HomeಮುಖಪುಟYes! ದೆ ಆರ್ ಅನ್‍ಬೀಟಬಲ್!! ಪ್ರಪಂಚವೇ ಬೆಚ್ಚಿಬೀಳುವಂತೆ ಡ್ಯಾನ್ಸ್‌ ಮಾಡಿದ ಸ್ಲಂ ಯುವಜನರ ತಂಡ..

Yes! ದೆ ಆರ್ ಅನ್‍ಬೀಟಬಲ್!! ಪ್ರಪಂಚವೇ ಬೆಚ್ಚಿಬೀಳುವಂತೆ ಡ್ಯಾನ್ಸ್‌ ಮಾಡಿದ ಸ್ಲಂ ಯುವಜನರ ತಂಡ..

- Advertisement -
- Advertisement -

ಅಮೆರಿಕಾ ಗಾಟ್ ಟ್ಯಾಲೆಂಟ್’ (AGT) ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಮುಂಬೈನ 28 ಬಾಲಕ ಬಾಲಕಿಯರು ತಮ್ಮ ಡ್ಯಾನ್ಸ್ ಪ್ರದರ್ಶನದಲ್ಲಿ ಟ್ರೋಫಿಯನ್ನು ಗೆದ್ದು ಅಮೆರಿಕನ್ನರನ್ನು ಮಾತ್ರವಲ್ಲ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ್ದಾರೆ.

ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡುವ ಅಮೆರಿಕಾ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಭಾಗವಹಿಸಿ ಹೃದಯವೇ ನಿಂತುಹೋಗುವಂತಹ ಡ್ಯಾನ್ಸ್ ಪ್ರದರ್ಶನ ನೀಡಿ ರಿಯಾಲಿಟಿ ಶೋ ಟ್ರೋಫಿ ಗೆದ್ದಿರುವ ಈ ಯುವಜನರು ಪ್ರಪಂಚದ ಗಮನ ಸೆಳೆದಿದ್ದಾರೆ.

ಯಾರು ಈ “ವಿ ಅನ್‍ಬೀಟಬಲ್”

ವಿ ಅನ್‍ಬೀಟಬಲ್ ತಂಡ ಮುಂಬೈನ ಹಲವಾರು ಸ್ಲಂಗಳಲ್ಲಿ ವಾಸಿಸುವ ಯುವಜನರ ತಂಡ. ಮುಂಬೈನ ಸ್ಲಂಗಳಲ್ಲಿ ದುಸ್ತರವಾದ ಬದುಕು. ಕುಡಿಯಲು ಶುದ್ಧ ನೀರು ಸಿಗದೆ, ಕಾಲು ಚಾಚಿ ಮಲಗುವಷ್ಟು ಜಾಗವೂ ಇಲ್ಲದೆ, ಚಿಕ್ಕ ಶೆಡ್ಡುಗಳಂತಹ ಮನೆಗಳಲ್ಲಿ ಬದುಕುವ ಜನರ ಅಲ್ಲಿನ ನೋವುಗಳನ್ನು ಅನುಭವಿಸುತ್ತಾ ಬೆಳೆಯುತ್ತಿದ್ದ ಈ 28 ಯುವಜನರ ತಂಡವೇ ವಿ ಅನ್ಬೀಟಬಲ್.

ಮುಂಬೈನ ಸ್ಲಂಗಳಲ್ಲಿ ವಾಸಿಸುತ್ತಿರುವ 12ರಿಂದ 27ವಯಸ್ಸಿನವರೆಗಿನ ಬಾಲಕಬಾಲಕಿಯರು ಅವರು. “ಸ್ಲಂಗಳು ಅತ್ಯಂತ ಜನನಿಬಿಡವಾಗಿವೆ, ಕೊಳಕಾಗಿರುತ್ತದೆ, ಸೂಕ್ತ ವಿದ್ಯುತ್ ಸೌಲಭ್ಯ ಅಲ್ಲಿಲ್ಲ, ಒಂದೊಂದು ಸಣ್ಣ ಕೋಣೆಯಲ್ಲಿ 10 ಜನ ಇರಬೇಕಾಗುತ್ತದೆ, ಅಲ್ಲಿ ಬದುಕು ಉಳಿಸಿಕೊಳ್ಳುವುದೇ ಸವಾಲಿನ ಕೆಲಸ. ಇಂತಹ ಕಷ್ಟದ ಬದುಕಿನಲ್ಲಿ ಅವರು ಪ್ರಾರ್ಥಿಸುತ್ತಿದ್ದದ್ದು ಉತ್ತಮವಾದ, ಸ್ವಾವಲಂಬಿ-ಸ್ವಾಭಿಮಾನದ ಘನತೆಯ ಬದುಕಿಗಾಗಿ. ಆದರೆ ಆ ಯುವಜನರಿಗೆ ಸ್ಲಂಗಳಲ್ಲಿ ಸಿಗುತ್ತಿದ್ದ ಅವಕಾಶವೇ ಕಡಿಮೆ.., ಆದರೂ, ಬೆಳಗ್ಗೆಯಿಂದ ಸಂಜೆಯವರೆಗೂ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದ ಈ ಯುವಜನರು, ಸಂಜೆಯ ಸಮಯದಲ್ಲಿ ಒಟ್ಟಿಗೆ ಸೇರಿ ಡ್ಯಾನ್ಸ್ ಮಾಡುತ್ತಾ ತಮ್ಮೆಲ್ಲರ ಮನಸ್ಸಿನ ಮಾನಸಿಕ ದುಗುಡ, ತಳಮಳ, ಬದುಕಿನ ಮೇಲಿನ ಆಕ್ರೋಶವನ್ನು ಕಳೆದುಕೊಂಡು, ಮನಸ್ಸನ್ನು ಹಗುರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಈ 28 ಯುವಜನರ ತಂಡ ತಾವು ಒಟ್ಟುಗೂಡಿ ಡ್ಯಾನ್ಸ್ ಮಾಡುವ ಸಂದರ್ಭದಲ್ಲಿ ತಮ್ಮ ಡ್ಯಾನ್ಸಿನ ಸ್ಕಿಲ್ಲನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಯೂಟ್ಯೂಬ್‌ನಲ್ಲಿ ನಾನಾ ರೀತಿಯ ಶೋಗಳನ್ನು ನೋಡುತ್ತಿದ್ದರು. ಡ್ಯಾನ್ಸ್ ಬಗ್ಗೆ ತುಡಿತ ಹೊಂದಿದ್ದ ಈ ಯುವಜನರ ಕಣ್ಣಿಗೆ ಕಂಡದ್ದು ‘ಅಮೆರಿಕಾ ಗಾಟ್ ಟ್ಯಾಲೆಂಟ್’ ರಿಯಾಲಿಟಿ ಶೋ. ಆ ಕಾರ್ಯಕ್ರಮವನ್ನು ನೋಡುವಾಗ ಆ ಯುವ ಮನಸ್ಸುಗಳಲ್ಲಿ ಮೂಡಿದ್ದು ನಾವು ಒಂದು ದಿನ ಅಲ್ಲಿಗೆ ಹೋಗಬಹುದಾ ಎಂಬ ಕನಸು. ಆ ಕನಸಿನ್ನು ನನಸಾಗಿಸಿಕೊಳ್ಳುವತ್ತ ಹೆಜ್ಜೆ ಹಾಕಿದ್ದ ಆ ತಂಡ ’ವಿ ಅನ್‍ಬೀಟಬಲ್’ ಹೆಸರನ್ನಿಟ್ಟುಕೊಂಡು ‘ಅಮೆರಿಕಾ ಗಾಟ್ ಟ್ಯಾಲೆಂಟ್’ ವೇದಿಯ ಮೇಲೇರಿ ತಮ್ಮ ಕನಸನ್ನ ನನಸಾಗಿಸಿಕೊಂಡಿದ್ದಾರೆ.

ವಿ ಅನ್‍ಬೀಟಬಲ್ ಗೆಲುವಿನ ಹಾದಿ!

V Unbeatable ಎಂಬ ಡ್ಯಾನ್ಸ್ ತಂಡ ಕಟ್ಟಿಕೊಂಡು ವಾರಗಳ ಕಾಲ ತಾಲೀಮು ನಡೆಸಿಕೊಂಡು ಎನ್‍ಬಿಸಿ ರಿಯಾಲಿಟಿ ಟಿವಿ ನಡೆಸುವ ‘ಅಮೆರಿಕ ಗಾಟ್ ಟ್ಯಾಲೆಂಟ್’ (AGT) ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಬಂದು ನಿಂತಾಗ ತಮ್ಮೆದುರು ತೀರ್ಪುಗಾರರಾಗಿ ಕುಳಿತ ಸೈಮನ್ ಕೌವೆಲ್, ಹೌವೀ ಮಂಡೆಲ್, ಗ್ಯಾಬ್ರಿಯೆಲ್ ಯೂನಿಯನ್ ಮತ್ತು ಜ್ಯೂಲಿಯನ್ ಹೌ ಅವರಿಗಾಗಲೀ, ಪ್ರೇಕ್ಷಕರಿಗಾಗಲೀ ಆ ಕಂದು ಬಣ್ಣದ ಹುಡುಗರು ಏನು ಮಾಡಲಿದ್ದಾರೆ ಎಂಬ ಊಹೆಯೂ ಇರಲಿಲ್ಲ.

ಶೋ ಆರಂಭದ ಮೊದಲ ದಿನ, ವಿಶಾಲ್ ದಾದ್ಲಾನಿಯ “ಮಲ್ಹಾರಿ” ಹಾಡಿಗೆ ಹುಡುಗರು ಮಾಡುವ ಡ್ಯಾನ್ಸ್ ಕೆಲ ನಿಮಿಷಗಳ ಕಾಲ ಎಲ್ಲರ ಎದೆಬಡಿತ ಹೆಚ್ಚಿಸುತ್ತದೆ. ಅದರಲ್ಲೂ ಸಣ್ಣ ಹುಡುಗರನ್ನು ಎತ್ತಿ ಹಾರಿಸುವ ಕೆಲವು ದೃಶ್ಯಗಳಂತೂ ಮೈ ಜುಮ್ ಎನಿಸಿದ್ದವು. ಬೊಂಬುಗಳನ್ನು ತಂದು ನಿಲ್ಲಿಸಿ ಅದರ ಮೇಲೆ ಕಾಲ್ಬೆರಳ ತುದಿಯಲ್ಲಿ ನಡೆದು, ನೆಗೆದು ತೋರಿಸುವ ದೃಶ್ಯಗಳಂತೂ ಚೇತೋಹಾರಿಯಾಗಿದ್ದವು.

ಆ ದೃಶ್ಯಗಳನ್ನು ನೋಡಿದರೆ, ಅಂತಹ ಪ್ರದರ್ಶನಗಳನ್ನು ಚೀನಾದ ತಂಡಗಳು ಮಾತ್ರ ನೀಡಲು ಸಾಧ್ಯ, ಮತ್ತಾರೂ ಮಾಡಲಾರರು ಎನ್ನುವಂತಿದ್ದವು. ಅಂತಹ ನೃತ್ಯವನ್ನು ಸೂಕ್ತ ತರಬೇತಿ ಸಿಕ್ಕಿದರೆ ಭಾರತದಲ್ಲಿ ವಾಸಿಸುವ ಸ್ಲಂ ಮಕ್ಕಳೂ ಸಹ ಅಸಾಧ್ಯವಾದುದನ್ನು ಸಾಧಿಸಿ ಜಗತ್ತೇ ನಿಬ್ಬೆರಗಾಗುವಂತೆ ಮಾಡಬಲ್ಲರು ಎಂಬುದನ್ನು ವಿ ಅನ್ ಬೀಟಬಲ್ ತಂಡ ತೋರಿಸಿದೆ.

ಅಂದು ರಿಯಾಲಿಟಿ ಶೋ ವೇದಿಕೆ ಮೇಲೆ ನಿಂತ ಈ ಯುವಜನರನ್ನು ಅಮೆರಿಕಾ ಗಾಟ್ ಟ್ಯಾಲೆಂಟ್ ವಿನ್ನರ್ಸ್ ಪಟ್ಟಿಯಲ್ಲಿ ಸೇರಿದರೆ ನಿಮ್ಮ ಭವಿಷ್ಯಕ್ಕೆ ಏನು ಲಾಭ ಎಂದು ಜಡ್ಜ್ ಗ್ಯಾಬ್ರಿಯೆಲ್ ಕೇಳಿದ್ದಕ್ಕೆ ಮುಂಬೈ ಹುಡುಗ, “ಗೆಲುವು ಸಾಧಿಸಿದ್ದು ವಿ ಅನ್ ಬೀಟಬಲ್” ಎಂದು ಇಡೀ ಜಗತ್ತಿಗೆ ತಿಳಿಯಬೇಕೆಂದು ನಾವು ಬಯಸುತ್ತೇವೆ. ಇಂದು ಇಲ್ಲಿ ಸಿಕ್ಕಿರುವ ಅವಕಾಶ ನಮ್ಮ ಬದುಕನ್ನು ಬದಲಿಸಬಹುದು ಎಂಬ ಕನಸು ಹೊತ್ತು ಎಲ್ಲರೂ ಇಲ್ಲಿದ್ದೇವೆ ಎಂದು ಹೇಳಿದ್ದ.

ತಮ್ಮೆಲ್ಲರ ಕನಸನ್ನು ನನಸಾಗಿಸಿಕೊಂಡು ಅಮೆರಿಕಾ ಗಾಟ್ ಟ್ಯಾಲೆಂಟ್ ವೇದಿಕೆ ಏರಿದ್ದಷ್ಟೇ ಅಲ್ಲದೆ, ಈ ಶೋನ ಟ್ರೋಫಿಯನ್ನೂ ಗೆದ್ದು, ತಾವು ಬಯಸಿದ್ದ ಸಾಧನೆಯನ್ನು ಮಾಡಿ ಇಂದು ತಾವು ಗೆದ್ದಿದ್ದೇವೆಂದು ಆ 28 ಜನರ ತಂಡ ಇಡೀ ಜಗತ್ತಿಗೆ ಸಾರಿದ್ದಾರೆ.

ಇದು ಕೇವಲ ಮುಂಬೈನ ಸ್ಲಂ ಯುವಜನರ ಕತೆ ಅಷ್ಟೇ ಅಲ್ಲ, ಇಂತಹ ಎಲೆ ಮರೆಯ ಪ್ರತಿಭೆಗಳು ಈ ದೇಶದ ಅಸಮಾನತೆ ಮತ್ತು ಅವಕಾಶ ವಂಚನೆಯಿಂದಾಗಿ ತೆರೆಮರೆಯಲ್ಲೇ ಹುದುಗಿ ಹೋಗುತ್ತಿವೆ. ಕೆಲವು ವರ್ಷಗಳ ಹಿಂದೆ ಮಂಡ್ಯ ನಗರದ ಸ್ಲಂ ಹುಡುಗರೂ ಸಹ ಇಂತಹುದೇ ಡ್ಯಾನ್ಸ್ ತಂಡ ಕಟ್ಟಿಕೊಂಡಿದ್ದರು, ಉತ್ತರ ಕರ್ನಾಟಕದ ಬೀದರ್ ನಗರದ ಸ್ಲಂಗಳಲ್ಲಿಯೂ ಅಲೆಮಾರಿ ಸಮುದಾಯಗಳ ಹುಡುಗರು ಅದ್ಭುತ ಡ್ಯಾನ್ಸ್ ತಂಡಗಳನ್ನು ಕಟ್ಟಿಕೊಂಡಿದ್ದರು. ದೇಶದ ಸ್ಲಂಗಳಲ್ಲಿ/ಹಳ್ಳಿಗಳಲ್ಲಿ ಅಡಗಿರುವ ಈ ಸುಪ್ತ ಪ್ರತಿಭೆಗಳಿಗೆ ಸರಿಯಾದ ವೇದಿಕೆ ಸಿಕ್ಕಿದ್ದೇ ಆದಲ್ಲಿ ಭಾರತೀಯ ಯುವಜನರ ಹೊಸ ಯಶೋಗಾಥೆಯನ್ನು ಬರೆಯುವುದರಲ್ಲಿ ಸಂಶಯವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಆರ್‌ಜಿ-ಕರ್ ಸಂತ್ರಸ್ತೆ ತಾಯಿ

ಕರ್ತವ್ಯದಲ್ಲಿರುವಾಗಲೇ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಆರ್‌ಜಿಕರ್ ಆಸ್ಪತ್ರೆಯ ವೈದ್ಯೆಯ ತಾಯಿ ರತ್ನಾ ದೇಬ್ನಾಥ್ ಅವರು ಪಾಣಿಹತಿಯ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ ಬಿಜೆಪಿಯ ಹಿರಿಯ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ...

‘ಮುಸ್ಲಿಮರನ್ನು ಮರುಳು ಮಾಡುವುದು ಸುಲಭ’: ಹುಮಾಯೂನ್ ಕಬೀರ್ ವಿಡಿಯೋ ವಿವಾದ: ತನಿಖೆಗೆ ಟಿಎಂಸಿ ಒತ್ತಾಯ

ಪಶ್ಚಿಮ ಬಂಗಾಳದಲ್ಲಿ ಗುರುವಾರ ರಾಜಕೀಯ ವಿವಾದ ಭುಗಿಲೆದ್ದಿದ್ದು, ಹುಮಾಯೂನ್ ಕಬೀರ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಅವರು ಹಿರಿಯ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ...

ಲೆಬನಾನ್ ಮೇಲೆ ‘ಅಗತ್ಯವಿರುವಲ್ಲೆಲ್ಲಾ’ ದಾಳಿ ಮುಂದುವರಿಸುವುದಾಗಿ ಘೋಷಿಸಿದ ನೆತನ್ಯಾಹು; ಹಿಜ್ಬೊಲ್ಲಾದ ಉನ್ನತ ಅಧಿಕಾರಿ ಹತ್ಯೆ 

ಇಸ್ರೇಲ್, ಲೆಬನಾನ್ ಮೇಲೆ ದಾಳಿ ಮಾಡಿದ ಮರುದಿನ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ, ಇರಾನ್ ಬೆಂಬಲಿತ ಹೆಜ್ಬೊಲ್ಲಾ ಮೇಲೆ "ಅಗತ್ಯವಿರುವಲ್ಲೆಲ್ಲಾ" ದಾಳಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಇಸ್ರೇಲಿ ಸೇನೆಯು ಗುರುವಾರ ದಕ್ಷಿಣ ಲೆಬನಾನ್‌ನಲ್ಲಿ ಮತ್ತಷ್ಟು...

ಬಾರಾಮತಿ ಉಪ ಚುನಾವಣಾ ಕಣದಿಂದ ಹಿಂದೆ ಸರಿದ ಕಾಂಗ್ರೆಸ್ ; ಸುನೇತ್ರಾ ಪವಾರ್ ಗೆಲುವು ಖಚಿತ

ಬಾರಾಮತಿ ಕ್ಷೇತ್ರದ ಉಪಚುನಾವಣಾ ಕಣದಿಂದ ಕಾಂಗ್ರೆಸ್ ಪಕ್ಷ ಹಿಂದೆ ಸರಿದ ಕಾರಣ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರ ಗೆಲುವು ಖಚಿತವಾಗಿದೆ. ಬಾರಾಮತಿ ವಿಮಾನ ದುರಂತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್...

ಗಿಗ್ ಕಾರ್ಮಿಕರ ಹಿನ್ನೆಲೆ ಪರಿಶೀಲನೆ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಸರ್ಕಾರ

ದಾಖಲೆರಹಿತ ವಲಸಿಗರ ಒಳನುಸುಳುವಿಕೆ ಆರೋಪದ ರಾಜಕೀಯ ವಿವಾದದ ನಡುವೆ, ಮುಂಬೈ ಮತ್ತು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಾದ್ಯಂತ (ಎಂಎಂಆರ್‌) ಲಕ್ಷಾಂತರ ಗಿಗ್ ಮತ್ತು ವಿತರಣಾ ಕಾರ್ಮಿಕರಿಗೆ ಕಠಿಣ, ಕಡ್ಡಾಯ ಪರಿಶೀಲನಾ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸರ್ಕಾರ...

ಪಶ್ಚಿಮ ಬಂಗಾಳ| ಎಸ್‌ಐಆರ್‌ ತೀರ್ಪಿನ ನಂತರ ಒಂದೇ ಗ್ರಾಮದ 3,700 ಹೆಸರುಗಳು ಡಿಲೀಟ್!

ಪಶ್ಚಿಮ ಬಂಗಾಳದ ಮಾಲ್ಡಾದ ಹಳ್ಳಿಯೊಂದರ ಸುಮಾರು 4,000 ಮತದಾರರ ಭವಿಷ್ಯವು ತೂಗುಯ್ಯಾಲೆಯಲ್ಲಿದೆ. ಮೊದಲ ಹಂತದ ಮತದಾರರ ಪಟ್ಟಿ ಈಗಾಗಲೇ ಸ್ಥಗಿತಗೊಂಡಿದ್ದು, ಇದರಿಂದಾಗಿ ಅವರು ರಾಜ್ಯಾದ್ಯಂತ ಲಕ್ಷಾಂತರ ಜನರಂತೆ ಏಪ್ರಿಲ್ 23 ರಂದು...

ದಲಿತ ಯುವಕನ ಕಸ್ಟಡಿ ಸಾವು ಆರೋಪ : ರಾಜ್ಯ ಸರ್ಕಾರ, ಪೊಲೀಸರು, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಹೈಕೋರ್ಟ್ ನೋಟಿಸ್

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್‌) ಕರ್ನಾಟಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಗೆ ಸಂಬಂಧಿಸಿದಂತೆ ಹೈಕೋರ್ಟ್ ಬುಧವಾರ (ಏ.8) ರಾಜ್ಯ ಸರ್ಕಾರ, ಪೊಲೀಸರು ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ...

ಇಬ್ಬರು ಮಕ್ಕಳ ಸಾವಿನ ಬಳಿಕ ಮಣಿಪುರದಲ್ಲಿ ಭುಗಿಲೆದ್ದ ಪ್ರತಿಭಟನೆ; ಅಶ್ರುವಾಯು ಪ್ರಯೋಗಿಸಿದ ಪೊಲೀಸರು

ಏಪ್ರಿಲ್ 7 ರಂದು ಬಿಷ್ಣುಪುರ ಜಿಲ್ಲೆಯಲ್ಲಿ ಬಾಂಬ್ ದಾಳಿಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದ ನಂತರ ಕಣಿವೆ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದ ಕಾರಣ ಬುಧವಾರ (ಏಪ್ರಿಲ್ 8) ಮಣಿಪುರದಾದ್ಯಂತ ಉದ್ವಿಗ್ನತೆ ಉಂಟಾಗಿತ್ತು....

ಮತಕ್ಕಾಗಿ ನಗದು ಪ್ರಕರಣ: ಪಾಲಕ್ಕಾಡ್‌ನಲ್ಲಿ ಎನ್‌ಡಿಎ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

ಮತದಾನದ ಒಂದು ದಿನಕ್ಕೆ ಮುಂಚಿತವಾಗಿ ಮತದಾರರಿಗೆ ಲಂಚ ನೀಡಿದ ಆರೋಪದ ಮೇಲೆ ಪಾಲಕ್ಕಾಡ್ ಕ್ಷೇತ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರತಿನಿಧಿಗಳ ವಿರುದ್ಧ ಬುಧವಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಏಪ್ರಿಲ್ 8 ರಂದು ಬೆಳಿಗ್ಗೆ 10...

ಮಾದಕ ವ್ಯಸನ : 10 ವರ್ಷದಲ್ಲಿ ಐವರು ಗಂಡು ಮಕ್ಕಳನ್ನು ಕಳೆದುಕೊಂಡ ವೃದ್ಧ ದಂಪತಿ

ಡ್ರಗ್ ಕಾರಣದಿಂದ ವೃದ್ದ ದಂಪತಿ ತನ್ನ ಐವರು ಗಂಡು ಮಕ್ಕಳನ್ನು ಕಳೆದುಕೊಂಡ ಹೃದಯ ವಿದ್ರಾವಕ ಮತ್ತು ಆಘಾತಕಾರಿ ವರದಿ ಪಂಜಾಬ್‌ನ ಕಪುರ್ಥಲಾ ಜಿಲ್ಲೆಯ ಸುಲ್ತಾನ್‌ಪುರ ಲೋಧಿಯಿಂದ ಬಂದಿದೆ. ಸುಲ್ತಾನ್‌ಪುರ ಲೋಧಿಯ ಪಂಡೋರಿ ಮೊಹಲ್ಲಾ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ...