Homeಚಳವಳಿಉದ್ಯೋಗ ಕೊಡದಿದ್ದರೆ ಮೋದಿಜಿಯನ್ನು ಮನೆಗೆ ಕಳಿಸುತ್ತೇವೆ: ನೋ ಜಾಬ್, ನೋ ವೋಟ್ ಟ್ವಿಟರ್ ಟ್ರೆಂಡಿಂಗ್

ಉದ್ಯೋಗ ಕೊಡದಿದ್ದರೆ ಮೋದಿಜಿಯನ್ನು ಮನೆಗೆ ಕಳಿಸುತ್ತೇವೆ: ನೋ ಜಾಬ್, ನೋ ವೋಟ್ ಟ್ವಿಟರ್ ಟ್ರೆಂಡಿಂಗ್

- Advertisement -

ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿರುವಂತೆಯೇ ಯುವಜನರ ಆಕ್ರೋಶವೂ ಕೂಡ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ನೀಡಿ, ಉದ್ಯೋಗ ಹೆಚ್ಚಿಸಿ, ಪ್ರಧಾನಿಗಳೇ ಉತ್ತರ ನೀಡಿ ಎಂದು ಕೇಳುತ್ತಿದ್ದಾರೆ. ಗುರುವಾರ (ಮಾರ್ಚ್ 4) ಕೂಡ #noजॉब_noवोट  (ನೋ ಜಾಬ್, ನೋ ವೋಟ್) ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದು, #noजॉब_noवोट ಹ್ಯಾಶ್‌ಟ್ಯಾಗ್ ಟ್ವಿಟರ್‌ ಟ್ರೆಂಡಿಂಗ್‌ನಲ್ಲಿದೆ.

ಗುರುವಾರ ಟ್ವಿಟರ್‌ನಲ್ಲಿ #noजॉब_noवोट ಬಳಸಿ ಟ್ವೀಟ್ ಮಾಡುತ್ತಿರುವ ಜನರು, ಕೆಲಸ ನೀಡದಿದ್ದರೇ ಮತವೂ ನೀಡಲಾಗದು ಎಂದು ಹೇಳುತ್ತಿದ್ದಾರೆ. 2 ಕೋಟಿ ಉದ್ಯೋಗಗಳನ್ನು ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ ಇಂದು ಇರುವ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಯುವಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ಭಾರತವೇ ಇಂದು ಒಂದು ಧ್ವನಿಯನ್ನು ಎತ್ತಿದೆ. ಅದೇನೆಂದರೆ ಬಿಜೆಪಿಗೆ ಮತ ನೀಡಬೇಡಿ ಎಂಬುದು ಎಂದು ಇಂಡಿಯನ್ ಸ್ಟೂಡೆಂಟ್ಸ್ ಅಂಡ್ ಯೂತ್ ಟ್ವಿಟರ್‌ ಹ್ಯಾಂಡಲ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಕಮಲ್ ಹಾಸನ್ ಪಕ್ಷದ ಉಪಾಧ್ಯಕ್ಷನಾಗಿ APJ ಅಬ್ದುಲ್ ಕಲಾಂ ಅವರ ಸಲಹೆಗಾರ!

32 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಎಲ್ಲಾ ವಯೋಮಾನದವು ಬಿಜೆಪಿಗೆ ಮತ ನೀಡಬೇಡಿ ಎಂಬ ಭಿತ್ತಿಪತ್ರ ಹಿಡಿದುಕೊಂಡಿದ್ದಾರೆ. ದೇಶದ ಹಲವಾರು ರಾಜ್ಯಗಳ ಜನರನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ವಿಕ್ಕಿ ರಾಜ್ ಎನ್ನುವವರು ಖಾಲಿ ಹುದ್ದೆಗಳು ಹೇಗೆ ಪಾತಾಳಕ್ಕೆ ಇಳಿಯುತ್ತಿವೆ ಎಂಬ ಗ್ರಾಫ್‌ ಪೋಸ್ಟ್ ಮಾಡಿ, ಇನ್ನು ಮಕ್ಕಳು ಓದಿ ಏನಾಗಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಈಗ ವಿದ್ಯಾಭ್ಯಾಸ ಮುಗಿಸಿದವರಿಗೆ ಸರ್ಕಾರ ಉದ್ಯೋಗ ನೀಡುತ್ತಿಲ್ಲ. ಇನ್ನು ಮುಂದಿನ ಪೀಳಿಗೆ ಮಕ್ಕಳು ಓದಿ ಏನಾಗಬೇಕು ಎಂದು ಹಲವು ಮಂದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: 2 ಕೋಟಿ ಉದ್ಯೋಗ ಎಲ್ಲಿ: “ಉತ್ತರ ಕೊಡಿ ಮೋದಿ” ಎಂದು 25 ಲಕ್ಷಕ್ಕೂ ಹೆಚ್ಚು ಟ್ವೀಟ್!

ನಮ್ಮ ಉತ್ತಮ ಭವಿಷ್ಯಕ್ಕಾಗಿ ಈ ಅಭಿಯಾನಕ್ಕೆ ಎಲ್ಲಾ ವಿದ್ಯಾರ್ಥಿಗಳು ಕೈಜೊಡಿಸಿ. ಈಗ ಒಂದಾಗದಿದ್ದರೇ ಮುಂದೆಂದೂ ಸಾಧ್ಯವಿಲ್ಲ ಎಂದು ಅನುರಾಗ್ ಶ್ರೀವಾತ್ಸವ್ ಎಂಬುವ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

#modi_jawab_do ಎಂಬ ಹ್ಯಾಶ್‌ಟ್ಯಾಗ್ ಬುಧವಾರ ಇಡೀ ದಿನ ಟ್ರೆಂಡಿಂಗ್‌ನಲ್ಲಿತ್ತು. ಇಂದು #noजॉब_noवोट ಹ್ಯಾಶ್‌ಟ್ಯಾಗ್ ಬಳಸಲಾಗುತ್ತಿದೆ. ಪ್ರಧಾನಿಗಳ ಬಳಿ ನಿರುದ್ಯೋಗಿಗಳು, ವಿದ್ಯಾರ್ಥಿಗಳು ಉದ್ಯೋಗದ ಬಗ್ಗೆ ಮಾತನಾಡಿದಾಗ ಕಣ್ಣು ಕಾಣಿಸುವುದಿಲ್ಲ, ಕಿವಿ ಕೇಳಿಸುವುದಿಲ್ಲ ಮತ್ತು ಮಾತು ಬರುವುದಿಲ್ಲ ಎಂದು ಹಲವು ಮಂದಿ ಟ್ವೀಟ್ ಮಾಡಿದ್ದಾರೆ.

ಮುಂದುವರಿದು, ಭಾರತದ ಯುವಜನತೆಯ ಬೇಡಿಕೆ ಈಡೇರಿಸದಿದ್ದರೇ, ನಿರುದ್ಯೋಗವನ್ನು ತಡೆದು ಎಲ್ಲರಿಗೂ ಕೆಲಸ ನೀಡದಿದ್ದರೇ ನಿಮ್ಮ ಕುರ್ಚಿ ಉಳಿಯುವುದಿಲ್ಲ ಇದು ಭಾರತದ ಯುವಜನತೆ ಪ್ರಧಾನಿಯವರಿಗೆ ನೀಡುತ್ತಿರುವ ಎಚ್ಚರಿಕೆ ಎಂಬಂತ ಟ್ವೀಟ್‌ಗಳು ಕಾಣಿಸುತ್ತಿವೆ.

ಇದನ್ನೂ ಓದಿ: ಕೊರೊನಾ ವಾರಿಯರ್ಸ್‌ಗೆ ಸಲ್ಲಬೇಕಾದ ಪ್ರಶಂಸೆಯನ್ನು ಮೋದಿ ಕದಿಯುತ್ತಿದ್ದಾರೆ: ಚುನಾವಣಾ ಆಯೋಗಕ್ಕೆ TMC ದೂರು

ದೇಶದ ಎಲ್ಲ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಿ. ಉದ್ಯೋಗ ನೀಡದಿದ್ದರೇ ವೋಟು ನೀಡುವುದಿಲ್ಲ ಎಂಬುದನ್ನು ಒತ್ತಿ ಹೇಳಿ. 2024ರ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಬೇಡಿ. ನೋ ಜಾಬ್, ನೋ ವೋಟ್ ಎಂಬ ಹ್ಯಾಶ್‌ಟ್ಯಾಗ್ ಬಳಸಿ, ವಿದ್ಯಾರ್ಥಿಗಳ ಶಕ್ತಿ ದೇಶಕ್ಕೆ ತಿಳಿಯಲಿ ಎಂದು ನೆಟ್ಟಿಗರು ವಿದ್ಯಾರ್ಥಿ ಸಮುದಾಯವನ್ನು ಕೇಳಿಕೊಂಡಿದ್ದಾರೆ.

ಚುನಾವಣೆಯಲ್ಲಿ ಮತ ಕೇಳುವಾಗ ದೊಡ್ಡ ದೊಡ್ಡ ಭರವಸೆಗಳನ್ನು ನೀಡುತ್ತಾರೆ. ಅವುಗಳನ್ನು ಈಡೇರಿಸುವ ಸಮಯದಲ್ಲಿ ನಮ್ಮನ್ನು ಮೋಸಗೊಳಿಸುತ್ತಾರೆ. ಹಾಗಾಗಿ ಯುಜನತೆ ಮತ್ತು ವಿದ್ಯಾರ್ಥಿಗಳು ತಮ್ಮ ಧ್ವನಿಯನ್ನು ಗಟ್ಟಿ ಮಾಡಬೇಕಿದೆ. ಈ ಬಾರಿ ಉದ್ಯೋಗ ನೀಡದಿದ್ದರೇ ಮೋದಿಜಿಯವರನ್ನು ಮನೆಗೆ ಕಳಿಸುತ್ತೇವೆ ಎಂಬುದನ್ನು ತಿಳಿಸಿ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ ಇಲ್ಲಿಯವರೆಗೆ ಇರುವ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದೆಯೇ ಹೊರತು ಹೊಸ ಉದ್ಯೋಗವನ್ನು ಸೃಷ್ಟಿಸುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.


ಇದನ್ನೂ ಓದಿ: ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿದ್ದು ತಪ್ಪು: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕರ್ನಾಟಕ ಕೊರೊನಾ: 24 ಗಂಟೆಯಲ್ಲಿ 67 ಸಾವಿರ ಡಿಸ್ಚಾರ್ಜ್, 38 ಸಾವಿರ ಹೊಸ ಪ್ರಕರಣ

0
ಕೊರೊನಾ ಮೂರನೇ ಅಲೆಯಲ್ಲಿ ರಾಜ್ಯದಲ್ಲಿ ಪ್ರಕರಣಗಳು ದಿಢೀರ್‌ ಹೆಚ್ಚಾಗಿದ್ದವು. ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಕೇಸಸ್ ಪತ್ತೆಯಾಗಿದ್ದವು. ಆದರೆ, ಕಳೆದ 24 ಗಂಟೆಯಲ್ಲಿ 67 ಸಾವಿರ ಕೊರೊನಾ ಸೋಂಕಿತರು ಚೇತರಿಕೆ ಕಂಡು, ಡಿಸ್ಚಾರ್ಜ್ ಆಗಿದ್ದಾರೆ....
Wordpress Social Share Plugin powered by Ultimatelysocial