ಬ್ರಿಸ್ಬೇನ್‌ನಲ್ಲಿ ನಡೆದ ಆಸ್ಟ್ರೇಲಿಯಾ-ಭಾರತ ನಡುವಿನ ಬಾರ್ಡರ್ ಗವಾಸ್ಕರ್ ಸರಣಿಯ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ರೋಚಕ ಜಯಗಳಿಸಿ, 2-1 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಶುಭ್‌ಮನ್ ಗಿಲ್ ಮತ್ತು ರಿಷಬ್ ಪಂತ್‌ರವರ ಅದ್ಭುತ ಬ್ಯಾಂಟಿಂಗ್‌ನಿಂದ ಭಾರತ ಮೂರು ವಿಕೆಟ್‌ಗಳ ಜಯ ಪಡೆಯಿತು. ಈ ಐತಿಹಾಸಿಕ ಗೆಲುವಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿಯ ವಿರುದ್ದ ಟ್ವಿಟ್ಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಕ್ರಿಕೆಟ್ ತಂಡಕ್ಕೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿರುವ ನರೇಂದ್ರ ಮೋದಿ, “ಆಸ್ಟ್ರೇಲಿಯಾದಲ್ಲಿ ನಡೆದ ಭಾರತೀಯ ಕ್ರಿಕೆಟ್ ತಂಡದ ಯಶಸ್ಸಿನಿಂದ ನಾವೆಲ್ಲರೂ ಸಂತೋಷಗೊಂಡಿದ್ದೇವೆ. ಅವರ ಗಮನಾರ್ಹ ಶಕ್ತಿ ಮತ್ತು ಉತ್ಸಾಹವು ಪಂದ್ಯದ ಉದ್ದಕ್ಕೂ ಗೋಚರಿಸಿತು. ತಂಡಕ್ಕೆ ಅಭಿನಂದನೆಗಳು! ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯಾ ಎದುರು ಜಯ: ಐತಿಹಾಸಿಕ ಬಾರ್ಡರ್ ಗವಾಸ್ಕರ್ ಸರಣಿ ಭಾರತದ ಮಡಿಲಿಗೆ
ಟ್ವಿಟ್ಟರ್‌ನಲ್ಲಿ ಸಕ್ರಿಯವಾಗಿರುವ ಹಲವಾರು ಜನರು ಮೋದಿಯ ಟ್ವೀಟ್‌ಗೆ ಆಕ್ರೋಶ ವ್ಯಕ್ತಪಡಿಸಿ, ರೈತ ಹೋರಾಟ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾ ಕಟ್ಟಿರುವ ಹಳ್ಳಿಯ ಬಗ್ಗೆ ಗಮನ ಹರಿಸುವಂತೆ ಹೇಳಿದ್ದಾರೆ.
ಪ್ರಶಾಂತ್ ಪಾಲ್ ಅವರು, “ಅಣ್ಣಾ ನೀವು ಮೊದಲು ರೈತರನ್ನು ನೋಡಿ, ಪಂದ್ಯಾಟವನ್ನು ರಿಷಬ್ ಪಂತ್ ನೋಡಿಕೊಂಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Bhai tum phle kisaano ka dekho match pant ne dekh liya h
— prashant pal (@prashantpal24) January 19, 2021
ರಾಜ್‌ಕುಮಾರ್ ಮೀನಾ ಅವರು, ” ಚೀನಾ ಅರುಣಾಚಲ ಪ್ರದೇಶದಲ್ಲಿ ಗ್ರಾಮವನ್ನು ನಿರ್ಮಿಸಿದೆ. ನಮ್ಮ ಮಾತೃಭೂಮಿಯನ್ನು ರಕ್ಷಣೆ ಮಾಡಲು ಬಿಜೆಪಿ ಸರ್ಕಾರ ಏನು ಮಾಡುತ್ತಿದೆ ಎಂದು ವಿವರಿಸಬಹುದೆ” ಎಂದು ಪ್ರಶ್ನಿಸಿದ್ದಾರೆ.
China has built a village in arunachal pradesh.
Will BJP Govt care to explain what it is doing to protect our motherland ? pic.twitter.com/lzCypdEPV8
— Rajkumar Meena (@ErRajkumarMeena) January 19, 2021
ಇದನ್ನೂ ಓದಿ: ಸೆಪ್ಟಂಬರ್ ತಿಂಗಳವರೆಗೆ ಕೇಂದ್ರ ಸರ್ಕಾರ ಮಾಡಿದ ಒಟ್ಟು ಸಾಲ 107.04 ಲಕ್ಷ ಕೋಟಿ!
ಟಿಆರ್‌ಎಸ್ ಥೋಪು ಎಂಬ ಟ್ವಿಟ್ಟರ್ ಹ್ಯಾಂಡಲ್, “ಅರುಣಾಚಲ್ ಪ್ರದೇಶದಲ್ಲಿ ಆಗುತ್ತಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಭಿವೃದ್ದಿ ಕೆಲಸಗಳ ಬಗ್ಗೆ ಕೂಡಾ ಖುಷಿ ಪಡಿ” ಎಂದು ಹೇಳಿದ್ದಾರೆ.
Enjoyed your new development in ARUNACHAL PRADESH
PMAY…Pradhana Mantri Awas Yojan working ✌✌but Later realized it's your gift for China?..?not for India? pic.twitter.com/jnqvEYOjSv— Bandi anna Fanclub-Khammam lo Anna ki vaccine (@TRS_thopu) January 19, 2021
ರವಿ ಕುಮಾರ್ ಅವರು, ಕೇವಲ ಕ್ರಿಕೆಟ್ ನೋಡುವುದಲ್ಲ, ಇದನ್ನು ಕೂಡಾ ನೋಡಿ ಎಂದು ಅರುಣಾಚಲ ಪ್ರದೇಶದಲ್ಲಿ ಚೀನಾ ಕಟ್ಟುತ್ತಿರುವ ಮನೆಗಳ ಫೋಟೋ ಹಾಕಿದ್ದಾರೆ.
By the by watch this also…. pic.twitter.com/mVviayXyHs
— Ravi kumar (@Ravikum47425814) January 19, 2021
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಹಿಂದಿ ಹೇರಿಕೆ ವಿರೋಧಿ ಚಿತ್ರಗಳನ್ನು ರೈತರ ಅರಾಜಕತೆ ಎಂದು ಪೋಸ್ಟ್ ಮಾಡಿದ ಬಿಜೆಪಿಗರು!
ತಮಿಳನ್ ಸತ್ಯಾ ಟ್ವಿಟ್ಟರ್ ಹ್ಯಾಂಡಲ್, “4.5 ಕಿಲೋ ಮೀಟರ್ ಭಾರತದ ಭೂಪ್ರದೇಶದ ಒಳಗಡೆ ಚೀನಾ ಮನೆಗಳನ್ನು ಕಟ್ಟಿದೆ. ಕಳೆದ 60 ದಿನಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಎರಡು ದೊಡ್ಡ ಸಮಸ್ಯೆಗಳ ಬಗ್ಗೆ ಯಾವುದೆ ಕ್ರಮ ತೆಗೆದುಕೊಂಡಿಲ್ಲ. ಆದರೆ ಕ್ರಿಕೆಟ್‌ಗೆ ಅಭಿನಂದಿಸುತ್ತಾರೆ. ನೀವು ಭಾರತದ ಪ್ರಧಾನಿಯಾಗಲು ಅರ್ಹತೆ ಇಲ್ಲದವರು” ಎಂದು ಹೇಳಿದ್ದಾರೆ.
*China is 4.5 km from Indian territory in Arunachal Pradesh. China builds houses far away!
*Farmers' struggle in Delhi continues for Past 60 days!For this two big problem of India ?? He dint take action. But wishes to Cricket ?
You’re Not elegibile to be a PM of India ?️?— தமிழன் சத்யா (@tamilansathya16) January 19, 2021
Sirji, 101 residential Chinese village in Arunachal Pradesh ke bare mey agar kuch vaartaalaap karte.
— DM_Apocalypse (@dola_anika) January 19, 2021
Farmers ?
— ? (@fira__ali) January 19, 2021
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ’ಬಾಲಾಕೋಟ್ ದಾಳಿಯಲ್ಲಿ 300 ಜನರ ಸಾವನ್ನು ಪಾಕಿಸ್ತಾನ ಒಪ್ಪಿಕೊಂಡಿದೆ’ ಎಂದು ಸುಳ್ಳು ಸುದ್ದಿ


