Homeಕರ್ನಾಟಕಮಾನಸಿಕ ದೌರ್ಬಲ್ಯವಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ: ನಾಲಗೆ ಹರಿಬಿಟ್ಟ ಬಿ.ಸಿ ಪಾಟೀಲ

ಮಾನಸಿಕ ದೌರ್ಬಲ್ಯವಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ: ನಾಲಗೆ ಹರಿಬಿಟ್ಟ ಬಿ.ಸಿ ಪಾಟೀಲ

"ಸರ್ಕಾರದ ಕೃಷಿ ನೀತಿಯಿಂದ ಮನನೊಂದು ಯಾರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ"

- Advertisement -
- Advertisement -

ರೈತರ ಆತ್ಮಹತ್ಯೆಯ ಕುರಿತು ಈ ಹಿಂದೆ ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಜ್ಯದ ಕೃಷಿ ಸಚಿವ ಬಿ ಸಿ ಪಾಟೀಲ ಮತ್ತೊಮ್ಮೆ ತಮ್ಮ ನಾಲಗೆಯನ್ನು ಹರಿಬಿಟ್ಟಿದ್ದಾರೆ. “ಮಾನಸಿಕ ದೌರ್ಬಲ್ಯ ಇರುವ ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ ಸಿ ಪಾಟೀಲ್, “ಉದ್ಯಮಿಗಳು ಸೇರಿದಂತೆ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ಕೃಷಿ ನೀತಿಯಿಂದ ಮನನೊಂದು ಯಾರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಮಾನಸಿಕ ದೌರ್ಬಲ್ಯ ಹೊಂದಿರುವವರಷ್ಟೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಹೋಗಿ ಹಾರ ಹಾಕಿದರೆ ಆತ್ಮಹತ್ಯೆ ನಿಲ್ಲುವುದಿಲ್ಲ. ರೈತರ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ. ಇದಕ್ಕಾಗಿಯೇ ಪ್ರಧಾನಮಂತ್ರಿ ಅವರು ಆತ್ಮನಿರ್ಭರ್‌ ಭಾರತ ಯೋಜನೆಯಡಿ 493 ಕೋಟಿಯನ್ನು ಆಹಾರ ಸಂಸ್ಕರಣೆಗೆ ಕೊಟ್ಟಿದ್ದಾರೆ. ಈ ಯೋಜನೆಯಡಿ ದೇಶದಲ್ಲಿ ಮೊದಲ ಹೆಜ್ಜೆ ಇಟ್ಟಿರುವ ರಾಜ್ಯ ಈಗಾಗಲೇ ಒಂದು ಜಿಲ್ಲೆ, ಒಂದು ಬೆಳೆ ಎಂಬುದನ್ನು ಗುರುತಿಸಿ, ಪ್ರತಿ ವಾರ 50 ರೈತರಿಗೆ ಆಹಾರ ಸಂಸ್ಕರಣೆ ವಿಷಯದಲ್ಲಿ ತರಬೇತಿ ನೀಡಲು ಇಲ್ಲಿನ ಸಿಎಫ್‌ಟಿಆರ್‌ಐ ಜತೆ ಒಪ್ಪಂದ ಮಾಡಿಕೊಂಡಿದೆ” ಎಂದರು.

ಇದನ್ನೂ ಓದಿ: ಹೇಡಿಗಳು ರೈತರೋ ಅಥವಾ ನಿಮ್ಮ ಸಂಸದರು, ಸರ್ಕಾರವೋ?: ಬಿ.ಸಿ ಪಾಟೀಲ್‌ಗೆ ಕಾಂಗ್ರೆಸ್ ಪ್ರಶ್ನೆ

“ದೆಹಲಿಯಲ್ಲಿ ಪಂಜಾಬ್ ಮತ್ತು ಹರಿಯಾಣದ ರೈತರಷ್ಟೇ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ರೈತರು ಶರದ್‌ಪವಾರ್ ಕೃಷಿ ಸಚಿವರಾಗಿದ್ದಾಗ ಬೆಂಬಲ ಬೆಲೆ, ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ವಿರೋಧಿಸಿ ಪ್ರತಿಭಟಿಸಿದ್ದರು. ಈಗ ರೈತರಿಗೆ ಅನುಕೂಲವಾಗುವಂತಹ ತಿದ್ದುಪಡಿಗಳನ್ನೂ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಈ ಹಿಂದೆಯೂ ಆತ್ಮಹತ್ಯೆ ಮಾಡಿಕೊಳ್ಳುವ ರೈತರನ್ನು ಹೇಡಿಗಳು ಎಂದು ಸಚಿವರು ಹೇಳಿದ್ದರು. ಇದರ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.


ಇದನ್ನೂ ಓದಿ: ರೈತರನ್ನು ಹೇಡಿಗಳು ಎಂದ ಬಿ.ಸಿ.ಪಾಟೀಲ್: ಎಚ್.ಡಿ. ಕುಮಾರಸ್ವಾಮಿ ತಿರುಗೇಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...