Homeಮುಖಪುಟಪಂಜಾಬ್‌‌: ‘ನಿಶಾನ್‌ ಶಾಹಿಬ್‌’ಗೆ ಅಗೌರವ ಆರೋಪ; ಮತ್ತೊಬ್ಬ ವ್ಯಕ್ತಿಯ ಹತ್ಯೆ

ಪಂಜಾಬ್‌‌: ‘ನಿಶಾನ್‌ ಶಾಹಿಬ್‌’ಗೆ ಅಗೌರವ ಆರೋಪ; ಮತ್ತೊಬ್ಬ ವ್ಯಕ್ತಿಯ ಹತ್ಯೆ

- Advertisement -
- Advertisement -

ಅಮೃತಸರದ ಸ್ವರ್ಣಮಂದಿರದಲ್ಲಿ ಪವಿತ್ರ ಗ್ರಂಥಕ್ಕೆ ಅಗೌರವ ತೋರಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದ ಒಂದು ದಿನದ ನಂತರ, ಭಾನುವಾರ ಬೆಳಿಗ್ಗೆ ಕಪುರ್ತಲದ ಗುರುದ್ವಾರವೊಂದರಲ್ಲಿ ‘ನಿಶಾನ್ ಸಾಹಿಬ್’ (ಸಿಖ್ ಧಾರ್ಮಿಕ ಧ್ವಜ) ಗೆ ಅಗೌರವ ತೋರಿದ ಆರೋಪದ ಮೇಲೆ ಇನ್ನೊಬ್ಬ ವ್ಯಕ್ತಿಯನ್ನು ಕೊಲ್ಲಲಾಗಿದೆ ಎಂದು ವರದಿಯಾಗಿದೆ.

ಕೊಲೆಗೀಡಾದ ವ್ಯಕ್ತಿ ನಿಶಾನ್ ಸಾಹಿಬ್‌ಗೆ ಅಗೌರವ ತೋರಿ, ಓಡಿಹೋಗಲು ಪ್ರಯತ್ನಿಸಿದಾಗ ಬೆನ್ನಟ್ಟಿ ಹಿಡಿಯಲಾಗಿದೆ ಎಂದು ನಿಜಾಂಪುರ್ ಗ್ರಾಮದ ಕೆಲವು ನಿವಾಸಿಗಳು ಹೇಳಿದ್ದಾರೆ. ಪೊಲೀಸರ ಪ್ರಕಾರ, ವ್ಯಕ್ತಿಯನ್ನು ಹೊಡೆದು ಸಾಯಿಸಲಾಗಿದೆ.

ಇದನ್ನೂ ಓದಿ: ಗೋಲ್ಡನ್ ಟೆಂಪಲ್‌ ಅಪವಿತ್ರತೆ ಆರೋಪ: ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಥಳಿಸಿ ಕೊಲೆ

ಶನಿವಾರದಂದು ಅಮೃತಸರದ ಸ್ವರ್ಣ ಮಂದಿರದಲ್ಲಿ ನಡೆದ ‘ಅನಾಹುತ’ದಲ್ಲಿ ಆಪಾದಿತ ವ್ಯಕ್ತಿಯನ್ನುಉದ್ರಿಕ್ತ ಜನಸಮೂಹ ಹತ್ಯೆ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದಿನನಿತ್ಯದ ರೆಹ್ರಾಸ್ ಪಥ (ಸಾಮಾನ್ಯ ಸಂಜೆ ಪ್ರಾರ್ಥನೆ) ಸಮಯದಲ್ಲಿ ವ್ಯಕ್ತಿಯೊಬ್ಬ ಸ್ವರ್ಣ ಮಂದಿರದ ಗರ್ಭಗುಡಿಯೊಳಗಿನ ಕಂಬಿಯ ಮೇಲೆ ಹಾರಿ, ಪವಿತ್ರ ಕತ್ತಿಯನ್ನು ಸ್ಪರ್ಶಿಸಲು ಪ್ರಯತ್ನಿಸಿದ್ದನು ಎಂದು ಮೂಲಗಳು ತಿಳಿಸಿವೆ. ವ್ಯಕ್ತಿಯು ಕ್ಲೀನ್ ಶೇವ್ ಆಗಿದ್ದು, ತಲೆಗೆ ಹಳದಿ ಬಟ್ಟೆಯನ್ನು ಕಟ್ಟಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ತವ್ಯ ನಿರತ ಶಿರೋಮಣಿ ಗುರುದ್ವಾರ ಪರ್ಬಂಡಕ್ ಸಮಿತಿ (SGPC) ನೌಕರರು ಅವರನ್ನು ಬಂಧಿಸಿದ್ದಾರೆ. ಇಷ್ಟೆಲ್ಲ ನಡೆಯುವಾಗ ಪ್ರಾರ್ಥನೆ ಸಲ್ಲಿಸುತ್ತಿದ್ದ ಧಾರ್ಮಿಕ ಗುರು ತನ್ನ ಪ್ರಾರ್ಥನೆಯನ್ನು ಮುಂದುವರಿಸಿದ್ದರು.

ಇದನ್ನೂ ಓದಿ: ದೆಹಲಿ ಗಡಿಗಳಲ್ಲಿನ ಹೋರಾಟಕ್ಕೆ ತೆರೆ: ವಿಜಯೀ ಮೆರವಣಿಗೆ ಮೂಲಕ ಪಂಜಾಬ್‌ಗೆ ತೆರಳಲಿರುವ ರೈತರು

ಆಪಾದಿತ ವ್ಯಕ್ತಿಯನ್ನು ಎಸ್‌ಜಿಪಿಸಿಯ ನೌಕರರು ಮಂದಿರದ ಆವರಣದೊಳಗಿನ ಕೋಣೆಗೆ ಕರೆದೊಯ್ದಿದ್ದರು. ಅಲ್ಲಿ ವಿಚಾರಣೆಯ ಸಮಯದಲ್ಲಿ ಥಳಿಸಲಾಯಿದ್ದು, ನಂತರ ಗಾಲಿಕುರ್ಚಿಯಲ್ಲಿ ಎಸ್‌ಜಿಪಿಸಿ ಪ್ರಧಾನ ಕಚೇರಿಗೆ ಕರೆದೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ ಎಂದು TNIE ವರದಿ ಮಾಡಿದೆ.

ಟಿವಿ ಚಾನೆಲ್‌ವೊಂದು ಸ್ವರ್ಣ ಮಂದಿರದ ಸಂಜೆಯ ಪ್ರಾರ್ಥನೆಯನ್ನು ನೇರ ಪ್ರಸಾರವನ್ನು ಮಾಡುತ್ತಿತ್ತು. ಹೀಗಾಗಿ ಘಟನೆಯ ವಿಡಿಯೊಗಳು ಶೀಘ್ರವೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ತಿಳಿಯುತ್ತಿದ್ದಂತೆ ನಿಹಾಂಗ್ಸ್ (ಸಿಖ್ ಯೋಧರು) ಸೇರಿದಂತೆ ಸಾರ್ವಜನಿಕರು ಸ್ವರ್ಣ ಮಂದಿರಕ್ಕೆ ಧಾವಿಸಿದ್ದರು.

ಇದರ ನಂತರ, ಸ್ವರ್ಣ ಮಂದಿರದ ಕಾಂಪ್ಲೆಕ್ಸ್‌ನಲ್ಲಿ ನೆಲದ ಮೇಲೆ ಮಲಗಿರುವ ಆರೋಪಿಯ ಮೃತದೇಹದ ವಿಡಿಯೊ ವೈರಲ್‌ ಆಗಿದೆ. ಮೃತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ:ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿಲ್ಲವೆಂದು ಸುಳ್ಳು ಹೇಳಿದ ಸರ್ಕಾರ; ಸಾಕ್ಷ್ಯಗಳು ಹೀಗಿವೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...