Homeಡೇಟಾ ಖೋಲಿಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2

ಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2

- Advertisement -
- Advertisement -

ಅರಿಸ್ಟಾಟಲ್ ಅಂತ್ ಒಬ್ಬ ಇದ್ದ. ಸುಮಾರು 2370 ವರ್ಷದ ಹಿಂದೆ. ಆ ಪುಣ್ಯಾತ್ಮ ಒಂದು ಮಾತು ಹೇಳಿ ಹೋದ. “ಅನೇಕ ಸಣ್ಣ ಸಣ್ಣ ವಸ್ತುಗಳು ಒಂದಕ್ಕೊಂದು ಸೇರುವುದರಿಂದ ಒಂದು ದೊಡ್ಡ ವಸ್ತು ಆಗಿರುತ್ತದೆ. ಆದರೆ ತನ್ನೊಳಗಿನ ಭಾಗಗಳಿಂದ ಆದ ಆ ದೊಡ್ಡ ವಸ್ತು, ತನ್ನ ಸಣ್ಣ ಸಣ್ಣ ಭಾಗಗಳ ಒಟ್ಟು ಮೊತ್ತಕ್ಕಿಂತ ಭಿನ್ನವಾಗಿರುತ್ತದೆ” ಎಂದು.

ಆದ್ರ ಆನಂತರ ಬಂದ ಕೆಲ ಮಹಾನುಭಾವರು ಅದನ್ನ ಬದಲು ಮಾಡಿದರು: “ಆ ದೊಡ್ಡ ವಸ್ತು, ತನ್ನ ಸಣ್ಣ ಸಣ್ಣ ಭಾಗಗಳ ಒಟ್ಟು ಮೊತ್ತಕ್ಕಿಂತ ದೊಡ್ಡದಾಗಿರುತ್ತದೆ” ಅಂತ. ಕೇವಲ ಒಂದು ಪದ ಬದಲಿ ಮಾಡಿದ್ರ ಎಷ್ಟು ಅಪಾರ್ಥ ಆಗತಾದ ಅನ್ನೋದು ಇದರಿಂದಾ ಗೊತ್ತಾಗ್ತದ.

ಇದನ್ನ ಗೆಸ್ಟಾಲ್ಟ್ ನಿಯಮ ಅಂತ ಕರೆದರು. ಗೆಸ್ಟಾಲ್ಟ್ ಅನ್ನೋದಕ್ಕ ಕನ್ನಡದೊಳಗ ರೂಪ, ಆಕಾರ ಅಂತ ಕರಿಯಬಹುದು.

ಹಂಗಾರ 20ನೆ ಶತಮಾನದ ಮರಿ ಅರಿಸ್ಟಾಟಲ್‌ಗಳು ರೂಪಿಸಿದ ‘ಗೆಸ್ಟಾಲ್ಟ್ ಥೆರಪಿ’ ಅಥವ ‘ಆಕಾರ ಸಿದ್ಧಾಂಥದ ರೋಗ ನಿದಾನ’ದ ಅರ್ಥ ಏನು? ಸರಳವಾಗಿ ಹೇಳೋದಾದರ, ಒಬ್ಬ ಮನುಷ್ಯನ ವ್ಯಕ್ತಿತ್ವ ತನ್ನ ದೇಹ-ಮನಸ್ಸು-ಸ್ವಂತ ವಿಚಾರ, ಹೊರಗಿನ ಪ್ರಭಾವ, ಸುತ್ತಲಿನ ಪರಿಸ್ಥಿತಿ, ಎಲ್ಲಾ ಸೇರಿ ಆಗಿರ್ತದ. ಈ ರೀತಿ ರೂಪುಗೊಂಡಿರುವುದನ್ನ ವ್ಯಕ್ತಿತ್ವ ಅನ್ನುವುದು. ಒಬ್ಬನ ಸ್ವಭಾವದ ಭಾಗಗಳಾದ ದೇಹ, ಮನಸ್ಸು, ವಿಚಾರ, ಪ್ರಭಾವ, ಪರಿಸ್ಥಿತಿ ಮುಂತಾದವುಗಳ ಒಟ್ಟು ಮೊತ್ತಕ್ಕಿಂತ ಅದು ದೊಡ್ಡದು ಅಂತ ಅವರು ವಾದಿಸಿದರು. ಆ ಮನೋವಿಜ್ಞಾನಿಗಳ ಗುಂಪಿನಲ್ಲಿ ವಿಲ್ಲ್ಹೆಲ್ಮ್ ಉಂಟ್, ಕರ್ಟ್ ಕೊಫ್ಕಾ, ಮ್ಯಾಕ್ಸ್
ವೆರ್ಥೆಮೆರ್, ಫ್ರಿಟ್ಸ್ ಪೆರ್ಲ್ಸ್, ವೂಲ್ಫ್‌ಗ್ಯಾಂಗ್ ಕೊಹ್ಲರ್, ಇತ್ಯಾದಿಗಳು ಇದ್ದರು.
ಅವರು ಪಾಪ ತಮ್ಮ ಕ್ಷೇತ್ರಕ್ಕ ತಮ್ಮ ಕೊಡುಗೆ ಕೊಟ್ಟರು, ಹೋದರು. ಆ ಸಿದ್ಧಾಂತ ಪಾಲಿಸೋ ವಿದ್ವಾಂಸರು ಈಗಲೂ ಇದ್ದಾರ.

ಆದರ ಪ್ರಾಚೀನ ಕಾಲದಿಂದಲೂ ನಮ್ಮ ಕಣ್ಣಿಗೆ ಕಾಣುವ ಜಗತ್ತಿನ ವಿಶ್ವ ಗುರು ಆಗಿರುವ ಭಾರತದ ಕೆಲವು ತಜ್ಞರು ಈ ಗೆಸ್ಟಾಲ್ಟ್ ಸಿದ್ಧಾಂತವನ್ನು ಹೊಸ ಕಣ್ಣಿನಿಂದ ನೋಡಿದರು. ಅದು ಅನ್ವಯ ಆಗುವುದು ನಮ್ಮ ದೇಹಕ್ಕೆ ಅಲ್ಲಾ, ನಮ್ಮ ದೇಶಕ್ಕೆ ಅಂತ ಚೀರಿ ಹೇಳಿದರು.

ಅವ್ರ ಪ್ರಕಾರ ಭಾರತ ಎಂಬೋ ರಾಷ್ಟ್ರ, ಎಲ್ಲಾ ರಾಜ್ಯಗಳ ಒಟ್ಟು ಮೊತ್ತಕ್ಕಿಂತಲೂ ದೊಡ್ಡದು, ಭವ್ಯವಾದದ್ದು. ಭಾರತ ಅನ್ನುವುದು ಕೇವಲ ರಾಜ್ಯಗಳ ಸಮೂಹ ಅಲ್ಲ, ಅದು ಅದಕ್ಕಿಂತಲೂ ದೊಡ್ಡದು, ಭಿನ್ನವಾದದ್ದು, ಭವ್ಯವಾದದ್ದು. ಒಟ್ಟಿನಲ್ಲಿ ಇದು ಒಕ್ಕೂಟ ಅಲ್ಲ, ಸಂಯುಕ್ತ ಸಂಘ ಅಲ್ಲ, ಕೇವಲ ರಾಜ್ಯಗಳ ಒಂದು ಗುಂಪು. ಹೀಗಾಗಿ, ದೇಶದ ಅಸ್ಮಿತೆ ಅನ್ನೋದು ದೊಡ್ಡದು. ರಾಜ್ಯಗಳ ಅನನ್ಯತೆ ಅಥವಾ ತನ್ನತನ ಅನ್ನೋದು ಯಾವ ಲೆಕ್ಕಕ್ಕೂ ಇಲ್ಲ.

ಈ ಪೀಠಿಕೆಯ ನಂತರ ನಮ್ಮ ವಿಷಯಕ್ಕ ಬರೋಣ. ಅದು ಮಾಧ್ಯಮ ನಲ್ಲರ ಬಗ್ಗೆ. ಈ ಹೊತ್ತಿನ ಮಾಧ್ಯಮ ನಲ್ಲರು ಯಾರು ಅಂದರ ಸದಾ ಸುದ್ದಿಯಲ್ಲಿ ಇರುವ ಕೆಲ ರಾಜ್ಯದ ಮುಖ್ಯ ಮಂತ್ರಿಗಳು. ಸುದ್ದಿ ಎನ್ನುವುದು ನಮ್ಮ ದೇಶದಾಗ ಬಹಳ ತಟಸ್ಥ ಹಾಗೂ ಯಾವ ಪಕ್ಷಕ್ಕೂ ಸೇರದೆ ಇರೋದರಿಂದ ಅವರು ಒಳ್ಳೆ ಕೆಲಸ ಮಾಡಿದಾಗ ಅಥವ ಕೆಟ್ಟ ಕೆಲಸ ಮಾಡಿದಾಗ ಅವರು ಸುದ್ದಿ ಮಾಡ್ತಾರ.

ಅದರೊಳಗ ಕೆಲವು ಹೆಸರು – ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಪಿನರಾಯಿ ವಿಜಯನ್, ಹೇಮಂತ್ ಸೊರೆನ್, ಅಜಯ್ ಸಿಂಗ್ ಬಿಸ್ಟ್ ಅಲಿಯಾಸ್ ಯೋಗಿ ಆದಿತ್ಯನಾಥ್, ಬಿ ಎಸ್ ಯಡಿಯೂರಪ್ಪ, ಇತ್ಯಾದಿ. ಇವರು ಜಾಸ್ತಿ ಹೆಸರು ಮಾಡಿದಾಗಲೆಲ್ಲಾ ಪಂಥ ಪ್ರಧಾನ ಸೇವಕರ ಹೆಸರು ಮರೆ ಆಗಲಿಕ್ಕೆ ಸುರು ಆಗೇದ ಅಂತ ಕೆಲವರಿಗೆ ಚಡಪಡಿಕೆ ಆಗಲಿಕ್ಕೆ ಸುರು ಆಗ್ತದ. ಅವರು ಏನು ಸಣ್ಣ ಸಣ್ಣವರಿಗೆಲ್ಲಾ ಪ್ರಾಮುಖ್ಯತೆ ಕೊಡೋದು? ದೊಡ್ಡವರನ್ನ ಮರೆತರೆ ಹೆಂಗ? ಅಂತ ಜೋರಾಗಿ ಹೇಳ್ತಾರ, “ನಿನ್ನ ಬಿಟ್ಟು ಬೇರೆ ದೇವರನ್ನು ಪೂಜಿಸಿದೊಡೆ ಎಂತಯ್ಯಾ?” ಅಂತ ಗೋಳಾಡುತ್ತಾರೆ. ಅವರ ಮನಸ್ಸಿನಾಗ ಎರಡು ತಪ್ಪು ಕಲ್ಪನೆಗಳು ಇರಬಹುದು. ಒಂದು ಪ್ರಧಾನಿ ಪಟ್ಟ ಅನ್ನೋದು ಸರ್ವ ಪ್ರಥಮ ಪ್ರಮುಖ ಅನ್ನೋದು, ಇನ್ನೊಂದು ರಾಜ್ಯಗಳು ಕನಿಷ್ಠ, ದೇಶ ಶ್ರೇಷ್ಠ ಅನ್ನೋದು. ಅವರೆಲ್ಲ ನಮ್ಮ ಕಾಲದ ಗೆಸ್ಟಾಲ್ಟ್ ನಂಬಿಕಸ್ಥರು.

ಅವರ ನಂಬಿಕೆ ತಪ್ಪು. ಅದಕ್ಕೆ ಯಾವುದೇ ಸಾಮಾಜಿಕ ವಿಜ್ಞಾನದ ಆಧಾರ ಇಲ್ಲ. ಮನೋವಿಜ್ಞಾನದ ಒಳಗ ಈ ವಿಚಾರಕ್ಕೆ ಮನ್ನಣೆ ಇರಬಹುದು. ಅದರಿಂದ ಬಹಳ ಜನ ಗುಣ ಆಗಿರಬಹುದು. ಆದರ ರಾಜ್ಯಶಾಸ್ತ್ರದೊಳಗ ಇದಕ್ಕೆ ಮನ್ನಣೆ ಇಲ್ಲ. ಇದು ಬಹು ಚರ್ಚಿತ ವಿಷಯ ಅಷ್ಟೇ ಅಲ್ಲ, ಬಹಳ ಜನ ಪಂಡಿತರಿಂದ ಟೀಕೆ-ನಿಂದನೆಗೆ ಒಳಗಾದ ವಿಷಯ. ರಾಜ್ಯಗಳ ಅನನ್ಯತೆ ಅನ್ನೋದು, ದೇಶದ ಅಸ್ಮಿತೆಗಿಂತ ದೊಡ್ಡದು. ರಾಜ್ಯಗಳಿಂದ ದೇಶಕ್ಕ ಪ್ರಾಮುಖ್ಯತೆ ಬರ್ತದ. ಉಲ್ಟಾ ಅಲ್ಲಾ.

ಇದಕ್ಕೆ ಒಂದು ಉದಾಹರಣೆ ಕೊಡೋಣ. 2015ರಲ್ಲಿ ಭಾರತದಿಂದ ಕಿರಿಯ ಐಪಿಎಸ್ ಅಧಿಕಾರಿಗಳ ತಂಡ ಅಮೆರಿಕ ದೇಶದ ಅಧ್ಯಯನ ಪ್ರವಾಸಕ್ಕ ಹೋಗಿತ್ತು. ಅವಾಗ ಅವರು ಅಲ್ಲಿನ ಕೆಲವು ಕೇಂದ್ರ ಪೊಲೀಸು ಪಡೆಗಳಾದ ಸಿಐಎ, ಎಫ್‌ಬಿಐ, ಐಆರ್‌ಎಸ್‌ಗಳ ಕಚೇರಿಗೆ ಕರಕೊಂಡು ಹೋದರು. ಆಮ್ಯಾಲೆ ಲಾಸ್ ಎಂಜಲಿಸ್, ಫ್ಲೋರಿಡಾ, ಕೆಂಟಕಿ, ನ್ಯುಯಾರ್ಕ್, ವಾಶಿಂಗ್‌ಟನ್ ಇತ್ಯಾದಿ ರಾಜ್ಯಗಳ ಪೊಲೀಸು ಅಧಿಕಾರಿಗಳ ಜೊತೆ ಭೇಟಿ ಮಾಡಿಸಿದರು.

ಅವಾಗ ಭಾರತೀಯ ಅಧಿಕಾರಿಗಳು ನಂಬಲಿಕ್ಕೆ ಸಾಧ್ಯವಿಲ್ಲದ ಎರಡು ವಿಷಯ ಅವರಿಗೆ ಗೊತ್ತಾತು. ಒಂದು ಅಲ್ಲಿ ಐಪಿಎಸ್ಸು-ಐಎಎಸ್ಸು ಅನ್ನೋದು ಇಲ್ಲ್ಲ.

ಇನ್ನೊಂದು ಅದು ಏನು ಅಂದರ ಅಮೆರಿಕ ದೇಶದಲ್ಲಿ ಕೇವಲ ಒಂದು ಪೊಲೀಸು ವ್ಯವಸ್ಥೆ ಇಲ್ಲ. ಅಲ್ಲೇ ಸುಮಾರು 19,000 ವಿವಿಧ ವ್ಯವಸ್ಥೆಗಳು ಇವೆ. ನಮ್ಮ ಊರಿನಲ್ಲಿ ಪೊಲೀಸು ಕೆಲಸ ಹೆಂಗ ಮಾಡಬೇಕು ಅನ್ನೋದು ನನಗೆ ಚನ್ನಾಗಿ ಗೊತ್ತಿರುತ್ತದೆ. ನನ್ನ ಊರಿಗೆ ಭೇಟಿಯೇ ನೀಡದ ವಾಶಿಂಗ್‌ಟನ್‌ನ ಹಿರಿಯ ಅಧಿಕಾರಿಗೆ ಏನು ಗೊತ್ತಿರ್ತದ ಮಣ್ಣು ಅಂತ ಅಲ್ಲಿನ ಪುಟ್ಟ ನಗರದ ಪೊಲೀಸು ಅಧಿಕಾರಿ ಒಬ್ಬ
ಇವರಿಗೆ ಹೇಳಿದ.

ಇದನ್ನ ಜೀರ್ಣಿಸಿಕೊಳ್ಳಲಿಕ್ಕೆ ಈಸ್ಟ್ ಇಂಡಿಯಾ ಕಂಪನಿಯ ಪಳೆಯುಳಿಕೆಗಳಾದ ನಮ್ಮ ಐಪಿಎಸ್ಸು ಅಧಿಕಾರಿಗಳಿಗೆ ಸಾಧ್ಯ ಆಗಲಿಲ್ಲ. ಅದು ಹೇಗೆ ಸಾಧ್ಯ, ನೀವು ನಮಗೆ ಸುಳ್ಳು ಹೇಳುತ್ತಿದ್ದೀರಿ ಅಂತ ಹೇಳಿ ಜೋರಾಗಿ ಜಗಳ ಮಾಡಿದರು. ಆಮ್ಯಾಲೆ ಅಲ್ಲಿಯೇ ನೆಲೆಸಿದ್ದ ಭಾರತಿಯ ಮೂಲದ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರನ್ನ ಅಲ್ಲಿಯ ಪೊಲೀಸರು ಕರೆಸಿದರು. ಅವರು ಇವರಿಗೆ ತಿಳಿಸಿ ಹೇಳಿದರು. ನಿಮಗೆ ಸುಳ್ಳು ಹೇಳಿ ಇವರಿಗೆ ಯಾವ ಲಾಭವೂ ಇಲ್ಲ. ಇಲ್ಲೇ ಇರುವುದು ನೈಜ ಒಕ್ಕೂಟ ವ್ಯವಸ್ಥೆ. ಭಾರತದ ಒಕ್ಕೂಟ ವ್ಯವಸ್ಥೆ ಇರೋದು ಬರೀ ಕಾಗದದ ಮೇಲೆ ಅಂತ ಅವರು ತಿಳಿ ಹೇಳುವಾಗ ರಾತ್ರಿ ಆಗಿತ್ತು. ಎಲ್ಲರೂ ಊಟ ಮಾಡಿ ತಲೆನೋವಿನ ಮಾತ್ರೆ ತೊಗೊಂಡು ಮಲಗಿಕೊಂಡರು. ಅವರು ಮರಳಿ ಭಾರತಕ್ಕೆ ಬಂದರೂ ಕೂಡ ಅವರಿಗೆ ಅಲ್ಲಿನ ಪೊಲೀಸು ವ್ಯವಸ್ಥೆ ಅರ್ಥ ಅಗಲಿಲ್ಲ.

ಈ ಕಳೆದ ಐದಾರು ವರ್ಷದೊಳಗ ಎರಡು ಶಬ್ದ ಮತ್ತ ಮತ್ತ ಬಳಕೆ ಆಗಲಿಕ್ಕೆ ಹತ್ತಿದ್ದಾವು. ಅವು ಯಾವಪಾ ಅಂದ್ರ – ವಿಕೇಂದ್ರೀಕರಣ ಮತ್ತು ಒಕ್ಕೂಟ ವ್ಯವಸ್ಥೆ. ಅವು ನಮಗ ಈಗ ಎಷ್ಟು ಮುಖ್ಯ ಅಗ್ಯಾವು ಅನ್ನೋದು ನಾವು ತಿಳಕೊಬೇಕು. ಆ ದಿಕ್ಕಿನಾಗ ಇದು ಒಕ್ಕೂಟ ವ್ಯವಸ್ಥೆಯ ಪರಿಚಯದ ಪ್ರಯತ್ನ. ಉಳಿದದ್ದು ಮುಂದ ನೋಡೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...