HomeಚಳವಳಿRSS ಮುಖ್ಯಸ್ಥರಿಗೆ ಕಲಬುರಗಿ ಕೇಂದ್ರೀಯ ವಿವಿ ರಿಜಿಸ್ಟ್ರಾರ್ ಡೋಣೂರರ ಪತ್ರ: ಅಕ್ರಮ ನೇಮಕಾತಿ ಕಾರಣವೇ?

RSS ಮುಖ್ಯಸ್ಥರಿಗೆ ಕಲಬುರಗಿ ಕೇಂದ್ರೀಯ ವಿವಿ ರಿಜಿಸ್ಟ್ರಾರ್ ಡೋಣೂರರ ಪತ್ರ: ಅಕ್ರಮ ನೇಮಕಾತಿ ಕಾರಣವೇ?

ಡೋಣೂರರವರು ತಮ್ಮ ವಯಕ್ತಿಕ ಭೇಟಿಗೆ ಕೇಂದ್ರೀಯ ವಿವಿಯ ಲೆಟರ್‌ ಹೆಡ್‌ ಅನ್ನು ಬಳಸಿಕೊಂಡಿದ್ದೇಕೆ? ವಿವಿಯ ನೇಮಕಾತಿ ಅಕ್ರಮ ಮತ್ತು ಡೋಣೂರರವರ ವಿರುದ್ಧ ಹಣಕಾಸಿನ ಅಕ್ರಮಗಳ ಕುರಿತು ಆರೋಪಗಳು ಕೇಳಿಬಂದಿರುವ ಸಂದರ್ಭದಲ್ಲಿ ಈ ಭೇಟಿಗೆ ಅರ್ಥವೇನು ಎಂಬ ಬಗ್ಗೆ ಚರ್ಚೆಗಳಾಗುತ್ತಿವೆ.

- Advertisement -
- Advertisement -

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯ ಸಮೀಪ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಕರ್ನಾಟಕದಲ್ಲಿರುವ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯ. 11 ವರ್ಷಗಳ ಹಿಂದೆ ಇದು ಸ್ಥಾಪನೆಯಾದಾಗ ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ಸಿಕ್ಕ ವರ ಎಂದೇ ಭಾವಿಸಲಾಗಿತ್ತು. ಶೈಕ್ಷಣಿಕವಾಗಿ ಹಿಂದುಳಿದ ಈ ಪ್ರದೇಶ ಮುಂದುವರೆಯುವುದಕ್ಕೆ ಒದಗಿ ಬಂದ ಸದಾವಕಾಶ ಎಂದೇ ಪರಿಭಾವಿಸಲಾಗಿತ್ತು. ಆರಂಭಿಕ ಕೆಲವು ವರ್ಷಗಳಲ್ಲಿ ಆಡಳಿತ, ಬೋಧನೆ ಮತ್ತು ಸಂಶೋಧನೆಯಲ್ಲಿ ಉತ್ಕೃಷ್ಟತೆ ಮತ್ತು ಪಾರದರ್ಶಕತೆಗಳನ್ನು ಕಾಪಾಡಿಕೊಳ್ಳುತ್ತಾ ಬಂದ ಈ ವಿಶ್ವವಿದ್ಯಾಲಯ ಇತ್ತೀಚೆಗೆ ಅಕ್ರಮ ನೇಮಕಾತಿ ಹಗರಣದಲ್ಲಿ ಮುಳುಗಿರುವುದನ್ನು ನಾನುಗೌರಿ.ಕಾಂ ವಿವರವಾಗಿ ವರದಿ ಮಾಡಿತ್ತು. ನೇಮಕಾತಿ ವಿವಾದ ಚಾಲ್ತಿಯಲ್ಲಿರುವಾಗಲೇ ವಿವಿಯ ಹಂಗಾಮಿ ರಿಜಿಸ್ಟ್ರಾರ್ ಆಗಿರುವ ಡಾ. ಬಸವರಾಜ್ ಡೋಣೂರರವರು ಆರ್‌ಎಸ್‌ಎಸ್‌ ಸರಸಂಚಾಲಕ ಮೋಹನ್ ಭಾಗವತ್‌ರವರಿಗೆ ಪತ್ರ ಬರೆದು ಭೇಟಿಗೆ ಅವಕಾಶ ಕೋರಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬೃಹತ್ ನೇಮಕಾತಿ ಹಗರಣ ಬಯಲು

ಡೋಣೂರರವರು ಡಿಸೆಂಬರ್ 09 ರಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಲೆಟರ್‌ ಹೆಡ್‌ನಲ್ಲಿ ಬರೆದ ಪತ್ರದಲ್ಲಿ, “ನಾನು ಕಲಬುರಗಿ ಕೇಂದ್ರೀಯ ವಿವಿಯ ಭಾಷೆ ಮತ್ತು ಮಾನವೀಕ ಶಾಸ್ತ್ರಗಳ ವಿಭಾಗದ ಡೀನ್ ಮತ್ತು ರಿಜಿಸ್ಟ್ರಾರ್ ಆಗಿದ್ದು, ಕಥೆ, ಕಾದಂಬರಿ, ನಾಟಕ, ಕವಿತೆ ಮತ್ತು ವಿಮರ್ಶೆಗಳನ್ನು ಬರೆಯುತ್ತೇನೆ. ಪ್ರಮುಖ ದಿನಪತ್ರಿಕೆಯಾದ ಸಂಯುಕ್ತ ಕರ್ನಾಟಕದಲ್ಲಿ ಅಂಕಣ ಬರೆಯುತ್ತೇನೆ. ನಿಮ್ಮನ್ನು ಭೇಟಿಯಾಗಲು ಬಯಸಿದ್ದು, ನಿಮಗೆ ಸಾಧ್ಯವಾದಾಗ ಸಮಯ ನೀಡಬೇಕೆಂದು” ಮನವಿ ಮಾಡಿದ್ದಾರೆ.

“ನಾನು ಜನವರಿ 08, 2022ರಂದು ನಾಗಪುರ ಜಿಲ್ಲೆಯ ಕವಿಕುಲಗುರು ಕಾಳಿದಾಸ ಸಂಸ್ಕೃತ ವಿವಿ, ರಾಮ್‌ಟೆಕ್‌ಗೆ ಉಪನ್ಯಾಸ ನೀಡಲು ಬರುತ್ತಿದ್ದೇನೆ. ಇದು ಪೂಜನೀಯ ಗೋಳ್ವಾಲ್ಕರ್ ಅವರ ಹುಟ್ಟೂರು ಕೂಡಾ. ಈ ಸಂದರ್ಭದಲ್ಲಿ ಜನವರಿ 08 ಅಥವಾ 09 ರಂದು ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಲು ಬಯಸಿದ್ದೇನೆ. ನೀವು ಸಮಾಜದ ವಿವಿಧ ವಿಭಾಗಗಳನ್ನು ಆರ್‌ಎಸ್‌ಎಸ್‌ ಮೂಲಕ ತಲುಪಲು ದೇಶಾದ್ಯಂತ ಪ್ರಯಾಣ ಮಾಡುತ್ತಾ ಬ್ಯುಸಿಯಾಗಿದ್ದೀರಿ ಎಂಬುದು ನನಗೆ ಗೊತ್ತು. ಆ ಬ್ಯುಸಿಯ ವೇಳಾಪಟ್ಟಿಯಲ್ಲಿ ಬಿಡುವಾದರೆ ನನ್ನ ಅಪಾಯಿಂಟ್‌ಮೆಂಟ್‌ ಅನ್ನು ದೃಢಪಡಿಸಬೇಕೆಂದು ಈ ಮೂಲಕ ವಿನಯ ಮತ್ತು ಕಾತರದಿಂದ ಕೇಳಿಕೊಳ್ಳುತ್ತೇನೆ” ಎಂದು ಪತ್ರದಲ್ಲಿ ಬರೆಯಲಾಗಿದೆ.

ಡೋಣೂರರವರು ಬರೆದಿರುವ ಪತ್ರ.

ಈ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಡಾ.ಬಸವರಾಜ ಡೋಣೂರರವರು ತಮ್ಮ ವಯಕ್ತಿಕ ಭೇಟಿಗೆ ಕೇಂದ್ರೀಯ ವಿವಿಯ ಲೆಟರ್‌ ಹೆಡ್‌ ಅನ್ನು ಬಳಸಿಕೊಂಡಿದ್ದೇಕೆ? ಇತ್ತೀಚೆಗೆ ವಿವಿಯ ನೇಮಕಾತಿ ಅಕ್ರಮ ಮತ್ತು ಡೋಣೂರರವರ ವಿರುದ್ಧ ಹಣಕಾಸಿನ ಅಕ್ರಮಗಳ ಕುರಿತು ಆರೋಪಗಳು ಕೇಳಿಬಂದಿರುವ ಸಂದರ್ಭದಲ್ಲಿ ಈ ಭೇಟಿಗೆ ಅರ್ಥವೇನು ಎಂಬ ಬಗ್ಗೆ ಚರ್ಚೆಗಳಾಗುತ್ತಿವೆ.

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ಮಹೇಶ್ವರಯ್ಯನವರು ಉಪಕುಲಪತಿಯಾಗಿದ್ದಾಗ ನಡೆದ ಪ್ರೊಫೆಸರ್ ಮತ್ತು ಅಸೋಸಿಯೇಟ್ ಫ್ರೊಫೆಸರ್ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮಗಳಾಗಿದ್ದವು. ಪತ್ರಿಕೆಗಳಲ್ಲಿ ಈ ಬಗ್ಗೆ ವಿಸ್ತೃತವಾದ ವರದಿಗಳು ಪ್ರಕಟವಾಗಿದ್ದವು. ಅನೇಕ ಸಂಘಸಂಸ್ಥೆಗಳು ಈ ಅಕ್ರಮಗಳ ವಿರುದ್ಧ ದನಿ ಎತ್ತಿಸ್ದವು. ಕೆಲವರು ಕೇಂದ್ರೀಯ ವಿಶ್ವವಿದ್ಯಾಲಯದ ವಿಸಿಟರ್ ಆದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೂ ಹಾಗೂ ಕೇಂದ್ರ ಶಿಕ್ಷಣ ಸಚಿವಾಲಯಕ್ಕೂ ದೂರು ನೀಡಿದ್ದರು.

ಅಕ್ರಮಗಳ ಸ್ವರೂಪ ಗಂಭೀರವಾಗಿದ್ದರಿಂದ ತದನಂತರದಲ್ಲಿ ನಡೆದ ವಿಶ್ವವಿದ್ಯಾಲಯದ ಅತ್ಯುನ್ನತ ಆಡಳಿತ ಅಂಗವಾದ ಎಕ್ಸಿಕ್ಯೂಟಿವ್ ಕೌನ್ಸಿಲ್‌ ಕೂಡ ಇಡೀ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲು ನಿರ್ಧರಿಸಿತ್ತು. ಆಯ್ಕೆಯಾಗಿ ಸಂದರ್ಶನ ಮುಗಿಸಿದ ಅಭ್ಯರ್ಥಿಗಳಿಗಾದರೂ ನೇಮಕಾತಿ ಆದೇಶ ಕೊಡಲು ಹಿಂದಿನ ಉಪಕುಲಪತಿ ಮಹೇಶ್ವರಯ್ಯನವರು ಬಹಳ ಪ್ರಯತ್ನಿಸಿದರೂ ಎಕ್ಸಿಕ್ಯೂಟಿವ್ ಕೌನ್ಸಿಲ್ ಆಗಲೀ ಅಥವಾ ಕೇಂದ್ರ ಸರ್ಕಾರವಾಗಲೀ ಅದಕ್ಕೆ ಅವಕಾಶ ಕೊಡಲಿಲ್ಲ.

ಈಗ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳಾಗಿ ಬಂದಿರುವ ಬಟ್ಟು ಸತ್ಯನಾರಾಯಣ ಅವರೂ ಕೂಡ ನಿಯಮಬಾಹಿರವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವ ಕಾರಣಕ್ಕೂ ನೇಮಕಾತಿ ಆದೇಶ ಕೊಡಬಾರದು ಎಂಬ ಕಠಿಣ ನಿಲುವು ತಾಳಿದ್ದಾರೆ. ಅಲ್ಲದೇ, ಇತ್ತೀಚೆಗೆ ನಡೆದ 55ನೇ ಎಕ್ಸಿಕ್ಯೂಟಿವ್ ಕೌನ್ಸಿಲ್ ಸಭೆಯಲ್ಲೂ ಕೂಡ ನಿಯಮಬಾಹಿರವಾಗಿ ಆಯ್ಕೆಯಾದವರಿಗೆ ನೇಮಕಾತಿ ಆದೇಶ ಕೊಡಬಾರದು ಹಾಗೂ ಖಾಲಿ ಇರುವ ಪ್ರೊಫೆಸರ್ ಮತ್ತು ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳನ್ನು ತುಂಬಲು ಹೊಸದಾಗಿ ನೇಮಕಾತಿ ಅಧಿಸೂಚನೆ‌ ಹೊರಡಿಸಿ ಇಡೀ ನೇಮಕಾತಿ ಪ್ರಕ್ರಿಯೆಯನ್ನು ಹೊಸದಾಗಿಯೇ ಪ್ರಾರಂಭಿಸಬೇಕು ಎಂದು ನಿರ್ಣಯಿಸಿದೆ.

ಅದರೆ, ಏನಾದರೂ ಸರಿ ಅಯ್ಕೆಯಾದವರಿಗೆ ನೇಮಕಾತಿ ಆದೇಶಗಳನ್ನು ಕೊಡಿಸಿಯೇ ತೀರಬೇಕೆಂಬ ಹಠಕ್ಕೆ ಬಿದ್ದಂತೆ‌ ಕಾಣುತ್ತಿರುವ ಡೋಣೂರರವರು ಈಗ ತಮ್ಮ‌ಕಾರ್ಯಸಾಧನೆಗಾಗಿ ಆರೆಸ್ಸೆಸ್ ಕದ ತಟ್ಟುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆರೆಸ್ಸೆಸ್ ಸರಸಂಘಚಾಲಕ ಮೋಗನ್ ಭಾಗವತ್ ಮೂಲಕ ಕೇಂದ್ರ ಸರ್ಕಾರದ‌ ಮೇಲೆ ಒತ್ತಡ ತಂದು ನಿಯಮಬಾಹಿರವಾಗಿ ಆಯ್ಕೆಯಾದವರಿಗೆ ನೇಮಕಾತಿ ಆದೇಶ ಕೊಡಿಸುವುವುದು ಅವರ ಕಾರ್ಯತಂತ್ರ ಎಂಬ ಆರೋಪ ಕೇಳಿಬಂದಿದೆ.

ಅಲ್ಲದೇ, ಈಗಿರುವ ಉಪಕುಲಪತಿಗಳಾದ ಬಟ್ಟು ಸತ್ಯನಾರಾಯಣ ಅವರು ಅಧಿಕಾರ ಸ್ವೀಕರಿಸುವ ಮೊದಲು ಹಂಗಾಮಿ ಕುಲಪತಿಗಳಾಗಿದ್ದ ಎಂ.ವಿ. ಅಲಗವಾಡಿ ಮತ್ತು ಹಂಗಾಮಿ ರಿಜಿಸ್ಟ್ರಾರ್ ಆಗಿರುವ ಡೋಣೂರ ಅವರು ಅನೇಕ ಹಣಕಾಸು ಅಕ್ರಮಗಳನ್ನು ಮಾಡಿದ್ದಾರೆಂಬ ಆರೋಪಗಳೂ ಇದ್ದು ಕೆಲವರು ವಿಶ್ವವಿದ್ಯಾಲಯದ ವಿಸಿಟರ್ ಆಗಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಹಾಗೂ ಕೇಂದ್ರದ ಶಿಕ್ಷಣ ಸಚಿವಾಲಯಕ್ಕೆ ದೂರುಗಳನ್ನೂ ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆಯಾದರೆ ತಮಗೆ ಆಪತ್ತು ಬರಲಿದೆ ಎಂಬುದನ್ನು ಅರಿತ ಡೋಣೂರ ಅವರು ತಮ್ಮ ರಕ್ಷಣೆಗಾಗಿ ಭಾಗವತ್ ಅವರ ಮೊರೆ ಹೋಗುತ್ತಿದ್ದಾರೆಂದೂ ಹೋರಾಟಗಾರರು ಆರೋಪಿಸಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಡೋಣೂರರವರನ್ನು ಮಾತನಾಡಿಸಿದಾಗ “ನಾನು ಪತ್ರ ಬರೆದಿರುವುದು ನಿಜ. ಅದು ಸಂಪೂರ್ಣ ವೈಯಕ್ತಿಕ ಭೇಟಿಯಾಗಿದೆ, ಅದಕ್ಕೂ ವಿಶ್ವವಿದ್ಯಾಲಯಕ್ಕೂ ಸಂಬಂಧವಿಲ್ಲ” ಎಂದರು. ತಮ್ಮ ಮೇಲಿನ ಹಣಕಾಸು ಅಕ್ರಮದ ಆರೋಪಗಳನ್ನು ನಿರಾಕರಿಸಿದ ಅವರು, ’67 ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ತಡೆ ನೀಡಲಾಗಿದೆ. ಅದು ಹಿಂದಿನ ಉಪಕುಲಪತಿಗಳಾದ ಮಹೇಶ್ವರಯ್ಯನವರು ಇದ್ದಾಗ ನಡೆದ ಘಟನೆ. ಅದಕ್ಕೂ ನನಗೂ ಸಂಬಂಧವಿಲ್ಲ. ನಾನೀಗ ಪ್ರಭಾರಿ ರಿಜಿಸ್ಟ್ರಾರ್ ಆಗಿದ್ದು ನನಗೆ ಆ ಅಧಿಕಾರ ಇಲ್ಲ’ ಎಂದರು.

ಕೇಂದ್ರೀಯ ವಿವಿ ಲೆಟರ್‌ ಹೆಡ್ ಬಳಸಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನನ್ನ ಪರಿಚಯ ಬೇಕಲ್ಲವೇ? ಅದಕ್ಕಾಗಿ ವಿವಿಯ ಲೆಟರ್ ಹೆಡ್ ಬಳಸಿದ್ದೇನೆ ಅಷ್ಟೇ” ಎಂದರು.

ಇದನ್ನೂ ಓದಿ; ಕೇಂದ್ರೀಯ ವಿವಿ ನೇಮಕಾತಿ ಹಗರಣ: ಅಭ್ಯರ್ಥಿಗಳ ಪಟ್ಟಿ ಅನುಮೋದನೆಗೆ ವಿವಿಯ ಕಾರ್ಯಕಾರಿ ಮಂಡಳಿ ನಕಾರ..

ಕೇಂದ್ರೀಯ ವಿವಿ ಅಕ್ರಮ ನೇಮಕಾತಿ ವಿರುದ್ಧ ಹೋರಾಟ ನಡೆಸುತ್ತಿರುವ ಮತ್ತು ರಾಷ್ಟ್ರಪತಿಗಳಿಗೆ ದೂರು ನೀಡಿದವರಲ್ಲಿ ಒಬ್ಬರಾದ ಹೋರಾಟಗಾರರಾದ ಮಹೇಶ್ ರಾಥೋಡ್‌ರವರು ಮಾತನಾಡಿ, “ಡೋಣೂರರವರು ವಿಸಿಯವರಿಗೆ, ಎಂಎಚ್‌ಆರ್‌ಡಿ ಸಚಿವರಿಗೆ ಪತ್ರ ಬರೆದಿದ್ದರೆ ನಮ್ಮ ಆಕ್ಷೇಪಗಳಿರುತ್ತಿರಲಿಲ್ಲ. ಅದರೆ 67 ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರ ಅಕ್ರಮ ನೇಮಕಾತಿ ಹಗರಣದ ಕುರಿತು ಡೋಣೂರರವರ ವಿರುದ್ಧವೂ ದೂರು ನೀಡಿದ್ದೇವೆ. ಅವರು ಹಳೆಯ ವಿಸಿಯೊಂದಿಗೆ ಶಾಮೀಲಾಗಿ ವಿವಿಯ ಆಯಾಕಟ್ಟಿನ ಜಾಗಗಗಳಿಗೆ ಅರ್ಹರಲ್ಲದ ಆರ್‌ಎಸ್‌ಎಸ್‌ನ ವ್ಯಕ್ತಿಗಳನ್ನು ಮತ್ತು ಹಣ ನೀಡಿದವರನ್ನು ನಿಯಮಬಾಹಿರವಾಗಿ ತಂದು ಕೂರಿಸುತ್ತಿದ್ದಾರೆ ಎಂದು ಆರೋಪಿಸಿದ್ದೇವೆ. ಆ ನೇಮಕಾತಿಗೆ ತಡೆ ಕೂಡ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಡೋಣೂರರವರು ಅದೇ 67 ಜನರಿಗೆ ನೇಮಕಾತಿ ಮಾಡಿಸಬೇಕೆಂದು ಪ್ರಯತ್ನಿಸುತ್ತಿರುವುದು ನೋಡಿದರೆ ಅವರು ಅಕ್ರಮದಲ್ಲಿ ಭಾಗೀಯಾಗಿದ್ದಾರೆ ಎಂಬ ಅನುಮಾನ ಮೂಡಿಸುತ್ತದೆ. ದುಡ್ಡು ತೆಗೆದುಕೊಂಡು ಕೆಲವರನ್ನು ನೇಮಕಾತಿಗೆ ಆಯ್ಕೆ ಮಾಡಿರುವುದನ್ನು ಹೇಗಾದರೂ ಮಾಡಿ ಕಾರ್ಯಕಾರಿ ಸಮಿತಿಯಲ್ಲಿ ಪಾಸು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವೇ ಆರ್‌ಎಸ್‌ಎಸ್‌ ಸರಸಂಚಾಲಕರ ಭೇಟಿಗೆ ವಿವಿಯ ಲೆಟರ್‌ಹೆಡ್‌ನಲ್ಲಿ ಪತ್ರ ಬರೆದಿರುವುದು” ಎಂದಿದ್ದಾರೆ.

ಆಳಂದ ಕ್ಷೇತ್ರದ ಮಾಜಿ ಶಾಸಕರಾದ ಬಿ.ಆರ್ ಪಾಟೀಲ್‌ರವರು ನಾನುಗೌರಿ.ಕಾಂ ನೊಂದಿಗೆ ಮಾತನಾಡಿ, “ಡೋಣೂರರವರು ಈ ಹಿಂದೆಯೂ ಕೂಡ ವಿಶ್ವವಿದ್ಯಾಲಯಕ್ಕೆ ಸಂಘಪರಿವಾರದ ನಾಯಕರನ್ನು ಕರೆಸಿ ಸಭೇ ಸಮಾರಂಭಗಳನ್ನು ಮಾಡಿದ್ದರು. ಅವರು ಮತ್ತು ಈಗಿನ ಉಪಕುಲಪತಿಗಳು ಸೇರಿ ವಿವಿಯನ್ನು ಆರ್‌ಎಸ್‌ಎಸ್‌ನ ಅಡ್ಡ ಮಾಡಲು ಹೊರಟಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾಲಯವು ಜಾತ್ಯಾತೀತವಾಗಿ, ಪ್ರಜಾತಾಂತ್ರಿಕವಾಗಿರಬೇಕು. ಆದರೆ ಒಂದು ಕೋಮುವಾದಿ ಗುಂಪಿಗೆ ಅಂಟಿಕೊಂಡಿರುವವರು ಇಲ್ಲಿ ವಿಸಿ, ರಿಜಿಸ್ಟ್ರಾರ್ ಆಗಿದ್ದು, ತಮ್ಮ ಸ್ವಾರ್ಥಕ್ಕಾಗಿ ಆಡಳಿತ ಪಕ್ಷದವರನ್ನು ಖುಷಿಪಡಿಸಲು ಈ ರೀತಿ ಪತ್ರ ಬರೆದು ಭೇಟಿಗೆ ಅವಕಾಶ ಕೇಳುತ್ತಿದ್ದಾರೆ. ಇದು ಸರಿಯಲ್ಲ. ಅಕ್ರಮ ನೇಮಕಾತಿ ವಿರುದ್ಧ ನಾವು ಹೋರಾಟ ಮುಂದುವರೆಸುತ್ತೇವೆ” ಎಂದರು.


ಇದನ್ನೂ ಓದಿ: ಕಲಬುರಗಿ ಕೇಂದ್ರೀಯ ವಿವಿ ನೇಮಕಾತಿ ಹಗರಣ: ನಾನುಗೌರಿ, ದಿ ಹಿಂದೂ ವರದಿ ಆಧರಿಸಿ ತನಿಖೆಗೆ ಒತ್ತಾಯಿಸಿ ಪತ್ರ ಬರೆದ ಸಂಸದ ಜಾಧವ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...