Homeಅಂಕಣಗಳುಬಹುಜನ ಭಾರತ: ನಗೆಗೆ ಹೊಗೆ ಇಡುತ್ತಿದ್ದಾರೇಕೆ ನರೇಂದ್ರ ಮೋದಿ?

ಬಹುಜನ ಭಾರತ: ನಗೆಗೆ ಹೊಗೆ ಇಡುತ್ತಿದ್ದಾರೇಕೆ ನರೇಂದ್ರ ಮೋದಿ?

- Advertisement -
- Advertisement -

ಪ್ರಧಾನಿಯವರನ್ನು ಟೀಕಿಸಿ ವ್ಯಂಗ್ಯಚಿತ್ರ ರಚಿಸಿದರೆಂದು ಪ್ರಖರ ವ್ಯಂಗ್ಯಚಿತ್ರಕಾರ ಮಂಜುಲ್ ಅವರನ್ನು ಸರ್ಕಾರ ಬೇಟೆಯಾಡಿದೆ.

ಮಂಜುಲ್ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಉದ್ಯಮ ಸಮೂಹಕ್ಕೆ ಸೇರಿದ ನೆಟ್ವರ್ಕ್-18 ಮಂಜುಲ್ ಅವರನ್ನು ಕೆಲಸದಿಂದ ತೆಗೆದುಹಾಕಿದೆ. ಈ ವ್ಯಂಗ್ಯಚಿತ್ರವನ್ನು ಮಂಜುಲ್ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇದೊಂದೇ ಅಲ್ಲ, ಮೋದಿ ಸರ್ಕಾರವನ್ನು ಕಟು ಟೀಕೆಗೆ ಗುರಿಪಡಿಸಿರುವ ನೂರಾರು ವ್ಯಂಗ್ಯಚಿತ್ರಗಳನ್ನು ಅವರು ಬರೆದಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ. ಟ್ವಿಟರ್ ಅವರಿಗೆ ನೋಟಿಸ್ ನೀಡಿದೆ. ಅವರ ಟ್ವಿಟರ್ ಖಾತೆಗೆ ಸಂಬಂಧಿಸಿದಂತೆ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ’ಕಾನೂನಾತ್ಮಕ ವಿನಂತಿ’ಯನ್ನು ತನಗೆ ಮಾಡಿಕೊಂಡಿರುವುದಾಗಿ ಟ್ವಿಟರ್ ನೋಟಿಸಿನಲ್ಲಿ ವಿವರಿಸಿದೆ.

ಮಂಜುಲ್

ಭಾರತದ ವ್ಯಂಗ್ಯಚಿತ್ರ ಕಲೆಯ ಪಿತಾಮಹ ಎಂದೇ ಹೆಸರಾದವವರು ಕೇಶವನ್ ಶಂಕರ ಪಿಳ್ಳೆ.

ನೆಹರೂ ಅವರನ್ನು ಲೇವಡಿ ಮಾಡಿ ರೇಗಿಸುವ ನಾಲ್ಕು ಸಾವಿರದಷ್ಟು ವ್ಯಂಗ್ಯಚಿತ್ರಗಳನ್ನು ಶಂಕರ ಪಿಳ್ಳೆ ತಮ್ಮ ಪ್ರಸಿದ್ಧ ನಿಯತಕಾಲಿಕ ’ಶಂಕರ್ಸ್ ವೀಕ್ಲಿ’ಯಲ್ಲಿ ಪ್ರಕಟಿಸಿದ್ದುಂಟು. ವಿಡಂಬನೆ-ವಿನೋದದಿಂದ ತಿವಿದರೂ ಸವಿದು ನಗುವ ಗುಣ ನೆಹರೂಗಿತ್ತು.

ನೆಹರೂ ನಂತರ ನಮ್ಮ ರಾಜಕಾರಣಿಗಳ ಪೈಕಿ ಅತಿ ಹೆಚ್ಚು ವ್ಯಂಗ್ಯಚಿತ್ರಗಳ ವಿಷಯವಸ್ತು ಆದವರು ಪ್ರಾಯಶಃ ಲಾಲೂ ಪ್ರಸಾದ್ ಯಾದವ್. ಆದರೆ ಈತ ಸರ್ವಾಧಿಕಾರಿಯಂತೆ ಉರಿದೆದ್ದ ಉದಾಹರಣೆಯಿಲ್ಲ.

ನಗೆಯಾಡುವ ಅವಕಾಶಗಳನ್ನು ಪ್ರಜೆಗಳಿಗೆ ನಿರಾಕರಿಸುವುದು ಸರ್ವಾಧಿಕಾರೀ ಆಡಳಿತದ ಪ್ರಧಾನ ಲಕ್ಷಣಗಳಲ್ಲೊಂದು. ತನ್ನ ಕುರಿತೇ ನಕ್ಕುಬಿಟ್ಟರೆ ಎಂಬ ಅಳುಕು ಸರ್ವಾಧಿಕಾರಿಯನ್ನು ಸದಾಸರ್ವದಾ ಕಾಡುತ್ತಿರುತ್ತದೆ. ಅಡಾಲ್ಫ್ ಹಿಟ್ಲರನ ಹಯಾಮಿನಲ್ಲಿ ಒಂದು ಒಳ್ಳೆಯ ಕಾಮಿಡಿ, ಒಂದು ಉತ್ತಮ ವ್ಯಂಗ್ಯಚಿತ್ರ, ಒಂದೇ ಒಂದು ವಿಡಂಬನೆ, ಅಣಕು ಕುಹಕದ ಪ್ರಸಂಗವೂ ಜರ್ಮನ್ನರಿಗೆ ನೋಡಲು ಸಿಗಲಿಲ್ಲ ಎಂದಿದ್ದಾರೆ ಶಂಕರಪಿಳ್ಳೆ. ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿ ಘೋಷಣೆಯ ನಂತರ ’ವೀಕ್ಲಿ’ಯನ್ನು ಬಂದ್ ಮಾಡಿದ್ದ ಸಂದರ್ಭವದು.

ವ್ಯಂಗ್ಯಚಿತ್ರಗಳು ಮತ್ತು ತಮ್ಮನ್ನು ಕುರಿತು ತಾವೇ ನಗುವ ಸ್ವಸ್ಥಮನಸ್ಸಿನ ಪ್ರವವೃತ್ತಿಯ ಕುರಿತು ನೆಹರೂ ಮತ್ತು ಖುದ್ದು ಶಂಕರ ಪಿಳ್ಳೆ ಹೇಳಿರುವ ವಿವೇಕದಮಾತುಗಳು ಅರ್ಧ ಶತಮಾನದಷ್ಟು ಹಳೆಯವಾದರೂ ಅತ್ಯಂತ ಪ್ರಸ್ತುತ.

‘Don`t spare me Shankar… Hit me, hit me hard’ ಎಂದು ಶಂಕರ ಪಿಳ್ಳೆಯವರಿಗೆ ಹೇಳುತ್ತಿದ್ದರು ನೆಹರೂ. ಅವರ ಈ ಕೆಳಗಿನ ಮಾತುಗಳು ಇಂದಿಗೂ ಪ್ರಸ್ತುತ.

ನಮ್ಮಲ್ಲಿ ಬಹಳ ಮಂದಿ ಶಂಕರ್ ವ್ಯಂಗ್ಯಚಿತ್ರಕ್ಕಾಗಿ ನಿತ್ಯ ಕಾಯುತ್ತಿದ್ದೆವು. ಪತ್ರಿಕೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಆ ದಿನದ ಪ್ರಮುಖ ಸುದ್ದಿಯನ್ನು ಬಿಟ್ಟು ನೇರವಾಗಿ ಶಂಕರ್ ವ್ಯಂಗ್ಯಚಿತ್ರ ಇರುತ್ತಿದ್ದ ಪುಟ ತೆರೆಯುತ್ತಿದ್ದೆವು. ಮನಸ್ಸನ್ನು ಮುದಗೊಳಿಸುತ್ತಿದ್ದುದು ಮಾತ್ರವಲ್ಲ, ಪ್ರಚಲಿತ ವಿದ್ಯಮಾನಗಳಿಗೆ ಒಳನೋಟವನ್ನು ಕಟ್ಟಿಕೊಡುತ್ತಿದ್ದವು ಶಂಕರ್ ವ್ಯಂಗ್ಯಚಿತ್ರಗಳು.

“ಶಂಕರ್ ಬಿಡಿಸುತ್ತಿದ್ದ ವ್ಯಂಗ್ಯಚಿತ್ರಗಳು ಸಮಾಜಸೇವೆಯೇ ಹೌದು. ನಾವೆಲ್ಲ ಋಣಿಯಾಗಿರಬೇಕಾದ ಸೇವೆಯಿದು. ಒಂದಲ್ಲ ಒಂದು ಹಂತದಲ್ಲಿ ಸ್ವಾರ್ಥಕೇಂದ್ರಿತರೂ ಬೊಗಳೆ ಬಿಟ್ಟು ಬಡಾಯಿ ಕೊಚ್ಚಿಕೊಳ್ಳುವವರೂ ಆಗಿಬಿಡಬಹುದಾದ ನಮ್ಮಂತಹವರ ಕಣ್ಣಿಗೆ ಕಟ್ಟುವ ಪೊರೆಯನ್ನು
ಹರಿಯುವುದು ಒಳಿತಿನ ಕೆಲಸ” ಎಂದಿದ್ದರು ನೆಹರೂ.

ಅಂದಿನ ರಾಜಕಾರಣಿಗಳು ಮತ್ತು ಮಂತ್ರಿಗಳ ವಲಯದಲ್ಲಿ ಡೆಲ್ಲಿ ಡೆವಿಲ್ ಎಂದೇ ಹೆಸರಾಗಿದ್ದರು ಶಂಕರ ಪಿಳ್ಳೆ. ಅವರು ತಮ್ಮ ಪತ್ರಿಕೆಯ ಓದುಗರನ್ನು ಉದ್ದೇಶಿಸಿ ಬರೆದಿದ್ದ ಈ ಕೆಳಕಂಡ ಮಾತುಗಳನ್ನು ಮತ್ತೆ ನೆನೆಯಬೇಕಿದೆ.

ಕೇಶವನ್ ಶಂಕರ ಪಿಳ್ಳೆ

“ನೀವು ನಗಲು ನೆರವಾಗೋದು ನಮ್ಮ ಪತ್ರಿಕೆಯ ಉದ್ದೇಶ. ಜಗತ್ತಿನ ಇತರೆ ದೇಶಗಳ ಜನ ಸಂಘರ್ಷಗಳ ನಡುವೆಯೂ ಮನಸಾರೆ ನಗುತ್ತಿದ್ದಾರೆ. ವಿನೋದ ವಿಡಂಬನೆಗಳೇ ಇಲ್ಲದ ಪೀಳಿಗೆ ನಮ್ಮದು, ಒಂಥರಾ ವರ್ಣರಹಿತ ಬೊಂಬೆಗಳ ಮೆರವಣಿಗೆ. ನಗುವ ವರವನ್ನು ವರ್ಷಗಳ ಹಿಂದೆಯೇ ಕಳೆದುಕೊಂಡವರು. ಜಡ್ಡಿನಂತಹ ಗಾಂಭೀರ್ಯವನ್ನು ಗಳಿಸಿಕೊಂಡುಬಿಟ್ಟಿದ್ದೇವೆ. ಹೆಚ್ಚೆಂದರೆ ಕೃತಕ ಹುಸಿನಗೆ ಧರಿಸಿ ಹಲ್ಲು ಕಿರಿದೇವು. ಆಕಳಿಸಿ ಕಿಸಿಕಿಸಿ ನಕ್ಕೇವು. ಹೊಟ್ಟೆ ತುಂಬ ನಗುವುದೆಂದರೆ ಅಸಭ್ಯವೆಂದು ತಿಳಿದವರು ನಾವು, ನಮ್ಮ ಕುರಿತು ನಾವೇ ನಗುವುದಂತೂ ಇಲ್ಲವೇಇಲ್ಲ. ಇತರರ ಕುರಿತು ಮತ್ತು ನಿಮ್ಮನ್ನೇ ಕುರಿತು ನಗುವುದಕ್ಕೆ ನೆರವಾಗಲಿದೆ ಶಂಕರ್ಸ್ ವೀಕ್ಲಿ… ಭಾರೀ ಬೋರುಗಳ ದೇಶವಾಗಬಾರದು ನಾವು.. ಜನರನ್ನು ನಗಿಸೋ ಪಾಲಿಸಿ ಬಿಟ್ರೆ ಈ ಪ್ರಯತ್ನದ ಹಿಂದೆ ಬೇರೆ ಯಾವ ಪಾಲಿಸಿಯೂ ಇಲ್ಲ. ನಮ್ಮನ್ನು ಏನೆಂದು ಬೇಕಾದರೂ ಕರೀರಿ. ಸೋಷಲಿಸ್ಟರು, ಕಮ್ಯುನಿಸ್ಟರು, ಹುಚ್ಚರು ಇಲ್ಲವೇ ವಕ್ರರು… ಆದ್ರೆ ನಗುವಿಗೆ ಸೈದ್ಧಾಂತಿಕ ಇಲ್ಲವೇ ಇಸಮ್ಮುಗಳ ಅಂಟು ಇರೋದು ಸಾಧ್ಯ ಇಲ್ಲ.

ಪರಿಸ್ಥಿತಿ ಬದಲಾಗಿದೆ. ಈಗ ಎಲ್ಲವೂ ಸಂಪೂರ್ಣ ಇಂಡಿಯನ್. ಇಂಗ್ಲಿಷ್ ಸಾಹೇಬರಿಗೆ ಬದಲಾಗಿ ಇಂಡಿಯನ್ ಸಾಹೇಬರುಂಟು. ನಮ್ಮ ದೌರ್ಬಲ್ಯಗಳು ರಾಷ್ಟ್ರೀಯ ದೌರ್ಬಲ್ಯಗಳು, ನಗಬೇಕು ಇಲ್ಲವೇ ಸಾಯಬೇಕು ನಾವು. ಹಾಸ್ಯಾಸ್ಪದ ಸ್ವಸಂತುಷ್ಟಿಯನ್ನು ನಗೆಯಲ್ಲಿ ಉಡಾಯಿಸಬೇಕು. ನಗಬೇಕೆಂದರೆ ತಲೆ ಕೆಳಗಾಗಿ ನಿಲ್ಲಬೇಕಿಲ್ಲ. ಪಾದ ಊರಿಯೇ ನಿಲ್ಲಿರಿ. ಬದುಕು ತಲೆ ಊರಿ ತಿರುಗುವುದನ್ನು ನೋಡಿ ಅದರ ಹತ್ತು ಹಲವು ಮುಖಗಳನ್ನು ಕಂಡು ಮನಸಾರೆ ನಗೋಣ.

“ಆಹಾ ಎಂಥಾ ಬದುಕಿದು! ಬುಶ್ಟ್ ಶರ್ಟ್ ನಾಗರಿಕತೆ, ಕಾಕ್ಟೇಲ್ಸ್ ಮತ್ತು ಮೊನಾಲಿಸಾ ನಗೆ ಹೊತ್ತ ಮೇಮ್ ಸಾಹೇಬ್, ಸೆಕ್ರೆಟೆರಿಯಟೀನಲ್ಲಿ ಖಾಲಿ ರುಂಡಗಳನ್ನು ಹೊತ್ತು ತಿರುಗುವ ಭ್ರಷ್ಟ ಮುಂಡಗಳು. ಕಪಟ ನಗುವಿನ ಕಳ್ಳಸಂತೆಕೋರರು, ಜನರ ಆದಾಯ ವೆಚ್ಚಗಳನ್ನು ನಿಯಂತ್ರಿಸುವ ಬಿಗ್ ಬಿಸಿನೆಸ್ಸುಗಳು, ಸಡಗರದ ಕುಪ್ಪಳಿಕೆಯ ರಾಜಕಾರಣಿಗಳು, ಅರಮನೆ ಕ್ರಾಂತಿಗಳ ಪ್ರಮೋಟರುಗಳು, ದೇಶೀ ರುಚಿಗಳು, ವಿದೇಶೀ ವಿಲಾಸಗಳು, ಯಾತಕ್ಕಾಗಿ ಇಂಥ ಕತ್ತೆ ಚಾಕರಿಯೆಂದು ಅರಿಯದೆ ಗುಲಾಮಗಿರಿ ಮಾಡ್ತಿರೋ ಶ್ರಮಜೀವಿ, ಏರುತ್ತಿರುವ ಸಂಬಳ-ಕೂಲಿಯ ಜೊತೆಜೊತೆಗೇ ಜಿಗಿಯುತ್ತಿರುವ ದರಗಳು, ಲೈಸೆನ್ಸ್ ಇರೋ ಲಂಚಗುಳಿತನ ಮತ್ತು ವಿಶೇಷಾಧಿಕಾರ ಎಂಬಂತಹ ಲಾಭಬಡುಕತನ, ಅರೆನಿಯಂತ್ರಿತ ಬದುಕಿನ ಅರಾಜಕತೆ, ಜನಿಸಲು ಒಲ್ಲದ ಸಂಸ್ಕೃತಿಯೊಂದರ ಎಲ್ಲ ತಮಾಷೆ ಮತ್ತು ವಿಕಟ ಹಾಸ್ಯ. ಬದುಕನ್ನು ನೋಡಬೇಕಿದ್ದರೆ ಅದು ಆರಾಮವಾಗಿ ಹರಿಯುವುದನ್ನು ಕಾಣಬೇಕೇ ವಿನಾ ಅದರ ಪಾರ್ಶ್ವನೋಟವನ್ನಷ್ಟೇ ಕಂಡರೆ ಸಾಲದು. ಒಂದಷ್ಟು ಪೀಡನೆ ಇಲ್ಲವೇ ಕೇಡಿಗತನ, ಪ್ರಾಯಶಃ ಪ್ರೀತಿ ಸಹಿಷ್ಟುತೆಗಿಂತ ಹೆಚ್ಚು ಪೀಡನೆಯೇ ಎನಿಸೀತು. ಆದರೆ ನಗೆಗೆ ಲಾಯಕ್ಕಾದ ಎಲ್ಲವನ್ನು ಕಂಡು ನಗಲೇಬೇಕು”.


ಇದನ್ನೂ ಓದಿ: ಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...