Homeಮುಖಪುಟತುಮಕೂರಿನಲ್ಲಿ ಮುಸ್ಲಿಮರಿಗೆ ಬೆದರಿಕೆ: ಕೊರೊನಾ ಸಮಯದಲ್ಲಿ ಒಂದಾಗಬೇಕಿದ್ದ ನಮ್ಮ ಸಮಾಜ ಎತ್ತ ಸಾಗುತ್ತಿದೆ?

ತುಮಕೂರಿನಲ್ಲಿ ಮುಸ್ಲಿಮರಿಗೆ ಬೆದರಿಕೆ: ಕೊರೊನಾ ಸಮಯದಲ್ಲಿ ಒಂದಾಗಬೇಕಿದ್ದ ನಮ್ಮ ಸಮಾಜ ಎತ್ತ ಸಾಗುತ್ತಿದೆ?

- Advertisement -
- Advertisement -

ದೇಶದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವಂತೆಯೇ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮೇಲೆ ಹಲ್ಲೆ-ಹಿಂಸೆಗಳು ಹೆಚ್ಚತೊಡಗಿವೆ. ಕೊರೊನಾ ಭಯೋತ್ಪಾದನೆ, ಕೊರೊನಾ ಜಿಹಾದ್, ಕೊರೊನಾ ಬಾಂಬ್, ತಬ್ಲಿಘಿ ಹ್ಯಾಷ್ ಟ್ಯಾಗ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಮತ್ತು ದೃಶ್ಯಮಾಧ್ಯಮಗಳಲ್ಲಿ ಸುಳ್ಳು ಹರಡುತ್ತ ಸಮುದಾಯವನ್ನು ಅವಮಾನಿಸುವ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ದೆಹಲಿ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆ ನಡೆದು ಒಂದು ತಿಂಗಳು ಕಳೆಯುತ್ತಾ ಬಂದಿದ್ದರೂ ಅದರಿಂದ ಹೊರಟ ಆತಂಕದ ಅಲೆಗಳು ಸಮಾಜದ ನಡುವೆ ಅಪ್ಪಳಿಸುತ್ತಲೇ ಇವೆ. ಸುಳ್ಳು-ಅಪಪ್ರಚಾರವನ್ನು ಮಾಡಲಾಗುತ್ತಿದೆ. ಇದರ ನಡುವೆ ಮುಸ್ಲಿಮರಿಗೆ ವ್ಯಾಪರಕ್ಕೆ ಅಡ್ಡಿ, ಅವರ ಮನೆಗಳ ಮೇಲೆ ಕಲ್ಲುತೂರಾಟ, ಮುಸ್ಲಿಮರನ್ನು ನಿಂದಿಸುವ ಪ್ರಕರಣಗಳು ವರದಿ ಆಗುತ್ತಿದ್ದರೂ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.

ತುಮಕೂರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾನಸಿಕ ಹಿಂಸೆ ನೀಡುವ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿಲ್ಲ. ಜಿಲ್ಲೆಯಲ್ಲಿ ಮೂರು ಘಟನೆಗಳು ನಾಗರೀಕ ಸಮಾಜವನ್ನು ತಲ್ಲಣಗೊಳಿಸುವಂತೆ ಮಾಡಿವೆ. ತುಮಕೂರಿನ ಸದಾಶಿವ ನಗರದಲ್ಲಿ ತಳ್ಳುವಗಾಡಿಯಲ್ಲಿ ತರಕಾರಿ ಮಾರಾಟ ಮಾಡಲು ಹೋದ ಮುಸ್ಲಿಂ ವ್ಯಾಪಾರಿಗಳನ್ನು ನೀವು ರಸ್ತೆಗೆ ಇಳಿಯಬೇಡಿ, ತರಕಾರಿ ಮಾರಾಟ ಮಾಡಬೇಡಿ, ನೀವೇ ಕೊರೋನಾ ಹರಡುತ್ತಿರುವುದು, ನೀವು ಮನೆಬಿಟ್ಟು ಹೊರಬರಬೇಡಿ ಎಂದು ಹಿಂದೂ ಯುವಕರು ಧಮಕಿಹಾಕಿದ್ದರಿಂದ ಮುಸ್ಲಿಂ ವ್ಯಾಪಾರಿಗಳು ಮೌನವಾಗಿ ಹಿಂದಿರುಗಿದ್ದಾರೆ. ಇಂತಹ ಅಮಾನವೀಯ ಘಟನೆಗಳಿಂದ ನೊಂದಿರುವ ಸಮುದಾಯ ನೋವನ್ನು ನುಂಗಿಕೊಂಡಿದೆ. ಇದು ಕೆಲ ವಿದ್ಯಾವಂತ ಮುಸ್ಲಿಂ ಸಮುದಾಯ ತಮ್ಮ ನಡುವೆಯೇ ಚರ್ಚೆ ನಡೆಸುತ್ತಿದ್ದು ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಮುಂದಾಗಿದೆ.

ಚಿಕ್ಕನಾಯಕನಹಳ್ಳಿ ಕಂದೀಕೆರೆಯಲ್ಲಿ ಮುಸ್ಲಿಂ ಸಮುದಾಯದ ಮನೆಗಳ ಮೇಲೆ ಮೂರುದಿನಗಳ ಹಿಂದೆ ಕಲ್ಲುತೂರಾಟ ನಡೆಸಲಾಗಿದೆ. ಸಂಘಪರಿವಾರ ಪ್ರೇರಿತ ಯುವಕರು ಕಲ್ಲುತೂರಾಟ ನಡೆಸಿದ್ದಾರೆ ಎಂದು ಆರೋಪಿಸಿದ್ದು, ಮುಸ್ಲಿಮರು ಆತಂಕಗೊಂಡಿದ್ದಾರೆ. ಕಲ್ಲುತೂರಾಟದಿಂದ ಭೀತರಾಗಿರುವ ಮುಸ್ಲಿಂ ಸಮುದಾಯ ಜೀವವನ್ನು ಕೈಯಲ್ಲಿಡಿದು ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಘಟನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಪ್ರಜ್ಞಾವಂತ ಮುಸ್ಲಿಂ ಯುವಕರಿಂದ ನಡೆಯುತ್ತಿದೆ

ಕೊರೊನಾ ಸೋಂಕಿಗೆ ಸಿರಾ ತಾಲೂಕಿನ ವ್ಯಕ್ತಿಯೊಬ್ಬರು ಬಲಿಯಾದ ಮೇಲೆ ಸೂಕ್ಷ್ಮವಾತಾವರಣ ಏರ್ಪಟ್ಟಿದೆ. ಕೆಲ ಯುವಕ ಗುಂಪುಗಳು ಜನರ ನಡುವೆ ದ್ವೇಷ ಮೂಡಿಸುವಂತಹ ಕೆಲಸದಲ್ಲಿ ತೊಡಗಿವೆ. ಸಮಾಜದಲ್ಲಿ ಶಾಂತಿಗೆ ಭಂಗ ತರುವಂತಹ ಕೆಲಸವನ್ನು ಮಾಡುತ್ತಿವೆ. ಎಪ್ರಿಲ್ 16ರಂದು ಬೆಳಗ್ಗೆ 6 ಗಂಟೆ ಸಮಯದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಹಾಲು ತರಲು ಹೋಗಿದ್ದಾರೆ. ಹಾಲು ತೆಗೆದುಕೊಳ್ಳುತ್ತಿದ್ದಾಗ ಬ್ರಾಹ್ಮಣ ವ್ಯಕ್ತಿಯೊಬ್ಬರು ನೀವು ಮುಸ್ಲಿಮರು, ಕೊರೊನಾ ಹರಡುತ್ತಿರುವುದು ನಿಮ್ಮಿಂದಲೇ, ನೀವು ಹೀಗೆಲ್ಲ ಬರಬೇಡಿ ಎಂದು ಹೇಳಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಎರಡು ಕೋಮುಗಳ ನಡುವೆ ಜಗಳವಾಗಿದೆ. ಈ ಪ್ರಕರಣ ಪೊಲೀಸ್ ಮೆಟ್ಟಿಲು ಹತ್ತಿದ್ದು ಎಫ್ಐಆರ್ ದಾಖಲಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಕೆಲಸ ಮಾಡಿದ ವ್ಯಕ್ತಿಯನ್ನು ರಕ್ಷಿಸಲು ಇನ್ನಿಲ್ಲದ ಪ್ರಯತ್ನಗಳು ನಡಯುತ್ತಿವೆ.

ದೇಶದಲ್ಲಿ ನಡೆಯುತ್ತಿರುವ ಇಂತಹ ಬೆಳವಣಿಗೆಗಳಿಂದ ಹಿರಿಯ ಜೀವಗಳು ಬೆಚ್ಚಿಬಿದ್ದಿವೆ. ಸೊಗಡು ಶಿವಣ್ಣರಂಥ ಮಾಜಿ ಸಚಿವರು ಕೂಡ ಮನಸ್ಸಿಗೆ ತೋಚಿದಂತೆ ಮಾತನಾಡುತ್ತಿರುವುದು, ಧರ್ಮ-ಧರ್ಮಗಳ ನಡುವೆ ಸೇಡಿನ ಮನೋಭಾವ, ದ್ವೇಷ ಮೂಡಿಸುವ ಕೆಲಸ ಮಾಡುತ್ತಿರುವುದನ್ನು ನೋಡಿ ದೇಶ ಎತ್ತಸಾಗುತ್ತಿದೆ ಎನ್ನುವಂತಾಗಿದೆ. ಶಾಂತಿ ಕಾಪಾಡಬೇಕಾದ ಜವಾಬ್ದಾರಿಯುತ ವ್ಯಕ್ತಿಗಳೇ ಹೀಗೆ ವರ್ತಿಸಿದರೆ ಹೇಗೆ ಎಂಬ ಪ್ರಶ್ನೆ ಏಳತೊಡಗಿವೆ. ಇದು ಎಲ್ಲಿಗೆ ಹೋಗಿ ತಲುಪುತ್ತೋ ಎಂಬ ಆತಂಕ ವ್ಯಕ್ತವಾಗಿದೆ. ಮನುಕುಲದ ಉದ್ದಾರಕ್ಕೆ ಶ್ರಮಿಸಬೇಕಾದ ವ್ಯಕ್ತಿಗಳು ಸಮಾಜದವನ್ನು ಒಡೆಯುವಂತಹ ಕೆಲಸದಲ್ಲಿ ತೊಡಗಿರುವುದು ನೋವಿನ ಸಂಗತಿ ಎಂದು ಹಿರಿಯ ಜೀವಗಳು ಮರುಗತೊಡಗಿವೆ. ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆಯುತ್ತಿರುವ ಬೆಳವಣಿಗೆಗಳಿಂದ ಜನರ ನೆಮ್ಮದಿಗೆ ಭಂಗ ತರತೊಡಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Please do not think in a single angle.try to think in both angle then you will solve the problem .first you should try to educate the Muslim people regarding corona through the news .and create awerness to them.otherwise your news also nothing but all news

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...