Homeಕರ್ನಾಟಕSSLC Result | ಎಸ್ಸೆಸ್ಸೆಲ್ಸಿ ರಿಸಲ್ಟ್‌‌ ; ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ ಕ್ಯ್ರಾಶ್‌‌!

SSLC Result | ಎಸ್ಸೆಸ್ಸೆಲ್ಸಿ ರಿಸಲ್ಟ್‌‌ ; ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ ಕ್ಯ್ರಾಶ್‌‌!

ಸ್ವಲ್ಪ ಸಮಯದಲ್ಲೇ ಸರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ

- Advertisement -
- Advertisement -

ಕೊರೊನಾ ನಡುವೆಯು ರಾಜ್ಯದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೇಳಿದೆ. ಫಲಿತಾಂಶ ಮಧ್ಯಾಹ್ನ 03:30 ಕ್ಕೆ ಪ್ರಕಟವಾಗಲಿದೆ ಎಂದು ಮಂಡಳಿ ಹೇಳಿತ್ತು. ಆದರೆ ಮಂಡಳಿಯ ವೆಬ್‌ಸೈಟ್‌ ಕ್ಯ್ರಾಶ್‌‌ ಆಗಿದೆ ಎಂದು ವರದಿಯಾಗಿದೆ.

ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿಯಾಗಿ ಬರೆದ ಒಬ್ಬ ಅಭ್ಯರ್ಥಿಯನ್ನು ಮಾತ್ರ ಡಿಬಾರ್‌ ಮಾಡಲಾಗಿದೆ. ಕೊರೊನಾ ಸಾಂಕ್ರಾಮಿಕದ ಹೊರತಾಗಿಯೂ ಈ ವರ್ಷ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ನಡೆಸಿದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

ಇದನ್ನೂ ಓದಿ: ಕೊರೋನಾ ಕಾಲಘಟ್ಟದಲ್ಲಿ ಗ್ರಾಮೀಣ ಮಕ್ಕಳ ಶಿಕ್ಷಣ ಹಕ್ಕು ರಕ್ಷಿಸುವಲ್ಲಿನ ಸವಾಲು ಮತ್ತು ಸಾಧ್ಯತೆಗಳು

ನೋಂದಾಯಿತ ಒಟ್ಟು ವಿದ್ಯಾರ್ಥಿಗಳಲ್ಲಿ, 99.6% ದಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಕರ್ನಾಟಕದ ಶಾಲಾ ಶಿಕ್ಷಣ ಸಚಿವರು ಇತ್ತೀಚೆಗೆ ಹೇಳಿಕೊಂಡಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿದ್ದ ಸರ್ಕಾರವು ಟೀಕೆಗಳ ಹೊರತಾಗಿಯೂ, ಆಫ್‌ಲೈನ್ ಆಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಿತ್ತು. ದ್ವಿತೀಯ ಪಿಯುಸಿಯ ಫಲಿತಾಂಶಗಳು ಇತ್ತೀಚೆಗಷ್ಟೇ ಪ್ರಕಟವಾಗಿತ್ತು.

ಇದೀಗ ಎಸ್‌ಎಸ್‌ಎಲ್‌ಸಿಗೆ ನಡೆದ ಪರೀಕ್ಷೆಯ ಫಲಿತಾಂಶಗಳು ಇಂದು ಮಧ್ಯಾಹ್ನ 03:30 ಕ್ಕೆ ಹೊರ ಬೀಳಬೇಕಿತ್ತಾದರೂ, ಮಂಡಳಿಯ ವೆಬ್‌ಸೈಟ್‌ ಕ್ಯ್ರಾಶ್‌ ಆಗಿದ್ದು, ಫಲಿತಾಂಶ ವೀಕ್ಷಿಸಲು ತಡೆಯಾಗಿದೆ. ಇನ್ನು ಸ್ವಲ್ಪ ಸಮಯದಲ್ಲೇ ಅದು ಸರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನೋಡುವುದು ಹೇಗೆ?

  • ಮೊದಲಿಗೆ ವಿದ್ಯಾರ್ಥಿಗಳ ರೋಲ್‌ ಅಥವಾ ರಿಜಿಸ್ಟರ್‌‌ ನಂಬರ್‌ ಅನ್ನು ತಯಾರಾಗಿಟ್ಟುಕೊಳ್ಳಿ.
  • ನಂತರ ಇಲ್ಲಿ ಕ್ಲಿಕ್ ಮಾಡಿ.
  • ಮೇಲಿನ ಲಿಂಕ್‌ಗೆ ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಪೇಜ್‌ ಅಲ್ಲಿ ವಿದ್ಯಾರ್ಥಿಗಳ ರಿಜಿಸ್ಟರ್‌ ನಂಬರ್‌ ತುಂಬಿಸಕು.
  • ನಂತರ ಅಲ್ಲಿ ವಿದ್ಯಾರ್ಥಿಗಳ ಜನ್ಮ ದಿನಾಂಕವನ್ನು ಕೊಟ್ಟಿರುವ ಬಾಕ್ಸ್‌ ಒಳಗೆ ತುಂಬಿಸಬೇಕು.
  • ಅದರ ನಂತರ ‘ಸಬ್‌ಮಿಟ್‌‌’ ಬಟನ್‌ಗೆ ಕ್ಲಿಕ್ ಮಾಡಬೇಕು.
  • ಸಬ್‌ಮಿಟ್‌ ನೀಡಿದ ನಂತರ ನಿಮ್ಮ ಫಲಿತಾಂಶ ಕಾಣುತ್ತದೆ.
  • ಅಲ್ಲಿಂದ ನೀವು ಅದನ್ನು ಡೌನ್‌ಲೋಡ್‌ ಮಾಡಿಟ್ಟುಕೊಳ್ಳಬಹುದಾಗಿದೆ.

ಫಲಿತಾಂಶದ ನೇರ ಲಿಂಕ್‌ಗಳನ್ನು ಬೋರ್ಡ್ ವೆಬ್‌ಸೈಟ್‌ಗಳಾದ sslc.karnataka.gov.in ಮತ್ತು karresults.nic.in ನಲ್ಲಿ ಕೂಡಾ ಪಡೆಯಬಹುದಾಗಿದೆ.

ಎರಡು ದಿನಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು (ಎಂಸಿಕ್ಯೂ) ನೀಡಲಾಗಿತ್ತು. SSLC ಪರೀಕ್ಷೆಯ ಮಾದರಿ ಉತ್ತರಗಳನ್ನು ಬಿಡುಗಡೆ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅದನ್ನು ಇಲ್ಲಿ ಕ್ಲಿಕ್ ಮಾಡಿದರೆ ನೋಡಬಹುದಾಗಿದೆ.

ಇದನ್ನೂ ಓದಿ: ಆನ್‌ಲೈನ್ ಶಿಕ್ಷಣಕ್ಕೆ ಮಾದರಿ ಸೃಷ್ಟಿಸದೆ, ಮೂಲಸೌಕರ್ಯಗಳಿಗೆ ಕ್ರಮ ತೆಗೆದುಕೊಳ್ಳದೆ ಪೋಷಕರನ್ನು ಆತಂಕಕ್ಕೆ ತಳ್ಳಿರುವ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

16 COMMENTS

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...