ದೆಹಲಿಯ ಗಡಿಗಳಲ್ಲಿ ರೈತ ಪ್ರತಿಭಟನೆಗೆ ಎಂಟು ತಿಂಗಳು ತುಂಬಿದೆ. ಈ ನಡುವೆ ಪಂಜಾಬ್ ಮತ್ತು ಹರಿಯಾಣದಲ್ಲಿ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ಆರಂಭವಾಗಿ 11 ತಿಂಗಳುಗಳು ತುಂಬುತ್ತಿವೆ. ದೆಹಲಿಯ ಇನ್ನು ದೀರ್ಘಾಕಾಲಿನ ಪ್ರತಿಭಟನೆಗೆ ರೈತರು ಸಿದ್ಧರಾಗುತ್ತಿದ್ದು, ಅದಕ್ಕೆ ಬೇಕಾದ ಪಡಿತರ ಸಂಗ್ರಹಣೆಗೆ ಮುಂದಾಗುತ್ತಿದ್ದಾರೆ.
ಭಾರತಿ ಕಿಸಾನ್ ಯೂನಿಯನ್ (ಏಕ್ತಾ ಉಗ್ರಾಹಣ್) ಸಂಘಟನೆ ಸದಸ್ಯರು ಆಗಸ್ಟ್ 15 ರಂದು ಕರಾಳ ಕೃಷಿ ಕಾನೂನುಗಳನ್ನು ವಿರೋಧಿಸಿ, ಪಂಜಾಬ್‌ನ ಮೊಗಾ, ಬಟಿಂಡಾ ಮತ್ತು ಸಂಗ್ರೂರ್ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ. ಇದರ ಜೊತೆಗೆ ಪ್ರತಿಭಟನೆಗಾಗಿ ಮುಂದಿನ ಆರು ತಿಂಗಳವರೆಗೆ ಸಾಕಾಗುವ ಒಣ ಪಡಿತರ ಸಂಗ್ರಹಿಸುವಲ್ಲಿ ಮಹಿಳಾ ರೈತರು ನಿರತರಾಗಿದ್ದಾರೆ.
40 ರಿಂದ 70 ವರ್ಷದೊಳಗಿನ 100 ಕ್ಕೂ ಹೆಚ್ಚು ಮಹಿಳೆಯರು ತಮ್ಮ ತಲೆಯ ಮೇಲೆ ಹಳದಿ ದುಪಟ್ಟಾಗಳನ್ನು ಹೊದ್ದುಕೊಂಡು, ಚೀಲಗಳನ್ನು ಹಿಡಿದು ಮನೆ ಮನೆಗೆ ತೆರಳಿ ದ್ವಿದಳ ಧಾನ್ಯಗಳು, ಸಕ್ಕರೆ, ಹಿಟ್ಟು, ಅಡುಗೆ ಎಣ್ಣೆ, ಅಕ್ಕಿ, ಈರುಳ್ಳಿ ಮತ್ತು ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಕಿಸಾನ್ ಸಂಸತ್: ರೈತರಿಗೆ ಬೆಂಬಲ ನೀಡಿ ವಿಪಕ್ಷ ನಾಯಕರ ಜಂಟಿ ಪ್ರತಿಭಟನೆ
ಆಹಾರ ಧಾನ್ಯಗಳನ್ನು ಸಂಗ್ರಹಿಸುವ ಮಹಿಳೆಯರ ಜೊತೆಗೆ ಪುರುಷ ರೈತರು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಅವರು ಸಂಗ್ರಹಿಸಿದ ಪಡಿತರ ತುಂಬಿಕೊಲ್ಳುವುದು, ಅವರನ್ನು ಸ್ಥಳದಿಂದ ಸ್ಥಳಕ್ಕೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ.
ಒಣ ಪಡಿತರ ಸಂಗ್ರಹಣೆ ಜೊತೆ ಜೊತೆಗೆ ರೈತ ವಿರೋಧಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಭಾಗವಹಿಸಲು ಹಳ್ಳಿಗಳಲ್ಲಿ ಇತರ ಜನರನ್ನು ಪ್ರೇರೇಪಿಸುತ್ತಿದ್ದಾರೆ.
“ನಾವು ಮೊದಲು ಕೂಡ ಆಹಾರ ಧಾನ್ಯ ಸಂಗ್ರಹಣೆ ಮಾಡಿದ್ದೇವೆ. ಪ್ರತಿಭಟನಾ ಸ್ಥಳಗಳಲ್ಲಿ ಸಂಗ್ರಹಿಸಿದ ಪಡಿತರವನ್ನು ಬಳಸಲಾಗುವುದು. ಪ್ರಧಾನಿ ಮೋದಿ ಕರಾಳ ಕರಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ಆಂದೋಲನ ಮುಂದುವರಿಯುತ್ತದೆ” ಎಂದು 62 ವರ್ಷದ BKU ಉಗ್ರಾಣದ ಘರಾಚೋನ್ ಗ್ರಾಮ ಘಟಕದ ಮುಖ್ಯಸ್ಥೆ ರಣಜಿತ್ ಕೌರ್ ತಿಳಿಸಿದ್ದಾರೆ.
ದೆಹಲಿಯ ಗಡಿಗಳಲ್ಲಿ ಆಂದೋಲನ ನಡೆಸುತ್ತಿರುವ ರೈತರು ಸಂಸತ್ ನಡೆದ ಎಲ್ಲಾ ದಿನಗಳಲ್ಲೂ ದೆಹಲಿಯ ಜಂತರ್ ಮಂತರ್‌ನಲ್ಲಿ ಕಿಸಾನ್ ಸಂಸತ್ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ‘ವಿದ್ಯುತ್ ತಿದ್ದುಪಡಿ ಮಸೂದೆ-2021’: ರೈತರ ಕೃಷಿ ಪಂಪ್‌ಸೆಟ್‌ಗೂ ವಿದ್ಯುತ್ ಮೀಟರ್ ಅಳವಡಿಸುವತ್ತ ಸರ್ಕಾರ


