Homeಮುಖಪುಟಹಾವು ಕಚ್ಚಿಸಿ ಪತ್ನಿ ಕೊಲೆ: ದೇಶದ ಮೊದಲ ಪ್ರಕರಣ; ಅಪರಾಧಿಗೆ 2 ಜೀವಾವಧಿ ಶಿಕ್ಷೆ

ಹಾವು ಕಚ್ಚಿಸಿ ಪತ್ನಿ ಕೊಲೆ: ದೇಶದ ಮೊದಲ ಪ್ರಕರಣ; ಅಪರಾಧಿಗೆ 2 ಜೀವಾವಧಿ ಶಿಕ್ಷೆ

ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ನ್ಯಾಯಾಧೀಶರು ಈ ಪ್ರಕರಣವು 'ಅಪರೂಪದಲ್ಲಿ ಅಪರೂಪ' ಎಂದು ಕರೆದಿದ್ದಾರೆ

- Advertisement -
- Advertisement -

ತನ್ನ ಪತ್ನಿ ‘ಉತ್ರಾ’ ಅವರಿಗೆ ವಿಷಪೂರಿತ ನಾಗರ ಹಾವು ಕಚ್ಚಿಸಿ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಸೂರಜ್ ಎಸ್ ಕುಮಾರ್‌ಗೆ ಬುಧವಾರ ಕೇರಳದ ಕೊಲ್ಲಂ ಹೆಚ್ಚುವರಿ ಸೆಷನ್ಸ್‌‌ ನ್ಯಾಯಾಲಯವು ಎರಡು ಬಾರಿ ಜೀವಾವಧಿ ಶಿಕ್ಷೆ ವಿಧಿಸಿದೆ. ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ನ್ಯಾಯಾಧೀಶ ಎಂ.ಮನೋಜ್ ಅವರು ಈ ಪ್ರಕರಣವು ‘ಅಪರೂಪದಲ್ಲಿ ಅಪರೂಪ’ ಎಂದು ಹೇಳಿದ್ದಾರೆ.

ಆರೋಪಿಗೆ ಮರಣ ದಂಡನೆ ನೀಡಬೇಕು ಎಂದು ಉತ್ರಾ ಪರವಾಗಿ ವಾದಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ ಮೋಹನರಾಜ್ ನ್ಯಾಯಾಲಯಕ್ಕೆ ವಿನಂತಿಸಿದ್ದರು. ಆದರೆ ಆರೋಪಿಯ ವಯಸ್ಸು ಮತ್ತು ಕ್ರಿಮಿನಲ್ ಹಿನ್ನಲೆ ಇಲ್ಲದೆ ಇರುವುದನ್ನು ಗಮನಿಸಿದ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ನೀಡಿ ತೀರ್ಪಿತ್ತಿದೆ.

ಇದನ್ನೂ ಓದಿ: ಗ್ಯಾಂಗ್‌ ರೇಪ್‌: ಮಹಿಳೆಯರ ಮೇಲಿನ ಅಪರಾಧಗಳಿಗೆ ಕುರುಡಾಗದಿರಿ, ದನಿ ಎತ್ತಿ- ನಟಿ ರಮ್ಯಾ ಆಕ್ರೋಶ

ಪ್ರಾಸಿಕ್ಯೂಟರ್ ಪ್ರಕಾರ, ಕೊಲೆ ಮಾಡಿರುವುದಕ್ಕೆ ನೀಡಲಾಗಿರುವ ಜೀವಾವಧಿ ಅಲ್ಲದೆ, ಸೂರಜ್‌ ಕುಮಾರ್‌ಗೆ ಕೊಲೆ ಯತ್ನ ನಡೆಸಿದ ಅಪರಾಧಕ್ಕೆ ಜೀವಾವಧಿ ಘೋಷಿಸಲಾಗಿದೆ. ಜೊತೆಗೆ ಪತ್ನಿಗೆ ವಿಷದ ಮೂಲಕ ಹಾನಿ ಮಾಡಿದ್ದಕ್ಕೆ 10 ವರ್ಷ ಹಾಗೂ ಸಾಕ್ಷ್ಯ ನಾಶ ಮಾಡಿದ್ದಕ್ಕಾಗಿ ಏಳು ವರ್ಷಗಳ ಶಿಕ್ಷೆಯನ್ನು ಘೋಷಿಸಲಾಗಿದೆ. ಜೊತೆಗೆ ನ್ಯಾಯಾಲಯವು ಅಪರಾಧಿಗೆ ಒಟ್ಟು 5.85 ಲಕ್ಷ ದಂಡ ವಿಧಿಸಿದೆ.

“ಕೊಲೆ ಆರೋಪಿಗೆ ಶಿಕ್ಷೆ ವಿಧಿಸಲಾಗಿದ್ದು, ವೈಜ್ಞಾನಿಕವಾಗಿ ಮತ್ತು ವೃತ್ತಿಪರವಾಗಿ ಕೊಲೆ ಪ್ರಕರಣವನ್ನು ಭೇದಿಸಲಾಗಿದೆ. ಪ್ರಕರಣವೊಂದನ್ನು ಹೀಗೂ ತನಿಖೆ ಮಾಡಿ ಪತ್ತೆ ಮಾಡಬಹುದು ಎಂಬುದಕ್ಕೆ ಇದು ಒಂದು ಅತ್ಯುತ್ತಮ ಉದಾಹರಣೆಯಾಗಿದೆ” ಎಂದು ಕೇರಳ ಡಿಜಿಪಿ ಹೇಳಿದ್ದಾರೆ.

ಸೂರಜ್‌ ಕುಮಾರ್‌ ತನ್ನ 25 ವರ್ಷದ ಪತ್ನಿ ಉತ್ರಾ ಅವರನ್ನು ಕಳೆದ ವರ್ಷ ಮೇ ತಿಂಗಳಲ್ಲಿ ನಾಗರ ಹಾವು ಕಚ್ಚಿಸಿ ಕೊಲೆ ಮಾಡಿದ್ದ. ಅದಕ್ಕಿಂತಲೂ ಮುಂಚೆಯು ಆತ ಉತ್ರಾ ಅವರನ್ನು ಕೊಲೆ ಮಾಡಲು ಕೊಳಕು ಮಂಡಲ ಹಾವನ್ನು ಬಳಸಿದ್ದನು. ಆದರೆ ಕೊಲ್ಲಲಾಗಿರಲಿಲ್ಲ. ತದನಂತರ ಸೂರಜ್ ಕುಮಾರ್‌ ನಾಗರ ಹಾವನ್ನು ಹಲವು ದಿನಗಳ ಕಾಲ ಹಸಿವಿನಲ್ಲಿ ಕೆಡವಿದ್ದನು.

ಇದನ್ನೂ ಓದಿ: ವೈವಾಹಿಕ ಅತ್ಯಾಚಾರ ಅಪರಾಧವಲ್ಲ ತೀರ್ಪು; ಛತ್ತೀಸಗಡ ಹೈಕೋರ್ಟ್ ನ್ಯಾಯಾಂಗ ಸಮಾನತೆಯನ್ನು ಅರ್ಥಮಾಡಿಕೊಂಡಿದ್ದು ಇಷ್ಟೆಯೇ?

ಹಾವು ಬಳಸಿ ಕೊಲೆ ಮಾಡಿದಂತಹ ಈ ಪ್ರಕರಣವು ಇಡೀ ದೇಶದಲ್ಲೆ ಮೊದಲು ಎಂದು ಲೈವ್ ಲಾ ವರದಿ ಮಾಡಿದೆ. ಇದೇ ರೀತಿ ಎರಡು ಪ್ರಕರಣಗಳು ಈ ಹಿಂದೆ ವರದಿಯಾಗಿತ್ತಾದರೂ, ಅದು ಸಾಬೀತಾಗದ ಕಾರಣ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ, ನಕಲಿ ಸರೀಸೃಪವನ್ನು ಬಳಸಿ ಮತ್ತು ಇಡೀ ಅಪರಾಧದ ದೃಶ್ಯವನ್ನು ಮರುಸೃಷ್ಟಿಸುವ ಮೂಲಕ ಪೊಲೀಸರು ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದರು.

ಪ್ರಕರಣದ ಹಿನ್ನೆಲೆ:

ದೇಶವನ್ನೆ ಬೆಚ್ಚಿ ಬೀಳಿಸಿದ್ದ ಪ್ರಕರಣದಲ್ಲಿ, 25 ವರ್ಷದ ಗೃಹಿಣಿಯಾದ ಉತ್ರಾ 2020 ರ ಮೇ ತಿಂಗಳ 7 ರಂದು ಹಾವಿನ ಕಡಿತದಿಂದ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ, ಅದನ್ನು ನೈಸರ್ಗಿಕ ಹಾವು ಕಡಿತ ಎಂದು ಹೇಳಲಾಗಿತ್ತಾದರೂ, ಉತ್ರಾ ಅವರ ಕುಟುಂಬ ಅದನ್ನು ಕೊಲೆ ಎಂದು ಆರೋಪಿಸಿದ್ದರು.

ವರದಕ್ಷಿಣೆಗಾಗಿ ಪತಿ ಮತ್ತು ಆತನ ಕುಟುಂಬ ಉತ್ರಾ ಅವರಿಗೆ ಪದೇ ಪದೇ ಕಿರುಕುಳ ನೀಡುತ್ತಿತ್ತು ಆರೋಪಿಸಿದ್ದರು. ಅಲ್ಲದೆ, ಮುಚ್ಚಿದ ಹವಾನಿಯಂತ್ರಿತ ಕೋಣೆಗೆ ಹಾವು ಬರಲು ಸಾಧ್ಯವಿಲ್ಲ. ಜೊತೆಗೆ ಮನೆಯ ನೆಲವು ಟೈಲ್ಸ್‌ ಹಾಕಿರುವುದರಿಂದ ಅದು ಅಸಾಧ್ಯ ಎಂದು ವಾದಿಸಿದ್ದರು. ಚಿನ್ನ ಮತ್ತು ಆಸ್ತಿಯನ್ನು ಪಡೆಯಲು ಈ ಹತ್ಯೆಯನ್ನು ನಡೆಸಲಾಗಿದೆ, ಈ ಘಟನೆಗೂ ಒಂಬತ್ತು ವಾರದ ಮುಂಚೆ ಕೂಡಾ ಉತ್ರಾ ಅವರಿಗೆ ಹಾವೊಂದು ಕಚ್ಚಿದ್ದರಿಂದ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: SC/ST ಗಳ ವಿರುದ್ಧದ ಅಪರಾಧಗಳು 2020 ರಲ್ಲಿ 9% ಹೆಚ್ಚಳ – NCRB ಮಾಹಿತಿ

ಹಾವಿನ ಶಾಪ ಕುಟುಂಬದ ಮೇಲಿದೆ ಎಂದು ಅವರನ್ನು ನಂಬಿಸಲಾಗಿತ್ತಾದರೂ, ಅದನ್ನು ನಂಬದ ಕುಟುಂಬ ಪ್ರಕರಣದ ತನಿಖೆಗೆ ಒತ್ತಾಯಿಸಿದ್ದರು. ಅದರಂತೆ, ಪೋಲಿಸ್ ತನಿಖೆ ಪ್ರಾರಂಭವಾಗಿ ಸೂರಜ್ ಕುಮಾರ್ ವಿರುದ್ದ 1000 ಪುಟಗಳ ಚಾರ್ಜ್ ಶೀಟ್ ತಯಾರಿಸಿದ್ದರು. ಇದರಲ್ಲಿ ಅವನ ಕೃತ್ಯವನ್ನು ಪೊಲೀಸರು ಬಯಲಿಗೆಳೆದಿದ್ದರು.

ಸೂರಜ್ ಕುಮಾರ್‌ ಜೊತೆಗೆ ಅವನಿಗೆ ಎರಡು ಹಾವಗಳನ್ನು ಪಡೆಯಲು ಸಹಾಯ ಮಾಡಿದ್ದ ಇನ್ನೊಬ್ಬ ವ್ಯಕ್ತಿಯನ್ನು ಕೂಡಾ ಪೊಲೀಸರು ಬಂದಿಸಿದ್ದರು. ಸೂರಜ್ ಅವನಿಗೆ 10 ಸಾವಿರ ನೀಡಿ ಹಾವುಗಳನ್ನು ಖರೀದಿಸಿದ್ದನು. ಹಾವು ಮಾರಾಟ ಮಾಡಿದ ವ್ಯಕ್ತಿಗೆ ಸೂರಜ್ ಯಾಕಾಗಿ ತನ್ನಿಂದ ಹಾವುಗಳನ್ನು ಕೊಂಡುಕೊಂಡಿದ್ದಾನೆ ಎಂಬ ವಿಷಯ ತಿಳಿದಿರಲಿಲ್ಲ.

ಪೊಲೀಸ್‌ ವಿಚಾರಣೆಯ ಸಮಯದಲ್ಲಿ ಸೂರಜ್ ಕುಮಾರ್‌ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದನು. ತನ್ನ ಹೆಂಡತಿಯನ್ನು ಕೊಲ್ಲುವ ಉದ್ದೇಶದಿಂದ ಎರಡು ಹಾವುಗಳನ್ನು ಹಸಿವಿನಲ್ಲಿ ಕೆಡವಿ ಜಾರ್‌ ಒಂದರಲ್ಲಿ ಸಂಗ್ರಹಿಸಿ ಇಟ್ಟಿದ್ದೆ ಎಂದು ಒಪ್ಪಿಕೊಂಡಿದ್ದನು. ಇದರ ನಂತರ, ಸೂರಜ್‌ನ ತಂದೆ, ತಾಯಿ ಮತ್ತು ಸಹೋದರಿಯನ್ನು ಬಂಧಿಸಲಾಗಿತ್ತು. ಅವರು ಉತ್ರಾ ಅವರ ಸುಮಾರು 38 ಪವನ್ ಚಿನ್ನವನ್ನು ಮನೆಯ ಹಿಂದಿನ ರಬ್ಬರ್‌ ಎಸ್ಟೇಟ್‌ನಲ್ಲಿ ಗುಂಡಿತೋಡಿ ಬಚ್ಚಿಟ್ಟಿದ್ದರು.

ಇದನ್ನೂ ಓದಿ: ವೇಶ್ಯಾವಾಟಿಕೆ ಸಂಘಟಿತ ಅಪರಾಧ, ಇದನ್ನು ತಡೆಯಲು ಮುಂದಾಗಬೇಕು- ಸ್ಟ್ಯಾನ್ಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...