಂಧರ್ವ ಸೇನಾ ಸತ್ತೋದ್ನಂತೆ!” ಮಂತ್ರಿ ತನ್ನ ಸಂಕಟದ ಮೂಲವನ್ನು ಮುಂದಿಟ್ಟ.

“ಅಯ್ಯಯ್ಯೋ, ಎಂಥಾ ಸುದ್ದಿ ಹ್ಯೇಳ್ತಾ ಇದೀಯ ಮಂತ್ರಪ್ಪ. ಗಂಧರ್ವ ಸೇನಾ ಸತ್ತೋದ್ನಾ!!!” ಈಗ ಮಹಾರಾಜ ಕೂಡಾ ಮಂತ್ರಿಗೆ ಕೋರಸ್ ಕೊಟ್ಟು ರೋಧಿಸಲು ಶುರು ಮಾಡಿದ. ರಾಜನೆ ಕಣ್ಣೀರಿಟ್ಟ ಮೇಲೆ ಕೇಳಬೇಕೆ. ಇಡೀ ಒಡ್ಡೋಲಗವೆ

“ಅಯ್ಯಯ್ಯೋ, ಗಂಧರ್ವ ಸೇನಾ ಹೋಗ್ಬುಟ್ಟೆಯಾ” ಎಂಬ ರೋಧನೆಯಲ್ಲಿ ಮುಳುಗಿಹೋಯ್ತು.

ಹಾರ್ಟ್ ಬ್ರೇಕಿಂಗ್ ಸುದ್ದಿ ಕೇಳಿದಮೇಲೆ ಒಡ್ಡೋಲಗ ನಡೆಸುವ ಯಾವ ಉಮೇದಿಯೂ ರಾಜನಿಗೆ ಉಳಿಯಲಿಲ್ಲ. ರಾಜ್ಯದಲ್ಲಿ ಇಪ್ಪತ್ತೊಂದು ದಿನಗಳ ಶೋಕಾಚರಣೆ ಘೋಷಿಸಿ, ದುಃಖತಪ್ತ ಮೋರೆಯಲ್ಲಿ ಅಂತಃಪುರದ ಕಡೆ ನಡೆದ.

ಒಡ್ಡೋಲಗದಲ್ಲಿರಬೇಕಿದ್ದ ರಾಜ ಹೀಗೆ ಹೊತ್ತಲ್ಲದಹೊತ್ತಲ್ಲಿ ಅಂತಃಪುರಕ್ಕೆ ಧಾವಿಸಿದ್ದನ್ನು, ಅದರಲ್ಲು ದುಖತಪ್ತನಾಗಿ ರಾಣಿನಿವಾಸ ಹೊಕ್ಕಿದ್ದನ್ನು ನೋಡಿ ಅವನ ರಾಣಿಯರಿಗೆ ಅಚ್ಚರಿಯಾಯ್ತು. ಪಟ್ಟದರಸಿ ರಾಜನ ಬಳಿ ಬಂದು “ಯಾಕೆ ಮಾಸ್ವಾಮಿ, ಶ್ಯಾನೆ ಬ್ಯಾಸರದಲ್ಲಿ ಇದೀರಿ. ಮಟಮಟ ಮಧ್ಯಾನುವೆ ಮಂಚದ ಮನೆಯತ್ತ ಬಂದಿದೀರಿ. ಏನ್ಸಮಾಚಾರ?” ತುಸು ಅಳುಕಿನಲ್ಲೆ ಕೇಳಿದಳು. “ಏನಂಥಾ ಹ್ಯೇಳ್ಳಿ ಮಾರಾಣಿ, ಗಂಧರ್ವಸೇನಾ ಸತ್ತೋದ್ನಂತೆ” ರಾಜನ ಮಾತಿನ್ನು ಬಾಯೊಳಗೇ ಇತ್ತೇನೊ, ಮಹಾರಾಣಿ ದೊಪ್ಪನೆ ನೆಲಕ್ಕೆ ಕುಸಿದುಬಿದ್ದಳು. “ಏನಂದ್ರಿ ಪ್ರಭು, ಗಂಧರ್ವಸೇನ ಸತ್ತೋದ್ನ? ಅಯ್ಯೋ ದುರ್ವಿಧಿಯೇ?..!” ಮಹಾರಾಣಿ ಚಿತ್ರವಿಚಿತ್ರವಾಗಿ ರೋಧಿಸುತ್ತ ಕೋಣೆ ಹೊಕ್ಕು ರಾಜನ ಇನ್ನುಳಿದ ಮಡದಿಯರು, ಉಪಮಡದಿಯರಿಗೆ ಗಂಧರ್ವಸೇನಾ ಮೃತನಾದ ಸುದ್ದಿ ಅರುಹಿದಳು. ಇಡಿ ಅಂತಃಪುರವೆ ಶೋಕದ ಕಡಲಲ್ಲಿ ಮುಳುಗಿತು. ಕಿರಿಯರಸಿ ತನ್ನ ಖಾಸಗಿ ಕೋಣೆಯಲ್ಲಿ ಮುಸಿಮುಸಿ ಅಳುತ್ತಿರೋದನ್ನ ಕಂಡ ಆಕೆಯ ಸೇವಕಿಗೆ ಕುತೂಹಲ ಹೆಚ್ಚಾಗಿ ಕೇಳಿದಳು, “ಯಾಕೆ ರಾಣ್ಯವ್ವ ಹಿಂಗ ಅಳಾಕತ್ತಿದ್ದೀಯ? ಅಂತದ್ದೇನಾತಾ?”.

“ಏನಂಥಾ ಹ್ಯೇಳ್ಲೇ ಗೆಳತಿ, ಗಂಧರ್ವಸೇನಾ ಸತ್ತೋದ್ನಂತೆ!” ಕಿರಿಯರಸಿಯ ಶೋಕಸುದ್ದಿ ಕೇಳಿ ಸೇವಕಿಗು ಆಘಾತವಾಯ್ತು. “ಹೌದೇನೆ ನನ್ನವ್ವ. ಪಾಪಾ, ಹಿಂಗಾಗಬಾರದಿತ್ತು ಬಿಡು. ಅದಂಗಿರುಲಿ. ಈ ಗಂಧರ್ವಸೇನಾ ಯಾರು? ಅವ ನಿನುಗೆ, ಮಾರಾಜುಗೆ ಏನು ಸಮಂದ ಆಗಬೇಕಾ?” ಸೇವಕಿ ತನ್ನ ಅನುಮಾನ ತೆರೆದಿಟ್ಟಳು. ಕಿರಿಯರಸಿಗೆ ಜ್ಞಾನೋದಯ ಆದಂತಾಯ್ತು.

`ಹೌದು ಯಾರು ಈ ಗಂಧರ್ವಸೇನ? ನಾನ್ಯಾಕಿಷ್ಟು ಅಳ್ತಾ ಇದೀನಿ’. ತನ್ನ ಗೊಂದಲ ಬಗೆಹರಿಸಿಕೊಳ್ಳಲು ಪಟ್ಟದರಸಿಯ ಬಳಿ ಬಂದು ಗಂಧರ್ವಸೇನನ ಬಗ್ಗೆ ವಿಚಾರಿಸಿದಳು. ಆಕೆಗೂ ನಯಾಪೈಸೆಯ ಮಾಹಿತಿಯಿಲ್ಲ. ಆದರು ಲೀಟರುಗಟ್ಟಲೆ ಕಣ್ಣೀರು ಸುರಿಸಿ ರೋಧಿಸಿದ್ದಾಗಿತ್ತು. ರಾಜನ ಮುಂದೆ ನಿಂತ ಆಕೆ

“ಮಾರಾಜ, ಆಗ್ಲೆ ಗಂಧರ್ವಸೇನ ಸತ್ತೋದ ಅಂದ್ರಲ್ಲ, ಯಾರು ಆ ಪುಣ್ಯಾತ್ಮ? ನಿಮ್ಮ ಆತ್ಮೀಯ ಗೆಣೆಕಾರನೆ, ಹತ್ತಿರದ ಸಮಂಧಿಕನೆ?”. ಇನ್ನೂ ಶೋಕಸಾಗರದಲ್ಲೆ ಬಡಿದಾಡುತ್ತ ಬಿದ್ದುಕೊಂಡಿದ್ದ ರಾಜನಿಗೆ ರಾಣಿಯ ಪ್ರಶ್ನೆ ಕೇಳಿ ಜ್ಯೋತಿಯೊಂದು ದಿಗ್ಗನೆ ಜ್ವಲಿಸಿದಂತಾಯ್ತು. `ಅರೆರೆ, ಹೌದಲ್ಲವಾ? ಯಾರು ಈ ಗಂಧರ್ವಸೇನಾ? ಮಂತ್ರಿಯನ್ನು ವಿಚಾರಿಸದೆ ಇಷ್ಟು ವ್ಯರ್ಥವಾಗಿ ರೋಧಿಸಿದೆನಲ್ಲ. ಅವನನ್ನೆ ಕೇಳಿಬಿಡೋಣ’ ರಾಜನ ಸ್ವಗತ ಥಟ್ಟನೆ ಅನುಷ್ಟಾನಕ್ಕೆ ಬಂದು ಮಂತ್ರಿಗೆ ಕರೆ ಹೋಯ್ತು.

ಮಂತ್ರಿ ಆಗಮಿಸಿದ. “ಅಲ್ಲಾ ಮಂತ್ರಪ್ಪ, ಅವಾಗ್ಲೆ ಗಂಧರ್ವಸೇನಾ ಸತ್ತೋದ ಅಂತ ಗೋಳಾಡ್ತಾ ಹ್ಯೇಳಿದ್ಯಲ್ಲಪ್ಪ, ಯಾರು ಆ ಗಂಧರ್ವಸೇನ?”. “ಗೊತ್ತಿಲ್ಲ ಮಾಸ್ವಾಮಿ” ಮಂತ್ರಿ ಪ್ರಾಮಾಣಿಕವಾಗಿ ನುಡಿದ, “ಒಡ್ಡೋಲುಗಕ್ಕೆ ತಡವಾಯ್ತು ಅಂತ ಓಡೋಡಿ ಬರ್ತಿದ್ನಾ, ಅವಾಗ ಅಗಸೆ ಬಾಗುಲತ್ರ ನಮ್ಮ ಸೇನಾಧಿಪತಿ ಅತ್ಕಂಡು ನಿಂತಿದ್ದ. ಏನಾಯ್ತು ಅಂತ ಕೇಳಿದ್ದುಕ್ಕೆ, ಗಂಧರ್ವಸೇನ ಸತ್ತೋದ ಅಂತ ಹ್ಯೇಳಿ ಜೋರಾಗಿ ಅತ್ತ. ಅದುಕ್ಕೆ ನಾನೂ ಅಳ್ತಾ ಬಂದು ನಿಮುಗೆ ಸುದ್ದಿ ಮುಟ್ಟಿಸಿದೆ ಆಟೆಯ”.

ಕೂಡಲೆ ಸೇನಾ ಅಧಿಪತಿಗೆ ಕರೆ ಹೋಯ್ತು. “ಏನಯ್ಯಾ ಸೇನಾಧಿಪತಿ, ಮಾಮಂತ್ರಿ ಹತ್ರ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ಗೋಳಾಡಿದ್ಯಂತಲ್ಲ. ಯಾರಯ್ಯ ಆ ಗಂಧರ್ವ ಸೇನಾ?”.

“ಗೊತ್ತಿಲ್ಲ ಮಾಪ್ರಬು. ಬ್ಯೆಳಿಗ್ಗೆ ಅಗಸೆ ಬಾಗುಲತ್ರ ನಿಂತಿದ್ನಾ, ಊರುಗುಡಿ ಪೂಜಾರಪ್ಪ ಅತ್ಕಂತ ಗುಡಿ ಕಡೆ ಹ್ವೊಂಟಿದ್ದ. ಯಾಕಪ್ಪಾ ಅಂತ ಕ್ಯೇಳಿದ್ದುಕ್ಕೆ, ಗಂಧರ್ವಸೇನ ಸತ್ತೋದ ಅಂತ ಹೊಯ್ಕೊಂತ ಹ್ವೋದ. ಅದುಕ್ಕೆ ನಾನುವೆ ಅತ್ಕಂತ ನಿಂತಿದ್ದೆ” ಸೇನಾಧಿಪತಿ ಕೊಟ್ಟ ಮಾಹಿತಿ ಇಷ್ಟು. ಕೂಡಲೇ ಪೂಜಾರಪ್ಪನಿಗೆ ರಾಜನ ಕರೆ ಹೋಯ್ತು.

“ಏನು ಅಯ್ನೋರೆ, ಬ್ಯೆಳಿಗ್ಗೆ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ಅಳ್ತಿದ್ರಂತಲ್ಲ. ಯಾರು ಆ ಗಂಧರ್ವಸೇನಾ?” ರಾಜ ಪ್ರಶ್ನಿಸಿದ.

“ಗೊತ್ತಿಲ್ಲ ಮಾರಾಜ. ಬ್ಯೆಳಿಗ್ಗೆ ದ್ಯೇವುಸ್ಥಾನುಕ್ಕೆ ಪೂಜೆಗೆ ಅಂತ ಹೊಂಟ್ನಾ. ನನ್ನ ಹೆಂಡ್ರು ಸಿಕ್ಕಾಪಟ್ಟೆ ಅಳ್ತಾ ಇದ್ಳು. ಕ್ಯೇಳಿದ್ದುಕ್ಕೆ ಗಂಧರ್ವಸೇನ ಸತ್ತೋದ ಅಂದ್ಲು. ಅದುಕ್ಕೆ ನಾನೂ ಅತ್ಕಂತ ಹೊಂಟಿದ್ದೆ” ಪೂಜಾರಪ್ಪ ಪ್ರತಿಕ್ರಿಯಿಸಿದ.

ಯಥಾ ಪ್ರಕಾರ ಪೂಜಾರಪ್ಪನ ಹೆಂಡತಿಯನ್ನು ಕರೆದು ಕೇಳಲಾಯ್ತು. “ನನಿಗೆ ಗೊತ್ತಿಲ್ಲ ಸ್ವಾಮಿ. ಬೆಳಿಗ್ಗೆ ಮೈಲಿಗೆ ಬಟ್ಟೆ ಇಸ್ಕೊಂಡು ಹೋಗಕ್ಕೆ ಅಂತ ಅಗಸರವನ ಹೆಂಡತಿ ಬಂದಿದ್ಳಾ, ಅವುಳು ತುಂಬಾ ಗೋಳಾಡ್ತಾ ಗಂಧರ್ವಸೇನ ಸತ್ತೋದ ಅಂತ ಹ್ಯೇಳಿದ್ಳು. ಅದುಕ್ಕೆ ನಾನೂ ಅತ್ತೆ.”

ರಾಜನಿಗೆ ಕುತೂಹಲ ಅದೆಷ್ಟು ಹೆಚ್ಚಾಗಿಹೋಯ್ತೆಂದರೆ, ಈ ಸಲ ಅಗಸರವನ ಹೆಂಡತಿಯನ್ನು ಕರೆಸುವ ತಾಳ್ಮೆಯೂ ಇಲ್ಲದೆ, ತನ್ನ `ಪರಿವಾರ’ ಸಮೇತ ಅಗಸನ ಮನೆಯತ್ತ ನಡೆದ. ಮನೆಯಲ್ಲಿ ದಂಪತಿ ಇರಲಿಲ್ಲ, ಕಾಯಕದ ಸಲುವಾಗಿ ಹೊಳೆದಂಡೆ ಬಳಿ ಹೋಗಿದ್ದರು. ಅಲ್ಲಿಗೇ ಸವಾರಿ ಹೊರಟಿತು. ಕೊನೆಗೂ ಆ ಹೆಂಗಸು ಸಿಕ್ಕಳು. “ಏನಮ್ಮಾ, ಬ್ಯೆಳಿಗ್ಗೆ ಅದ್ಯಾರೊ ಗಂಧರ್ವಸೇನ ಸತ್ತೋದ ಅಂತ ತುಂಬಾ ಅಳ್ತಿದ್ದ್ಯಂತೆ. ಯಾರು ಆ ಪುಣ್ಯಾತ್ಮ?” ಮಹಾರಾಜ ಪ್ರಶ್ನಿಸಿದ.“ಅಯ್ಯಾ ಸಾಮಿ, ಮೊನ್ನೆಯಿನು ಅರಾಮಾಗಿದ್ದ ಸಾಮಿ. ಬಾಳ ಪಿರೂತಿಯಿಂದ ಸಾಕಿದ್ದೆ. ನಿನ್ನೆ ನಮ್ಮುನ್ನೆಲ್ಲ ಬಿಟ್ಟೋದ. ನ್ಯೆನಿಸಿಕಂಡ್ರೆ ಅಳು ಬತ್ತದೆ ಸಾಮಿ” ಮತ್ತೆ ಆ ಹೆಂಗಸಲ್ಲಿ ದುಖ ಉಮ್ಮಳಿಸಿತು, ಕಣ್ಣೀರಿಡಲು ಶುರು ಮಾಡಿದಳು.

“ಯಾರಮ್ಮ, ನಿನ್ನ ಮಗನಾ ಅವನು?” ರಾಜ ಪ್ರಶ್ನಿಸಿದ.

“ಮಗನಿಗಿಂತ ಜಾಸ್ತಿ ಪಿರೂತಿಯಿಂದ ಸಾಕಿದ್ದೆ ಸಾಮಿ. ನನ್ನ ಕತ್ತೆಯ ಹೆಸ್ರು ಅದು?.!!!”

ಆ ಹೆಂಗಸಿನ ಉತ್ತರ ಕೇಳಿಸಿಕೊಂಡ ತರುವಾಯ ಅಲ್ಲಿ ನೆರೆದಿದ್ವರಿಗೆಲ್ಲ ತಮ್ಮ ಮುಠ್ಠಾಳತನದ ಅರಿವಾಗಿ ಮೂರ್ಛೆ ಹೋಗುವುದೊಂದು ಬಾಕಿ. ಇಪ್ಪತ್ತೊಂದು ದಿನ ಶೋಕಾಚಾರಣೆ ಘೋಷಿಸಿದ್ದ ರಾಜ ಮೆತ್ತಗೆ ಅಲ್ಲಿಂದ ನುಣುಚಿಕೊಂಡು ಅರಮನೆಯತ್ತ ದೌಡಾಯಿಸಿದ.

(ಸೂಚನೆ: ಇದೊಂದು ಬಂಗಾಳಿ ಜನಪದ ಕಥೆ. ಪ್ರಸ್ತುತ ಯಾವುದೇ ವಿದ್ಯಮಾನ, ವ್ಯಕ್ತಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ್ದಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...