Homeಮುಖಪುಟವಿವಾದಿತ ಯತಿ ನರಸಿಂಗಾನಂದ್ ವಿರುದ್ದ FIR ದಾಖಲಿಸಲು ಮಹಿಳಾ ಆಯೋಗ ಒತ್ತಾಯ

ವಿವಾದಿತ ಯತಿ ನರಸಿಂಗಾನಂದ್ ವಿರುದ್ದ FIR ದಾಖಲಿಸಲು ಮಹಿಳಾ ಆಯೋಗ ಒತ್ತಾಯ

- Advertisement -
- Advertisement -

ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಅಖಿಲ ಭಾರತೀಯ ಸಂತ ಪರಿಷತ್ ಅಧ್ಯಕ್ಷರಾಗಿರುವ ವಿವಾದಿತ ಯತಿ ನರಸಿಂಗಾನಂದ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗವು (NCW) ಆಗಸ್ಟ್‌‌ 7 ರ ಶನಿವಾರದಂದು ಉತ್ತರ ಪ್ರದೇಶ ಪೊಲೀಸರಿಗೆ ಒತ್ತಾಯಿಸಿದೆ.

ಮಹಿಳೆಯರನ್ನು ಅತೀ ಕೀಳಾಗಿ ಬಿಂಬಿಸಿ ಹೇಳಿಕೆ ನೀಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ವಿರುದ್ದ ಕ್ರಮ ಕೈಗೊಳ್ಳುವಂತೆ ಎನ್‌ಸಿಡಬ್ಲ್ಯೂ ಪೊಲೀಸರಿಗೆ ಪತ್ರ ಬರೆದಿದೆ. ನರಸಿಂಗಾನಂದ್, “ಚಿತ್ರರಂಗದಲ್ಲಿ ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ವೇಶ್ಯಾವಾಟಿಕೆಯತ್ತ ಆಕರ್ಷಿಸುತ್ತಿದ್ದಾರೆ” ಎಂದು ವಿಡಿಯೊದಲ್ಲಿ ಹೇಳಿದ್ದರು.

ಇದನ್ನೂ ಓದಿ: ಜಿಹಾದಿ ಎಂದು ಶಿರಡಿ ಸಾಯಿಬಾಬಾ ಮೂರ್ತಿ ಧ್ವಂಸ; ಆರೋಪಿಗಳು ನರಸಿಂಗಾನಂದ್‌ ಆಪ್ತರು?

ಉತ್ತರ ಪ್ರದೇಶ ಡಿಜಿಪಿ ಮುಕುಲ್ ಗೋಯೆಲ್‌ಗೆ ಎನ್‌ಸಿಡಬ್ಲ್ಯೂ ಬರೆದ ಪತ್ರದಲ್ಲಿ, ಭಾರತೀಯ ದಂಡ ಸಂಹಿತೆಯ ಸಂಬಂಧಿತ ಆರೋಪಗಳ ಅಡಿಯಲ್ಲಿ ನರಸಿಂಗಾನಂದ್‌ ವಿರುದ್ಧ ಶೀಘ್ರವೆ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದೆ.

“ಆಯೋಗವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌‌ ಕುರಿತು ಮತ್ತು ನರಸಿಂಗಾನಂದ್‌ ಮಹಿಳೆಯರ ವಿರುದ್ಧ ಮಾಡಿದ ಟೀಕೆಗಳಿಂದ ಗೊಂದಲಕ್ಕೊಳಗಾಗಿದೆ. ಆದ್ದರಿಂದ ನೀವು ನರಸಿಂಗಾನಂದ್‌ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಆರೋಪಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಬೇಕು” ಎಂದು ಹೇಳಿದೆ.

ವಿವಾದಾತ್ಮ ಹೇಳಿಕೆ ಇದೇ ಮೊದಲೇನಲ್ಲ

ನರಸಿಂಗಾನಂದ್ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಮತ್ತು ಕೋಮುವಾದಿ ಟೀಕೆಗಳನ್ನು ಮಾಡುವುದು ಇದೇ ಮೊದಲಲ್ಲ.ದಾಸ್ನಾ ದೇವಾಲಯದ ಅರ್ಚಕರೂ ಆಗಿರುವ ನರಸಿಂಗಾನಂದ್ ಈ ಹಿಂದೆ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಕರೆ ನೀಡಿದ್ದರು.

ಇದನ್ನೂ ಓದಿ: ಬಾರಬಂಕಿ ಮಸೀದಿ ಧ್ವಂಸದ ಸಾಕ್ಷ್ಯಚಿತ್ರ: ದಿ ವೈರ್‌ ಮೇಲೆ ಪ್ರಕರಣ ದಾಖಲಿಸಿದ ಯುಪಿ ಪೊಲೀಸ್‌

ಇಷ್ಟೆ ಅಲ್ಲದೆ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮುಗಲಭೆಯಲ್ಲಿ ಕೂಡಾ ನರಸಿಂಗಾನಂದ್ ಕೈವಾಡವಿದೆ ಎಂದು ದಿವೈರ್‌ ತನಿಖಾ ವರದಿ ಮಾಡಿತ್ತು. ಖ್ಯಾತ ಪತ್ರಕರ್ತ ರವೀಶ್ ಕುಮಾರ್‌ಗೆ ಕೊಲೆ ಬೆದರಿಕೆಯೊಡ್ಡಿದ ಆರೋಪಿಯ ಹಿಂದೆ ನರಸಿಂಗಾನಂದ್ ಕೈವಾಡವಿದೆ ಎನ್ನಲಾಗಿದೆ.

ಮಾರ್ಚ್ 12 ರಂದು ಗಾಜಿಯಾಬಾದ್‌ನ ದಾಸನ ದೇವಿ ಮಂದಿರಕ್ಕೆ ಕುಡಿಯುವ ನೀರಿಗೆ ತೆರಳಿದ್ದ ಅಪ್ರಾಪ್ತ ಮುಸ್ಲಿಂ ಬಾಲಕನನ್ನು ಭೀಕರವಾಗಿ ಥಳಿಸಿದ್ದ ಘಟನೆಯನ್ನು ನರಸಿಂಗಾನಂದ್ ಸಮರ್ಥಿಸಿಕೊಂಡಿದ್ದರು. ಆರೋಪಿಯನ್ನು ತನ್ನ ಅನುಯಾಯಿ ಎಂದಿದ್ದ ಅವರು ’ಅತಿಕ್ರಮಣಕಾರನಿಗೆ ಸೂಕ್ತ ಉತ್ತರ ನೀಡಿದ್ದಾರೆ’ ಎಂದು ಶ್ಲಾಘಿಸಿದ್ದರು.

ಇಷ್ಟೇ ಅಲ್ಲದೆ ದೆಹಲಿ ಗಲಭೆಯ ನಂತರ ಕೂಡಾ ಇವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ಗಲಭೆಯ ನಂತರ ಅವರು, ‘‘ಧರ್ಮಯುದ್ಧ ಮಾಡಲು ನನಗೆ ಆಯುಧ ಹಿಡಿದಿರುವವರು ಬೇಕಿದೆ’’ ಎಂದು ಬಹಿರಂಗವಾಗಿ ಭಯೋತ್ಪಾದನೆಗೆ ಕರೆ ನೀಡಿದ್ದರು.

ಇದನ್ನೂ ಓದಿ: ಮೋದಿ ಸರ್ಕಾರದ ಹೊಸ ಸಂಸತ್ ಕಟ್ಟಡ ಸೆಂಟ್ರಲ್ ವಿಸ್ತಾ – ಒಂದು ಧ್ವಂಸ ಕಾರ್ಯಾಚರಣೆಯಷ್ಟೇ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...