Homeಕರ್ನಾಟಕನೋ ಡಿಸಿಎಂ, ನಿಷ್ಠರೇ ಡ್ರಾಪ್,ಮುಸುಕಿನ ಗುದ್ದಾಟಕ್ಕೆ ಕೊನೆಯಿಲ್ಲ ಯಡಿಯೂರಪ್ಪನವರ ಸಂಪುಟ ಸಂಕಟ ಏನು?

ನೋ ಡಿಸಿಎಂ, ನಿಷ್ಠರೇ ಡ್ರಾಪ್,ಮುಸುಕಿನ ಗುದ್ದಾಟಕ್ಕೆ ಕೊನೆಯಿಲ್ಲ ಯಡಿಯೂರಪ್ಪನವರ ಸಂಪುಟ ಸಂಕಟ ಏನು?

- Advertisement -
- Advertisement -

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪನವರ ಆಲೋಚನೆ ಹೀಗಿದೆ. ಬೇರೆ ಬೇರೆ ಕಾರಣಗಳಿಂದ ಯಡಿಯೂರಪ್ಪನವರು 2-3 ಲಿಂಗಾಯಿತ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಸಿ.ಸಿ.ಪಾಟೀಲ್ ಡ್ರಾಪ್ ಆಗುವುದು ಬಹುತೇಕ ಖಚಿತ. ಅದಲ್ಲದೇ ಯಡಿಯೂರಪ್ಪನವರ ಆಪ್ತರಾಗಿರುವ ಬೊಮ್ಮಾಯಿ ಮತ್ತು ಮಾಧುಸ್ವಾಮಿಯವರ ಬಗ್ಗೆಯೂ ಸಿಎಂ ಒಲವು ಕಡಿಮೆ ಇದೆ.

ಇವ್ಯಾವುವೂ ಅನಿರೀಕ್ಷಿತವಲ್ಲ. ಅನರ್ಹ ಶಾಸಕರು ಗೆಲ್ಲದಿದ್ದರೆ ಒಂಥರಾ ಕಷ್ಟ; ಗೆದ್ದರೆ ಇನ್ನೊಂಥರಾ ಕಷ್ಟ ಎಂಬುದು ಬಿಜೆಪಿಯೊಳಗೆ ಎಲ್ಲರಿಗೂ ಗೊತ್ತಿದ್ದ ಸಂಗತಿಯೇ ಆಗಿತ್ತು. ಆದರೆ, ಕೆಲವೇ ತಿಂಗಳ ಕೆಳಗೆ ಫಟಾಫಟ್ ತೀರ್ಮಾನಗಳನ್ನು ನಿಷ್ಠುರವಾಗಿ ಮಾಡುತ್ತಿದ್ದ ಬಿಜೆಪಿ ಹೈಕಮಾಂಡ್ ಇದೀಗ ಎಲ್ಲವನ್ನೂ ಎಳೆಯುತ್ತಿರುವುದಕ್ಕೆ ಮಾತ್ರ ವಿಶೇಷ ಕಾರಣಗಳಿವೆ. ಮೋದಿ – ಷಾ ಜೋಡಿಯನ್ನು ಮಣಿಸಲು ಯಡಿಯೂರಪ್ಪನವರ ಥರದ ಸೀಸನ್ಡ್ ರಾಜಕಾರಣಿಗಳು ಅವರದ್ದೇ ಪಟ್ಟುಗಳನ್ನು ಹಾಕಲು ಶುರು ಮಾಡಿದ್ದಾರೆ. ಪ್ರಧಾನಮಂತ್ರಿ ಮೋದಿಯ ಎದುರೇ ಯಡಿಯೂರಪ್ಪನವರು ಸಾರ್ವಜನಿಕ ಸಭೆಯಲ್ಲಿ ಕೇಂದ್ರದಿಂದ ಅನುದಾನ ಸರಿಯಾಗಿ ಬಂದಿಲ್ಲ ಎಂಬಂತೆ ಮಾತಾಡಿದ್ದು, ಎರಡು ಬಿಜೆಪಿ ಪತ್ರಿಕೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಲೀಡ್ ನ್ಯೂಸ್ ಬರುವಂತೆ ನೋಡಿಕೊಂಡಿದ್ದು ಅಕಸ್ಮಾತ್ತಾಗಿ ನಡೆದ ಘಟನೆಗಳಲ್ಲ. ಹಾಗೆಯೇ ತಾನಿಷ್ಟು ಕಷ್ಟಪಟ್ಟು ಕರ್ನಾಟಕದೊಳಗೆ ಬಿಜೆಪಿ ಸರ್ಕಾರ ತಂದಿದ್ದೇನೆ; ಇದರ ಚುಕ್ಕಾಣಿ ಹಿಡಿದಿರುವ ತನ್ನ ಮಾತು ನಡೆಯದಿದ್ದರೆ ಪಟ್ಟು ಸಡಿಲಿಸುವವನಲ್ಲ ಎಂಬ ಸೂಚನೆಯನ್ನೂ ಕೊಟ್ಟಾಗಿದೆ.

ಇಷ್ಟು ಗಡುಸಾಗಿ ಯಡಿಯೂರಪ್ಪನವರ ಸಂಪುಟ ರಚನೆಯ ಸಂದರ್ಭದಲ್ಲಿ ಇರಲಿಲ್ಲ. ಹಾಗಾಗಿಯೇ ಮೂವರು ಡಿಸಿಎಂಗಳನ್ನು ಹೇರಿಸಿಕೊಳ್ಳಬೇಕಾಗಿ ಬಂದಿತ್ತು. ಉಪಮುಖ್ಯಮಂತ್ರಿ ನೇಮಕಕ್ಕೆ ಮುಂಚೆಯೇ ಸಂಪುಟ ಸಚಿವರ ಪಟ್ಟಿ ಹೊರಬಿದ್ದಾಗಲೇ ಸೀನಿಯರ್‍ಗಳಲ್ಲದ ಮೂವರು ಹೆಸರು ಮುಖ್ಯಮಂತ್ರಿ ನಂತರ ಇರುವಂತೆ ನೋಡಿಕೊಳ್ಳಲಾಗಿತ್ತು. ಅಂದರೆ, ಪಟ್ಟಿಯ ಅನುಕ್ರಮಣಿಕೆಯನ್ನೂ ಹೈಕಮಾಂಡ್‍ನ ಸಂತೋಷಕ್ಕೆ ತಕ್ಕಂತೆ ಮಾಡಿ ಕಳಿಸುವ ಮಟ್ಟಕ್ಕೆ ಯಡಿಯೂರಪ್ಪನವರ ಮೇಲೆ ನಿಯಂತ್ರಣ ಸಾಧಿಸಲಾಗಿತ್ತು.

ಆದರೆ ಈಗಿನ ಯಡಿಯೂರಪ್ಪನವರು ಬೇರೆ. ಕಾಂಗ್ರೆಸ್, ಜೆಡಿಎಸ್‍ಗಳಿಂದ ಎತ್ತಾಕಿಕೊಂಡು ಬಂದವರ ಪೈಕಿ ಬಹುತೇಕರನ್ನು ಅವರು ಗೆಲ್ಲಿಸಿಕೊಂಡಿದ್ದಾರೆ. ಮಂಡ್ಯ, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳಲ್ಲಿ ಬಿಜೆಪಿ ಪ್ರಥಮ ಬಾರಿಗೆ ಖಾತೆ ತೆರೆದಿದೆ. ಮಹಾರಾಷ್ಟ್ರ ಮುಖಭಂಗದ ನಂತರ ದೆಹಲಿ ಚಾಣಕ್ಯರ ಸಾಮಥ್ರ್ಯದ ಮಿತಿಯೂ ಬಯಲಿಗೆ ಬಂದಿದೆ. ಹಾಗಾಗಿ ಯಡಿಯೂರಪ್ಪನವರೂ ಪಟ್ಟು ಹಾಕತೊಡಗಿದ್ದಾರೆ. ಇದನ್ನು ಈಗಿಂದೀಗಲೇ ಮಣಿಸಲಾಗದು ಎಂಬುದರ ಅರಿವು ಇರುವ ಬಿಜೆಪಿಯ ದೆಹಲಿ ತ್ರೈಕಮಾಂಡ್ ಸಚಿವ ಸಂಪುಟ ವಿಸ್ತರಣೆಯನ್ನೇ ಎಳೆಯುತ್ತಿದ್ದಾರೆ.

ಹಳೇ ಡಿಸಿಎಂಗಳಾದ ಆರ್.ಅಶೋಕ್ ಮತ್ತು ಕೆ.ಎಸ್.ಈಶ್ವರಪ್ಪರಿಗೆ ಏನೇ ಅಸಮಾಧಾನವಿದ್ದರೂ ತಮ್ಮನ್ನೂ ಡಿಸಿಎಂ ಮಾಡಿ ಎಂದು ಕೇಳುವ ಸ್ಥಿತಿಯಲ್ಲೇನೂ ಇಲ್ಲ. ಆದರೆ, ಸವದಿ, ಅಶ್ವತ್ಥನಾರಾಯಣ ಮತ್ತು ಕಾರಜೋಳ ಡಿಸಿಎಂ ಪದವಿಯಿಂದ ಇಳಿದರೆ ಅವರಿಗೆ ಸಂತೋಷವೇ. ಹೊಸ ಡಿಸಿಎಂಗಳಾಗಲು ತುದಿಗಾಲಲ್ಲಿ ನಿಂತಿರುವವರೆಂದರೆ ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ. ಇಬ್ಬರಲ್ಲಿ ಯಾರೊಬ್ಬರಿಗೆ ಕೊಟ್ಟರೂ ಇನ್ನೊಬ್ಬರು ಮುನಿಸಿಕೊಳ್ಳುತ್ತಾರೆ. ಆದರೆ ಅವರಿಬ್ಬರೂ ಡಿಸಿಎಂಗೆ ಪಟ್ಟು ಹಾಕಿದಷ್ಟೂ ಯಡಿಯೂರಪ್ಪನವರಿಗೆ ಒಳ್ಳೆಯದೇ. ಈ ರೀತಿ ನಾಲ್ಕೈದು ಡಿಸಿಎಂಗಳಿರುವ ಹಾಸ್ಯಾಸ್ಪದ ಸನ್ನಿವೇಶಕ್ಕಿಂತ ಇರುವ ಡಿಸಿಎಂಗಳನ್ನೂ ತೆಗೆಯಿರಿ ಎಂದು ವಾದ ಮಂಡಿಸಲು ಅನುಕೂಲವಾಗುತ್ತದೆ. ಆದರೆ, ಕೆಲವೇ ತಿಂಗಳ ಹಿಂದಷ್ಟೇ ಮೇಲಿನಿಂದ ಹೇರಲಾದ ಡಿಸಿಎಂಗಳನ್ನು ಇಷ್ಟು ಬೇಗ ತೆಗೆದುಬಿಡಲು ಹೈಕಮಾಂಡ್ ಒಪ್ಪುವುದೂ ಕಷ್ಟ.

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪನವರ ಆಲೋಚನೆ ಹೀಗಿದೆ. ಬೇರೆ ಬೇರೆ ಕಾರಣಗಳಿಂದ ಯಡಿಯೂರಪ್ಪನವರು 2-3 ಲಿಂಗಾಯಿತ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಸಿ.ಸಿ.ಪಾಟೀಲ್ ಡ್ರಾಪ್ ಆಗುವುದು ಬಹುತೇಕ ಖಚಿತ. ಅದಲ್ಲದೇ ಯಡಿಯೂರಪ್ಪನವರ ಆಪ್ತರಾಗಿರುವ ಬೊಮ್ಮಾಯಿ ಮತ್ತು ಮಾಧುಸ್ವಾಮಿಯವರ ಬಗ್ಗೆಯೂ ಸಿಎಂ ಒಲವು ಕಡಿಮೆ ಇದೆ. ಇದಕ್ಕೆ ಕಾರಣವೆಂದು ಹೇಳಲಾಗುತ್ತಿರುವ ಸಂಗತಿಗಳು ಆಶ್ಚರ್ಯಕರವಾಗಿದೆ. ಇಬ್ಬರೂ ವೀರಶೈವ ಮಹಾಸಭಾ ಲಾಬಿಯೊಳಗೆ ತಮ್ಮನ್ನು ವೀರಶೈವ ಸಮಾಜದಲ್ಲಿ ಯಡಿಯೂರಪ್ಪನವರ ನಂತರದ ನಂ.2 ಸ್ಥಾನದಲ್ಲಿ ಕಲ್ಪಿಸಿಕೊಂಡು ಆ ರೀತಿ ಪ್ರೊಜೆಕ್ಟ್ ಮಾಡಿಕೊಳ್ಳುತ್ತಿದ್ದಾರೆಂದು ಸಿಎಂ ಬಳಗಕ್ಕೆ ಅನಿಸಿದೆ. ಆ ಜಾಗದಲ್ಲಿ ತಮ್ಮ ಎರಡನೆಯ ಪುತ್ರನನ್ನು ಈಗಾಗಲೇ ಕಲ್ಪಿಸಿಕೊಂಡಿರುವ ಯಡಿಯೂರಪ್ಪನವರಿಗೆ ಈಗಲೇ ಮುನ್ನೆಚ್ಚರಿಕೆ ವಹಿಸಬೇಕೆನಿಸಿದ್ದರೆ ಆಶ್ಚರ್ಯವಿಲ್ಲ.

ಕನಕವೃತ್ತದ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಲ್ಲದೇ ವಿಜಯೇಂದ್ರ ಜೊತೆ ಸಹಾ ಸಂಬಂಧ ಕೆಡಿಸಿಕೊಂಡಿರುವುದು ಮಾಧುಸ್ವಾಮಿಯವರಿಗೆ ತೊಡಕು ಎನ್ನಲಾಗುತ್ತಿದೆ. ಹಾವೇರಿ ಜಿಲ್ಲೆಯ ಸಾದರ ಲಿಂಗಾಯಿತ ಬಿ.ಸಿ.ಪಾಟೀಲ್ ಅರ್ಹರಾಗಿ ಸಂಪುಟಕ್ಕೆ ಸೇರುವಾಗ, ಅದೇ ಜಿಲ್ಲೆಯ ಇನ್ನೊಬ್ಬ ಸಾದರ ಲಿಂಗಾಯಿತ ಬೊಮ್ಮಾಯಿಯವರೂ ಇರುವುದು ಅಸಮತೋಲನವಾಗುತ್ತದೆ ಎಂಬ ವಾದವೂ ಇದೆ. ಅಂತಿಮವಾಗಿ ಒಬ್ಬ ಲಿಂಗಾಯಿತರನ್ನು ಕೈಬಿಡುವುದಂತೂ ಖಚಿತವಾಗಿದೆ. ಉಮೇಶ್ ಕತ್ತಿಯನ್ನೂ ತೆಗೆದುಕೊಳ್ಳಲೇಬೇಕಾದ ಸ್ಥಿತಿಯಲ್ಲಿ ಯಡಿಯೂರಪ್ಪನವರು ಇದ್ದಾರೆ. ಹೀಗಾಗಿ ಲಿಂಗಾಯಿತರ ಭಾರದಿಂದ ಸಂಪುಟ ನೆಲಕಚ್ಚದಿರಬೇಕಾದರೆ ಯಾವುದೋ ರೀತಿಯ ಬ್ಯಾಲೆನ್ಸಿಂಗ್ ಕೆಲಸ ಆಗುತ್ತದೆ.

ಹಿಂದಿನ ಸಾರಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಬ್ಬರನ್ನೂ ತೆಗೆದುಕೊಂಡಿರಲಿಲ್ಲ; ಜೊತೆಗೆ ದಲಿತ ಬಲಗೈ ಸಮುದಾಯಕ್ಕೂ ಪ್ರಾತಿನಿಧ್ಯ ಕೊಡಲು ಹಿರಿಯ ಶಾಸಕ ಸುಳ್ಯದ ಅಂಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಯಡಿಯೂರಪ್ಪನವರು ತಮ್ಮ ನೀಲಿ ಕಣ್ಣಿನ ಹುಡುಗ ಲಿಂಬಾವಳಿಯನ್ನೂ ಬೋವಿ ಕೋಟಾದಲ್ಲಿ ತೆಗೆದುಕೊಳ್ಳಬೇಕೆಂದು ನಿಶ್ಚಯಿಸಿದ್ದಾರೆ. ಆದರೆ, ಅದಕ್ಕೆ ಸಿಡಿಗಳು ಹೊರಬೀಳುವ ಗುಮ್ಮ ತೋರಿಸಿ ಅಡ್ಡಿ ಮಾಡಬಹುದು ಎಂಬ ಸಂತೋಷವೂ ಕೆಲವರಲ್ಲಿ ಮನೆ ಮಾಡಿದೆ.

ಏನೇ ಇದ್ದರೂ ಅಂತಿಮವಾಗಿ 2-3 ಸೀಟುಗಳನ್ನು ಖಾಲಿ ಇಟ್ಟುಕೊಳ್ಳುವುದಂತೂ ಕಾಯಂ. ಒಂದೆಡೆ ಅತೃಪ್ತರಿಗೆ ಕ್ಯಾರೆಟ್ ತೋರಿಸಲು ಅನುಕೂಲ; ಇನ್ನೊಂದೆಡೆ ‘ಈ ಸರ್ಕಾರ ಬರಲು ಕಾರಣರಾದ ಯಾರನ್ನೂ ಯಡಿಯೂರಪ್ಪನವರು ಕೈಬಿಡಲಿಲ್ಲ’ವೆಂಬ ಖ್ಯಾತಿ ಉಳಿದುಕೊಳ್ಳಬೇಕು. ಹಾಗಾಗಿ ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್ ಇಬ್ಬರಿಗೂ ಸಚಿವ ಸ್ಥಾನ ಕಲ್ಪಿಸುವ ಅಗತ್ಯವಿದೆ. ರಿಜ್ವಾನ್ ಅರ್ಷದ್‍ರ ಎಂಎಲ್‍ಸಿ ಸೀಟು ಖಾಲಿಯಾದಾಗ ಅಲ್ಲಿ ಇಬ್ಬರಲ್ಲೊಬ್ಬರನ್ನು ಕೂರಿಸಿ ಮಂತ್ರಿ ಮಾಡಬಹುದು. ಆದರೆ, ಆಗಲೂ ಇರುವುದು ಒಂದೇ ಸೀಟು ಎಂಬ ಚಿಂತೆ ಈ ಎಲ್ಲರಲ್ಲೂ ಇದೆ. ಶರತ್ ಬಚ್ಚೇಗೌಡರ ಮೇಲೆ ಯಡಿಯೂರಪ್ಪನವರ ಸಿಟ್ಟು ಇನ್ನೂ ಮುಂದುವರೆದಿರುವುದನ್ನು ಶಾಸಕರ ಪ್ರಮಾಣ ಸ್ವೀಕಾರ ಸಂದರ್ಭದಲ್ಲಿ ವ್ಯಕ್ತವಾದುದನ್ನು ನೋಡಿದರೆ ಎಂ.ಟಿ.ಬಿ ಪರವಾಗಿ ಯಡ್ಡಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದ್ದೇ ಇದೆ.

ಆದರೆ, ಅದೇ ಎಂ.ಎಲ್.ಸಿ ಸ್ಥಾನದ ಮೇಲೆ ಕಣ್ಣಿಟ್ಟ ಇನ್ನೂ ಇಬ್ಬರಿದ್ದಾರೆ. ಒಬ್ಬರು ಡಿಸಿಎಂ ಸವದಿ. ಅವರ ಡಿಸಿಎಂ ಪಟ್ಟ ಮುಂದುವರೆಯಲು ಈಗ ಬೇರೆ ಯಾವ ದಾರಿಯೂ ಇಲ್ಲ. ಹಾಗೆಯೇ ತನ್ನಂತಹ ‘ಮುತ್ಸದ್ದಿ’ಗೆ ಸ್ಥಾನ ಕಲ್ಪಿಸದಿದ್ದರೆ ಹೇಗೆ ಎಂಬ ವಾದ ಎಚ್.ವಿಶ್ವನಾಥ್‍ರದ್ದೂ ಇರುತ್ತದೆ. ಅಂತಿಮವಾಗಿ ಸಂಪುಟ ರಚನೆಯಲ್ಲಿ ಯಡಿಯೂರಪ್ಪನವರಿಗೆ ಒಂದಷ್ಟು ಬಿಟ್ಟುಕೊಟ್ಟು ಎಂಎಲ್‍ಸಿ ಸೀಟು ಸವದಿ ಪಾಲಾಗಿ ಉಳಿದವರಿಗೆ ಫಲವತ್ತಾದ ನಿಗಮ ಮಂಡಳಿಗಳ ತುಪ್ಪ ಸವರುವ ಸಾಧ್ಯತೆಯೇ ಎದ್ದು ಕಾಣುತ್ತಿದೆ.
ಅದೇನೇ ಇದ್ದರೂ ಬಿಜೆಪಿಯೊಳಗೆ ಇನ್ನೊಂದು ಸುತ್ತು ಯಡಿಯೂರಪ್ಪ ವರ್ಸಸ್ ತ್ರೈಕಮಾಂಡ್‍ನ ಮುಸುಕಿನ ಗುದ್ದಾಟ ನಡೆಯುವುದಂತೂ ಖಾಯಂ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...